ರಶ್ಮಿಕಾ ಮಂದಣ್ಣ ನಟನೆಯ ‘ಥಮ’ಚಿತ್ರ ಬಿಡುಗಡೆ..! ವೀಕ್ಷಕರು ಏನಂದ್ರು..?

Untitled design 2025 10 21t175025.117

ನಟಿ ರಶ್ಮಿಕಾ ಮಂದಣ್ಣ ನಟನೆಯ ಹೊಸ ಹಿಂದಿ ಹಾರರ್ ಸಿನಿಮಾ ‘ಥಮ’ ಇಂದು (ಅಕ್ಟೋಬರ್ 21) ರಾಜ್ಯಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ರಶ್ಮಿಕಾ ಅವರ ಮೊದಲ ಹಾರರ್ ಚಿತ್ರವಾಗಿದ್ದು, ಇದರಲ್ಲಿ ಅವರು ದೆವ್ವದ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ನಾಯಕನಾಗಿ ಆಯುಷ್ಮಾನ್ ಖುರಾನಾ ಕಾಣಿಸಿಕೊಂಡಿದ್ದಾರೆ.

ಸಿನಿಮಾ ನೋಡಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಹರ್ಷವರ್ಧನ್ ರಾಮ್ ಅವರು ಟ್ವಿಟ್ ಮಾಡಿ, ‘ಥಮ’ ಸಿನಿಮಾ ಒಳ್ಳೆಯ ಕಾಮಿಡಿ-ಹಾರರ್ ಎಂಟರ್ಟೈನರ್ ಆಗಿದೆ. ಸಿನಿಮಾದಲ್ಲಿ ಒಳ್ಳೆಯ ಹಾಸ್ಯ, ಥ್ರಿಲ್ಲಿಂಗ್ ಅಂಶಗಳು ಮತ್ತು ರೊಮಾನ್ಸ್ ಸಹ ಇದೆ. ಇದು ನಿಜಕ್ಕೂ ಒಳ್ಳೆಯ ಸಿನಿಮಾ ಎಂದಿದ್ದಾರೆ.

ವಸೀಮ್ ರೆಜಾ ಅವರು ಸಿನಿಮಾಕ್ಕೆ 5ಕ್ಕೆ 4 ಸ್ಟಾರ್‌ಗಳನ್ನು ನೀಡಿದ್ದಾರೆ. ಥಮ ಖಂಡಿತ ನೋಡಲೇ ಬೇಕಾದ ಸಿನಿಮಾ. ಅದ್ಭುತವಾದ ಆಕ್ಷನ್ ಇರುವ ಆಳವಾದ ಭಾವನಾತ್ಮಕ ದೃಶ್ಯಗಳನ್ನು ಒಳಗೊಂಡಿದೆ. ಸಿನಿಮಾದಲ್ಲಿ ಬರುವ ಬೇತಾಳ ಮತ್ತು ತೋಳದ ನಡುವಿನ ಫೈಟ್ ಅದ್ಭುತವಾಗಿದೆ ಎಂದು  ಟ್ವೀಟ್‌ ಮಾಡಿದ್ದಾರೆ.

‘ಇಟ್ಸ್ ಸಿನಿಮಾ’ ಟ್ವಿಟರ್ ಖಾತೆಯವರು ಸಿನಿಮಾಕ್ಕೆ 5ಕ್ಕೆ 4.5 ಸ್ಟಾರ್‌ಗಳನ್ನು ನೀಡಿದ್ದಾರೆ. ಮ್ಯಾಡ್‌ಲಾಕ್ ಸಂಸ್ಥೆ ಮತ್ತೊಂದು ಸೂಪರ್ ಹಿಟ್ ಸಿನಿಮಾ ಕೊಟ್ಟಿದೆ. ಹಾಸ್ಯ-ಹಾರರ್-ರೊಮಾನ್ಸ್‌ನ ಒಳ್ಳೆಯ ಮಿಶ್ರಣ ಈ ಸಿನಿಮಾ. ಸಿನಿಮಾ ನೋಡುವಾಗ ನಿರೀಕ್ಷೆ ಮಾಡದೇ ಇರುವ ತಿರುವುಗಳು ಬರುತ್ತವೆ” ಎಂದು ಹೇಳಿದ್ದಾರೆ.

ಆದರೆ ಫಿಲ್ಮಿ ಗೌತಮ್ ಅವರು ವಿಭಿನ್ನ ಅಭಿಪ್ರಾಯ ಹೊಂದಿದ್ದಾರೆ. “ಸಿನಿಮಾದ ಕೆಲವು ಭಾಗಗಳು ಚೆನ್ನಾಗಿವೆ. ಆದರೆ ಇಡೀ ಸಿನಿಮಾ ಆಗಿ ಪ್ರೇಕ್ಷಕರ ಮೇಲೆ  ಅಷ್ಟು ಚೆನ್ನಾಗಿಲ್ಲ. ಈ ಸಿನಿಮಾ ‘ಬೇದಿಯಾ 2’, ‘ಸ್ತ್ರೀ 3’ ಮತ್ತು ‘ಶಕ್ತಿ ಶಾಲಿನಿ’ ಸಿನಿಮಾಗವನ್ನ ಬಹಳ ವೆನ್ನಾಗಿ ರೂಪಿಸಿ ‘ಥಮ’ ಸಿನಿಮಾವನ್ನು ಸಪ್ಪೆಗೊಳಿಸಿದ್ದಾರೆ ಎಂದು ಟೀಕಿಸಿದ್ದಾರೆ.

‘ಥಮ್’ ಸಿನಿಮಾ ಹಾರರ್, ಕಾಮಿಡಿ ಮತ್ತು ರೊಮಾನ್ಸ್‌ನ ಇತರೆ ಮಿಶ್ರಣವನ್ನು ನೀಡುತ್ತದೆ. ರಶ್ಮಿಕಾ ಮಂದಣ್ಣ ದೆವ್ವದ ಪಾತ್ರದಲ್ಲಿ ನಟಿಸಿರುವುದು ಈ ಚಿತ್ರದ ಮುಖ್ಯ ಆಕರ್ಷಣೆಯಾಗಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಬಿಡುಗಡೆಯಾದ ಈ ಚಿತ್ರ ಪ್ರೇಕ್ಷಕರನ್ನು ಮನರಂಜಿಸಲು ಸಿದ್ಧವಾಗಿದೆ.

Exit mobile version