ವಿರೋಶ್.. ವಿಜಯ್ ದೇವರಕೊಂಡ-ರಶ್ಮಿಕಾ ಕಲ್ಯಾಣೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಉದಯಪುರದ ಪ್ಯಾಲೇಸ್ ಬದಲಿಗೆ ಐಟಿಸಿ ಮೆಮೆಂಟೋಸ್‌ನಲ್ಲಿ ಸಪ್ತಪದಿ ತುಳಿಯುತ್ತಿರೋ ತಾರಾ ಜೋಡಿಗೆ ಶುಭ ಹಾರೈಸಲು ಈಗಾಗ್ಲೇ ಸಾಕಷ್ಟು ಮಂದಿ ತಾರೆಯರು, ಬ್ಯುಸಿನೆಸ್‌ಮ್ಯಾನ್ಸ್, ಕುಟುಂಬಸ್ಥರು ರಾಜಸ್ತಾನದ ಉದಯಪುರ ಸೇರಿದ್ದಾರೆ.
ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಕಲ್ಯಾಣಕ್ಕೆ ವಿರೂಷ್ಕಾ ಅಂತ ಹೆಸರಿಡಲಾಗಿತ್ತು. ಅದೇ ರೀತಿ ಈಗ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆಗೆ ವಿರೋಶ್ ಹೆಸರಲ್ಲಿ ನಡೆಯುತ್ತಿದೆ. ಇದೇ ಫೆಬ್ರವರಿ 26, ಗುರುವಾರ ಬೆಳಗ್ಗೆ 10 ಗಂಟೆಗೆ ಮಾಂಗಲ್ಯ ಧಾರಣೆ ಆಗಲಿದ್ದು, ಸಪ್ತಪದಿ ತುಳಿಯೋ ಮೂಲಕ ಸತಿ-ಪತಿಯಾಗಿ ಹೊಸ ಬಾಳಿಗೆ ಕಾಲಿಡ್ತಿದೆ ಈ ತಾರಾ ಜೋಡಿ.
ವಿರೋಶ್.. ಒಂದೇ ಮುಹೂರ್ತ.. ಎರಡು ಮದುವೆ ಹೇಗೆ..?
ರಶ್ಮಿಕಾ-ವಿಜಯ್ ಕಲ್ಯಾಣ ಪ್ಯಾಲೇಸ್ ಬದಲಿಗೆ ITCಗೆ ಶಿಫ್ಟ್
ಅಂದಹಾಗೆ ರಶ್ಮಿಕಾ-ವಿಜಯ್ ಕಲ್ಯಾಣೋತ್ಸವ ಉದಯಪುರದ ಪ್ಯಾಲೇಸ್‌ನಲ್ಲಿ ಅಲ್ಲ. ಬದಲಿಗೆ ರಾಜಸ್ತಾನದ ಉದಯಪುರ ಸಿಟಿಯಿಂದ 25ರಿಂದ 30 ಕಿಲೋ ಮೀಟರ್ ದೂರದಲ್ಲಿರೋ ಐಟಿಸಿ ಮೆಮೆಂಟೋಸ್ ಅನ್ನೋ ಐಷಾರಾಮಿ ಹೋಟೆಲ್‌ನಲ್ಲಿ ನಡೆಯುತ್ತಿದೆ. ಕೇವಲ 100 ಮಂದಿಗಷ್ಟೇ ಆಹ್ವಾನ ನೀಡಿರೋ ವಿರೋಶ್ ಜೋಡಿ, ಕುಟುಂಬಸ್ಥರು ಹಾಗೂ ಅತ್ಯಾಪ್ತರ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿಡ್ತಿದ್ದಾರೆ.
ಒಂದೇ ಮುಹೂರ್ತದಲ್ಲಿ ಎರಡು ಬಾರಿ ಮದ್ವೆ ಆಗ್ತಾರಂತೆ ರಶ್ಮಿಕಾ-ವಿಜಯ್. ಯಾಕಂದ್ರೆ ವಿಜಯ್‌ಗಾಗಿ ಒಮ್ಮೆ ತೆಲುಗು ಹಿಂದೂ ಸಂಪ್ರದಾಯದಂತೆ, ಮತ್ತೊಮ್ಮೆ ಕೊಡವ ಸಂಪ್ರದಾಯದಂತೆ ಕಲ್ಯಾಣ ಆಗ್ತಿದೆ ತಾರಾ ಜೋಡಿ. ರಶ್ಮಿಕಾ ನಮ್ಮ ಕರ್ನಾಟಕದ ಮಡಿಕೇರಿಯ ಕೊಡವ ಸಂಪ್ರದಾಯದವರಾಗಿರೋದ್ರಿಂದ ಕೊಡವ ಶಾಸ್ತ್ರಗಳ ಮುಖೇನ ಸಂಜೆ ಮದ್ವೆ ನಡೆಯಲಿದೆ ಎನ್ನಲಾಗ್ತಿದೆ.
ತೆಲುಗು ಹಾಗೂ ಕೊಡವ ಸಂಪ್ರದಾಯಗಳಂತೆ ಡಬಲ್ ಮದ್ವೆ
ಅಂಬಾನಿ ಫ್ಯಾಮಿಲಿ, ಪಂಡಿತರು & ಆಶಿಕಾ ಕಲ್ಯಾಣಕ್ಕೆ ಸಾಕ್ಷಿ..!
ಈಗಾಗ್ಲೇ ಐಟಿಸಿ ಹೋಟೆಲ್‌ನಲ್ಲಿ ಎರಡು ದಿನಗಳಿಂದ ಮೆಹಂದಿ, ಹಳದಿ, ಸಂಗೀತ್ ಪಾರ್ಟಿಗಳು ಜೋರಾಗಿ ನಡೆದಿದ್ದು, ಸ್ವಿಮ್ಮಿಂಗ್ ಪೂಲ್ ಪಾರ್ಟಿ ಕೂಡ ನಡೆದಿದೆ. ಅದಕ್ಕೆ ವಿರೋಶ್ ಪ್ರೀಮಿಯರ್ ಲೀಗ್ ಅಂತ ಹೆಸರು ಕೂಡ ನೀಡಲಾಗಿದೆ. ಅದ್ರ ಫೋಟೋಸ್‌ನ ರಶ್ಮಿಕಾ ಹಾಗೂ ವಿಜಯ್ ಇಬ್ಬರೂ ತಮ್ಮ ಇನ್ಸ್‌ಟಾ ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದಾರೆ.
