ದಳಪತಿ ವಿಜಯ್‌ಗೆ ಸಿಕ್ಕ ಐತಿಹಾಸಿಕ ಗೆಲುವು.. ತಮಿಳುನಾಡು ರಾಜ್ಯ ರಾಜಕಾರಣದಲ್ಲಿ ಆದಂತಹ ದಿಢೀರ್ ಬೆಳವಣಿಗೆ ಇಡೀ ದೇಶದಲ್ಲೇ ಸಂಚಲನ ಮೂಡಿಸಿದೆ. ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದ್ರೆ ತಮಿಳುನಾಡು ಜನಕ್ಕೆ ಸೆಲೆಬ್ರಿಟಿ ಸಿಂಡ್ರೋಮ್ ಇದೆ. ಹಾಗಾಗಿಯೇ MGR, ಜಯಲಲಿತಾ ಬಳಿಕ ವಿಜಯ್‌ಗೆ ಇಷ್ಟು ದೊಡ್ಡ ವಿಜಯ ಸಿಕ್ಕಿದೆ ಅಂತಿದ್ದಾರೆ. ಅಸಲಿ ಕಥೆ ಬೇರೇನೇ ಇದೆ. ರಜನಿಕಾಂತ್, ಕಮಲ್ ಹಾಸನ್ ಕೈಲಾಗದ ಕೆಲಸವನ್ನ ಯಂಗ್‌ಸ್ಟರ್ ವಿಜಯ್ ಮಾಡಿ ತೋರಸಿರೋದು ಹಿಸ್ಟರಿ. ಅವ್ರ ರಾಜಕೀಯ ಕನಸು ನಿನ್ನೆ ಮೊನ್ನೆಯದ್ದಲ್ಲ. 25 ವರ್ಷಗಳಷ್ಟು ಹಳೆಯದ್ದು.
- ತಮಿಳು ಪಾಲಿಟಿಕ್ಸ್ ಅಲ್ಲೋಲ ಕಲ್ಲೋಲ..ಬದಲಾವಣೆಗೆ ಮುನ್ನುಡಿ
- DMK, AIDMK ಸಾಲಿಗೆ ವಿಜಯ್ TVK ನ್ಯೂ ಎಂಟ್ರಿ..!
- ರಾಷ್ಟ್ರೀಯ ಪಕ್ಷಕ್ಕಿಲ್ಲ ಜಾಗ.. ಪ್ರಾದೇಶಿಕ ಪಕ್ಷದ್ದೇ ದರ್ಬಾರ್
- ದ್ರಾವಿಡ ನೆಲದಲ್ಲಿ ಇನ್ಮೇಲೆ ದಳಪತಿ ಸರ್ಕಾರ್ ಕಾರುಬಾರು
ಯೆಸ್.. ವ್ಯಕ್ತಿ, ಪಕ್ಷ, ಹಣದ ಹೊಳೆ, ದರ್ಬಾರ್.. ಇದ್ಯಾವುದೂ ಶಾಶ್ವತವಲ್ಲ. ಜನ ಬದಲಾವಣೆ ಬಯಸಿದ್ರೆ ಯಾರು ಬೇಕಾದ್ರೂ ಮುಗಿಲೆತ್ತರಕ್ಕೆ ಬೆಳೆಯುತ್ತಾರೆ. ಅದೇ ಜನ ಕೈ ಹಿಡಿಯದೇ ಇದ್ದಾಗ ಎಂಥದ್ದೇ ಲೀಡರ್ ಆದ್ರೂ ನೆಲ ಕಚ್ಚುತ್ತಾರೆ. ಅದಕ್ಕೆ ಸದ್ಯ ತಮಿಳುನಾಡು ಪಾಲಿಟಿಕ್ಸ್‌ನಲ್ಲಿ ಆಗ್ತಿರೋ ಬೆಳವಣಿಗೆಗಿಂತ ಮತ್ತೊಂದಿರಲು ಸಾಧ್ಯವೇ ಇಲ್ಲ. ಅಕ್ಷರಶಃ ತಮಿಳುನಾಡು ರಾಜ್ಯ ರಾಜ್ಯಕಾರಣ ಅಲ್ಲೋಲ ಕಲ್ಲೋಲ ಆಗಿದೆ. ಟಿವಿಕೆ ಪಕ್ಷ ಕಟ್ಟಿದ ವಿಜಯ್, ಈ ಬಾರಿ ಬದಲಾವಣೆಗೆ ಮುನ್ನುಡಿ ಬರೆದಾಗಿದೆ.
ಕಾಂಗ್ರೆಸ್, ಬಿಜೆಪಿ ಅಂತಹ ರಾಷ್ಟ್ರೀಯ ಪಕ್ಷಗಳನ್ನ ತಮಿಳುನಾಡಿಗೆ ಕಾಲಿಡೋಕೆ ಬಿಡ್ತಿಲ್ಲ ಅಲ್ಲಿನ ಪ್ರಾದೇಶಿಕ ಪಕ್ಷಗಳು. ಇಲ್ಲಿಯ ತನಕ ಡಿಎಂಕೆ, ಎಐಡಿಎಂಕೆ ಪ್ರಾದೇಶಿಕ ಪಕ್ಷಗಳದ್ದೇ ದರ್ಬಾರ್ ಜೋರಾಗಿತ್ತು. ಆದ್ರೀಗ ಅವು ಕೂಡ ಮಣ್ಣು ಮುಕ್ಕುವಂತೆ ಮಾಡಿದ್ದಾರೆ ವಿಜಯ್. ಏಕತಾನ್ಯತೆಯಿಂದ ಕೂಡಿದ್ದ ತಮಿಳು ರಾಜಕಾರಣಕ್ಕೆ ಹೊಸ ರೂಪ ಕೊಟ್ಟಿದ್ದಾರೆ ದಳಪತಿ. ಇಲ್ಲಿಯತನಕ ನಮ್ಮದೇ ಕಾರುಬಾರು. ನಾವು ಬಿಟ್ರೆ ದ್ರಾವಿಡ ನೆಲದಲ್ಲಿ ಬೇರಾರೂ ಬರೋಕೆ ಸಾಧ್ಯವಿಲ್ಲ ಅಂತ ಬೀಗುತ್ತಿದ್ದ ಡಿಎಂಕೆ, ಎಐಡಿಎಂಕೆ ಸೊಕ್ಕು ಮುರಿಯೋ ಮೂಲಕ ಟಕ್ಕರ್ ನೀಡಿದ್ದಾರೆ ಟಿವಿಕೆ ವಿಜಯ್.
- ರಜನಿ, ಕಮಲ್ ಕೈಲಾಗದ್ದನ್ನ ಸಾಧಿಸಿ ತೋರಿದ ದಳಪತಿ..!
- ವಿಜಯ್ ರಾಜಕೀಯ ಕನಸು 2 ವರ್ಷದ್ದಲ್ಲ 25 ವರ್ಷದ್ದು
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಕೈಲಾಗದೇ ಇರೋದನ್ನ ಯಂಗ್‌ಸ್ಟರ್ ಆಗಿರೋ ವಿಜಯ್ ಮಾಡಿ ತೋರಿಸಿರೋದು ಇಂಟರೆಸ್ಟಿಂಗ್ ಹಾಗೂ ಇಂಪ್ರೆಸ್ಸೀವ್. ಯಾಕಂದ್ರೆ 2018ರಲ್ಲೇ ಕಮಲ್ ಹಾಸನ್ ಕೂಡ MNM-ಮಕ್ಕಳ್ ನೀಧಿ ಮೈಯಂ ಅನ್ನೋ ಪಕ್ಷ ಕಟ್ಟಿದ್ರು. ಆದ್ರೆ ಚುನಾವಣೆಯಲ್ಲಿ ಆ ಪಕ್ಷದಿಂದ ಒಂದು ಸೀಟ್ ಕೂಡ ಗೆಲ್ಲಲಾಗದೆ ಸೋತು ಕೈ ಸುಟ್ಟಿಕೊಂಡರು. ಕೊನೆಗೆ ಡಿಎಂಕೆ ಸ್ಟಾಲಿನ್‌ಗೆ ಬಕೆಟ್ ಹಿಡಿಯೋ ಮೂಲಕ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿ. ಅಷ್ಟಕ್ಕೇನೇ ತೃಪ್ತರಾಗಿಬಿಟ್ಟರು.
ತಲೈವಾ ರಜನೀಕಾಂತ್ ಕೂಡ 2021ರಲ್ಲಿ ಹೊಸ ಪಕ್ಷ ಕಟ್ಟಿ, ಅದನ್ನ ಅನೌನ್ಸ್ ಮಾಡೋ ಮೂಲಕ ಪಾಲಿಟಿಕ್ಸ್‌ಗೆ ಧುಮುಕುವ ಮನಸ್ಸು ಮಾಡಿದ್ರು. ರಜನಿ ತಮ್ಮ ಪಕ್ಷಕ್ಕೆ ಮಕ್ಕಳ್ ಸೇವೈ ಕಚ್ಚಿ ಅನ್ನೋ ಹೆಸರು, ಆಟೋರಿಕ್ಷಾನ ಚಿಹ್ನೆಯಾಗಿ ಘೋಷಿಸೋಕೆ ತುದಿಗಾಲಲ್ಲಿ ನಿಂತಿದ್ದರು. ಆದ್ರೆ ಕೊನೆ ಗಳಿಗೆಯಲ್ಲಿ ಅನಾರೋಗ್ಯದ ಹಿನ್ನೆಲೆ ರಾಜಕೀಯಕ್ಕೆ ಎಂಟ್ರಿ ಕೊಡುವ ನಿರ್ಧಾರದಿಂದ ಹಿಂದೆ ಸರಿದರು ಸೂಪರ್ ಸ್ಟಾರ್.
ಆದ್ರೀಗ ರಜನಿ-ಕಮಲ್ ಕೈಲಾಗದ್ದನ್ನ ವಿಜಯ್ ಸಾಧಿಸಿ ತೋರಿಸಿದ್ದಾರೆ. ಅಂತಹ ಘಟಾನುಘಟಿ ಸೂಪರ್ ಸ್ಟಾರ್‌ಗಳ ರಾಜಕೀಯ ಕನಸು ನನಸಾಗದೇ ಇದ್ದಾಗ ವಿಜಯ್ ತಮ್ಮ ಸ್ವಂತ ಶ್ರಮ, ಪರಿಶ್ರಮ ಹಾಗೂ ಪಕ್ಕಾ ಪ್ಲ್ಯಾನಿಂಗ್ ಮೂಲಕ ಸಿದ್ದಿಸಿಕೊಂಡಿರೋದು ವಿಶೇಷ.
ಅಂದಹಾಗೆ ವಿಜಯ್ ರಾಜಕೀಯ ಕನಸು ನಿನ್ನೆ ಮೊನ್ನೆಯದ್ದಲ್ಲ. ಎಲ್ಲಾ ಅವರು ಟಿವಿಕೆ ಪಕ್ಷ ಕಟ್ಟಿದ ಎರಡು ವರ್ಷಗಳ ಪ್ಲ್ಯಾನಿಂಗ್ ಇದು ಅಂತೆಲ್ಲಾ ಅಂತಿದ್ದಾರೆ. ಆದ್ರೆ ದಳಪತಿ ವಿಜಯ್ ಮಾತ್ರ 1992ನಲ್ಲಿ ಹೀರೋ ಆಗಿ ಬಣ್ಣ ಹಚ್ಚಿದ ಕೆಲವೇ ದಿನಗಳಲ್ಲಿ ಸಿಎಂ ಆಗುವ ಹಾಗೂ ರಾಜಕಾರಣಕ್ಕೆ ಪಾದಾರ್ಪಣೆ ಮಾಡುವ ಕನಸು ಕಂಡಿದ್ದರು. ಅದಕ್ಕಾಗಿ ಬೇಕಾಗುವ ಎಲ್ಲಾ ತಯಾರಿಗಳನ್ನ ಮಾಡಿಕೊಂಡೇ ಬಂದಿದ್ದಾರೆ. ವಿಶ್ಲೇಷಕರ ಪ್ರಕಾರ ವಿಜಯ್ ಬರೋಬ್ಬರಿ 25 ವರ್ಷಗಳಿಂದ ಸಾಮಾಜಿಕ ಕಾರ್ಯಗಳನ್ನ ಮಾಡ್ತಾ ಬರ್ತಿದ್ದಾರೆ. ಸಮಾಜದಲ್ಲಿನ ಕಷ್ಟ ಸುಖಗಳಿಗೆ ಸ್ಪಂದಿಸ್ತಿದ್ದಾರೆ.
1996ರಿಂದಲೇ ತಮ್ಮ ದುಡಿಮೆಯಲ್ಲಿನ ಒಂದಷ್ಟು ಪಾಲನ್ನ ಸಾಮಾಜಿಕ ಕಾರ್ಯಗಳಿಗಾಗಿ ಮುಡಿಪಾಗಿಟ್ಟಿದ್ದಾರೆ. ಅದರ ಸಾಕ್ಷ್ಯ ಸಮೇತ ಗ್ಯಾರಂಟಿ ನ್ಯೂಸ್ ನಿಮಗೆ ಪ್ರಸ್ತುತ ಪಡಿಸ್ತಿದೆ ಒಮ್ಮೆ ನೋಡ್ಕೊಂಡ್ ಬನ್ನಿ.
1996ರ ಚೆನ್ನೈ ಪ್ರವಾಹಕ್ಕೆ ದೇಣಿಗೆ, 1998ರ ಮಳೆ ಹಾನಿಗೆ ದೇಣಿಗೆ, 1999ರ ಕಾರ್ಗಿಲ್ ವಾರ್ ಸೈನಿಕರಿಗೆ ದೇಣಿಗೆ, 2001ರ ಗುಜರಾತ್ ಭೂಕಂಪಕ್ಕೆ ಆರ್ಥಿಕ ಸಹಾಯ, 2004ರ ಸುನಾಮಿಗೆ ಫಂಡ್, 2004ರಲ್ಲಿ ಕ್ಯಾನ್ಸರ್ ಆಸ್ಪತ್ರೆಗೆ ಡೊನೇಷನ್, 2007ರಲ್ಲಿ ಶೈಕ್ಷಣಿಕ ಏಳಿಗೆಗೆ ನೆರವು, 2008ರಲ್ಲಿ ಒನ್ಸ್ ಅಗೈನ್ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ, 2008ರಲ್ಲಿ ದಳಪತಿ ಉಚಿತ ಶಾಲೆ, 2008ರಲ್ಲಿ ಹಸಿವಿನಿಂದ ಬಳಲುತ್ತಿರೋ ಜನರಿಗೆ ಸಾಥ್, 2009ರಲ್ಲಿ ಉಚಿತ ಕಂಪ್ಯೂಟರ್ ಸೆಂಟರ್, 2010ರಲ್ಲಿ 300ಕ್ಕೂ ಅಧಿಕ ಕುಟುಂಬಗಳಿಗೆ ಫುಡ್ ಕಿಟ್ಸ್, 2011ರಲ್ಲಿ ಸೈಕಲ್ ನೀಡಿ ಸಹಾಯ, ಅದೇ ವರ್ಷ ಮಕ್ಕಳಿಗೆ ಬಂಗಾರದ ಉಂಗುರ ಗಿಫ್ಟ್, ಉಚಿತ ಸಾಮೂಹಿಕ ವಿವಾಹಗಳು, ವಿಶೇಷ ಚೇತನರಿಗೆ ನೆರವು, ಹಾರ್ಟ್ ಸರ್ಜರಿಗೆ 2011ರಲ್ಲಿ ಆರ್ಥಿಕ ನೆರವು, ನೇತ್ರದಾನ ಶಿಬಿರಗಳು, 2012ರಲ್ಲಿ ಶೈಕ್ಷಣಿಕ ಅವಾರ್ಡ್ಸ್.. ಹೀಗೆ ಪ್ರತೀ ವರ್ಷ ಒಂದಿಲ್ಲೊಂದು ಸಾಮಾಜಿಕ ಕಾರ್ಯಗಳನ್ನ ಮಾಡ್ತಾ ಬರ್ತಿದ್ದಾರೆ ವಿಜಯ್.
ಇದಲ್ಲದೆ 2018ರಲ್ಲಿ ಕೇರಳ ಪ್ರವಾಹಕ್ಕೂ ಆರ್ಥಿಕ ನೆರವು ನೀಡಿ, ಕಷ್ಟಕ್ಕೆ ಮಿಡಿಯುವ ಹೃದಯ ಅನಿಸಿಕೊಂಡಿದ್ರು ವಿಜಯ್. ಇದೆಲ್ಲವೂ ಅವರ ರಾಜಕೀಯ ಕರಿಯರ್‌ಗೆ ಪ್ಲಸ್ ಆಗಿವೆ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಸತತ 25-30 ವರ್ಷಗಳಿಂದ ಆ ಫಲಾನುಭವಿಗಳೆಲ್ಲಾ ವಿಜಯ್‌ಗೆ ಋಣಿಯಾಗಿದ್ರು. ಆ ಋಣವನ್ನ ಇದೀಗ ಟಿವಿಕೆಗೆ ವೋಟ್ ಹಾಕೋ ಮೂಲಕ ತೀರಿಸಿದ್ದಾರೆ ಅಂದ್ರೆ ತಪ್ಪಾಗಲ್ಲ.
- ಸಾಮಾಜಿಕ ಕಳಕಳಿ ಇರೋ ಸಿನಿಮಾಗಳಲ್ಲಿ ವಿಜಯ್..!
- ಮೆರ್ಸೆಲ್, ಸರ್ಕಾರ್, ಜನನಾಯಗನ್ನಲ್ಲಿ ಪಾಲಿಟಿಕ್ಸ್
ದಳಪತಿ ವಿಜಯ್ ಮಾಸ್ ಹೀರೋ ಹೌದು. ಆದ್ರೆ ಆ ಮಾಸ್ ಜೊತೆ ಆಡಿಯೆನ್ಸ್‌ಗೆ ಕನೆಕ್ಟ್ ಆಗುವಂತಹ ಸಾಮಾಜಿಕ ಕತೆಗಳಿಗೂ ಬಣ್ಣ ಹಚ್ಚುತ್ತಿದ್ದರು. ಅದರಲ್ಲೂ ಪೊಲಿಟಿಕಲ್ ಡ್ರಾಮಾ ಇರೋ ಅಂತಹ ಚಿತ್ರಗಳ ಮೂಲಕ ಜನಕ್ಕೆ ವಿಜಯ್ ಮತ್ತಷ್ಟು ಹತ್ತಿರ ಆದ್ರು. ಸಮಾಜಕ್ಕೆ ಸಂದೇಶ ನೀಡುವಂತಹ ಕಂಟೆಂಟ್ ಬೇಸ್ಡ್ ಸಿನಿಮಾಗಳಿಂದ ಜನ ನಾಯಕನಾದರು. ಆ ನಂತರವೇ ಅವರು ಜನನಾಯಗನ್ ಅನ್ನೋ ಸಿನಿಮಾಗೆ ಬಣ್ಣ ಹಚ್ಚಿದ್ರು.
ಜನ ನಾಯಗನ್ ಚಿತ್ರದಲ್ಲಿರೋ ಕಂಟೆಂಟ್ ಅಕ್ಷರಶಃ ವಿಜಯ್ ಈಗ ನಿಜ ಜೀವನದಲ್ಲಿ ಪ್ರೂವ್ ಮಾಡಿ ತೋರಿಸಿದ್ದಾರೆ. ಸಿನಿಮಾ ಲೇಟ್ ಆಗಿ ಬೆಳ್ಳಿತೆರೆಗೆ ಬರಬಹುದು. ಆದ್ರೆ ಲೇಟೆಸ್ಟ್ ಆಗಿ ಬಾಕ್ಸ್ ಆಫೀಸ್ ಕಮಾಲ್ ಮಾಡಲಿದೆ. ಅಷ್ಟೇ ಯಾಕೆ, ನಿರ್ಮಾಪಕರಿಗೆ ಆಗಿರೋ ಲಾಸ್‌ನ ಹಂಡ್ರೆಡ್ ಪರ್ಸೆಂಟ್ ತುಂಬಿಕೊಡಲಿದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ.
ಇನ್ನೂ ಮೆರ್ಸೆಲ್ ಚಿತ್ರದಲ್ಲಿ ತ್ರಿಬಲ್ ರೋಲ್‌ನಲ್ಲಿ ಮಿಂಚಿದ್ರು. ಯೂತ್‌ಗೆ ಕನೆಕ್ಟ್ ಆಗುವಂತಹ ಮಾಸ್ಟರ್ ಚಿತ್ರದಲ್ಲಿ ಡ್ರಗ್ಸ್ ವಿರುದ್ಧ ಸಮರ ಸಾರಿದ್ರೆ, ಬಿಗಿಲ್‌ನಲ್ಲಿ ಹೆಣ್ಣು ಮಕ್ಕಳ ಕ್ರೀಡೋತ್ಸಾಹ ಹೆಚ್ಚಿಸೋ ಕಾರ್ಯ ಮಾಡಿದ್ರು. ಹಾಗಾಗಿಯೇ ವಿಜಯ್ ಜನರ ಮನಸ್ಸಿಗೆ ಇಳಿದು ಬಿಟ್ಟರು.
ಸರ್ಕಾರ್ ಚಿತ್ರದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಯಾಕಂದ್ರೆ ಆ ಚಿತ್ರದ ಮೂಲಕ ವೋಟ್ ಬೆಲೆ ಏನು ಅನ್ನೋದನ್ನ ತೋರಿಸಿಕೊಟ್ಟಿದ್ರು ವಿಜಯ್. ಅದೇ ಕಾರಣಕ್ಕೆ ದೇಶ, ವಿದೇಶಗಳಿಂದ ಸಾವಿರಾರು ಕಿಲೋ ಮೀಟರ್ ಗಟ್ಟಲೆ ಟ್ರಾವೆಲ್ ಮಾಡಿಕೊಂಡು ಬಂದು ಮತ ಚಲಾಯಿಸಿದ್ರು ತಮಿಳುನಾಡಿನ ನಾಗರೀಕರು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
