ದೊಡ್ಮನೆಯಲ್ಲಿ UPSC ಟಾಪ್ ಱಂಕ್ ಪಡೆದವ್ರ ಕಲರವ

ಊಟ, ಉಪಚಾರ..ಪೋಷಕರ ಸಮೇತ ಎಲ್ಲರಿಗೂ ಗೌರವ

Untitled design 2026 03 15T172926.392

ದೊಡ್ಮನೆ ಬರೀ ಮನರಂಜನಾ ಕ್ಷೇತ್ರಕ್ಕೆ ಮಾತ್ರ ಸೀಮಿತ ಆಗಿಲ್ಲ. ಅಕ್ಷರ ದಾಸೋಹಕ್ಕೂ ಕಾರಣೀಭೂತವಾಗಿದೆ. ಡಾ ರಾಜ್‌‌ಕುಮಾರ್ ಅಕಾಡೆಮಿಯಿಂದ ಸಿವಿಲ್ ಸರ್ವೀಸ್ ಆಫೀಸರ್‌‌ಗಳಾಗಿ ಸಾಕಷ್ಟು ಮಂದಿ ಹೊರಹೊಮ್ಮಿದ್ದಾರೆ. ಇತ್ತೀಚೆಗೆ UPSC ಪರೀಕ್ಷೆಯಲ್ಲಿ ಅತ್ಯುನ್ನತ ಱಂಕ್‌‌ನಲ್ಲಿ ಪಾಸ್ ಆದ ವಿದ್ಯಾರ್ಥಿಗಳನ್ನ ಮನೆಗೆ ಕರೆಸಿರೋ ರಾಜ್ ಕುಟುಂಬ ಏನೆಲ್ಲಾ ಮಾಡಿದ್ರು ಎಂಬುವುದರ ಫುಲ್‌ ಡೀಟೇಲ್ಸ್‌ ಇಲ್ಲಿದೆ.

ನಟಸಾರ್ವಭೌಮ ಡಾ. ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಮೇರು ಶಿಖರ. ಕಲೆಗಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟ ಸಿನಿ ಸಂತ. ಪಾರ್ವತಮ್ಮ ರಾಜ್‌ಕುಮಾರ್ ಅದೆಷ್ಟೋ ಮಂದಿ ಯುವ ಪ್ರತಿಭೆಗಳನ್ನ ತಮ್ಮ ನಿರ್ಮಾಣ ಸಂಸ್ಥೆಗಳಿಂದ ಹುಟ್ಟಿ ಹಾಕಿದ್ದಾರೆ. ಅವರ ಬಳಿಕ ಆ ಲೆಗಸಿಯನ್ನ ಮಕ್ಕಳಾದ ಶಿವರಾಜ್‌‌ಕುಮಾರ್, ಪುನೀತ್ ರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಮುಂದುವರೆಸಿದ್ರು. ಯುವರಾಜ್‌ಕುಮಾರ್, ವಿನಯ್ ರಾಜ್‌‌ಕುಮಾರ್, ಧೀರೇನ್, ಷಣ್ಮುಖ, ಧನ್ಯಾ ರಾಮ್‌ಕುಮಾರ್.. ಹೀಗೆ ಮೊಮ್ಮಕ್ಕಳು, ಸೊಸೆಯಂದಿರಾದ ಗೀತಾ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಅದೇ ಹಾದಿಯಲ್ಲಿ ನಡೆಯುತ್ತಿರೋದು ವಿಶೇಷ.

ಆದ್ರೆ ಕನ್ನಡ ಚಿತ್ರರಂಗದ ಹೆಡ್ ಆಫೀಸ್ ಆಗಿರೋ ದೊಡ್ಮನೆ ಬರೀ ಕಲಾ ಸೇವೆಗಷ್ಟೇ ಅಲ್ಲ, ಶಿಕ್ಷಣ ಸೇವೆಗೂ ಮುಂದಾಗಿದೆ. ಈಗಾಗ್ಲೇ ಅಶ್ವಿನಿ ಪುನೀತ್ ರಾಜ್‌ಕುಮಾರ್ ಲಿಟಲ್ ಟೋಸ್ ಅನ್ನೋ ಅಪ್ಪು ಕನಸನ್ನ ನನಸು ಮಾಡೋಕೆ ಮುಂದಾಗಿದ್ದಾರೆ. ಅಲ್ಲದೆ, ರಾಘವೇಂದ್ರ ರಾಜ್‌ಕುಮಾರ್ ಕುಟುಂಬ ಡಾ ರಾಜ್‌ಕುಮಾರ್ ಸಿವಿಲ್ ಸರ್ವೀಸಸ್ ಅಕಾಡೆಮಿ ಕಟ್ಟಿ, ಸತತವಾಗಿ ಅದ್ರಿಂದ ದೇಶ ಹಾಗೂ ರಾಜ್ಯದ ಸೇವೆಗೆ ಸಾಕಷ್ಟು ಆಡಳಿತಾತ್ಮಕ ಅಧಿಕಾರಿಗಳನ್ನ ಹುಟ್ಟಿ ಹಾಕ್ತಿದ್ದಾರೆ.

ಸದ್ಯ ಈ ವರ್ಷ UPSC ಎಕ್ಸಾಂನಲ್ಲಿ ಟಾಕ್ ಱಂಕ್‌‌ನಲ್ಲಿ ಪಾಸ್ ಆದಂತಹ ಸಾಷಕ್ಟು ಡಾ. ರಾಜ್ ಅಕಾಡೆಮಿ ವಿದ್ಯಾರ್ಥಿಗಳನ್ನ ಸದಾಶಿವನಗರದ ಮನೆಗೆ ಕರೆಸಿ, ಅತಿಥಿ ಸತ್ಕಾರ ಮಾಡಿದ್ದಾರೆ. ವಿದ್ಯಾರ್ಥಿಗಳನ್ನಷ್ಟೇ ಅಲ್ಲ, ಅವರ ಪೋಷಕರು ಕೂಡ ದೊಡ್ಮನೆಗೆ ಬಂದು ಸಂಭ್ರಮಿಸಿದ್ದಾರೆ. ಊಟ ಹಾಕಿ, ಕುಶಲೋಪರಿ ಹಂಚಿಕೊಂಡ ರಾಘವೇಂದ್ರ ರಾಜ್‌ಕುಮಾರ್, ಮಂಗಳ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಯುವರಾಜ್‌‌ಕುಮಾರ್, ಅವರಿಗೆ ಗೌರವ ಕೂಡ ಅರ್ಪಿಸಿದ್ದಾರೆ.

ದೊಡ್ಮನೆ ಅನ್ನೋ ಹೆಸರು ಸುಮ್ಮನೆ ಬಂದಿರೋದಲ್ಲ. ಇಂತಹ ದೊಡ್ಡ ಕಾರ್ಯಗಳನ್ನ ಮಾಡ್ತಾ ಬರ್ತಿರೋ ಕುಟುಂಬವದು. ಹಾಗಾಗಿ ಜನ ಮೆಚ್ಚುವ ಹಾಗೂ ಜಗ ಮೆಚ್ಚುವ ಕಾರ್ಯಗಳಲ್ಲಿ ಸಕ್ರಿಯವಾಗಿದೆ ದೊಡ್ಮನೆ. ರಾಘಣ್ಣ ಕುಟುಂಬದಿಂದ ಮತ್ತಷ್ಟು, ಮಗದಷ್ಟು ಪ್ರತಿಭೆಗಳು ಹೊರಬರಲಿ ಅನ್ನೋದು ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version