2ನೇ ಮದ್ವೆ ಆಗಲ್ಲ..ವಿಜಯ್ ರಾಘವೇಂದ್ರ ಖಡಕ್ ಮಾತು

ಸ್ಪಂದನಾ ಜಾಗ ಯಾರೂ ತುಂಬಲಾಗಲ್ಲ..ರಾಘು ಕನ್ಫರ್ಮ್‌..!

Web (10)

ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಬಾಳಿಂದ ಸ್ಪಂದನಾ ದೂರವಾಗಿ ಎರಡು ವರ್ಷಗಳಾಗ್ತಿದೆ. ಇಂದಿಗೂ ವಿಜಯ್ ರಾಘವೇಂದ್ರ ಎರಡನೇ ಮದ್ವೆ ವಿಷಯ ಸಿಕ್ಕಾಪಟ್ಟೆ ಟಾಕ್‌‌ನಲ್ಲಿದೆ. ರಿಪ್ಪನ್ ಸ್ವಾಮಿ ಸಿನಿಮಾದ ರಿಲೀಸ್ ಪ್ರಮೋಷನ್ಸ್‌‌ನಲ್ಲಿರೋ ನಟ, ಆ ಎಲ್ಲಾ ಅಂತೆ ಕಂತೆಗಳಿಗೆ ನಮ್ಮ ಗ್ಯಾರಂಟಿ ನ್ಯೂಸ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಪ್ರೀತಿಸಿ ಮದ್ವೆಯಾದ ಮಡದಿ ಸ್ಪಂದನಾರನ್ನ ಕಳೆದುಕೊಂಡ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ, ಅದ್ರಿಂದ ಹೊರಬರಲಾಗದೆ ಸಾಕಷ್ಟು ನೊಂದಿದ್ದಾರೆ. ಆದಾಗ್ಯೂ ಕೂಡ ಮಗ ಶೌರ್ಯನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ತನ್ನ ನೋವನ್ನು ತನ್ನಲ್ಲೇ ಇಟ್ಕೊಂಡು, ಅವನಿಗೊಂದು ಭವಿಷ್ಯ ರೂಪಿಸೋ ನಿಟ್ಟಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡ್ತಾ ಬರ್ತಿದ್ದಾರೆ. 2023ರಲ್ಲಿ ಸ್ಪಂದನಾ ತೀರಿಕೊಂಡ ಬಳಿಕ ವಿಜಯ್ ರಾಘವೇಂದ್ರ ಮತ್ತೆ ಮರುಮದುವೆ ಆಗ್ತಾರೆ ಅಂತೆಲ್ಲಾ ಸುದ್ದಿಗಳು ಹಬ್ಬಿದ್ದವು.

ಅದ್ರಲ್ಲೂ ನಟಿ ಮೇಘನಾ ರಾಜ್ ಜೊತೆ ವಿಜಯ್ ರಾಘವೇಂದ್ರ ಕಲ್ಯಾಣ ಎಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಪುಕಾರುಗಳು ಹಬ್ಬಿಸಲಾಗಿತ್ತು. ಆದ್ರೀಗ ಗ್ಯಾರಂಟಿ ನ್ಯೂಸ್ ಜೊತೆ ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ ಚಿನ್ನಾರಿನ ಮುತ್ತ. ಎರಡನೇ ಮದ್ವೆ ಮಾತೇ ಇಲ್ಲ. ನನ್ನ ಬಾಳಲ್ಲಿ ಸ್ಪಂದನಾ ಜಾಗವನ್ನು ಯಾರೂ ತುಂಬಲಾರರು. ಅವಳ ನನೆಪುಗಳಲ್ಲೇ ನನ್ನ ಉಳಿದ ಜೀವನ ಅಂತೆಲ್ಲಾ ಎಲ್ಲಾ ಅಂತೆ ಕಂತೆಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಸ್ಟಾರ್‌ಗಳ ಫ್ಯಾನ್ಸ್ ವಾರ್ ಹಾಗೂ ದರ್ಶನ್ ಫ್ಯಾನ್ಸ್ ವರ್ಸಸ್ ರಮ್ಯಾ ಬಗ್ಗೆ ಕೂಡ ಮಾತನಾಡಿದ ವಿಜಯ್ ರಾಘವೇಂದ್ರ, ತಮ್ಮ ಮುಂದಿನ ಚಿತ್ರ ರಿಪ್ಪನ್ ಸ್ವಾಮಿ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಸ್ಪಂದನಾ ತುಂಬಾ ಮಾತಾಡ್ತಿದ್ರು. ಪ್ರತಿ ಹಂತದಲ್ಲೂ ಆಕೆಯನ್ನ ನೆನೆಸಿಕೊಳ್ತೀನಿ. ಅದನ್ನೇ ಶಕ್ತಿ ಆಗಿಸಿಕೊಳ್ತೀನಿ ಎಂದಿದ್ದಾರೆ.

ಅಂದಹಾಗೆ ರಿಪ್ಪನ್ ಸ್ವಾಮಿ ಟೀಸರ್ ಸಖತ್ ಪ್ರಾಮಿಸಿಂಗ್ ಆಗಿದ್ದು, ಟೆಕ್ನಿಕಲಿ, ಮೇಕಿಂಗ್, ಕಥೆ, ಪಾತ್ರಗಳು ಹೀಗೆ ಎಲ್ಲಾ ವಿಚಾರಗಳಿಂದ ಗೆಲ್ಲೋ ಸೂಚನೆ ಕೊಟ್ಟಿದೆ ಸಿನಿಮಾ. ಮಲೆನಾಡಿನ ಸ್ನಾನಕೊಪ್ಪದಲ್ಲಿ ನಡೆಯೋ ಕಾಲ್ಪನಿಕ ಕಥೆ ಇದಾಗಿದ್ದು, ಹೆಂಡ್ತಿಯನ್ನ ಕರೆದುಕೊಂಡು ದಟ್ಟವಾದ ಕಾಡಿಗೆ ಬೇಟೆಗೆ ತೆರಳುವ ರಿಪ್ಪನ್ ಸ್ವಾಮಿಯ ಕಥಾನಕ ಹೊಂದಿದೆ. ಕಿಶೋರ್ ಮೂಡುಬಿದಿರೆ ನಿರ್ದೇಶನದ ಈ ಸಿನಿಮಾಗೆ ಸ್ಯಾಮುಯೆಲ್ ಸಂಗೀತವಿದ್ದು, ಅಶ್ವಿನಿ ಚಂದ್ರಶೇಖರ್ ನಾಯಕನಟಿಯಾಗಿ ಕಾಣಿಸಿಕೊಂಡಿದ್ದಾರೆ. ಮಗನಿಗಾಗಿ ಬದುಕ್ತಿರೋ ಚಿನ್ನಾರಿ ಮುತ್ತನ ಸಿನಿಯಾನದಲ್ಲಿ ಈ ಚಿತ್ರದ ಜೊತೆಗೆ ಎಲ್ಲಾ ಸಿನಿಮಾಗಳು ಗೆಲ್ಲುವಂತಾಗಲಿ ಅನ್ನೋದು ನಮ್ಮ ಆಶಯ.

 

Exit mobile version