ಟಾಕ್ಸಿಕ್.. ಟಾಕ್ಸಿಕ್.. ಟಾಕ್ಸಿಕ್.. ಎಲ್ಲಿ ನೋಡಿದ್ರೂ ಟಾಕ್ಸಿಕ್ ಮೇನಿಯಾ. ಯಶ್ ನಟನೆಯ ಟಾಕ್ಸಿಕ್ ರಿಲೀಸ್ ಗೆ ನಾಲ್ಕೇ ನಾಲ್ಕು ದಿನ ಬಾಕಿಯಿದ್ದು, ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ನಲ್ಲಿ ರಾಕಿಂಗ್ ಸ್ಟಾರ್ ಮತ್ತೊಂದು ರಾಕಿಂಗ್ ದಾಖಲೆ ಬರೆದಿದ್ದಾರೆ. ಈ ಕುರಿತ ಸಂಕ್ಷಿಪ್ತ ವರದಿ ಇಲ್ಲಿದೆ ನೋಡಿ.
ಟಾಕ್ಸಿಕ್ ಗೆ ಒಲಿದ ವರಮಹಾಲಕ್ಷ್ಮೀ.. ಕೋಟಿ ಕೋಟಿ ಕಮಾಯಿ
ಕರ್ನಾಟಕ ಒಂದರಲ್ಲೇ 1000 ಶೋ ಅಡ್ವಾನ್ಸ್ ಸೋಲ್ಡ್ ಔಟ್
ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಯಶ್ ಸಾರ್ವಕಾಲಿಕ ದಾಖಲೆ
ಗಾಂಧಿನಗರದ 4 ಚಿತ್ರಮಂದಿರಗಳಲ್ಲಿ ಟಾಕ್ಸಿಕ್ ಚಿತ್ರ ತೆರೆಗೆ..!!
ಯಶ್ ಗೆ ಯಶ್ ಮಾತ್ರ ಸರಿಸಾಟಿ. ಹೌದು.. ಗ್ಲೋಬಲ್ ಆಡಿಯೆನ್ಸ್ ನ ಟಾರ್ಗೆಟ್ ಮಾಡಿರೋ ರಾಕಿಂಗ್ ಸ್ಟಾರ್ ಟಾಕ್ಸಿಕ್ ಮೂವಿಗೆ ವಿಶ್ವದ ಮೂಲೆ ಮೂಲೆಯಲ್ಲಿ ಡಿಮ್ಯಾಂಡ್ ಹೆಚ್ಚಿದೆ. ಆಗಸ್ಟ್ 26ರ ಬುಧವಾರ ಬೆಳ್ಳಿತೆರೆ ಬೆಳಗಲಿರೋ ಟಾಕ್ಸಿಕ್, ಸ್ಯಾಂಡಲ್ ವುಡ್ ನಲ್ಲಿ ಸಾರ್ವಕಾಲಿಕ ದಾಖಲೆ ಬರೆಯುತ್ತಿದೆ. ವಿದೇಶಗಳಲ್ಲಿ ವಾರದ ಹಿಂದೆಯೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭಿಸಿದ್ದ ಟಾಕ್ಸಿಕ್ ಟೀಂ, ಇಂಡಿಯಾದಲ್ಲಿ ಅದಕ್ಕೆ ಇಂದು ಚಾಲನೆ ನೀಡಿದೆ.
ವರಮಹಾಲಕ್ಷ್ಮೀ ಹಬ್ಬದ ವಿಶೇಷ ಇಂದಿನಿಂದ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಶುರುವಾಗಿದ್ದು, ಬರೀ ಕರ್ನಾಟಕ ಒಂದರಲ್ಲೇ ಬರೋಬ್ಬರಿ ಒಂದು ಸಾವಿರ ಶೋಗಳ ಟಿಕೆಟ್ಸ್ ಸೋಲ್ಡ್ ಔಟ್ ಆಗಿವೆ. ಸಿಂಗಲ್ ಸ್ಕ್ರೀನ್ ಗಳಲ್ಲಿ 400-500ರೂಪಾಯಿ ಟಿಕೆಟ್ ದರ ಇದ್ರೆ.. ಮಲ್ಟಿಪ್ಲೆಕ್ಸ್ ಗಳಲ್ಲಿ ಡಾಲ್ಬಿ ಅಟ್ಮಾಸ್, ಐನಾಕ್ಸ್, ಪಿಕ್ಸೆಲ್, ಗೋಲ್ಡ್ ಕ್ಲಾಸ್ ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ಬೇರೆ ಬೇರೆ ಟಿಕೆಟ್ ದರ ನಿಗದಿಯಾಗಿದೆ. ಕನಿಷ್ಟ 800 ರೂಪಾಯಿಯಿಂದ ಗರಿಷ್ಟ 1600 ರೂಪಾಯಿ ತನಕ ಮಲ್ಟಿಪ್ಲೆಕ್ಸ್ ಗಳು ದರ ಫಿಕ್ಸ್ ಮಾಡಿವೆ. 667 ಬೆಂಗಳೂರು ಶೋಗಳು ಹಾಗೂ 350 ರಾಜ್ಯದಾದ್ಯಂತ ಶೋಗಳ ಮುಂಗಡ ಬುಕ್ಕಿಂಗ್ ನಿಂದ ಮಧ್ಯಾಹ್ನದ ವೇಳೆಗೆ ಸುಮಾರು 7ಕೋಟಿ 75ಲಕ್ಷ ಪೈಸಾ ವಸೂಲ್ ಆಗಿದೆ.
ಅಂದಹಾಗೆ ಕನ್ನಡ ಚಿತ್ರರಂಗ ಮಾತ್ರವಲ್ಲದೆ, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗಾಂಧಿನಗರದ 4 ಚಿತ್ರಮಂದಿರಗಳಲ್ಲಿ ಟಾಕ್ಸಿಕ್ ಒಂದೇ ಚಿತ್ರ ಬಿಡುಗಡೆ ಆಗ್ತಿದೆ. ಸಂತೋಷ್ ನಲ್ಲಿ ಕನ್ನಡ, ನರ್ತಕಿಯಲ್ಲಿ ಹಿಂದಿ, ತ್ರಿವೇಣಿಯಲ್ಲಿ ತೆಲುಗು ಹಾಗೂ ಭೂಮಿಕಾದಲ್ಲಿ ಮಲಯಾಳಂ ವರ್ಷನ್ ತೆರೆ ಕಾಣ್ತಿದೆ. ಒಟ್ಟಾರೆ ಆಗಸ್ಟ್ 26ರ ಮುಂಜಾನೆ 6 ಗಂಟೆಯಿಂದಲೇ ಫ್ಯಾನ್ಸ್ ಶೋಗಳು ಆರಂಭವಾಗಲಿದ್ದು, ಯಶ್ ಟಾಕ್ಸಿಕ್ ಕ್ರೇಜ್ ಗೆ ಭಾರತೀಯ ಚಿತ್ರರಂಗದ ಎಲ್ಲಾ ವುಡ್ ಗಳು ಬೆಚ್ಚಿ ಬಿದ್ದಿವೆ. 500 ಕೋಟಿ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿರೋ ಅಡಲ್ಟ್ ಮೂವಿ ಟಾಕ್ಸಿಕ್ ರಿಲೀಸ್ ನಂತ್ರ ಇನ್ನೆಷ್ಟು ಕೋಟಿ ಲೂಟಿ ಮಾಡುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
