‘ಡೆವಿಲ್’ ಡಬಲ್ ಆ್ಯಕ್ಟಿಂಗ್.. ತಂದೆಗೆ ಮಗನೇ ಸಾಥ್..!

ಡಿ ಬಾಸ್ ಗ್ಯಾಪ್... ಜೂನಿಯರ್ ಎಂಟ್ರಿ ಟಾಕ್..!

Untitled design 2026 01 22T175801.137

ಕೀರ್ತಿ ಪಾಟೀಲ್,ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ಸ್ಯಾಂಡಲ್‌ವುಡ್‌ನಲ್ಲಿ ಈಗ ಹೊಸ ಚರ್ಚೆ ಶುರುವಾಗಿದೆ. ಡಿಬಾಸ್ ನಂತರ ಯಾರು ? ಎಂಬ ಪ್ರಶ್ನೆಗೆ ಜೂನಿಯರ್ ಡಿ ಬಾಸ್ ರೆಡಿ ಎಂಬ ಕೂಗು ಕೇಳಿ ಬರ್ತಿದೆ. ಡೆವಿಲ್ ಸಿನಿಮಾದ ಆ 13 ಸೆಕೆಂಡ್ ಝಲಕ್ ಸಾದಾ ವಿಡಿಯೋ ಅಲ್ಲ, ಅದು ದರ್ಶನ್ ಸಿನಿ ಲೆಗಸಿ ಭವಿಷ್ಯದ ಘೋಷಣೆ ಅಂತ ಫ್ಯಾನ್ಸ್ ಹೇಳ್ತಿದ್ದಾರೆ. ಅದೇ ಸ್ಟೈಲ್, ಅದೇ ನಡೆ, ಕಣ್ಣುಗಳಲ್ಲಿ ಕಿಡಿ. ಗಜ ಹೆಜ್ಜೆ ಗುರುತುಗಳನ್ನೇ ಹಿಂಬಾಲಿಸುತ್ತಿರುವ ತೂಗುದೀಪ ಕುಡಿ, ಈಗಾಗಲೇ ಸ್ಪಾಟ್ ಲೈಟ್‌ಗೆ ಬಂದಿದ್ದಾರೆ. ಸಿನಿಮಾ ಸೆಟ್‌ಗಳಲ್ಲಿ ಬೆಳೆದ ಈ ಸ್ಟಾರ್ ಕಿಡ್, ಕ್ಯಾಮೆರಾ ಭಯವೇ ಇಲ್ಲದಂತೆ ಖಡಕ್ ಲುಕ್ ಕೊಟ್ಟಿರುವುದು ಫ್ಯಾನ್ಸ್‌ಗೆ ಪಕ್ಕಾ ಹೀರೋ ಮೆಟೀರಿಯಲ್ ಅನ್ನಿಸಿದೆ.

ಇದೀಗ ಕನ್ನಡ ಚಿತ್ರರಂಗ ಒಂದು ಕ್ರಿಟಿಕಲ್ ಹಂತದಲ್ಲಿ ನಿಂತಿದೆ. ಪ್ಯಾನ್ ಇಂಡಿಯಾ ಟ್ರೆಂಡ್ ಬಂದ ಮೇಲೆ ಹಲವಾರು ಸ್ಟಾರ್‌ಗಳು ಎರಡು ವರ್ಷಕ್ಕೊಂದು ಸಿನಿಮಾ ಮಾಡುವ ಕಾಲ ಬಂತು. ದೊಡ್ಡ ಹೀರೋಗಳ ಚಿತ್ರಗಳ ಮಧ್ಯೆ ಗ್ಯಾಪ್ ಹೆಚ್ಚಾಗಿದೆ. ಥಿಯೇಟರ್‌ಗಳಿಗೆ ಹಬ್ಬದಂತ ದಿನಗಳು ಕಡಿಮೆಯಾಗಿವೆ. ಆದರೆ ಈ ಟ್ರೆಂಡ್ ನಡುವೆ ವರ್ಷಕ್ಕೆ ಎರಡು ಸಿನಿಮಾ ನೀಡಿ ಕನ್ನಡದ ಮಾರುಕಟ್ಟೆ ಹಿಡಿದಿಟ್ಟುಕೊಂಡಿದ್ದವರು, ಬಾಕ್ಸ್ ಆಫೀಸ್ ಬೆಂಕಿ ಹಚ್ಚುತ್ತಿದ್ದವರು ಒಬ್ಬರೇ ಡಿಬಾಸ್ ದರ್ಶನ್. ಸದಾ ಕನ್ನಡಕ್ಕೆ ಕಮಿಟ್ ಆಗಿ, ನಿರಂತರವಾಗಿ ಫ್ಯಾನ್ಸ್ ಮುಂದೆ ಬಂದವರು. ಆದರೆ ‘ಡೆವಿಲ್’ ಬಿಡುಗಡೆಯಾದ ನಂತರ ಹೊಸ ಸಿನಿಮಾ ರಿಲೀಸ್ ಆಗಿಲ್ಲ. ಕೆಲವು ಪ್ರಾಜೆಕ್ಟ್‌ಗಳು ಲೈನಪ್‌ನಲ್ಲಿ ಇದ್ದರೂ, ದರ್ಶನ್ ಜೈಲಿನಲ್ಲಿ ಇರುವ ಪರಿಸ್ಥಿತಿ ಅಭಿಮಾನಿಗಳಿಗೆ ನೋವು ತಂದಿದೆ.

‘ಡೆವಿಲ್’ ಡಬಲ್ ಆ್ಯಕ್ಟಿಂಗ್.. ತಂದೆಗೆ ಮಗನೇ ಸಾಥ್..!

13 ಸೆಕೆಂಡ್ ಡೆವಿಲ್ ಡೂಪ್.. ಇದು ಲೆಗಸಿ ಹಿಂಟ್ ಆ?

ಡಿ ಬಾಸ್ ಗ್ಯಾಪ್… ಜೂನಿಯರ್ ಎಂಟ್ರಿ ಟಾಕ್..!

ದರ್ಶನ್ ಇದ್ದಾಗ ಪ್ರತಿ ವರ್ಷ ಸಂಕ್ರಾಂತಿ-ದಸರಾ ಹಬ್ಬದಂತೆ ಸಿನಿಮಾ ರಿಲೀಸ್ ಆಗುತ್ತಿತ್ತು. ಈಗ ಆ ಸದ್ದು ಇಲ್ಲ ಆ ಗರ್ಜನೆ ಇಲ್ಲ. ಈ ಗ್ಯಾಪ್ ಕನ್ನಡ ಇಂಡಸ್ಟ್ರಿಯನ್ನೇ ನಡುಗಿಸುತ್ತಿದೆ. ಥಿಯೇಟರ್ ಮುಂದೆ ಕಟೌಟ್‌ಗಳು ನಿಂತಿದ್ದರೂ, ಡಿಬಾಸ್ ಹೊಸ ಪೋಸ್ಟರ್ ಕಾಣದ ಖಾಲಿತನ ಈಗ ಸ್ಪಷ್ಟವಾಗುತ್ತಿದೆ. ಕನ್ನಡಕ್ಕೆ ನಮ್ಮ ಹೀರೋ ಬೇಕು ಅನ್ನೋ ಕೂಗು ಜೋರಾಗಿದೆ. ಇದೇ ಸಮಯದಲ್ಲಿ ಡೆವಿಲ್‌ನ ಆ 13 ಸೆಕೆಂಡ್ ವಿಡಿಯೋ ರಿಲೀಸ್ ಆಗಿದ್ದು, ಫ್ಯಾನ್ಸ್ ಮನಸ್ಸಿನಲ್ಲಿ ಹೊಸ ಆಶಾಕಿರಣ ಮೂಡಿಸಿದೆ.

ದರ್ಶನ್ ಹೊರಗೆ ರಫ್ & ಟಫ್ ಇಮೇಜ್… ಆದರೆ ಮಗನ ವಿಷಯಕ್ಕೆ ಬಂದರೆ ಸಾಫ್ಟ್ ಹಾರ್ಟ್ ಅಪ್ಪ.  ಹಲವು ಬಾರಿ ಸಾರ್ವಜನಿಕ ವೇದಿಕೆಗಳಲ್ಲಿ ನನ್ನ ಮಗ ಒಳ್ಳೆಯ ಮಾನವನಾಗಬೇಕು ಎಂದು ಹೇಳಿರುವ ಡಿಬಾಸ್, ಮಗನನ್ನು ಸ್ಟಾರ್ ಕಿಡ್ ಆಗಿ ಅಲ್ಲ, ಶಿಸ್ತುಬದ್ಧ ಹುಡುಗನಾಗಿ ಬೆಳೆಸುತ್ತಿದ್ದಾರೆ ಅನ್ನೋ ಮಾತು ಹತ್ತಿರದ ವಲಯದಲ್ಲಿ ಕೇಳಿಬರುತ್ತಿದೆ. ಬಿಡುವಿನ ಸಮಯದಲ್ಲಿ ಹಾರ್ಸ್ ರೈಡಿಂಗ್, ವರ್ಕ್‌ಔಟ್ ಮಾರ್ಗದರ್ಶನ ಕೊಡುತಿದ್ದ ದಾಸ ಆಫ್ ಸ್ಕ್ರೀನ್‌ನಲ್ಲೂ ನಿಜವಾದ ಹೀರೋ.

ಸದ್ಯ ವಿನೀಶ್ ವಿದ್ಯಾಭ್ಯಾಸದ ಜೊತೆಗೆ ಫುಲ್ ಫೋಕಸ್ ಫಿಟ್ನೆಸ್ ಮೇಲೆ ಕೊಡ್ತಿದ್ದಾರೆ. ಹಾರ್ಸ್ ರೈಡಿಂಗ್, ಸ್ವಿಮ್ಮಿಂಗ್, ಜಿಮ್ ವರ್ಕ್‌ಔಟ್, ಮಾರ್ಷಲ್ ಆರ್ಟ್ಸ್ ಟ್ರೈನಿಂಗ್ ಎಲ್ಲವನ್ನೂ ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ. ದರ್ಶನ್ ತಮ್ಮ ಸಿನಿಮಾ ಕರಿಯರ್‌ನಲ್ಲಿ ಎಷ್ಟು ಕಷ್ಟಪಟ್ಟರೋ, ಅದಕ್ಕಿಂತ ಹೆಚ್ಚು ಡಿಸಿಪ್ಲಿನ್ ಮಗನಲ್ಲಿ ಕಾಣಬೇಕು ಅನ್ನೋದು ಅವರ ಆಸೆ. ಬಾಲನಟನಾಗಿ ಐರಾವತ ಮತ್ತು ಯಜಮಾನ ಚಿತ್ರಗಳಲ್ಲಿ ಸಣ್ಣ ಝಲಕ್ ಕೊಟ್ಟಿದ್ದ ವಿನೀಶ್, ಈಗ ಕ್ಯಾಮೆರಾ ಎದುರು ಕಂಫರ್ಟಬಲ್ ಆಗಿದ್ದಾರೆ. ಡೆವಿಲ್ ಡೂಪ್ ವಿಚಾರವೇ ಇದಕ್ಕೆ ಪ್ರೂಫ್ ಅಂತ ಫ್ಯಾನ್ಸ್ ಮಾತು.

ಅದೇ ಹೈಟ್..ಅದೇ ಖದರ್.. Jr. DBoss ರೆಡಿನಾ..?

ತಂದೆಗೆ ತಕ್ಕ ಮಗ.. ಡೆವಿಲ್ ಪಾತ್ರಕ್ಕೆ ವಿನೀಶ್ ಡೂಪ್

ಐರಾವತ, ಯಜಮಾನ ಸ್ಯಾಂಪಲ್, ಸದ್ಯದಲ್ಲೇ ವಿನೀಶ್ ಎಂಟ್ರಿ

ಕಳೆದ ವರ್ಷ 2025 ಡಿಸೆಂಬರ್ 11ಕ್ಕೆ ಬಿಡುಗಡೆಯಾದ ಡೆವಿಲ್ ಸಿನಿಮಾಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ದರ್ಶನ್ ಅನುಪಸ್ಥಿತಿಯಲ್ಲೂ ಅಭಿಮಾನಿಗಳು ಸಿನಿಮಾವನ್ನು ಭರ್ಜರಿಯಾಗಿ ಗೆಲ್ಲಿಸಿದ್ದರು. ಆದರೆ ಸಿನಿಮಾ ರಿಲೀಸ್ ಆದ ಮೇಲೆ ಶುರುವಾದ ಒಂದು ಚರ್ಚೆ ಮಾತ್ರ ಇನ್ನೂ ಕುತೂಹಲ ಕೆರಳಿಸುತ್ತಿದೆ  ಡೆವಿಲ್‌ನಲ್ಲಿ ದರ್ಶನ್ ಪುತ್ರ ವಿನೀಶ್ ಅಭಿನಯಿಸಿದ್ದಾರಾ ? ವೈರಲ್ ಆದ ಫೋಟೋಸ್, ಈಗ ಹೊರಬಂದ 13 ಸೆಕೆಂಡ್ ವಿಡಿಯೋ ಇವೆಲ್ಲದರ ಮಧ್ಯೆ ತಂದೆ-ಮಗ ಟ್ವಿನ್ನಿಂಗ್ ಸ್ಟೋರಿ ಈಗ ಟಾಕ್ ಆಫ್ ದ ಟೌನ್ ಆಗಿದೆ.

ಡೆವಿಲ್ ನಲ್ಲಿ ದರ್ಶನ್ ಕೃಷ್ಣ ಎಂಬ ಸಾಫ್ಟ್ ಶೇಡ್ ಪಾತ್ರದಲ್ಲಿ, ಜೊತೆಗೆ ಪವರ್‌ಫುಲ್ ವಿನಿಶ್ ಧನುಷ್ ರಾಜಶೇಖರ್ ಪಾತ್ರದಲ್ಲಿ ಡಬಲ್ ಡೈಮೆನ್ಷನ್ ನೀಡಿದ್ರು. ಆದರೆ ಒಂದು ಆಕ್ಷನ್ ಸನ್ನಿವೇಶದಲ್ಲಿ ಕಣ್ಣು ತಪ್ಪಿದ ಒಂದು ಝಲಕ್ ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಿನಿಮಾ ರಿಲೀಸ್ ಆದ ನಂತರ, ಥೇಟ್ ದರ್ಶನ್ ಗೇಟಪ್‌ನಲ್ಲಿ ಒಬ್ಬ ಯುವಕನ ಫೋಟೋ ವೈರಲ್ ಆಯಿತು. ಅದೇ ಹೈಟ್, ಅದೇ ಪರ್ಸನಾಲಿಟಿ, ಅದೇ ಚಾಲೆಂಜಿಂಗ್ ಖದರ್. ಆ ಯುವಕ ಮತ್ತಾರು ಅಲ್ಲ  ದರ್ಶನ್ ಪುತ್ರ ವಿನೀಶ್.ಉದಯಪುರದಲ್ಲಿ ಚಿತ್ರೀಕರಣ ನಡೆದಾಗ ವಿಜಯಲಕ್ಷ್ಮಿ ದರ್ಶನ್ ಮತ್ತು ವಿನೀಶ್ ಕೂಡ ಚಿತ್ರತಂಡದ ಜೊತೆಗಿದ್ದರು. ಆ ವೇಳೆಯೇ ಕೆಲವು ಆಕ್ಷನ್ ಶಾಟ್‌ಗಳಲ್ಲಿ ವಿನೀಶ್ ಅಪ್ಪನಿಗೆ ಡ್ಯೂಪ್ ಆಗಿ ಕಾಣಿಸಿಕೊಂಡಿದ್ರಂತೆ ಎಂಬ ಗುಸುಗುಸು ಈಗ ವಿಡಿಯೋ ಮೂಲಕ ಮತ್ತಷ್ಟು ಗಟ್ಟಿಯಾಗುತ್ತಿದೆ.

ಸದ್ಯ ರಿಲೀಸ್ ಆಗಿರುವ 13 ಸೆಕೆಂಡ್ ವಿಡಿಯೋದಲ್ಲಿ ದರ್ಶನ್ ಮತ್ತು ವಿನೀಶ್ ಒಂದೇ ರೀತಿ ಮೇಕಪ್, ಒಂದೇ ಕಾಸ್ಟ್ಯೂಮ್, ಒಂದೇ ಬಾಡಿ ಲ್ಯಾಂಗ್ವೇಜ್‌ನಲ್ಲಿ ಕಾಣಿಸುತ್ತಾರೆ. ದರ್ಶನ್ ಕೊರಳಪಟ್ಟಿ ಹಿಡಿದು ಖಡಕ್ ಲುಕ್ ಕೊಟ್ಟಿರುವ ದೃಶ್ಯದಲ್ಲಿ, ವಿನೀಶ್ ಆಕ್ಟಿಂಗ್ ಸ್ಕಿಲ್ ಸ್ಪಷ್ಟವಾಗಿ ಕಾಣುತ್ತದೆ. ಸಿನಿಮಾ ನೋಡಿದ ಹಲವರಿಗೆ ಇದು ಗಮನಿಸದೇ ಹೋಗಿರಬಹುದು, ಆದರೆ ಈಗ ಆ ಝಲಕ್ ಡಿ ಫ್ಯಾನ್ಸ್‌ಗೆ ನೊಸ್ಟಾಲ್ಜಿಯಾ ಫೀಲ್ ಕೊಡುತ್ತಿದೆ. ತಂದೆಗೆ ತಕ್ಕ ಮಗ ಅಂತ ಕಾಮೆಂಟ್‌ಗಳು ಹರಿದು ಬರುತ್ತಿವೆ.

ಜಸ್ಟ್ 13ಸೆಕೆಂಡ್ ವಿಡಿಯೋ ಫ್ಯಾನ್ಸ್‌ಗೆ ಇದು ಕೇವಲ ಸ್ಟಾರ್ ಕಿಡ್ ಲಾಂಚ್ ಅಲ್ಲ ಇದು ಒಂದು ಎಮೋಶನಲ್ ಜರ್ನಿ. ನಾವು ದರ್ಶನ್ ಮೊದಲ ಸಿನಿಮಾದಿಂದ ನೋಡ್ತಾ ಬಂದಿದ್ದೇವೆ ಈಗ ಅವರ ಮಗನ ಎಂಟ್ರಿ ನೋಡೋ ಸಮಯ ಬಂದಿದೆ ಅನ್ನೋ ಭಾವನೆ ಸೋಶಿಯಲ್ ಮೀಡಿಯಾದಲ್ಲಿ ತುಂಬಿಕೊಂಡಿದೆ. ಡೆವಿಲ್ ವಿಡಿಯೋ ವೈರಲ್ ಆದ ಕ್ಷಣದಿಂದಲೇ JrDBoss ಟ್ರೆಂಡ್ ಆಗಿತ್ತು. ಅದೇ ಹೈಟ್, ಅದೇ ವೆಯ್ಟ್,ಅದೇ ಚಾಲೆಂಜಿಂಗ್ ಖದರ್ ಸ್ಕ್ರೀನ್ ಮೇಲೆ ಅಪ್ಪ-ಮಗ ಒಂದೇ ಫ್ರೇಮ್‌ನಲ್ಲಿ ಕಾಣಿಸಿದರೆ, ಥಿಯೇಟರ್‌ಗಳಲ್ಲಿ ಯಾವ ಮಟ್ಟದ ಸದ್ದು ಎನ್ನುವುದು ಊಹಿಸಲು ಕಷ್ಟವೇ ಇಲ್ಲ.

ಡೆವಿಲ್ ಸೆಟ್‌ನಲ್ಲಿ ದರ್ಶನ್ ಕೊರಳಪಟ್ಟಿ ಹಿಡಿದ ದೃಶ್ಯ ಕೇವಲ ಶಾಟ್ ಅಲ್ಲ… ಅದು ತಂದೆ-ಮಗನ ಸಿನಿಮಾ ಪ್ಯಾಶನ್.. ಆತ್ಮವಿಶ್ವಾಸದ ಪ್ರತೀಕ ಅನ್ನೋದು ಫ್ಯಾನ್ಸ್ ಫೀಲ್. ಹಾಗಾದ್ರೆ ಸ್ಯಾಂಡಲ್‌ವುಡ್‌ಗೆ ಹೊಸ ವಾರಸುದಾರ ಎಂಟ್ರಿ ಕೊಡ್ತಿದ್ದಾನಾ? ಡೆವಿಲ್‌ನಲ್ಲಿ ಕಂಡ ಆ ಸಣ್ಣ ಝಲಕ್ ಭವಿಷ್ಯದ ದೊಡ್ಡ ಸೂಚನೆಯಾ? ತಂದೆಯ ನೆರಳಲ್ಲಿ ಬೆಳೆಯುತ್ತಿರುವ ವಿನೀಶ್, ಒಂದೇ ದಿನ ತನ್ನದೇ ಬೆಳಕಿನಲ್ಲಿ ಹೊಳೆಯುವ ಕ್ಷಣ ದೂರದಲ್ಲಿಲ್ಲ ಅನ್ನೋ ವಿಶ್ವಾಸ ಅಭಿಮಾನಿಗಳದ್ದು.

 

 

Exit mobile version