ಒಂದು ಕಾಲದಲ್ಲಿ ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ಮುಖ್ಯಮಂತ್ರಿ ಐ ಲವ್ ಯೂ ಸಿನಿಮಾದ ಅಲೆ ಸಖತ್ ಜೋರಿತ್ತು. ಕಾರಣಾಂತರಗಳಿಂದ ಅದು ಬೆಳ್ಳಿತೆರೆ ಬೆಳಗಲೇ ಇಲ್ಲ. ಆದ್ರೀಗ ವಿಜಯ್-ತ್ರಿಶಾ ಪ್ರೇಮ್ ಕಹಾನಿಯನ್ನ ನೋಡ್ತಿದ್ರೆ ಆ ಟೈಟಲ್ ಕಾಲಿವುಡ್‌ಗೆ ಪ್ರಸ್ತುತ ಅನಿಸ್ತಿದೆ. ಬರೀ ಮೀಡಿಯಾ ಅಥ್ವಾ ಸೋಶಿಯಲ್ ಮೀಡಿಯಾ ಅಷ್ಟೇ ಅಲ್ಲ, ಸಿನಿದುನಿಯಾದ ತಾರೆಯರೇ ಕೂಗಿ ಹೇಳ್ತಿದ್ದಾರೆ ತ್ರಿಶಾ ವಿಜಯ್ ಸ್ವತ್ತು ಅಂತ. ಈ ಕುರಿತ ವೆರಿ ವೆರಿ ಕಲರ್‌ಫುಲ್ ಸ್ಟೋರಿ ಇಲ್ಲಿದೆ ನೋಡಿ..
- OMG..! ಚಿತ್ರರಂಗವೇ ಕೂಗಿ ಹೇಳ್ತಿದೆ ತ್ರಿಶಾ ವಿಜಯ್ ಸ್ವತ್ತು
- ಚಾರ್ಮಿ, ರಾಧಿಕಾ, ಮಂಚುಲಕ್ಷ್ಮೀಯಿಂದ ಅವ್ರ ಗುಟ್ಟು ರಟ್ಟು
ದಳಪತಿ ವಿಜಯ್ ಹೆಸರಿಗಷ್ಟೇ ಜನನಾಯಗನ್ ಸಿನಿಮಾ ಮಾಡಿಲ್ಲ. ಅದು ರಿಲೀಸ್ ಆಗುವ ಮೊದಲೇ ಅಕ್ಷರಶಃ ಜನ ನಾಯಕನಾಗಿ ಹೊರ ಹೊಮ್ಮಿದ್ದಾರೆ. ಯೆಸ್.. ಟಿವಿಕೆ ಪಕ್ಷ ಕಟ್ಟಿ, ಸಂಘಟನೆ ಮಾಡಿ, ಎಲೆಕ್ಷನ್‌ನಲ್ಲಿ ಕಂಟೆಸ್ಟ್ ಮಾಡಿ, ಬಹುಮತದಿಂದ ಗೆದ್ದು ತೋರಿಸಿದ್ದಾರೆ. ಸದ್ಯ ಇಂಡಿಯಾದ ಬಿಗ್ಗೆಸ್ಟ್ ಹಾಟ್ ಟಾಪಿಕ್ ಅಂದ್ರೆ ಅದು ಒನ್ ಅಂಡ್ ಓನ್ಲಿ ಅಪ್‌ಕಮಿಂಗ್ ಸಿಎಂ ವಿಜಯ್.
ಇದೇ ಮೇ 8ರಂದು ರಾಜ್ಯಪಾಲರಿಂದ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ತಮಿಳುನಾಡಿನ 27ನೇ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ ದಳಪತಿ ವಿಜಯ್. ಆದ್ರೆ ವಿಜಯ್ ಸಿಎಂ ಆಗುವ ಕ್ಷಣಕ್ಕಿಂತ ಹೆಚ್ಚಿನ ಕಾತರ ತ್ರಿಶಾ ಕೈ ಯಾವಾಗ ಹಿಡೀತಾರೆ ಅನ್ನುವಂತಾಗಿದೆ. ಹೌದು.. ಜನರಷ್ಟೇ ಅಲ್ಲ, ಇಡೀ ಚಿತ್ರರಂಗವೇ ಕೂಗಿ ಹೇಳ್ತಿದೆ ತ್ರಿಶಾ ವಿಜಯ್ ಸ್ವತ್ತು ಅಂತ. ಅದಕ್ಕೆ ಹಿರಿಯನಟಿ ರಾಧಿಕಾ, ನಟಿ ಮಂಚು ಲಕ್ಷ್ಮೀ ಹಾಗೂ ಚಾರ್ಮಿ ಮಾಡಿರೋ ಪೋಸ್ಟ್‌ಗಳೇ ಸಾಕ್ಷಿ.
ಇಲ್ಲಿಯ ತನಕ ಮಾಧ್ಯಮ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ತ್ರಿಶಾ-ವಿಜಯ್ ಲವ್ ಸ್ಟೋರಿ ಭಯಂಕರ ಹರಿದಾಡ್ತಿತ್ತು. ಆದ್ರೆ ಅವರ ಪ್ರೇಮ ಪರ್ವವನ್ನ ಬಹಳ ಹತ್ತಿರದಿಂದ ಕಂಡಿರೋದು ಚಿತ್ರರಂಗ. ಹಾಗಾಗಿಯೇ ಅದೇ ಚಿತ್ರರಂಗದ ತಾರೆಯರು ಈಗ ಅವರ ಗುಟ್ಟನ್ನ ರಟ್ಟು ಮಾಡಿದ್ದಾರೆ. ತ್ರಿಶಾ ಬರ್ತ್ ಡೇ ದಿನವೇ ತಮಿಳುನಾಡು ಎಲೆಕ್ಷನ್ಸ್ ರಿಸಲ್ಟ್ಸ್ ಅನೌನ್ಸ್ ಆಗಿದ್ದು, ಬರ್ತ್ ಡೇಗೆ ಇದಕ್ಕಿಂತ ಬಿಗ್ ಗಿಫ್ಟ್ ಇನ್ನೇನು ಬೇಕು..? ಎಂಥಾ ವಿಕ್ಟರಿ ಅಲ್ವಾ ಇದು..? ನಿಜಕ್ಕೂ ನಿಮಗಿದು ಡಬಲ್ ಧಮಾಕ ತ್ರಿಶಾ ಅಂತೆಲ್ಲಾ ಬಹಿರಂಗವಾಗಿಯೇ ಪೋಸ್ಟ್ ಮಾಡಿದ್ದಾರೆ.
- 10 ವರ್ಷಗಳ ಹಿಂದೆಯೇ ಸಿಎಂ ಕನಸು ಕಂಡಿದ್ದ ನಟಿ ತ್ರಿಶಾ
- ದಳಪತಿ ಪಾಲಿಗೆ ಕುಂದವೈ ತ್ರಿಶಾ ಲಕ್ಕಿ ಚಾರ್ಮ್ ಆಗಿದ್ದೇಗೆ..?
ಯೆಸ್.. ಸಂದರ್ಶನವೊಂದರಲ್ಲಿ ಮಾತನಾಡುತ್ತಾ ನಾನು ಸಿಎಂ ಆಗ್ತೀನಿ ಎಂದ ತ್ರಿಶಾ ಮಾತಿಗೆ ಸಂದರ್ಶನಕಾರ ಅವಕ್ಕಾಗಿದ್ದರು. ಅದಕ್ಕೆ ಆಕೆ ನಗುತ್ತಲೇ ಹೌದು.. ಇನ್ನೊಂದು ಹತ್ತು ವರ್ಷದಲ್ಲಿ ನಾನು ಕಂಡಿತಾ ಸಿಎಂ ಆಗ್ತೀನಿ ಅಂದಿದ್ರು. ಆ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಆಕೆಯ ಮಾತು ನಿಜವೂ ಹೌದು. ತಾನು ಸಿಎಂ ಆದ್ರೆ ಏನು..? ಅಥ್ವಾ ತಾನು ಇಷ್ಟ ಪಟ್ಟ ವ್ಯಕ್ತಿ ಸಿಎಂ ಆದ್ರೆ ಏನು..? ಎರಡೂ ಒಂದೇ ಅಲ್ಲವೇ ಅನ್ನುವಂತಿದೆ.
ಅಂದಹಾಗೆ ತ್ರಿಶಾ ಒಂಥರಾ ವಿಜಯ್ ಲಕ್ಕಿ ಚಾರ್ಮ್. ಹೌದು.. ಆಕೆಯಿಂದಲೇ ಪತ್ನಿ ಸಂಗೀತಾ ದೂರವಾಗುವಂತಾಯಿತು ಅನ್ನೋ ಸುದ್ದಿಯಿದೆ. ಅಷ್ಟೇ ಅಲ್ಲ, ತ್ರಿಶಾಗಾಗಿ ಪತ್ನಿಯನ್ನ ಕೂಡ ಬಿಟ್ಟುಕೊಡಲು ಸಜ್ಜಾದ ವಿಜಯ್‌ಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ ಸೌತ್ ಕ್ವೀನ್ ಕುಂದವೈ ತ್ರಿಶಾ. ಅದೇ ಕಾರಣಕ್ಕೆ ವಿಜಯ್‌ರನ್ನ ಬಹಳ ಜಾಗ್ರತೆಯಿಂದ ಕಾಪಾಡಿಕೊಂಡು ಬರ್ತಿದ್ದಾರೆ. ಕಷ್ಟ ಸುಖಗಳ ಪಾಲುದಾರಳಾಗಿ ಪ್ರತಿ ಹೆಜ್ಜೆಯಲ್ಲೂ ಜೊತೆಗೆ ನಿಂತಿದ್ದಾರೆ ತ್ರಿಶಾ.
- ವಿಜಯ್- ತ್ರಿಶಾ ಜೊತೆಗೆ ನಟಿಸಿದ್ದು ಐದೇ ಸಿನಿಮಾ..!
- 15 ವರ್ಷಗಳ ನಂತ್ರ ಲಿಯೋಗಾಗಿ ಒಂದಾದ ಜೋಡಿ
2004ರ ಬ್ಲಾಕ್‌ಬಸ್ಟರ್ ಗಿಲ್ಲಿ ಸಿನಿಮಾದಿಂದ ಇವರುಗಳ ಪರಿಚಯ ಆಗಿ, ಆ ನಂತರ ತಿರುಪಾಚಿ, ಆಥಿ, ಕುರುವಿ.. ಹೀಗೆ 2008 ಅಷ್ಟರಲ್ಲಿ ನಾಲ್ಕು ಸಿನಿಮಾಗಳನ್ನ ಒಟ್ಟೊಟ್ಟಿಗೆ ಮಾಡ್ತಾರೆ. ಅಷ್ಟರಲ್ಲಾಗಲೇ ಅವರಿಬ್ಬರ ನಡುವೆ ಒಂದೊಳ್ಳೆ ಸ್ನೇಹ ಬಾಂಧವ್ಯ ಏರ್ಪಟ್ಟಿರುತ್ತೆ. ಆದ್ರೆ ಕುರುವಿ ಬಳಿಕ ಅದ್ಯಾಕೋ ಇವರಿಬ್ಬರೂ ಒಟ್ಟಿಗೆ ನಟಿಸುವುದೇ ಇಲ್ಲ. ಸುಮಾರು 15 ವರ್ಷಗಳ ಲಾಂಗ್ ಗ್ಯಾಪ್ ಬಳಿಕ ಲಿಯೋ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡ್ತಾರೆ. ಆಗ ಅವರ ನಡುವಿನ ಸಂಬಂಧ ಸಿಕ್ಕಾಪಟ್ಟೆ ಗಟ್ಟಿಯಾಗಿ, ಮದ್ವೆ ಆಗುವ ತನಕ ಕೊಂಡೊಯ್ದಿರುತ್ತೆ ಅನ್ನೋದು ಸುದ್ದಿ.
ಅದಕ್ಕೆ ಪೂರಕವಾಗಿ ನಟಿ ತ್ರಿಶಾ ಕೂಡ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಇನ್ಫಿನಿಟಿ ಚಿಹ್ನೆ ಹಾಗೂ ಹಾರ್ಟ್ ಸಿಂಬಲ್ ಸರ್ವೇ ಸಾಮಾನ್ಯವಾಗಿ ಬಳಸುತ್ತಿದ್ದರು. ಅಲ್ಲದೆ ಲಿಫ್ಟ್‌ನಲ್ಲಿನ ಸೆಲ್ಫಿ, ಏರ್‌ಪೋರ್ಟ್ ಫೋಟೋಸ್, ಫಾರಿನ್ ಶೂಟಿಂಗ್ ಫೋಟೋಸ್, ತ್ರಿಶಾ ಫೇವರಿಟ್ ಶ್ವಾನದ ಜೊತೆಗಿನ ವಿಜಯ್ ಫೋಟೋ.. ಹೀಗೆ ಸಾಕಷ್ಟು ಸಾಕ್ಷಿಗಳು ಅವರ ಬಾಂಧವ್ಯಕ್ಕೆ ಪುಷ್ಠಿ ನೀಡಿದ್ದವು. ಅದ್ರಲ್ಲೂ ಟಿವಿಕೆ ಕ್ಯಾಂಪೇನ್ ವೇಳೆ ತ್ರಿಶಾ ಜೊತೆಗಿನ ಅಕ್ರಮ ಸಂಬಂಧದ ಬಗ್ಗೆ ಚರ್ಚೆ ಮುನ್ನೆಲೆಗೆ ಬಂದಿತ್ತು. ಆದ ಬಹಿರಂಗವಾಗಿಯೇ ಇವರಿಬ್ಬರೂ ಖಾಸಗಿ ಕಾರ್ಯಕ್ರಮವೊಂದರಲ್ಲಿ ಗಂಡ-ಹೆಂಡತಿಯಂತೆ ಕಾಣಿಸಿಕೊಂಡಿದ್ದು ಅಚ್ಚರಿ ಮೂಡಿಸಿತ್ತು.
ಆದ್ರೀಗ ಚುನಾವಣಾ ಫಲಿತಾಂಶದ ದಿನವೇ ತ್ರಿಶಾ ತಿರುಪತಿಗೆ ತೆರಳಿ, ವಿಜಯ್‌ರನ್ನ ಸಿಎಂ ಮಾಡುವಂತೆ ಆ ತಿಮ್ಮಪ್ಪನ ದೇವರ ಮೊರೆ ಹೋಗಿದ್ದರು. ಅಲ್ಲಿಂದ ನೇರವಾಗಿ ವಿಜಯ್ ನಿವಾಸಕ್ಕೆ ಆಗಮಿಸಿ, ಚುನಾವಣಾ ಗೆಲುವನ್ನ ದಳಪತಿ ಫ್ಯಾಮಿಲಿ ಜೊತೆ ಸೆಲೆಬ್ರೇಟ್ ಮಾಡಿದ್ರು. ಇದೀಗ ಸಿಎಂ ಆಗಿ ವಿಜಯ್ ಅಧಿಕಾರ ಸ್ವೀಕಾರ ಮಾಡುವುದು ಹಾಗೂ ತ್ರಿಶಾರನ್ನ ಮದ್ವೆ ಆಗುವ ಮೂಲಕ ಅಧಿಕೃತವಾಗಿ ಪತ್ನಿ ಅಂತ ಘೋಷಿಸುವುದೊಂದೇ ಬಾಕಿ ಉಳಿದಿದೆ. ಅದು ಆದಷ್ಟು ಬೇಗ ನೆರವೇರಲಿ ಅನ್ನೋದು ವಿಜಯ್-ತ್ರಿಶಾ ಅಸಂಖ್ಯಾತ ಅಭಿಮಾನಿಗಳ ಆಶಯವಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
