ರಾಕಿಂಗ್ ಸ್ಟಾರ್ ಯಶ್ ಬಳಿ ದುಬಾರಿ ‘ರಾಯ’ಲ್ ವಾಚ್‌‌ ಕಲೆಕ್ಷನ್

ಕ್ರಿಕೆಟರ್‌‌ಗಳು, ಬಾಲಿವುಡ್ ಸ್ಟಾರ್‌ಗಳನ್ನ ಮೀರಿಸೋ ಯಶ್

Your paragraph text (40)

ಸಾವಿರಾರು ಕೋಟಿ ಸರದಾರ ಯಶ್ ಕನ್ನಡಕ್ಕೆ ಎಷ್ಟು ಲಾಯಲ್ ಆಗಿರ್ತಾರೋ.. ಅವ್ರ ಹೆಸರಿಗೆ ತಕ್ಕನಾಗಿ ರಾಯಲ್ ಸ್ಟಾರ್ ಕೂಡ ಹೌದು. ಅವ್ರ ಬಳಿ ಇರೋ ಕಾರ್ ಕಲೆಕ್ಷನ್ ಬಗ್ಗೆ ಈ ಹಿಂದೆ ಹೇಳಿದ್ವಿ. ಆದ್ರೀಗ ಹೆಮ್ಮೆಯ ಕನ್ನಡಿಗನ ಬಳಿ ಇರೋ ದುಬಾರಿ ವಾಚ್ ವಾರ್ಡ್‌ರೋಬ್ ಕಲೆಕ್ಷನ್ ಬಗ್ಗೆ ಎಕ್ಸ್‌‌ಕ್ಲೂಸಿವ್ ಆಗಿ ಹೇಳ್ತೀವಿ. ಕ್ರಿಕೆಟರ್‌‌ಗಳನ್ನ ಮೀರಿಸೋ ರಾಕಿಂಗ್ ಸ್ಟಾರ್ ಕಾಸ್ಟ್ಲಿ ವಾಚ್‌‌ಗಳ ಲಿಸ್ಟ್ ಇಲ್ಲಿದೆ.

ಒಂದು ಕಾಲದಲ್ಲಿ 300 ರೂಪಾಯಿ ಜೇಬಲ್ಲಿ ಇಟ್ಕೊಂಡು ಮೆಜೆಸ್ಟಿಕ್‌‌ನಲ್ಲಿ ಮಲಗಿದ್ದ ಹಾಸನ ಹೈದ ಯಶ್.. ಅಂದೇ ತನ್ನ ಕಟೌಟ್ ಗಾಂಧಿನಗರದ ಥಿಯೇಟರ್ ಮುಂದೆ ನಿಲ್ಲಬೇಕು ಅನ್ನೋ ಕನಸು ಕಾಣ್ತಾರೆ. ಒಬ್ಬ ಸಾಮಾನ್ಯ ಬಸ್ ಡ್ರೈವರ್ ಮಗ ಭಾರತೀಯ ಚಿತ್ರರಂಗದ ಮೆಗಾ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗೋದು ಸುಲಭದ ಮಾತಲ್ಲ. ಅದಕ್ಕಾಗಿ ಯಶ್ ಮಾಡಿದ ಸಂಕಲ್ಪ, ತಪಸ್ಸು, ಇಟ್ಕೊಂಡ ಗುರಿ, ಅದ್ರ ಬೆನ್ನು ಹತ್ತಿದ ಪರಿ ಎಲ್ಲವೂ ರೋಚಕ, ರೋಮಾಂಚಕ.

ಯೂತ್ ಐಕಾನ್ ಆಗಿ ಹಂತ ಹಂತವಾಗಿ ಬೆಳೆದ ಯಶ್ ಬೆಳೆವಣಿಗೆ ನಿಜಕ್ಕೂ ಸ್ಫೂರ್ತಿದಾಯಕ.. ಐತಿಹಾಸಿಕ. ನುಡಿದಂತೆ ನಡೆದ ಯಶ್, ನಮ್ಮ ಕನ್ನಡದ ಬಾವುಟವನ್ನ ವಿಶ್ವದ ಮೂಲೆ ಮೂಲೆ ಹಾರುವಂತೆ ಮಾಡಿದ ಕೆಚ್ಚೆದೆಯ ಕನ್ನಡಿಗ. ಅಂದುಕೊಂಡಿದ್ದನ್ನ ಸಾಧಿಸಿಯೇ ತೀರುವ ಛಲದಂಕಮಲ್ಲ. ಹಾಗಾಗಿಯೇ ಮ್ಯಾನ್ ಆಫ್ ಬಿಲಿಯನ್ ಹಾರ್ಟ್ಸ್‌‌ ಆಗಿ ರಾರಾಜಿಸ್ತಿದ್ದಾರೆ ರಾಕಿಂಗ್ ಸ್ಟಾರ್.

ಅಂದಹಾಗೆ ಯಶ್ ಸದ್ಯ ಹಾಲಿವುಡ್ ಸ್ಟಾರ್‌‌ಗಳ ರೇಂಜ್‌ಗೆ ಗ್ಲೋಬಲ್ ಸ್ಟಾರ್. ಆತ ಮಾತ್ರ ಗ್ಲೋಬಲ್ ಸ್ಟಾರ್ ಅಲ್ಲ.. ಗ್ಲೋಬಲ್ ವೇದಿಕೆಗಳಲ್ಲಿ ಕನ್ನಡವನ್ನ ಪ್ರತಿನಿಧಿಸುತ್ತಿರೋ ಕನ್ನಡದ ರಾಯಭಾರಿ ಅಂದ್ರೆ ತಪ್ಪಾಗಲ್ಲ. ಯಶ್ ಕನ್ನಡಕ್ಕೆ ಎಷ್ಟು ಲಾಯಲ್ ಆಗಿದ್ದಾರೋ.. ದುಬಾರಿ ಬ್ರ್ಯಾಂಡ್‌‌ಗಳಿಗೂ ಅಷ್ಟೇ ರಾಯಲ್ ಕಸ್ಟಮರ್ ಅನ್ನೋದು ಇಂಟರೆಸ್ಟಿಂಗ್. ಈ ಹಿಂದೆ ನಾವು ರಾಕಿಭಾಯ್ ಬಳಿ ಇರೋ ದುಬಾರಿ ಕಾರ್‌‌‌ ಕೆಲಕ್ಷನ್‌‌ನ ಪರಿಚಯಿಸಿದ್ವಿ. ಈಗ ಅವ್ರ ವಾಚ್ ವಾರ್ಡ್‌ರೋಬ್‌‌ ಕಲೆಕ್ಷನ್‌‌ನ ಪರಿಚಯಿಸ್ತೀವಿ ನೋಡಿ.

ಅಂದಹಾಗೆ ಯಶ್ ಬಳಿ ಇರೋ ವಾಚ್‌‌‌ಗಳ ಬೆಲೆ ಕೇಳಿದ್ರೆ ನೀವು ಬೆಚ್ಚಿ ಬೆರಗಾಗ್ತೀರಾ. ಹೌದು.. ಒಂದೊಂದು ವಾಚ್ ಬೆಲೆ ಎರಡೂವರೆ ಕೋಟಿ.. ಒಂದೂವರೆ ಕೋಟಿ. ಒಟ್ಟು 8 ಕಾಸ್ಟ್ಲಿ ವಾಚ್‌‌ಗಳಿದ್ದು, ಅವುಗಳ ಬೆಲೆ ಬರೋಬ್ಬರಿ 6 ಕೋಟಿ ಅಂದ್ರೆ ನೀವು ನಂಬಲೇಬೇಕು. ಹಾಗಾದ್ರೆ ಅವು ಯಾವ್ಯಾವ ಬ್ರ್ಯಾಂಡ್ & ಮಾಡೆಲ್ಸ್ ಅಂತೀರಾ..? ಇಲ್ಲಿದೆ ನೋಡಿ…

 

ಯಶ್ ವಾಚ್ ನಂ.1

ಪಾಟೆಕ್ ಫಿಲಿಪ್ಪೆ  ನಾಟಿಲಸ್

ಸಾಲಿಡ್ 18k ರೋಸ್‌‌ ಗೋಲ್ಡ್

ಸ್ವಿಸ್ ಹೋರಾಲಜಿಕಲ್ ಮಾಸ್ಟರ್‌ಪೀಸ್

2.5 ಕೋಟಿ ರೂಪಾಯಿ

 

ಯಶ್ ವಾಚ್ ನಂ.2

ಪಾಟೆಕ್ ಫಿಲಿಪ್ಪೆ  ನಾಟಿಲಸ್

ಲೆಜೆಂಡರಿ ಪೋರ್ಟ್‌ಹೋಲ್ ಡಿಸೈನ್

ಗ್ರೇಡಿಯೆಂಟ್ ಬ್ಲೂ ಡಯಲ್

1.5 ಕೋಟಿ ರೂಪಾಯಿ

 

ಯಶ್ ವಾಚ್ ನಂ.3

ಆಡೆಮರ್ಸ್ ಪಿಗುಯೆಟ್ ರಾಯಲ್ ಓಕ್

ಐಕಾನಿಕ್ ಆಕ್ಟಗೋನಲ್ ಬೆಝೆಲ್ ಫೀಚರ್

ಸಿಗ್ನೇಚರ್ ಡಯಲ್

65 ಲಕ್ಷ ರೂಪಾಯಿ

 

ಯಶ್ ವಾಚ್ ನಂ.4

ರೋಲೆಕ್ಸ್ ಕಾಸ್ಮೋಗ್ರಾಫ್

ಡೇಟೋನಾ ಪಂಡಾ

ಐಕಾನಿಕ್ ವೈಟ್ ಡಯಲ್

38 ಲಕ್ಷ ರೂಪಾಯಿ

 

ಯಶ್ ವಾಚ್ ನಂ.5

ಹುಬ್ಲಾಟ್ ಬಿಗ್ ಬ್ಯಾಂಗ್

ಬೋಲ್ಡ್, ಅಗ್ರೆಸ್ಸೀವ್ ಹೈಟೆಕ್ ಮೆಟೀರಿಯಲ್ಸ್

34 ಲಕ್ಷ ರೂಪಾಯಿ

 

ಯಶ್ ವಾಚ್ ನಂ.6

ರೋಲೆಕ್ಸ್ GMT

ಮಾಸ್ಟರ್-2 ಪೆಪ್ಸಿ

ರೆಡ್ & ಬ್ಲೂ ಸೆರಾಮಿಕ್ ಬೆಝೆಲ್

30 ಲಕ್ಷ ರೂಪಾಯಿ

 

ಯಶ್ ವಾಚ್ ನಂ.7

ರೋಲೆಕ್ಸ್ GMT

ಮಾಸ್ಟರ್-2 ಬ್ಯಾಟ್‌‌ಮ್ಯಾನ್

ಕ್ಲಾಸಿಕ್ ಬ್ಲ್ಯಾಕ್ & ಬ್ಲೂ

ಸೆರಾಮಿಕ್ ಬೆಝೆಲ್

23 ಲಕ್ಷ ರೂಪಾಯಿ

 

ಯಶ್ ವಾಚ್ ನಂ.8

ರೋಲೆಕ್ಸ್ ಸಬ್‌‌ಮರೈನರ್

ಟೈಮ್‌ಲೆಸ್ ಡೈವ್ ವಾಚ್

ಡ್ಯುರೆಬಲ್ ಓಯಿಸ್ಟರ್‌‌ಸ್ಟೀಲ್

14.5 ಲಕ್ಷ ರೂಪಾಯಿ

ನೋಡಿದ್ರಲ್ಲಾ.. ವಿಶ್ವದ ಅತಿ ದುಬಾರಿ ವಾಚ್‌‌ಗಳೆಲ್ಲಾ ಯಶ್ ಮನೆಯಲ್ಲೇ ಇವೆ. ಕೋಟಿ ಕೋಟಿ ದುಡಿಯೋ ಸಾವಿರಾರು ಕೋಟಿ ಒಡೆಯ ರಾಕಿಂಗ್ ಸ್ಟಾರ್.. ತಮ್ಮ ಇಮೇಜ್‌ಗೆ ತಕ್ಕನಾಗಿ ಲೈಫ್ ಕೂಡ ಲೀಡ್ ಮಾಡಬೇಕಾಗುತ್ತೆ. ಮಿಗಿಲಾಗಿ ಇವೆಲ್ಲವನ್ನ ಅವರು ದುಡ್ಡು ಕೊಟ್ಟೇ ಖರೀದಿಸಿದ್ದಾರೆ ಅಅಂತ ಹೇಳೋಕೆ ಆಗಲ್ಲ. ಒಂದಷ್ಟು ವಾಚ್‌‌ಗಳು ಗಿಫ್ಟ್‌ಗಳ ರೂಪದಲ್ಲಿಯೂ ಸಹ ಬಂದಿರಬಹುದು. ಅನಂತ್ ಅಂಬಾನಿ ವೆಡ್ಡಿಂಗ್‌ನಲ್ಲಿ ಭಾಗಿಯಾಗಿದ್ದ ಸ್ಟಾರ್‌ಗಳಿಗೆಲ್ಲಾ ಅಂಬಾನಿ ಫ್ಯಾಮಿಲಿ ದುಬಾರಿ ವಾಚ್‌‌ಗಳನ್ನ ಉಡುಗೊರೆಯಾಗಿ ನೀಡಿತ್ತು. ಅಂದು ನಮ್ಮ ಕನ್ನಡಿಗ ಯಶ್‌ಗೂ ಸಹ ಒಂದನ್ನ ಪ್ರೆಸೆಂಟ್ ಮಾಡಿತ್ತಂತೆ ಅಂಬಾನಿ ಕುಟುಂಬ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version