ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ನಟನೆಯ ವೃಷಭ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಕಥೆ ಮತ್ತು ಮೇಕಿಂಗ್ ಸಖತ್ ಇಂಪ್ರೆಸ್ಸೀವ್ ಆಗಿದೆ. ಅಂದಹಾಗೆ ಇದು ಹೆಸರಿಗಷ್ಟೇ ಮಲಯಾಳಂ ಮೂವಿ. ಲಾಲೆಟ್ಟನ್ ಒಬ್ಬರನ್ನ ಬಿಟ್ರೆ ಉಳಿದಂತೆ ಬಹುತೇಕ ಕಲಾವಿದರು, ತಂತ್ರಜ್ಞರೆಲ್ಲಾ ನಮ್ಮ ಕನ್ನಡಿಗರೇ. ಈ ಕುರಿತ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ.
ಇದು ಮಲಯಾಳಂನ ವೃಷಭ ಚಿತ್ರದ ಟ್ರೈಲರ್ ಝಲಕ್. ಸೂಪರ್ ಸ್ಟಾರ್ ಮೋಹನ್‌ಲಾಲ್ ಲೀಡ್‌ನಲ್ಲಿ ನಟಿಸಿರೋ ಈ ಸಿನಿಮಾ ಫ್ಯಾಂಟಸಿ ಆ್ಯಕ್ಷನ್ ಡ್ರಾಮಾ ಜಾನರ್‌ನದ್ದಾಗಿದೆ. ರಾಜ ವಿಜಯೇಂದ್ರ ವೃಷಭ ಪಾತ್ರಕ್ಕೆ ಜೀವ ತುಂಬಿರೋ ಲಾಲೆಟ್ಟನ್, ಸದ್ಯದ ಹಾಗೂ 400 ವರ್ಷಗಳ ಹಿಂದಿನ ಅರಸನಾಗಿಯೂ ಕಾಣಸಿಗುತ್ತಾರೆ. ಮೇಕಿಂಗ್ ಹಾಗೂ ಕಥೆ ಇಂಪ್ರೆಸ್ಸೀವ್ ಆಗಿದ್ದು, ಚಿತ್ರಪ್ರೇಮಿಗಳು ಸಿನಿಮಾ ನೋಡುವ ಇಂಟರೆಸ್ಟ್ ಹೆಚ್ಚಿದೆ.
ವೃಷಭ ಮಹಾರಾಜ ಮೋಹನ್‌ಲಾಲ್.. ಕನ್ನಡಿಗರ ಕಮಾಲ್
ಹೆಸರಿಗಷ್ಟೇ ಮಲಯಾಳಂ ಮೂವಿ.. ಕರುನಾಡಿಗರ ವೆಂಚರ್..!
ಅಂದಹಾಗೆ ಇದು ಹೆಸರಿಗಷ್ಟೇ ಮಲಯಾಳಂ ಮೂವಿ. ವೃಷಭ ಚಿತ್ರದಲ್ಲಿ ಲಾಲೆಟ್ಟನ್ ಬಿಟ್ಟರೆ ಉಳಿದಂತೆ ಕಲಾವಿದರು, ತಂತ್ರಜ್ಞರೆಲ್ಲಾ ನಮ್ಮ ಕನ್ನಡಿಗರೇ. ಹೌದು.. ರಾಗಿಣಿ ನಟ ಮೋಹನ್‌ಲಾಲ್ ಪತ್ನಿಯಾಗಿ ಲೀಡ್‌ನಲ್ಲಿ ಬಣ್ಣ ಹಚ್ಚಿದ್ದಾರೆ. ಲಾಲೆಟ್ಟನ್ ಮಗನ ಪಾತ್ರಕ್ಕೆ ಇಂದ್ರಜಿತ್ ಲಂಕೇಶ್ ಮಗ ಸಮರ್ಜಿತ್ ಜೀವ ತುಂಬಿದ್ದಾರೆ. ಇನ್ನು ನಟ ಕಿಶೋರ್, ಕೆಜಿಎಫ್ ಖ್ಯಾತಿಯ ಗರುಡ ರಾಮ್, ಸಾಯಿಕುಮಾರ್ ಸಹೋದರ ಅಯ್ಯಪ್ಪ ಹೀಗೆ ಕನ್ನಡದ ಕಲಾವಿದೆ ದೊಡ್ಡ ದಂಡಿದೆ.
ಕನ್ನಡದ ಖ್ಯಾತ ಸಂಕಲನಕಾರ ಕೆ ಎಂ ಪ್ರಕಾಶ್ ಶಾರ್ಪ್ ಎಡಿಟಿಂಗ್ ಈ ಚಿತ್ರಕ್ಕಿದ್ದು, ಕ್ಯಾಪ್ಟನ್ ಆಫ್ ದಿ ಶಿಪ್ ಕೂಡ ನಮ್ಮ ಕನ್ನಡಿಗರೇ. ಹೌದು.. ರನ್ನ, ಅಧ್ಯಕ್ಷ, ಪೊಗರು ಚಿತ್ರಗಳ ಖ್ಯಾತಿಯ ನಂದಕಿಶೋರ್ ಈ ವೃಷಭ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮಲಯಾಳಂ ಜೊತೆ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಕೂಡ ಈ ಚಿತ್ರ ಇದೇ ಡಿಸೆಂಬರ್ 25ಕ್ಕೆ ತೆರೆಗಪ್ಪಳಿಸುತ್ತಿದೆ. ನೋಡೋಕೆ ಮಗಧೀರ ಚಿತ್ರದ ರೀತಿ ಗತಕಾಲದ ದೃಶ್ಯ ವೈಭವಗಳ ಜೊತೆ ಇಂದಿನ ಜನರೇಷನ್‌ಗೂ ಕನೆಕ್ಟ್ ಆಗುವಂತಿದೆ.
ರಾಗಿಣಿ, ಸಮರ್ಜಿತ್, ಗರುಡ ರಾಮ್, ಕಿಶೋರ್, ಅಯ್ಯಪ್ಪ
‘ಕ್ಯಾಪ್ಟನ್ ಆಫ್ ದಿ ಶಿಪ್’ ಕೂಡ ನಮ್ಮ ನಂದ ಕಿಶೋರ್..!!
ರಾಜರತ್ನ ಡಾ. ಪುನೀತ್ ರಾಜ್‌ಕುಮಾರ್ ಜೊತೆ ಮೈತ್ರಿ ಸಿನಿಮಾದಲ್ಲಿ ನಟಿಸಿ, ಕನ್ನಡಿಗರ ಪ್ರೀತಿ, ಅಭಿಮಾನ ಗಳಿಸಿದ್ದ ಮೋಹನ್‌ಲಾಲ್, ಇದೀಗ ಕನ್ನಡದ ಟ್ಯಾಲೆಂಟ್ಸ್ ಜೊತೆಗೂಡಿ ಸಿನಿಮಾ ಮಾಡಿರೋದು ಹೆಮ್ಮೆಯ ವಿಷಯ. ಲಾಲೆಟ್ಟನ್ ಆದಷ್ಟು ಬೇಗ ಸ್ಟ್ರೈಟ್ ಕನ್ನಡ ಸಿನಿಮಾ ಕೂಡ ಮಾಡುವಂತಾಗಲಿ ಅನ್ನೋದು ಕನ್ನಡ ಚಿತ್ರಪ್ರೇಮಿಗಳ ಆಶಯ.
