ರಂಗೇರಿದ ಟಾಕ್ಸಿಕ್ ತೆಲುಗು ಪ್ರೀ-ರಿಲೀಸ್ ಇವೆಂಟ್‌ನಲ್ಲಿ ದಿಲ್ ರಾಜು ನಮ್ಮ ಯಶ್ ಹಾಗೂ ಅವ್ರ ಸಿನಿಮಾ ಪ್ಯಾಷನ್, ವಿಷನ್‌ನ ಮನಸಾರೆ ಕೊಂಡಾಡಿದ್ರು. ಕಂಪೋಸರ್ ವಿಶಾಲ್ ಹೇಳಿದಂತೆ 2 ಸಾವಿರ ಕೋಟಿ ಪೈಸಾ ವಸೂಲ್ ಮಾಡಲಿದೆ ಎಂದ ದಿಲ್‌ರಾಜು ಜೊತೆ ಟಾಕ್ಸಿಕ್ ಟೀಂ ಏನೆಲ್ಲಾ ಮಾತಾಡಿತು ಅನ್ನೋದ್ರ ಡಿಟೇಲ್ಸ್ ಇಲ್ಲಿದೆ ನೋಡಿ.
- ಮೌಳಿಗೆ ಯಶ್ ಹೋಲಿಕೆ.. 2000ಕೋಟಿ ದಿಲ್ ಕೀ ಬಾತ್..!
- ಯಶ್ ಫಿಲ್ಮ್ ವಿಷನ್, ಪ್ಯಾಷನ್‌ಗೆ ದಿಲ್‌ರಾಜು ಕ್ಲೀನ್ ಬೋಲ್ಡ್
- ಆಂಧ್ರ-ತೆಲಂಗಾಣ ರೈಟ್ಸ್ 120 ಕೋಟಿಗೆ.. ಡಿಸ್ಟ್ರಿಬ್ಯೂಟರ್ ಸ್ಪಷ್ಟನೆ
ಗೀತು ಮೋಹನ್‌ದಾಸ್ ಅಂತಹ ಡೈರೆಕ್ಟರ್‌ನ ಇಟ್ಕೊಂಡು ಯಶ್ ಏನು ಮಾಡೋಕೆ ಸಾಧ್ಯ..? ಇವ್ರಿಗೇನು ತಲೆ ಗಿಲೆ ಕೆಟ್ಟಿದೆಯಾ ಅಂತೆಲ್ಲಾ ಅಂದುಕೊಂಡಿದ್ರಂತೆ ಟಾಲಿವುಡ್‌ನ ಸ್ಟಾರ್ ಪ್ರೊಡ್ಯೂಸರ್ ಕಮ್ ಡಿಸ್ಟ್ರಿಬ್ಯೂಟರ್ ದಿಲ್‌ರಾಜು. ಆದ್ರೆ ಅದೇ ದಿಲ್‌ರಾಜು ಮುಂಬೈನಲ್ಲಿ ಟಾಕ್ಸಿಕ್ ಗ್ಲಿಂಪ್ಸ್ ನೋಡಿ ಬರೋಬ್ಬರಿ 120 ಕೋಟಿ ಬೃಹತ್ ಮೊತ್ತಕ್ಕೆ ತೆಲುಗು ವಿತರಣಾ ಹಕ್ಕುಗಳನ್ನ ಖರೀದಿಸಿದ್ದಾರೆ. ಆತ ವೇದಿಕೆಯಲ್ಲಿ ನಟ ಯಶ್ ಅವ್ರ ಸಿನಿಮಾ ಪ್ಯಾಷನ್, ವಿಷನ್ ಜೊತೆ ಅವರಿಗಿರೋ ಕೆಲಸದ ಬದ್ಧತೆ ಬಗ್ಗೆ ಮುಕ್ತವಾಗಿ ಮಾತನಾಡಿದ್ರು.
ಕಂಪೋಸರ್ ವಿಶಾಲ್ ಹೇಳಿದಂತೆ ಇದು ಪಕ್ಕಾ 2000 ಕೋಟಿ ರೂಪಾಯಿ ಕ್ಲಬ್ ಸೇರಲಿದೆ ಎಂದರು. ಅಷ್ಟೇ ಅಲ್ಲ.. ನಮ್ಮ ಇಂಡಿಯನ್ ಸಿನಿಮಾನ ಗ್ಲೋಬಲ್ ಲೆವೆಲ್‌ಗೆ ಕೊಂಡೊಯ್ಯುತ್ತಿರೋ ರಾಜಮೌಳಿ ಹಾಗೂ ಯಶ್ ಅವ್ರಿಗೆ ಸೆಲ್ಯೂಟ್ ಅಂತ ಸಿಕ್ಕಾಪಟ್ಟೆ ಹಾಡಿ ಹೊಗಳಿದ್ರು.
ದಿಲ್‌ರಾಜುಗೆ ಆ ಹೆಸರು ಹೇಗೆ ಬಂತೋ ಗೊತ್ತಿಲ್ಲ. ಆದ್ರೆ ಅವ್ರ ದಿಲ್ ತುಂಬಾ ದೊಡ್ದದು. ನಮ್ಮ ವೇವ್‌ಲೆಂಥ್ ಮ್ಯಾಚ್ ಆಗಿದೆ ಅಂತ ತೆಲುಗು ವಿತರಕನನ್ನ ಯಶ್ ಕೂಡ ಮೆಚ್ಚುಗೆಯ ಮಾತುಗಳಿಂದ ಬೆನ್ನು ತಟ್ಟಿದರು.
- ಭರತ್ ಅನೆ ನೇನು ನೆನೆದು.. ಲವ್ ಯೂ ಎಂದ ಕಿಯಾರಾ
- ಟಾಕ್ಸಿಕ್ ಕನ್ನಡ, ಇಂಗ್ಲಿಷ್ ಚಿತ್ರವಲ್ಲ.. ಇಂಡಿಯನ್ ಮೂವಿ
ತೆಲುಗು ಚಿತ್ರಪ್ರೇಮಿಗಳ ಪ್ರೀತಿಗೆ ಭರತ್ ಅನೆ ನೇನು ಅನ್ನೋ ಚಿತ್ರದಲ್ಲೇ ಫಿದಾ ಆಗಿದ್ದ ಕಿಯಾರಾ ಅಡ್ವಾಣಿ.. ಲವ್ ಯೂ ಅಂತ ಹೇಳಿ ಎಲ್ಲರ ಅಭಿಮಾನಕ್ಕೆ ಪಾತ್ರರಾದರು. ಅಲ್ಲದೆ ಇದು ಕನ್ನಡ, ಇಂಗ್ಲಿಷ್ ಮಾತ್ರವಲ್ಲ. ಇದು ಇಂಡಿಯನ್ ಮೂವಿ. ಯಾಕಂದ್ರೆ ಇದು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರವೂ ಹೌದು ಎಂದರು. ನಮ್ಮ ಯಶ್‌ನ ಮತ್ತೊಮ್ಮೆ ಸ್ಫೂರ್ತಿದಾಯಕ ನಟ ಅಂತ ಹೃದಯ ತುಂಬಿ ಮಾತನಾಡಿದ್ರು.
ತೆಲುಗಿನಲ್ಲೇ ಮಾತನಾಡಿದ ರುಕ್ಮಿಣಿ ವಸಂತ್, ತಮ್ಮ ಪಾತ್ರ ಹಾಗು ಕೋ ಸ್ಟಾರ್ಸ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ರುಕ್ಕಮ್ಮನಂತೆ ಹುಮಾ ಖುರೇಷಿ ಕೂಡ ಬ್ಲ್ಯಾಕ್ & ಬ್ಲ್ಯಾಕ್‌ನಲ್ಲಿ ಕಣ್ಣು ಕುಕ್ಕಿದರು.
- ಬಿಗ್ ವಿಷನ್.. ಬೋಲ್ಡ್ ಡ್ರೀಮ್.. ಕನ್ವಿಕ್ಷನ್ ವಿತ್ ಕಾನ್ಫಿಡೆನ್ಸ್
- ಸಿನಿಮಾ ಲೈನ್ ಜೊತೆ ವಿಶ್ವದ ಅಸಲಿ ಟಾಕ್ಸಿಕ್ ತಿಳಿಸಿದ KVN..!
ಯಶ್ ಅವರ ಬಗ್ಗೆ ಹೇಳಬೇಕು ಅಂದ್ರೆ ನಿಮ್ಮ ಈ ಜನಸಾಗರದಂತೆ ಸಮುದ್ರದಷ್ಟಿದೆ. ಅವ್ರ ತೆರೆ ಮೇಲಿನ, ತೆರೆ ಹಿಂದಿನ ಪೊಟೆನ್ಷಿಯಾಲಿಟಿ ಬಗ್ಗೆ ಮಾತಾಡ್ತಾ ಅಭಿಮಾನ ಅನ್ನೋದು ನಿಮ್ಮ ಮೂಲಕ ಕಾಣ್ತಿದೆ ಎಂದರು. ಅಲ್ಲದೆ ಯಾವುದೇ ರಿಸ್ಕ್ ತಗೊಳ್ಳದೇ ಇರೋದೇ ಜೀವನದ ಅತಿದೊಡ್ಡ ರಿಸ್ಕ್ ಅಂತ ಆತ್ಮವಿಶ್ವಾಸ ತುಂಬಿದ ಯಶ್ ಅವ್ರನ್ನ ಕೆವಿಎನ್ ಕೊಂಡಾಡಿದ್ರು. ಅಲ್ಲದೆ ಬಿಗ್ ವಿಷನ್, ಬೋಲ್ಡ್ ಡ್ರೀಮ್ ಮೂಲಕ ಕನ್ವಿಕ್ಷನ್ ವಿತ್ ಕಾನ್ಫಿಡೆನ್ಸ್‌ನಿಂದ ಬರ್ತಿರೋ ಟಾಕ್ಸಿಕ್ ಜೆನ್‌ಝೀಗಾಗಿ ಎಂದರು. ನಿರೂಪಕಿ ಸುಮಾ ಕೇಳಿದ ಪ್ರಶ್ನೆಗೆ ವಿಶ್ವದ ದೊಡ್ಡ ಟಾಕ್ಸಿಕ್ ನೆಗೆಟಿವಿಟಿ ಎಂದರು.
ಒಟ್ಟಾರೆ ಟಾಕ್ಸಿಕ್‌ನ ಒಂದೊಂದು ಇವೆಂಟ್ ಕೂಡ ವೆರಿ ವೆರಿ ಮೀನಿಂಗ್‌ಫುಲ್.. ಕಲರ್‌ಫುಲ್ & ಬ್ಯೂಟಿಫುಲ್. ರಿಲೀಸ್‌ಗೆ ಎರಡೇ ಎರಡು ದಿನ ಬಾಕಿಯಿದ್ದು, ಇಂಡಿಯನ್ ಸಿನಿಮಾದ ಗೇಮ್ ಚೇಂಜರ್ ಆಗಿ ಹೊರಹೊಮ್ಮಲಿದ್ದಾರೆ ನಮ್ಮ ರಾಕಿಂಗ್ ಸ್ಟಾರ್ ಯಶ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
