ಫ್ಯಾಮಿಲಿ ಕಥೆ AK-47 ಜೊತೆ..ಅಂದು ಶಿವಣ್ಣ..ಇಂದು ವೆಂಕಿ..!

ತ್ರಿವಿಕ್ರಮ್ ಬ್ಯಾಕ್ ಟು ಬ್ಯಾಂಗ್.. ನಮ್ಮ KGF ಕ್ವೀನ್ ಜೊತೆ ವೆಂಕಿ

ಫ್ಯಾಮಿಲಿ ಕಥೆ AK 47 ಜೊತೆ..ಅಂದು ಶಿವಣ್ಣ..ಇಂದು ವೆಂಕಿ..!

AK-47 ಅಂದಾಕ್ಷಣ ನಮಗೆಲ್ಲಾ ಮೊದಲು ನೆನಪಾಗೋದೇ ನಮ್ಮ ದೊಡ್ಮನೆ ದೊರೆ ಶಿವರಾಜ್‌ಕುಮಾರ್ ನಟನೆಯ ಸಿನಿಮಾ. ಆದ್ರೀಗ ಪಕ್ಕದ ಟಾಲಿವುಡ್ ಅಂಗಳದಲ್ಲೂ ಒಂದು ಎಕೆ-47 ಸಿನಿಮಾ ತಯಾರಾಗಿದೆ. ವಿಕ್ಟರಿ ವೆಂಕಟೇಶ್ ನಮ್ಮ ಕನ್ನಡತಿ, ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿಯೊಂದಿಗೆ ನಟಿಸಿರೋ ಆದರ್ಶ ಕುಟುಂಬ ಹೌಸ್ ನಂ.47 ಕಹಾನಿ ಟ್ರೈಲರ್‌‌ನಲ್ಲಿ ಅನಾವರಣಗೊಂಡಿದೆ.

ಕಳೆದ ವರ್ಷ ಸಂಕ್ರಾಂತಿಕಿ ವಸ್ತುನ್ನಾಮ್ ಹಾಗೂ ಈ ವರ್ಷ ಚಿರು ಜೊತೆಗಿನ ಮನ ಶಂಕರ್ ವರ ಪ್ರಸಾರ್ ಗಾರು ಸಿನಿಮಾಗಳಿಂದ ಸಕ್ಸಸ್ ಟ್ರ್ಯಾಕ್‌ಗೆ ಮರಳಿರುವ ನಟ ವಿಕ್ಟರಿ ವೆಂಕಟೇಶ್ ಬ್ಯಾಕ್ ಟು ಬ್ಯಾಕ್ ಹಿಟ್ಸ್ ನೀಡ್ತಿದ್ದಾರೆ. ಇದೇ ಅಕ್ಟೋಬರ್ 30ಕ್ಕೆ ಆದರ್ಶ ಕುಟುಂಬಂ ಹೌಸ್ ನಂ.47 ಚಿತ್ರದ ಮೂಲಕ ಪ್ರೇಕ್ಷಕರನ್ನ ರಂಜಿಸಲು ಬರ್ತಿದ್ದಾರೆ. ಇತ್ತೀಚೆಗೆ ಟ್ರೈಲರ್ ಕೂಡ ಲಾಂಚ್ ಆಗಿದ್ದು, ಸಖತ್ ಇಂಪ್ರೆಸ್ಸೀವ್ ಆಗಿದೆ.

ಮಾರಿನ ಮಾಂತ್ರಿಕ ಅಂತಲೇ ಫೇಮಸ್ ಆಗಿರೋ ತ್ರಿವಿಕ್ರಮ್ ಶ್ರೀನಿವಾಸ್ ಗುಂಟೂರು ಕಾರಂ ಚಿತ್ರದ ಬಳಿಕ ಆ್ಯಕ್ಷನ್ ಕಟ್ ಹೇಳಿರೋ ಸಿನಿಮಾ ಇದಾಗಿದ್ದು, ಪಕ್ಕಾ ಮಾಸ್ ವಿತ್ ಫ್ಯಾಮಿಲಿ ಮೀಲ್ ತಯಾರಿಸಿದ್ದಾರೆ. ಹೌದು.. ಆದರ್ಶ ಕುಟುಂಬಂ ಟೈಟಲ್‌ಗೆ ತಕ್ಕನಾಗಿ ಇದೊಂದು ಕೌಟುಂಬಿಕ ಸಿನಿಮಾ. ಆದ್ರೆ ಅದರೊಳಗೊಂದು ಆ್ಯಕ್ಷನ್ ಡ್ರಾಮಾ ಕೂಡ ಸೃಷ್ಟಿಸಿ ಉಣಬಡಿಸ್ತಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ವೆಂಕಿಗೆ ಜೋಡಿ ನಮ್ಮ ಕನ್ನಡತಿ, ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ.

ಟೀಸರ್‌ಗಿಂತ ಟ್ರೈಲರ್ ಸಖತ್ ಇಂಪ್ರೆಸ್ಸೀವ್ ಹಾಗೂ ಇಂಟರೆಸ್ಟಿಂಗ್ ಆಗಿದ್ದು, ನೋಡುಗರಿಗೆ ಸಖತ್ ಥ್ರಿಲ್ ನೀಡುತ್ತಿದೆ. ಕಾಮಿಡಿ, ಸೆಂಟಿಮೆಂಟ್, ಆ್ಯಕ್ಷನ್, ಸಸ್ಪೆನ್ಸ್.. ಹೀಗೆ ಎಲ್ಲವೂ ಬ್ಲೆಂಡ್ ಆಗಿ ಪಕ್ಕಾ ಕಮರ್ಷಿಯಲ್ ಎಂಟರ್‌‌ಟೈನರ್ ಆಗಿ ಹೊರಹೊಮ್ಮಿದಂತಿದೆ. ಈ ಸಿನಿಮಾನ ಶಾರ್ಟ್ ಫಾರ್ಮ್‌‌ನಲ್ಲಿ ಎಕೆ-47 ಅಂತ ಎಲ್ಲರೂ ಕರೆಯುತ್ತಿದ್ದು, ನಮ್ಮ ಕನ್ನಡದ ಶಿವಣ್ಣನ ಎಕೆ-47ಕೂ ಹೋಲಿಕೆ ಮಾಡುವಂತಿದೆ.

ಹೌದು.. ಅಂದು ಶಿವರಾಜ್‌‌ಕುಮಾರ್ ಕೂಡ ಫ್ಯಾಮಿಲಿಗಾಗಿ ಹೋರಾಟ ಮಾಡಿದ್ರು. ಇಂದು ವಿಕ್ಟರಿ ವೆಂಕಟೇಶ್ ಕೂಡ ಕುಟುಂಬಕ್ಕಾಗಿಯೇ ಹೋರಾಟ ಮಾಡುವಂತಹ ದೃಶ್ಯಗಳು ಟ್ರೈಲರ್ ದೃಶ್ಯಗುಚ್ಚದಲ್ಲಿವೆ. ಹಾಗಾಗಿ ಕಾಕತಾಳೀಯ ಅಂದ್ರೆ ಸಿನಿಮಾಗಳ ಟೈಟಲ್‌‌ಗಳು ಸೇಮ್ ಟು ಸೇಮ್ ಮ್ಯಾಚ್ ಆಗ್ತಿವೆ.

65 ವರ್ಷದ ವೆಂಟಕೇಶ್ ಇಳಿ ವಯಸ್ಸಿನಲ್ಲೂ ಅದೇ ಲವಲವಿಕೆ ಹಾಗೂ ಚಾರ್ಮ್‌‌ನಿಂದ ಪ್ರೇಕ್ಷಕರ ಹುಬ್ಬೇರಿಸುತ್ತಿದ್ದಾರೆ. ಥಮನ್ ಮ್ಯೂಸಿಕ್ ಕೂಡ ಚಿತ್ರಕ್ಕೆ ಪ್ಲಸ್ ಅಗಲಿದ್ದು, ತ್ರಿವಿಕ್ರಮ್ ಈ ಬಾರಿ ಪಕ್ಕಾ ಜಾದೂ ಮಾಡಲಿದ್ದಾರೆ ಅಂತಿದ್ದಾರೆ ಸಿನಿಪಂಡಿತರು. ಸಿನಿಮಾ ಇದೇ ಅಕ್ಟೋಬರ್ 30ಕ್ಕೆ ಥಿಯೇಟರ್‌ಗೆ ಲಗ್ಗೆ ಇಡ್ತಿದ್ದು, ವರ್ಲ್ಡ್‌‌ವೈಡ್ ಏಕಕಾಲದಲ್ಲಿ ರಿಲೀಸ್ ಆಗ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version