ಅತ್ತ ಬ್ಯಾಂಗಲ್ ಬಂಗಾರಿ..ಇತ್ತ ವೈರಲ್ ವೈಯ್ಯಾರಿ ಟ್ರೆಂಡ್

ಕ್ಯೂಟ್ ಕ್ವೀನ್ ಜೊತೆ ‘ಜೂನಿಯರ್’ ರೆಡ್ಡಿ ಭರ್ಜರಿ ಡ್ಯಾನ್ಸ್..! ಡಿಎಸ್‌‌ಪಿ ದೇವಿಶ್ರೀ ಬೀಟ್ಸ್‌‌ಗೆ ಕುಣಿದು ಕುಪ್ಪಳಿಸಿದ ಶ್ರೀಲೀಲಾ

Web 2025 07 05t174816.274

ಬ್ಯಾಂಗಲ್ ಬಂಗಾರಿ ಟ್ರೆಂಡಿಂಗ್‌ನಲ್ಲಿರುವಾಗ್ಲೇ ವೈರಲ್ ವೈಯ್ಯಾರಿ ಸಾಂಗ್ ಬಂದಿದೆ. ಕ್ಯೂಟ್ ಕ್ವೀನ್ ಶ್ರೀಲೀಲಾ- ಕಿರೀಟಿ ಜೋಡಿ ಮೋಡಿ ಮಾಡ್ತಿರೋ ಜೂನಿಯರ್ ಸಾಂಗ್ ಝಲಕ್ ತೋರಿಸ್ತೀವಿ.

ಯುವರಾಜ್‌ಕುಮಾರ್ ಎರಡನೇ ಚಿತ್ರ ಎಕ್ಕ, ಬ್ಯಾಂಗಲ್ ಬಂಗಾರಿ ಅನ್ನೋ ಹಾಡಿನಿಂದ ಕೋಟ್ಯಂತರ ಕಣ್ಣುಗಳ ಮೆಚ್ಚುಗೆಗೆ ಪಾತ್ರವಾಗಿದೆ. ಸಂಜನಾ ಜೊತೆ ಯುವ ಸ್ಟೆಪ್ ಹಾಕಿರೋ ಈ ಹಾಡು ಒಂದೂವರೆ ಕೋಟಿ ವೀವ್ಸ್ ಪಡೆದು, ಟ್ರೆಂಡಿಂಗ್‌ನಲ್ಲಿದೆ. ಈ ಎಕ್ಕ ಚಿತ್ರ ಕೂಡ ಜುಲೈ 18ಕ್ಕೆ ತೆರೆಗೆ ಬರ್ತಿದ್ದು, ಅದೇ ಡೇಟ್‌ಗೆ ತನ್ನ ಚೊಚ್ಚಲ ಚಿತ್ರದ ಮೂಲಕ ಹೀರೋ ಆಗಿ ಅದೃಷ್ಠ ಪರೀಕ್ಷೆಗಾಗಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ ಯಂಗ್‌ಸ್ಟರ್ ಕರೀಟಿ.

ADVERTISEMENT
ADVERTISEMENT

ರಾಜಮೌಳಿ ಕ್ಲಾಪ್ ಮಾಡಿ ಶುಭ ಹಾರೈಸಿದ್ದ ಗಾಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ, ಜೂನಿಯರ್ ಸಿನಿಮಾದಿಂದ ಹೀರೋ ಆಗ್ತಿದ್ದಾರೆ. ಚಿತ್ರದಲ್ಲಿ ಕಿರೀಟಿಗೆ ಕ್ಯೂಟ್ ಕ್ವೀನ್ ಶ್ರೀಲೀಲಾ ಜೋಡಿಯಾಗಿದ್ದು, ಜೆನಿಲಿಯಾ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ತಾರಾಬಳಗದಲ್ಲಿರೋದು ಇಂಟರೆಸ್ಟಿಂಗ್. ಈಗಾಗ್ಲೇ ಟೀಸರ್ ಸಖತ್ ರಿಚ್ ಆಗಿ ಮೂಡಿಬಂದಿದ್ದು, ಸಿನಿಮಾದ ಕ್ವಾಲಿಟಿ ಹಾಗೂ ಕಲರ್‌ಫುಲ್ ವಿಶ್ಯುವಲ್ಸ್‌‌ಗೆ ಪ್ರೇಕ್ಷಕರು ಸ್ಟನ್ ಅಗಿದ್ದಾರೆ.

ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಹಾಗೂ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಚಲನಚಿತ್ರಂ ನಿರ್ಮಾಣದ ಈ ಜೂನಿಯರ್ ಸಿನಿಮಾದಿಂದ ಹಾಡೊಂದು ರಿವೀಲ್ ಆಗಿದೆ. ಅದೇ ವೈರಲ್ ವೈಯ್ಯಾರಿ. ಜೂನಿಯರ್‌ ಚಿತ್ರದ ಮಸ್ತ್ ಡ್ಯಾನ್ಸಿಂಗ್‌ ನಂಬರ್ ಇದಾಗಿದ್ದು, ಡಿಎಸ್‌ಪಿ ದೇವಿಶ್ರೀ ಪ್ರಸಾದ್ ಮ್ಯೂಸಿಕ್‌ಗೆ ಕುಣಿದು ಕುಪ್ಪಳಿಸಿದ್ದಾರೆ ಕಿರೀಟಿ ಮತ್ತು ಕ್ಯೂಟ್ ಕ್ವೀನ್.

ವೈರಲ್‌ ವೈಯ್ಯಾರಿ ಹಾಡಿಗೆ ಪವನ್‌ ಭಟ್‌ ಸಾಹಿತ್ಯ ಬರೆದಿದ್ದು, ಹರಿಪ್ರಿಯಾ ಮತ್ತು ದೀಪಕ್‌ ಬ್ಲೂ ಧ್ವನಿಯಾಗಿದ್ದಾರೆ. ದೇವಿಶ್ರೀ ಪ್ರಸಾದ್‌ ಮ್ಯೂಸಿಕ್‌ ಕಿಕ್‌ಗೆ ಕಿರೀಟಿ ಶ್ರೀಲೀಲಾ ಬೊಂಬಾಟ್‌ ಆಗಿ ಕುಣಿದಿದ್ದಾರೆ. ಇವರಿಬ್ಬರ ಎನರ್ಜಿ ಹೈ ಲೆವೆಲ್‌ನಲ್ಲಿದೆ. ಬಾಹುಬಲಿ, ಆರ್‌ಆರ್‌ಆರ್ ಅಂತಹ ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಕ್ಯಾಮರಾ ವರ್ಕ್ ಮಾಡಿರುವ ಕೆ.ಕೆ.ಸೆಂಥಿಲ್ ಕುಮಾರ್ ಕ್ಯಾಮೆರಾ ಕೈಚಳಕ ಈ ಚಿತ್ರಕ್ಕಿದೆ.

ಸಿನಿಮಾಗೆ ಖ್ಯಾತ ಆ್ಯಕ್ಷನ್ ಕೊರಿಯೋಗ್ರಾಫರ್ ಪೀಟರ್ ಹೇನ್ಸ್ ಸ್ಟಂಟ್ಸ್ ಕಂಪೋಸ್ ಮಾಡಿದ್ದಾರೆ. ಜುಲೈ 18ಕ್ಕೆ ಜೂನಿಯರ್‌ ಸಿನಿಮಾ ಕನ್ನಡ, ತೆಲುಗು ಹಾಗೂ ತಮಿಳು ಹೀಗೆ ಮೂರು ಪ್ರಮುಖ ಭಾಷೆಗಳಲ್ಲಿ ಬೆಳ್ಳಿತೆರೆ ಬೆಳಗಲಿದೆ. ಜೂನಿಯರ್ ರೆಡ್ಡಿಯನ್ನ ಜನ ಹೀರೋ ಆಗಿ ಅಕ್ಸೆಪ್ಟ್ ಮಾಡ್ತಾರಾ ಅನ್ನೋದನ್ನ ನಿರೀಕ್ಷಿಸಬೇಕಿದೆ. ಇನ್ನು ಪುನೀತ್ ರಾಜ್‌ಕುಮಾರ್ ಹಾಗೂ ಜೂನಿಯರ್ ಎನ್‌ಟಿಆರ್ ಕಟ್ಟಾಭಿಮಾನಿಯಾಗಿರೋ ಕಿರೀಟಿಗೆ ಅವರಿಬ್ಬರೂ ಸ್ಟಾರ್ಸ್‌ ಫ್ಯಾನ್ಸ್ ಕೈಹಿಡಿದ್ರೆ ಸಾಕು, ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವುದರಲ್ಲಿ ಯಾವುದೇ ಡೌಟ್ ಇಲ್ಲ.

Exit mobile version