ಪತಿಯ ಮಾತಿಗೆ 117 ಅಡಿ ಎತ್ತರದಿಂದ ಧುಮುಕಿದ ವೈಷ್ಣವಿ ಗೌಡ

Web (24)

ಕನ್ನಡ ಕಿರುತೆರೆ ಧಾರಾವಾಹಿ ತಾರೆ ವೈಷ್ಣವಿ ಗೌಡ ತಮ್ಮ ದಾಂಪತ್ಯ ಜೀವನದ ಆರಂಭದಲ್ಲಿಯೇ ರೋಮಾಂಚಕ ಅನುಭವವೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಪತಿ ಅನಕೂಲ್ ಮಿಶ್ರಾ ಜೊತೆಗೆ 117 ಅಡಿ ಎತ್ತರದಿಂದ ಬಂಗೀ ಜಂಪ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೈಷ್ಣವಿ, “117 ಅಡಿ ಎತ್ತರ, ಪ್ರತಿ ಸೆಕೆಂಡ್ ಯೋಗ್ಯವಾಗಿದೆ. ನನ್ನ ಪತಿ ನನ್ನನ್ನು ಇದನ್ನು ಮಾಡಲು ಪ್ರೇರೇಪಿಸಿದರು” ಎಂದು ಬರೆದುಕೊಂಡಿದ್ದಾರೆ.

ವೈಷ್ಣವಿ ಗೌಡ, ‘ಸೀತಾರಾಮ’ ಧಾರಾವಾಹಿಯಿಂದ ಜನಪ್ರಿಯತೆಗಳಿಸಿದ ನಟಿ, ಇತ್ತೀಚೆಗೆ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಏಪ್ರಿಲ್ 14, 2025ರಂದು ಅನಕೂಲ್ ಮಿಶ್ರಾ ಜೊತೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅವರು, ಆನಂತರ ಭವ್ಯ ರಿಸೆಪ್ಷನ್ ಕಾರ್ಯಕ್ರಮವನ್ನೂ ಆಯೋಜಿಸಿದ್ದರು. ಸದ್ಯ, ಪತಿಯ ಜೊತೆಗೆ ಖುಷಿಯ ಕ್ಷಣಗಳನ್ನು ಕಳೆಯುತ್ತಿರುವ ವೈಷ್ಣವಿ, ಈ ಬಂಗೀ ಜಂಪ್ ವಿಡಿಯೋ ಮೂಲಕ ಅಭಿಮಾನಿಗಳಿಗೆ ಆಶ್ಚರ್ಯದ ಉಡುಗೊರೆ ನೀಡಿದ್ದಾರೆ.


ವೈಷ್ಣವಿ ಮತ್ತು ಅನಕೂಲ್ ಮಿಶ್ರಾ ಒಟ್ಟಿಗೆ ಬಂಗೀ ಜಂಪ್ ಮಾಡಿರುವ ಈ ವಿಡಿಯೋವನ್ನು ನೋಡಿದ ಅಭಿಮಾನಿಗಳು ಆಶ್ಚರ್ಯಗೊಂಡಿದ್ದಾರೆ. ಕೆಲವರು “ನಿಮಗೆ ಏನೂ ಆಗಿಲ್ಲ ಎಂದು ಖುಷಿಯಾಯಿತು” ಎಂದು ಕಾಮೆಂಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರೀ ಜನಪ್ರಿಯತೆ ಗಳಿಸಿದ್ದು, ವೈಷ್ಣವಿಯ ಧೈರ್ಯ ಮತ್ತು ಜಾಲಿ ಮೂಡ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Exit mobile version