ಹ್ಯಾಟ್ರಿಕ್ ಹೀರೋ ಶಿವಣ್ಣ ಮನೆಗೆ ಬಂದ್ರು ಸ್ಟಾರ್ ದಂಪತಿ!

Befunky collage 2025 03 18t201821.200

ಡಾ. ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ ನಟ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ. ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಶಿವಣ್ಣ ಅವರ ನಿವಾಸಕ್ಕೆ ಭೇಟಿ ನೀಡಿದ ಯಶ್ರಾಧಿಕಾ, ಅಮೆರಿಕಾದಿಂದ ಚಿಕಿತ್ಸೆ ಪಡೆದು ವಾಪಸಾದ ಶಿವಣ್ಣರ ಆರೋಗ್ಯ ವಿಚಾರಿಸಿದರು.

ನಟ ಪುನೀತ್ ರಾಜ್ ಕುಮಾರ್ ಅವರ 50ನೇ ಹುಟ್ಟುಹಬ್ಬದ ನಂತರ, ಶಿವಣ್ಣರನ್ನು ಭೇಟಿಯಾಗಲು ಬಂದ ಯಶ್ ದಂಪತಿ, ತಮ್ಮ ಬಿಡುವಿನ ಸಮಯವನ್ನು ಮೀಸಲಿಟ್ಟು ಆರೋಗ್ಯ ವಿಚಾರಿಸಲು ಬಂದ ದಂಪತಿ.

ಶಿವಣ್ಣ ಅವರು ಕಳೆದ ಒಂದು ತಿಂಗಳ ಕಾಲ ಅಮೆರಿಕಾದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದು ಬೆಂಗಳೂರಿಗೆ ಮರಳಿದ್ದರು. ಇದೇ ಸಂದರ್ಭದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ನಟ ಕಿಚ್ಚ ಸುದೀಪ್ ಸೇರಿದಂತೆ ಹಲವು ಪ್ರಮುಖರು ಶಿವಣ್ಣರನ್ನು ಭೇಟಿ ಮಾಡಿದ್ದರು. ಯಶ್ ಅವರು ಹಿಂದೆ ತಮ್ಮ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದರು, ಈಗ ಎಲ್ಲಾ ಕೆಲಸಗಳಿಗೆ ಬ್ರೇಕ್ ಹಾಕಿ ಶಿವಣ್ಣರ ಆರೋಗ್ಯ ವಿಚಾರಿಸಿದ್ದಾರೆ. ಶಿವಣ್ಣರ ಮಕ್ಕಳಾದ ದೃತಿ ಮತ್ತು ವಂದಿತರನ್ನು ಸಹ ಭೇಟಿ ಮಾಡಿದ ಯಶ್ರಾಧಿಕಾ, ಕುಟುಂಬದೊಂದಿಗೆ ಸಮಯ ಕಳೆದರು.ಶಿವಣ್ಣ ಆರೋಗ್ಯದಲ್ಲಿ ಚೇತರಿಕೆಯ ನಂತರ ಮೊದಲ ಬಾರಿಗೆ ಯಶ್ ದಂಪತಿ ಭೇಟಿ ಕೊಟ್ಟಿದ್ದಾರೆ

Exit mobile version