ಗೀತು ಮೋಹನ್ ದಾಸ್ ಬರ್ತ್ ಡೇಗೆ ಟಾಕ್ಸಿಕ್ ಗ್ಲಿಂಪ್ಸ್ ಗಿಫ್ಟ್..!  

ಮೌನದ ಹಿಂದೆ ಮಾಸ್ಟರ್ ಮೈಂಡ್.. ಕಿಲ್ಲರ್ ಮೇಕಿಂಗ್ ಔಟ್

Untitled design 2026 06 08T175637.838

ಟಾಕ್ಸಿಕ್ ಅಡ್ಡಾದಿಂದ ಬಿಗ್ ಅಪ್ಡೇಟ್ವೊಂದು ಹೊರಬಿದ್ದಿದೆ. ನ್ಯಾಷನಲ್ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್ ದಾಸ್ ಜನ್ಮದಿನದ ಅಂಗವಾಗಿ, ಟಾಕ್ಸಿಕ್ ಚಿತ್ರತಂಡ ಕಣ್ಣು ಕೋರೈಸುವ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದೆ. ಬಾಲನಟಿಯಿಂದ ಹಿಡಿದು ಭಾರತದ ಬಿಗ್ ಬಜೆಟ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುವವರೆಗಿನ ಗೀತು ಅವರ ಪಯಣ ಮತ್ತು ಈ ಮಾಸ್ಟರ್ಪೀಸ್ನ ತೆರೆಮರೆ ಹಂಗಾಮಾ ಕುರಿತ ಒಂದು ಪವರ್ ಪ್ಯಾಕ್ಡ್ ಸ್ಟೋರಿ ಇಲ್ಲಿದೆ ನೋಡಿ.

ಸ್ಯಾಂಡಲ್ವುಡ್ ಇತಿಹಾಸದಲ್ಲೇ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ಟಾಕ್ಸಿಕ್ ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಚಿತ್ರದ ಅಡ್ಡಾದಿಂದ ಸಖತ್ ಇಂಟರೆಸ್ಟಿಂಗ್ ಅಪ್ಡೇಟ್ ಸಿಕ್ಕಿದೆ. ಮಲಯಾಳಂ ಲೇಡಿ ಡೈರೆಕ್ಟರ್ ಗೀತು ಮೋಹನ್ ದಾಸ್ ಇಂದು 45ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂಭ್ರಮಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಸ್ಪೆಷಲ್ ಬಿಟಿಎಸ್ ವಿಡಿಯೋ ಒಂದನ್ನು ಉಡುಗೊರೆಯಾಗಿ ನೀಡಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಧೂಳ್ ಎಬ್ಬಿಸುತ್ತಿದ್ದು, ಯಶ್ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ.

ವಿಭಿನ್ನ ದೃಶ್ಯಗಳ ಹಿಂದೆ, ಡೈಲಾಗ್ಗಳಿಗಿಂತ ಹೆಚ್ಚಿನದನ್ನು ಹೇಳುವ ಪ್ರತೀ ಮೌನದ ಹಿಂದೆ ಅವರಿರುತ್ತಾರೆ ಅನ್ನೋ ಖಡಕ್ ಕ್ಯಾಪ್ಷನ್ ಜೊತೆ ಚಿತ್ರತಂಡ ಈ ಮೇಕಿಂಗ್ ಝಲಕ್ ಹಂಚಿಕೊಂಡಿದೆ. ವಿಡಿಯೋದಲ್ಲಿರೋ ವಿಷುಯಲ್ಸ್ ಮತ್ತು ಹೈ-ಲೆವೆಲ್ ಕಲರ್ ಗ್ರೇಡಿಂಗ್ ನೋಡಿದ್ರೆ ಗೀತು ಮೋಹನ್ದಾಸ್ ಈ ಬಾರಿ ಇಂಡಿಯನ್ ಬಾಕ್ಸ್ ಆಫೀಸ್ಗೆ ದೊಡ್ಡ ಕಂಟೆಂಟ್ ರೆಡಿ ಮಾಡ್ತಿರೋದು ಕನ್ಫರ್ಮ್ ಆಗಿದೆ. ಕಾಮೆಂಟ್ ಬಾಕ್ಸ್ನಲ್ಲಿ ಫ್ಯಾನ್ಸ್ ವಾಟ್ ಎ ಫಿಲ್ಮ್, ದಯವಿಟ್ಟು ರಿಲೀಸ್ ಡೇಟ್ ಅನೌನ್ಸ್ ಮಾಡಿ ಅಂತ ಆಲ್ರೆಡಿ ಡಿಮ್ಯಾಂಡ್ ಇಟ್ಟಿದ್ದಾರೆ.

1986ರಲ್ಲೇ ಮಾಲಿವುಡ್ ಸೂಪರ್ಸ್ಟಾರ್ ಮೋಹನ್ಲಾಲ್ ಸಿನಿಮಾದಲ್ಲಿ ಬಾಲನಟಿಯಾಗಿ ಮಿಂಚಿ ಕೇರಳ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡ ಪ್ರತಿಭೆ ಗೀತು. ಅಕಾಲೆ ಸಿನಿಮಾದ ನಟನೆಗೆ ಅತ್ಯುತ್ತಮ ನಟಿ ಫಿಲ್ಮ್ಫೇರ್ ಪ್ರಶಸ್ತಿ ಪಡೆದ ಗೀತು, ನಂತರ ನಟನೆಗಿಂತ ಕಥೆ ಹೇಳುವ ನಿರ್ದೇಶನದ ಕಡೆಗೆ ತಮ್ಮ ದಿಕ್ಕು ಬದಲಿಸಿದರು. ಬರೀ ನಟಿಯಷ್ಟೇ ಅಲ್ಲ, ಗೀತು ಒಬ್ಬ ಜೀನಿಯಸ್ ಕಥೆಗಾರ್ತಿ. ಇವರು ನಿರ್ದೇಶಿಸಿದ ಮೊದಲ ಶಾರ್ಟ್ ಫಿಲ್ಮ್ ಕೇಲ್ಕುನ್ನುಂಡೋ ನ್ಯಾಷನಲ್ ಅವಾರ್ಡ್ ಗೆದ್ದುಕೊಂಡಿತ್ತು.

ಅಷ್ಟೇ ಯಾಕೆ, ನವಾಜುದ್ದೀನ್ ಸಿದ್ದಿಕಿ ನಟನೆಯ ಇವರ ಮೊದಲ  ಸಿನಿಮಾ ಲೈಯರ್ಸ್ ಡೈಸ್ 2 ರಾಷ್ಟ್ರೀಯ ಪ್ರಶಸ್ತಿ ಗೆದ್ದಿದ್ದಲ್ಲದೆ, 87ನೇ ಆಸ್ಕರ್ ಪ್ರಶಸ್ತಿಯ ವಿದೇಶಿ ಭಾಷಾ ವಿಭಾಗಕ್ಕೆ ಭಾರತದ ಅಧಿಕೃತ ಎಂಟ್ರಿಯಾಗಿ ಆಯ್ಕೆಯಾಗಿತ್ತು. ಆ ಬಳಿಕ ಬಂದ ‘ಮೂಥಾನ್’ ಸಿನಿಮಾ ಕೂಡ ಜಾಗತಿಕ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಕೆಜಿಎಫ್ ಸರಣಿಯ ಸಕ್ಸಸ್ ಬಳಿಕ ರಾಕಿ ಭಾಯ್ ಯಶ್ ಜಾಗತಿಕ ಮಟ್ಟದ ಸಿನಿಮಾಗಾಗಿ ಕಾಯುತ್ತಿದ್ದರು. ಅದಕ್ಕೆ ಸೂಕ್ತವಾಗಿ ಸಿಕ್ಕಿದ್ದೇ ಗೀತು ಮೋಹನ್ ದಾಸ್.

ವಿಶ್ವಮಟ್ಟದ ಮೇಕಿಂಗ್ ಮತ್ತು ಗೀತು ಅವರ ರಿಯಲಿಸ್ಟಿಕ್ ಡೈರೆಕ್ಷನ್ ಸ್ಟೈಲ್ ಟಾಕ್ಸಿಕ್ ಸಿನಿಮಾವನ್ನು ಬೇರೆದೇ ಲೆವೆಲ್ಗೆ ಕೊಂಡೊಯ್ಯಲಿದೆ ಅನ್ನೋದು ಈ ಬಿಟಿಎಸ್ ವಿಡಿಯೋ ಸಾಬೀತುಪಡಿಸಿದೆ. ಒಟ್ಟಿನಲ್ಲಿ ಬರ್ತ್ಡೇ ಗ್ಲಿಂಪ್ಸ್ ಮೂಲಕ ಹೈಪ್ ಕ್ರಿಯೇಟ್ ಮಾಡಿರೋ ಟಾಕ್ಸಿಕ್ ಟೀಮ್, ಮುಂದಿನ ದಿನಗಳಲ್ಲಿ ಇನ್ನೆಷ್ಟು ಧಮಾಕಾ ಮಾಡಲಿದೆಯೋ ಕಾದು ನೋಡಬೇಕು.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
| Reported by: ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
Exit mobile version