ಮಿಲ್ಕಿ ಬ್ಯೂಟಿಯನ್ನ ಬಿಟ್ಟು ಒಂಟಿಯಾಗಿ ಫ್ಲೈಟ್ ಏರಿದ ವರ್ಮಾ..!

ಲವ್ ಬರ್ಡ್ಸ್ ಬಾಳಲ್ಲಿ ಸುನಾಮಿ.. ಏನಾಗಿದೆ ಈ ಜೋಡಿಗೆ..?!

Befunky collage 2025 03 07t135348.921

ಬಾಲಿವುಡ್ ನಟ ವಿಜಯ್ ವರ್ಮಾ ಬಿಗ್ ಸ್ಕ್ರೀನ್ ನಲ್ಲಿ ಎಷ್ಟು ದೊಡ್ಡ ಹೆಸರು ಮಾಡಿದ್ದಾರೋ, ವೆಬ್ ಸೀರೀಸ್ ಗಳಿಂದಲೂ ಸಹ ಅಷ್ಟೇ ಫೇಮಸ್. ಅವರಿಗೆ ಬಹುದೊಡ್ಡ ಫ್ಯಾನ್ ಫಾಲೋಯಿಂಗ್ ಕೂಡ ಇದೆ. ಹುಡುಗಿಯರ ಹಾರ್ಟ್ ಫೇವರಿಟ್ ಆಗಿದ್ದ ವಿಜಯ್ ವರ್ಮಾಗೆ ಲಸ್ಟ್ ಸ್ಟೋರೀಸ್‌‌‌ ವೇಳೆ ಮಿಲ್ಕಿ ಬ್ಯೂಟಿ ತಮನ್ನಾ ಮೇಲೆ ಲವ್ ಆಗಿತ್ತು. ಇನ್ ಫ್ಯಾಕ್ಟ್ ಅವರಿಬ್ಬರೂ ಒಟ್ಟೊಟ್ಟಿಗೆ ಓಡಾಡೋದು ಕೂಡ ಓಪನ್ ಸೀಕ್ರೆಟ್ ಆಗಿತ್ತು.

ಮದ್ವೆ ಸಹ ಆಗಲಿದ್ದಾರೆ ಎನ್ನಲಾಗಿತ್ತು.ಸಿನಿಮಾ, ಖಾಸಗಿ ಕಾರ್ಯಕ್ರಮಗಳು ಸೇರಿದಂತೆ ಎಲ್ಲಿ ನೋಡಿದ್ರೂ ಇವರ ಜೋಡಿ ಮೋಡಿ ಮಾಡ್ತಿತ್ತು. ಅದ್ರಲ್ಲೂ ತಮನ್ನಾ ವ್ಯಾನಿಟಿ ಬ್ಯಾಗ್ ನ ವಿಜಯ್ ವರ್ಮಾ ಹೊತ್ತು ಓಡಾಡ್ತಿದ್ರು. ಪಾಪರಾಜೀಸ್ ಗಂತೂ ಇವರನ್ನ ಏರ್ ಪೋರ್ಟ್ ಗಳಲ್ಲಿ ಕ್ಲಿಕ್ಕಿಸೋದೇ ದೊಡ್ಡ ಕಾಯಕವಾಗಿತ್ತು. ಆದ್ರೀಗ ಇವರಿಬ್ಬರ ಮಧ್ಯೆ ಮನಸ್ತಾಪಗಳು ಬಂದು, ಲವ್ ಬ್ರೇಕಪ್ ಆಗಿದೆ. ಮದ್ವೆ ದೂರದ ಮಾತು, ಇವರ ನಡುವೆ ಯಾವುದೇ ಲವ್, ಫ್ರೆಂಡ್ಶಿಪ್ ಕೂಡ ಇಲ್ಲ. ಇತ್ತೀಚೆಗೆ ಇವರು ಒಟ್ಟಿಗೆ ಕಾಣಿಸಿಕೊಳ್ತಿಲ್ಲ.

ಜೈಪುರ್ ನಲ್ಲಿ ನಡೆಯಲಿರೋ ಐಫಾ ಅವಾರ್ಡ್ ಫಂಕ್ಷನ್ ನಲ್ಲಿ ಭಾಗಿಯಾಗಲು ಬಾಲಿವುಡ್ ನ ಸಾಕಷ್ಟು ಮಂದಿ ಸ್ಟಾರ್ಸ್ ಮುಂಬೈ ಏರ್ ಪೋರ್ಟ್ ಮೂಲಕ ತೆರಳಿದ್ದಾರೆ. ಅಲ್ಲಿ ವಿಜಯ್ ವರ್ಮಾ ಕೂಡ ಕಾಣಿಸಿಕೊಂಡಿದ್ದಾರೆ. ಜಂಟಿಯಾಗಿ ಅಲ್ಲ, ಒಂಟಿಯಾಗಿ. ಹೌದು.. ತಮನ್ನಾನ ಬಿಟ್ಟು ಒಬ್ಬರೇ ಫ್ಲೈಟ್ ಏರಿದ್ದಾರೆ ವಿಜಯ್ ವರ್ಮಾ. ಅಷ್ಟೇ ಅಲ್ಲ, ಪಾಪರಾಜೀಸ್ ಗೆ ಪೋಸ್ ಕೊಡದೆ, ಅವ್ರನ್ನ ಅವಾಯ್ಡ್ ಮಾಡಿಕೊಂಡೇ ಏರ್ ಪೋರ್ಟ್ ನಿಂದ ಎಸ್ಕೇಪ್ ಆಗಿದ್ದಾರೆ. ಆದರೂ ಇವರನ್ನ ಹೀಗೆ ಒಂಟಿಯಾಗಿ ನೋಡೋದು ಸ್ವಲ್ಪ ಕಷ್ಟ ಅನಿಸ್ತಿದೆ ಅವರ ಫ್ಯಾನ್ಸ್ ಗೆ.

 

Exit mobile version