ನವರಸನ್ ನೇತೃತ್ವದ “ಉತ್ಸವ್ ಕೆಫೆ” ಆರಂಭ

ಜಿ.ಟಿ.ಮಾಲ್ ನಲ್ಲೊಂದು ಶುದ್ಧ ಸಸ್ಯಾಹಾರಿ ಹೋಟೆಲ್

Web 2025 06 13t191519.124

ನಿರ್ಮಾಪಕನಾಗಿ, ನಿರ್ದೇಶಕನಾಗಿ, ನಟನಾಗಿ, ವಿತರಕನಾಗಿ ಹಾಗೂ ಮೈ ಮೂವೀ ಬಜಾರ್ ಮೂಲಕ ಸಾಕಷ್ಟು ಸಿನಿಮಾ ಇವೆಂಟ್ ಗಳನ್ನು ನಡೆಸುತ್ತಿರುವ , MMB legacy ಯ ಮುಖ್ಯಸ್ಥರೂ ಆಗಿರುವ ನವರಸನ್ ಬೆಂಗಳೂರಿನ ಜಿ.ಟಿ.ಮಾಲ್ ನಲ್ಲಿ ಉತ್ಸವ್ ಕೆಫೆ ಎಂಬ ನೂತನ ಶುದ್ಧ ಸಸ್ಯಹಾರಿ ಹೋಟೆಲ್ ಆರಂಭಿಸಿದ್ದಾರೆ.

ಇತ್ತೀಚೆಗೆ ನಡೆದ “ಉತ್ಸವ್ ಕೆಫೆ” ಯ ಉದ್ಘಾಟನಾ ಸಮಾರಂಭದಲ್ಲಿ ವಿನೋದ್ ಪ್ರಭಾಕರ್, ಚಂದನ್ ಶೆಟ್ಟಿ, ರಾಜವರ್ಧನ್, ಆರ್ ಚಂದ್ರು, ಸಂಜಯ್ ಗೌಡ, ನಿಶಾ ವಿನೋದ್ ಪ್ರಭಾಕರ್, ಅಪೂರ್ವ, ಸಿಂಧೂ ಲೋಕನಾಥ್, ನವೀನ್ ಶಂಕರ್, ರಾಜೇಶ್, ತಬಲ ನಾಣಿ, ನಿರ್ಮಾಪಕರಾದ ಜಗದೀಶ್ ಗೌಡ, ಕೃಷ್ಣ ಸಾರ್ಥಕ್, ಚೇತನ್ ಗೌಡ, ಶ್ರೀನಿವಾಸ್, ರವಿ ಸೇರಿದಂತೆ ಅನೇಕ ಗಣ್ಯರು ಆಗಮಿಸಿ, ನವರಸನ್ ಅವರಿಗೆ ಶುಭ ಕೋರಿದರು.

ಶುದ್ಧ ಸಸ್ಯಹಾರಿ ಹೋಟೆಲ್ ಆರಂಭಿಸುವುದು ನನ್ನ ಎರಡು ವರ್ಷಗಳ ಕನಸು. ಅದು ಈಗ ಈಡೇರಿದೆ. ಜಿ.ಟಿ.ಮಾಲ್ ನ ಮೂರನೇ ಮಹಡಿಯಲ್ಲಿ “ಉತ್ಸವ್ ಕೆಫೆ” ಎಂಬ ಪ್ಯೂರ್ ವೆಜ್ ರೆಸ್ಟೋರೆಂಟ್ ಆರಂಭಿಸಿದ್ದೇನೆ. ರುಚಿಕರವಾದ ಇಡ್ಲಿ, ವಡೆ, ಪೂರಿ ಮುಂತಾದ ತಿನಸುಗಳ ಜೊತೆಗೆ ಚೈನೀಸ್(ವೆಜ್) ತಿಂಡಿಗಳು ಸಹ ಇಲ್ಲಿ ಲಭ್ಯವಿರುತ್ತದೆ. ನಮ್ಮ ಈ ಹೊಸ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನವರಸನ್.

Exit mobile version