A, ಉಪೇಂದ್ರ ಸ್ಟೈಲ್‌‌ನಲ್ಲಿ ಉಪ್ಪಿ ‘ನೆಕ್ಸ್ಟ್ ಲೆವೆಲ್’ ಪ್ರಾಜೆಕ್ಟ್

ತರುಣ್ ಶಿವಪ್ಪ- ಅರವಿಂದ್ ಕೌಶಿಕ್‌ ಕಾಂಬೋದಲ್ಲಿ ಉಪ್ಪಿ

Untitled design (75)

A, ಉಪೇಂದ್ರ ಸ್ಟೈಲ್‌‌ನಲ್ಲಿ ಉಪ್ಪಿ ನೆಕ್ಸ್ಟ್ ಲೆವೆಲ್ ಪ್ರಾಜೆಕ್ಟ್ ಮಾಡೋಕೆ ಸಜ್ಜಾಗಿದ್ದಾರೆ. ವ್ಹಾವ್.. ರಿಯಲ್ ಸ್ಟಾರ್ ಮತ್ತೆ ಆ್ಯಕ್ಷನ್ ಕಟ್ ಹೇಳ್ತಾರಾ ಅಂತ ಜಾಸ್ತಿ ಖುಷಿ ಆಗ್ಬೇಡಿ. ಯಾಕಂದ್ರೆ ಈ ಬಾರಿ ಅವರು ಜಸ್ಟ್ ನಟಿಸ್ತಿದ್ದಾರೆ ಅಷ್ಟೇ. ಹಾಗಾದ್ರೆ ಡೈರೆಕ್ಟರ್ ಯಾರು..? ಪ್ರೊಡ್ಯೂಸರ್ ಯಾರು ಅಂತೀರಾ..? ಈ ಸ್ಪೆಷಲ್ ಇಂಟರೆಸ್ಟಿಂಗ್ ಸ್ಟೋರಿ ಒಮ್ಮೆ ನೋಡಿ.

ಸೂಪರ್ ಸ್ಟಾರ್ ಉಪೇಂದ್ರ ಕನ್ನಡದ ಜೊತೆ ಜೊತೆಗೆ ಪರಭಾಷೆಗಳಲ್ಲೂ ಬ್ಯುಸಿಯಾಗಿರೋ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಕಮ್ ಡೈರೆಕ್ಟರ್. ಹೌದು.. ಯುಐ ಸಿನಿಮಾದ ಬಳಿಕ ಉಪ್ಪಿ ತಲೈವಾ ರಜನೀಕಾಂತ್ ನಟನೆಯ ಕೂಲಿ, ಶಿವಣ್ಣ-ರಾಜ್ ಬಿ ಶೆಟ್ಟಿ ಕಾಂಬೋನ 45 ಸಿನಿಮಾಗಳು ರಿಲೀಸ್ ಅಂಚಿನಲ್ಲಿವೆ. ಎರಡೂ ಸಖತ್ ಪ್ರಾಮಿಸಿಂಗ್ ವೆಂಚರ್‌‌ಗಳಾಗಿದ್ದು, ಅವು ರಿಲೀಸ್‌ಗೂ ಮೊದಲೇ ಸಿಕ್ಕಾಪಟ್ಟೆ ಬ್ಯುಸಿ ಆಗ್ತಿದ್ದಾರೆ ಉಪ್ಪಿ.

ADVERTISEMENT
ADVERTISEMENT

ಯೆಸ್.. ಉಪೇಂದ್ರ ನೆಕ್ಸ್ಟ್ ಲೆವೆಲ್ ಸಿನಿಮಾ ಮಾಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಎಲ್ಲರೂ ನೆಕ್ಸ್ಟ್ ಲೆವೆಲ್ ಸಿನಿಮಾನೇ ಮಾಡ್ಬೇಕು ಅನ್ನೋ ಮಹದಾಸೆ ಹೊಂದಿರ್ತಾರೆ. ಆದ್ರೆ ಉಪ್ಪಿ ಈ ಬಾರಿ ನೆಕ್ಸ್ಟ್ ಲೆವೆಲ್ ಟೈಟಲ್‌‌ನಲ್ಲೇ ಸಿನಿಮಾ ಮಾಡ್ತಿರೋದು ಇಂಟರೆಸ್ಟಿಂಗ್. A ಹಾಗೂ ಉಪೇಂದ್ರ ಚಿತ್ರಗಳ ಶೈಲಿಯಲ್ಲಿ ಈ ನೆಕ್ಸ್ಟ್ ಲೆವೆಲ್ ಅನ್ನೋ ಸಿನಿಮಾ ತಯಾರಾಗಲಿದ್ದು, ಈ ಬಾರಿ ಉಪ್ಪಿ ಬರೀ ಅಭಿನಯಕ್ಕೆ ಸೀಮಿತ ಆಗ್ತಿದ್ದಾರೆ.

ಕನ್ನಡ ಚಿತ್ರರಂಗದ ಡೈರೆಕ್ಟರ್ಸ್‌ಗಳ ಡೈರೆಕ್ಟರ್ ಅನಿಸಿಕೊಂಡಿರೋ ರಿಯಲ್‌ ಸ್ಟಾರ್‌ ಉಪೇಂದ್ರ ಸದ್ಯʼನೆಕ್ಸ್ಟ್‌ ಲೆವೆಲ್‌ʼ ಸಿನಿಮಾ ಬೆನ್ನತ್ತಿದ್ದಾರೆ. ಇದು ಪ್ಯಾನ್‌ ಇಂಡಿಯಾ ಚಿತ್ರವಾಗಿದ್ದು, ಅರವಿಂದ್‌ ಕೌಶಿಕ್‌ ನಿರ್ದೇಶನದಲ್ಲಿ ತರುಣ್‌ ಶಿವಪ್ಪ ನಿರ್ಮಾಣದಲ್ಲಿ ಈ ನೆಕ್ಸ್ಟ್‌ ಲೆವೆಲ್‌ ಚಿತ್ರ ಮೂಡಿಬರಲಿದೆ.

ಉಪೇಂದ್ರ ಅವರ ಸಿನಿಮಾಗಳು ಅಂದ್ರೆ ನೆಕ್ಸ್ಟ್‌ ಲೆವೆಲ್‌ ಇರುತ್ತದೆ. ಈಗ ನೆಕ್ಸ್ಟ್‌ ಲೆವೆಲ್‌ ಸಿನಿಮಾವನ್ನು ಮತ್ತೊಂದು ಲೆವೆಲ್‌ಗೆ ತಯಾರಿಸಲು ಚಿತ್ರತಂಡ ಸಜ್ಜಾಗಿದೆ. ನಿರ್ಮಾಪಕ ತರುಣ್‌ ಶಿವಪ್ಪ ಅವರ ತರುಣ್‌ ಸ್ಟುಡಿಯೋಸ್‌ ಬ್ಯಾನರ್‌‌ನಡಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಈ ಸಂಸ್ಥೆಯಡಿ ತಯಾರಾಗ್ತಿರೋ ಚೊಚ್ಚಲ ಪ್ಯಾನ್‌ ಇಂಡಿಯಾ ಚಿತ್ರ ಇದಾಗಿದ್ದು, ಪ್ಯಾನ್‌ ಪ್ರೇಕ್ಷಕರನ್ನು ಗುರಿಯಾಗಿ ಇಟ್ಟುಕೊಂಡೇ ಸಿನಿಮಾ ಮಾಡಲಾಗ್ತಿದೆ.

ತರುಣ್‌ ಸ್ಟುಡಿಯೋಸ್‌ ಬ್ಯಾನರ್‌ ನಡಿ ನಿರ್ಮಾಣವಾಗುತ್ತಿರುವ ಆರನೇ ಚಿತ್ರವಿದು. ಬಾಲಿವುಡ್‌ ತೆಲುಗು, ತಮಿಳು ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಉಪೇಂದ್ರ ಅವರ A, ಉಪೇಂದ್ರ ಸ್ಟೈಲ್‌ನಲ್ಲಿ ನೆಕ್ಸ್ಟ್‌ ಲೆವೆಲ್‌ ಸಿನಿಮಾ ಇರಲಿದೆ. ಸದ್ಯ ಪ್ರೀ ಪ್ರೊಡಕ್ಷನ್‌ ವರ್ಕ್‌ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಬೆಂಗಳೂರಿನಲ್ಲಿ ಶೂಟಿಂಗ್‌ ನಡೆಯಲಿದೆ ಎನ್ನಲಾಗ್ತಿದೆ.

ಅಜಯ್ ರಾವ್ ಜೊತೆ ರೋಸ್, ಶಿವಣ್ಣ ಜೊತೆ ಮಾಸ್ ಲೀಡರ್, ಶರಣ್ ಜೊತೆ ವಿಕ್ಟರಿ-2, ಖಾಕಿ, ಛೂ ಮಂತರ್‌ ಸಿನಿಮಾಗಳನ್ನು ತರುಣ್‌ ಶಿವಪ್ಪ ನಿರ್ಮಾಣ ಮಾಡಿದ್ದಾರೆ. ‘ನಮ್ ಏರಿಯಾಲ್ ಒಂದಿನ’, ‘ತುಘ್ಲಕ್’, ‘ಹುಲಿರಾಯ’ ಹಾಗೂ ‘ಶಾರ್ದೂಲʼ ಚಿತ್ರಗಳನ್ನು ಅರವಿಂದ್‌ ಕೌಶಿಕ್‌ ನಿರ್ದೇಶಿಸಿದ್ದರು. ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಸಿನಿಮಾಗಳನ್ನು ಕೊಟ್ಟಿರುವ ಬುದ್ಧಿವಂತ ನಿರ್ದೇಶಕ ಉಪೇಂದ್ರ ಜೊತೆ ಅರವಿಂದ್‌ ಕೌಶಿಕ್‌ ಹಾಗೂ ತರುಣ್‌ ಶಿವಪ್ಪ ಕೈ ಜೋಡಿಸಿದ್ದು, ಸಹಜವಾಗಿಯೇ ನಿರೀಕ್ಷೆ ಹೆಚ್ಚಿಸಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version