ರಾಕಿಂಗ್ ಸ್ಟಾರ್ ಯಶ್.. ಕಷ್ಟದಿಂದ ಮೇಲೆ ಬಂದ ಸೆಲ್ಫ್ ಮೇಡ್ ಶಹಜಾದ. ತನ್ನಂತೆ ಟ್ಯಾಲೆಂಟ್ ಇರೋರನ್ನ ಕಂಡ್ರೆ ಯಶ್‌ಗೆ ಎಲ್ಲಿದ ಪ್ರೀತಿ, ಗೌರವ, ಅಭಿಮಾನ. ಅದೇ ಕಾರಣದಿಂದ ಗೀತು ಮೋಹನ್‌ದಾಸ್ ನಮ್ಮ ಹೆಮ್ಮೆಯ ಕನ್ನಡಿಗನ ಕ್ಯಾಂಪ್ ಸೇರಿದ್ರಾ..? ಅನ್ನೋದ್ರ ಜೊತೆಗೆ ಗೀತು ಕಣ್ಣೀರು ಹಾಕ್ತಾ.. ಮುಂದೆ ನನ್ನ ಗತಿ ಹೇಗೋ ಏನೋ ಅಂದಿದ್ಯಾಕೆ ಅನ್ನೋದನ್ನ ಡಿಟೈಲ್ಡ್ ಆಗಿ ತೋರಿಸ್ತೀವಿ. ಜಸ್ಟ್ ಹ್ಯಾವ್ ಎ ಲುಕ್.
ಸಿನಿಮಾನ ಯಶ್ ಅಂತೆ ಪೂಜಿಸೋ ಧ್ಯಾನಿಸೋ ಗೀತು
ಕಷ್ಟ ಪಟ್ಟು ಮೇಲೆ ಬಂದು ಬ್ರ್ಯಾಂಡ್ ಆದ ಒಂಟಿ ಹೆಣ್ಣು..!
KGF ನಂತ್ರ ಯಶ್ ಆಯ್ಕೆ ನೋಡಿ ಆಡಿಕೊಂಡವ್ರೇ ಹೆಚ್ಚು
ಜನರ ಊಹೆ ಸುಳ್ಳು ಅಂತ ಪ್ರೂವ್ ಮಾಡ್ತಿದೆ ಟೀಂ ಟಾಕ್ಸಿಕ್
ಬಾಲ್ಯದಿಂದ ಸಿನಿಮಾ ಕನಸು ಕಂಡು, ಸೀರಿಯಲ್, ಸಿನಿಮಾ ಅಂತ ಹಂತ ಹಂತವಾಗಿ ತನ್ನದೇ ಆದ ಕೋಟೆಯನ್ನ ಕಟ್ಟಿಕೊಂಡು.. ಇಂದು ಭಾರತೀಯ ಚಿತ್ರರಂಗದ ಬಿಗ್ಗೆಸ್ಟ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ರಾರಾಜಿಸ್ತಿದ್ದಾರೆ ಯಶ್. ಹಗಲಿರುಳು ಯಶ್ ಸಿನಿಮಾನ ಬಿಟ್ಟು ಬೇರೆ ಯೋಚಿಸೋದೇ ಕಡಿಮೆ. ಕನಸಲ್ಲೂ ಸಿನಿಮಾನೇ ಕನಸು ಕಾಣುವಂತಹ ಸಿನಿಸಂತ ಅಂದ್ರೆ ತಪ್ಪಾಗಲ್ಲ. ಅಂತಹ ಯಶ್‌ನ ಮೆಚ್ಚಿಸೋದು ಅಷ್ಟು ಸುಲಭದ ಮಾತಲ್ಲ. ಆದ್ರೆ ಒಬ್ಬ ಹೆಣ್ಣಾಗಿದ್ದುಕೊಂಡು ಗೀತು ಮೋಹನ್‌ದಾಸ್ ನಮ್ಮ ಯಶ್ ಕ್ಯಾಂಪ್ ಸೇರಿದ್ದೇ ರೋಚಕ.
ಯೆಸ್.. ಗೀತು ಮೊದಲೇ ಹೆಣ್ಣು. ಸಾಕಷ್ಟು ಸವಾಲುಗಳು, ಸಮಸ್ಯೆಗಳು ಎದುರಾಗೋದು ಆಕೆಗೆ ಮೊದಲೇ ಗೊತ್ತಿದೆ. ಆದಾಗ್ಯೂ ಸಹ ಯಶ್‌ನ ದಿಲ್ ದೋಚುತ್ತಾರೆ ಆಕೆ. ಅದಕ್ಕೆ ಕಾರಣ ತನ್ನದೆ ಆಕೆಯೂ ಕಷ್ಟದಿಂದ ಮೇಲೆ ಬಂದ ಟ್ಯಾಲೆಂಟ್ ಅನ್ನೋದು ಒಂದೇ ಮಾನದಂಡ. ಅಷ್ಟೇ ಅಲ್ಲ.. ನಿರ್ದೇಶನದ ಕನಸು ಕಂಡ ದಿನವೇ ನಟನೆಗೆ ಗುಡ್ ಬೈ ಹೇಳಿ, ಡೈರೆಕ್ಷನ್ ನಲ್ಲಿ ವಿಶ್ವದ ಗಮನ ಸೆಳೆಯುವ ಮೂಲಕ ಪ್ರಶಸ್ತಿಗಳ ಮ್ಯಾರಥಾನ್ ತನ್ನ ಬೆನ್ನತ್ತಿ ಬರುವಂತೆ ಮಾಡ್ತಾರೆ ಗೀತು. ಅದೇ ಕಾರಣಕ್ಕೆ ಯಶ್‌ಗೆ ವೇವ್‌ಲೆಂಥ್ ಮ್ಯಾಚ್ ಆಗಿದೆ.
ಕನ್ನಡದಿಂದ ಹಿಡಿದು ಅಕ್ಕ ಪಕ್ಕದ ದೊಡ್ಡ ದೊಡ್ಡ ಸ್ಟಾರ್‌ಗಳು, ಸ್ಟಾರ್ ಡೈರೆಕ್ಟರ್ಸ್ ಹಾಗೂ ಪ್ರೊಡ್ಯೂಸರ್ಸ್ ಎಲ್ಲಾ ಗೀತು ಜೊತೆ ಕೆಜಿಎಫ್ ಯಶ್ ನೆಕ್ಟ್ಸ್ ಮೂವಿನಾ ಅಂತ ಆಡಿಕೊಳ್ತಾರೆ. ಯಶ್‌ಗೆ ಏನಾದ್ರೂ ತಲೆಗಿಲೆ ಕೆಟ್ಟಿದೆಯಾ ಅಂತೆಲ್ಲಾ ಗೊಣಗಿಕೊಳ್ತಾರೆ. ಆದ್ರೆ ಯಶ್‌ಗೆ ಮಾತ್ರ ಗೀತು ಮೋಹನ್‌ದಾಸ್‌ರಲ್ಲಿ ಇದ್ದ ಪೊಟೆನ್ಷಿಯಲ್ ಏನು ಅನ್ನೋದು ಚೆನ್ನಾಗಿ ಗೊತ್ತಿರುತ್ತೆ. ಅದೇ ಕಾರಣದಿಂದ ಅವ್ರೊಟ್ಟಿಗೆ ಸೇರಿಕೊಂಡು, ಕಥೆ, ಡೈಲಾಗ್ಸ್ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡ್ತಾರೆ. ಸದ್ಯ ಸ್ಯಾಂಪಲ್ಸ್ ನೋಡಿ ಇಡೀ ವಿಶ್ವವೇ ನಾವು ಅಂದು ಊಹಿಸಿದ್ದು ಸುಳ್ಳು ಅನ್ನುವಷ್ಟರ ಮಟ್ಟಿಗೆ ಗಟ್ಟಿಯಾಗಿ ಸಿನಿಮಾನ ಕಟ್ಟಿದ್ದಾರೆ ಯಶ್ ಹಾಗೂ ಗೀತು.
ಟ್ರೈಲರ್ ಲಾಂಚ್ ಇವೆಂಟ್‌ನಲ್ಲಿ ಗೀತು ಕಣ್ಣೀರು ಹಾಕಿದ್ಯಾಕೆ?
ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ಯಾಕೆ ಟಾಕ್ಸಿಕ್ ಡೈರೆಕ್ಟರ್..?
ಯಾರೂ ಆಕೆಯನ್ನ ನಂಬದೇ ಇದ್ದಾಗ.. ನಟ ಯಶ್ ಆಕೆ ಮೇಲೆ ನಂಬಿಕೆ ಇಟ್ಟು.. 500 ಕೋಟಿ ರೂಪಾಯಿ ಬಜೆಟ್ ಪ್ರಾಜೆಕ್ಟ್‌ನ ಆಕೆ ಕೈಗಿಟ್ಟಿರೋದು ಅಕ್ಷರಶಃ ಗೀತು ಮೋಹನ್‌ದಾಸ್‌ನ ಭಾವುಕ ಗೊಳಿಸಿದೆ. ಅದೇ ಕಾರಣದಿಂದ ಟ್ರೈಲರ್ ಲಾಂಚ್ ಇವೆಂಟ್‌ನಲ್ಲಿ ಕನ್ನಡದಲ್ಲೇ ಬರೆದುಕೊಂಡು ಬಂದು, ನಿಮ್ಮ ನಂಬಿಕೆಯನ್ನ ನಾನು ಉಳಿಸಿಕೊಳ್ತೀನಿ ಎಂದು ಕನ್ನಡದಲ್ಲೇ ಮಾತನಾಡಿದ ಗೀತು, ಕಣ್ಣೀರು ಹಾಕಿಬಿಟ್ರು. ಅದು ನೋವಿನ ಕಣ್ಣೀರಲ್ಲ.. ಖುಷಿಯಿಂದ ಹರಿದ ಆನಂದಭಾಷ್ಪ.
ಅದೇ ವೇದಿಕೆಯಲ್ಲಿ ಯಶ್ ಅವರ ಈ ಟಾಕ್ಸಿಕ್ ಬಳಿಕ ನನ್ನ ಭವಿಷ್ಯ ಏನಾಗುತ್ತೋ ಏನೋ..? ಮತ್ತೆ ನಾನು ಸಿನಿಮಾ ಮಾಡ್ತೀನೋ ಇಲ್ಲವೋ ಅನ್ನೋ ಆತಂಕ ಕೂಡ ವ್ಯಕ್ತಪಡಿಸಿದ್ರು ಗೀತು ಮೋಹನ್‌ದಾಸ್.
ಆದ್ರೆ ಯಶ್ ಹಾಗೂ ನಿರ್ಮಾಪಕ ಕೆವಿಎನ್ ಮಾತ್ರ ಗೀತುರನ್ನ ಎಲ್ಲೂ ಬಿಟ್ಟುಕೊಡಲೇ ಇಲ್ಲ. ಆಕೆಯ ಬಗ್ಗೆ, ಆಕೆ ಸಿನಿಮಾ ಪ್ಯಾಷನ್, ವಿಷನ್ ಕುರಿತು ಮೆಚ್ಚುಗೆಯ ಮಾತುಗಳೇ ಆಡ್ತಾ ಬರ್ತಿದ್ದಾರೆ.
ಅಂದಹಾಗೆ ಟಾಕ್ಸಿಕ್ ಮಹಿಳಾಮಣಿಗಳ ಸಿನಿಮಾ. ಹೆಣ್ಣಿನ ಧ್ವನಿಯ ಕುರಿತ ಸಿನಿಮಾ. ಅದನ್ನ ತೆಲುಗು ಪ್ರೀ ರಿಲೀಸ್ ಇವೆಂಟ್‌ನಲ್ಲಿ ಯಶ್ ಅವ್ರೇ ಹೇಳಿದ್ದಾರೆ. ಹಾಗಾಗಿ ಟಾಕ್ಸಿಕ್ ಚಿತ್ರದ ಮಹಿಳಾಮಣಿಗಳಾದ ನಯನತಾರಾ, ಕಿಯಾರಾ, ತಾರಾ ಸುತಾರಿಯಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಕ್ಯಾಪ್ಟನ್ ಆಫ್ ದಿ ಶಿಪ್ ಗೀತು ಕುರಿತು ಸಿಕ್ಕಾಪಟ್ಟೆ ಕೊಂಡಾಡಿದ್ದಾರೆ.
ಒಟ್ಟಾರೆ ಪುರುಷ ಪ್ರಧಾನ ಸಮಾಜ ನಿಧಾನಕ್ಕೆ ಬದಲಾಗ್ತಿದೆ. ಹೆಣ್ಣು ಮಡಿ ಮೈಲಿಗೆ ಬಿಟ್ಟು ತನ್ನ ಹಕ್ಕುಗಳನ್ನ ಎಲ್ಲೆಡೆ ಚಲಾಯಿಸ್ತಿದ್ದಾಳೆ. ಹಾಗಾಗಿ ಸದ್ಯದ ಜನರೇಷನ್‌ನಲ್ಲಿ ಹೆಣ್ಣು-ಗಂಡಿನ ತಾರತಮ್ಯ ಅಷ್ಟೇನೂ ಇಲ್ಲ. ಮಹಿಳೆಯರು ಸಾಕಷ್ಟು ಸಶಕ್ತರಾಗಿದ್ದಾರೆ. ಅದಕ್ಕೆ ಸಾಕ್ಷಿ ಈ ಗೀತು ಮೋಹನ್‌ದಾಸ್ ಜರ್ನಿ. ಸೋ.. ಟಾಕ್ಸಿಕ್ ಬಳಿಕವೂ ಸಹ ಗೀತು ಗರ್ವದಿಂದ, ಮತ್ತಷ್ಟು ಕ್ರಿಯೇಟಿವ್ ಆಗಿ, ಮಗದಷ್ಟು ಸೂಪರ್ ಸ್ಟಾರ್ಸ್ ಜೊತೆ ಸಿನಿಮಾಗಳನ್ನ ಮಾಡಲಿ ಅನ್ನೋದು ನಮ್ಮ ಆಶಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
