1.5 ಲಕ್ಷ ಪೈರಸಿ ಲಿಂಕ್ಸ್: ಟಾಕ್ಸಿಕ್ ಮೇಲೆ ಅದೆಷ್ಟು ಅಸೂಯೆ..?

ChatGPT Image Sep 1, 2026, 12 49 19 PM

ರಾಕಿಂಗ್ ಸ್ಟಾರ್ ಯಶ್ ಅವ್ರ ಟಾಕ್ಸಿಕ್ ದಿನದಿಂದ ದಿನಕ್ಕೆ ಜಾಸ್ತಿ ಕಿಕ್ ಕೊಡೋಕೆ ಸಜ್ಜಾಗಿದೆ. ಅದೊಂಥರಾ ಓಲ್ಡ್ ವೈನ್ ಇನ್ ದಿ ನ್ಯೂ ಬಾಟಲ್ ಅನ್ನುವಂತಾಗಿದೆ. ಸದ್ಯ 300 ಕೋಟಿ ರೂಪಾಯಿ ಕ್ಲಬ್ ಸೇರಿರೋ ಟಾಕ್ಸಿಕ್‌..‌‌ ಬಾಲಿವುಡ್‌‌ನಲ್ಲಿ ಬಹುದೊಡ್ಡ ದಾಖಲೆ ಮಾಡಿದೆ. ಅದೇನು ಅನ್ನೋದ್ರ ಜೊತೆಗೆ ಸಿನಿಮಾನ ಮುಗಿಸೋಕೆ ಟೊಂಕ ಕಟ್ಟಿ ನಿಂತ ಹೇಟರ್ಸ್ ಕ್ರಿಯೇಟ್ ಮಾಡಿದ್ದು ಎಷ್ಟು ಲಕ್ಷ ಪೈರಸಿ ಲಿಂಕ್ಸ್ ಅನ್ನೋದು ಕೂಡ ಇಲ್ಲಿದೆ. ಜಸ್ಟ್ ಹ್ಯಾವ್ ಎ ಲುಕ್.

ಟಾಕ್ಸಿಕ್ ಕಥೆ ಮುಗಿದೇ ಹೋಯ್ತು ಅಂದವ್ರಿಗೆ ಸಿನಿಮಾದಲ್ಲಿ ಯಶ್ ಡೈಲಾಗ್ ಹೊಡೆದಂತೆ ಆನ್ಸರ್ ಕೊಡಬಹುದು. ಹೌದು.. ಮುಗಿದಿಲ್ಲ. ನಾನು ಹೇಳೋವರೆಗೂ ಮುಗಿಯಲ್ಲ ಅಂತಾರೆ ಯಶ್. ಆ ಮಾತು ಸತ್ಯ ಅನಿಸ್ತಿದೆ. ಯಾಕಂದ್ರೆ ಟಾಕ್ಸಿಕ್ ದಿನದಿಂದ ದಿನಕ್ಕೆ ಕಿಕ್ ಕೊಡೋದು ಜಾಸ್ತಿ ಆಗ್ತಿದೆ. ಒಂಥರಾ ಓಲ್ಡ್ ವೈನ್ ಇನ್ ದಿ ನ್ಯೂ ಬಾಟಲ್ ಅನ್ನುವಂತೆ.. ನಿಧಾನಕ್ಕೆ ಚಿತ್ರಪ್ರೇಮಿಗಳಿಗೆ ಅದು ಅರ್ಥ ಆಗಲು ಶುರುವಾಗಿದೆ.

ಸಿನಿಮಾ ಆರು ದಿನಗಳಾದ್ರೂ ಇಂದಿಗೂ ಥಿಯೇಟರ್‌ನಲ್ಲಿ ನೋಡುಗರಿಗೆ ಥ್ರಿಲ್ ಕೊಡ್ತಿದೆ.. ಎಂಟರ್‌ಟೈನ್ ಮಾಡ್ತಿದೆ. ಯಸಸ್ವಿ ಎರಡನೇ ವಾರದತ್ತ ಮುನ್ನುಗ್ಗುತ್ತಿದೆ. ಅದಕ್ಕೆ ವರ್ಲ್ಡ್‌ವೈಡ್ ಆಗಿರೋ ಕಲೆಕ್ಷನ್ ಪ್ರತ್ಯಕ್ಷ ಸಾಕ್ಷಿ. ಆರೇ ದಿನದಲ್ಲಿ ವಿಶ್ವದಾದ್ಯಂತ 304 ಕೋಟಿ ರೂಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ ಚಿತ್ರತಂಡ. ಇಂಟರೆಸ್ಟಿಂಗ್ ಅಂದ್ರೆ ಆ ಮುನ್ನೂರು ಕೋಟಿ ರೂಪಾಯಿಗಳಲ್ಲಿ ಬರೋಬ್ಬರಿ 112 ಕೋಟಿ ರೂಪಾಯಿ ಬೃಹತ್ ಮೊತ್ತ ಬರೀ ಹಿಂದಿ ಬೆಲ್ಟ್‌ನಲ್ಲೇ ಗಳಿಸಿದೆ ಟಾಕ್ಸಿಕ್.

ಅಂದಹಾಗೆ ನಮ್ಮ ಯಶ್‌‌ನ ಕಂಡ್ರೆ ಉರ್ಕೊಳ್ಳೋರಿ ಒಬ್ರಾ ಇಬ್ರಾ..? ದುಷ್ಮನ್‌ಗಳು ಎಲ್ಲಿದ್ದಾರೆ ಅಂದ್ರೆ ಊರು ತುಂಬಾ ಇದ್ದಾರೆ ಅನ್ನುವಂತಾಗಿದೆ. ಬಹುತೇಕ ಎಲ್ಲಾ ಪ್ಯಾನ್ ಇಂಡಿಯಾ ಸ್ಟಾರ್ಸ್‌‌ಗೆ ಈ ಹೆಮ್ಮೆಯ ಕನ್ನಡಿಗನನ್ನ ನೋಡಿ ಮೆಣಸಿನಕಾಯಿ ಇಟ್ಕೊಂಡ ಹಾಗೆ ಆಗಿದೆ. ಅದೇ ಕಾರಣಕ್ಕೆ ದೇಶದಾದ್ಯಂತ ಅಷ್ಟೇ ಅಲ್ಲ.. ವಿಶ್ವದಾದ್ಯಂತ ನೆಗೆಟಿವ್ ಪೇಯ್ಡ್ ಕ್ಯಾಂಪೇನ್ಸ್ ನಡೆದಿದ್ದು ಗೊತ್ತೇಯಿದೆ. ಅಲ್ಲದೆ.. ಸಿನಿಮಾ ತೆರೆಕಂಡ ಐದಾರು ದಿನದಲ್ಲಿ ಬರೋಬ್ಬರಿ 1.5 ಲಕ್ಷ ಪೈರಸಿ ಲಿಂಕ್ಸ್ ಡಿಲೀಟ್ ಮಾಡಿಸಲಾಗಿದೆ ಅಂದ್ರೆ ನೀವು ನಂಬಲೇಬೇಕು. ಅದ್ರಿಂದ ಒಂದೂವರೆ ಸಾವಿರ ಕೋಟಿ ಬ್ಯುಸಿನೆಸ್ ಕೂಡ ಲಾಸ್ ಆಗಿದೆ ಎನ್ನಲಾಗ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

Exit mobile version