ತಮಿಳುನಾಡು ಎಲೆಕ್ಷನ್ಸ್ ಅನೌನ್ಸ್..ವಿಜಯದತ್ತ ದಳಪತಿ

ಏಪ್ರಿಲ್ 23ಕ್ಕೆ ಚುನಾವಣೆ.. ಮೇ 4ಕ್ಕೆ ಎಲೆಕ್ಷನ್ ರಿಸಲ್ಟ್..!!

Untitled design 2026 03 16T153233.021

ದಿ ವೆಯ್ಟ್ ಈಸ್ ಓವರ್.. ದಳಪತಿ ವಿಜಯ್ ಬಹುದಿನದ ಕನಸು ನನಸಾಗೋ ಸಮಯ ಬಂದೇ ಬಿಟ್ಟಿದೆ. ಎಲೆಕ್ಷನ್ ಕಮಿಷನ್ ಈಗಾಗ್ಲೇ ಎಲೆಕ್ಷನ್ ಡೇಟ್ ಅನೌನ್ಸ್ ಮಾಡಿದ್ದು, ಡಿಸಿಎಂ ಆಗ್ತಾರೆ ವಿಜಯ್ ಅನ್ನೋ ಮಾತುಗಳು ದಟ್ಟವಾಗಿ ಕೇಳಿಬರ್ತಿವೆ. ಪವನ್ ಕಲ್ಯಾಣ್ ಆಂಧ್ರ ಪಾಲಿಟಿಕ್ಸ್‌‌ನ ಗೇಮ್ ಚೇಂಜರ್ ಆದಂತೆ, ದಳಪತಿ ದಾಳದಿಂದ ತಮಿಳುನಾಡು ರಾಜ್ಯ ರಾಜಕಾರಣ ಅಲ್ಲೋಲ ಕಲ್ಲೋಲ ಆಗುವ ಮುನ್ಸೂಚನೆ ಸಿಕ್ಕಿದೆ. ಬಿಜೆಪಿ ಹೈ ಕಮಾಂಡ್ ನೀಡಿರೋ ಆಫರ್ ಏನು..? ವಿಜಯ್ ನಡೆ ಯಾರ ಕಡೆ..? ಮೇ 4ಕ್ಕೆ ತ್ರಿಶಾ ಬರ್ತ್ ಡೇ ಜೊತೆ ಎಲೆಕ್ಷನ್ ವಿಜಯೋತ್ಸವ ಹೇಗಿರಲಿದೆ ಅನ್ನೋದ್ರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

ಯೆಸ್.. ಎಲೆಕ್ಷನ್ ಕಮಿಷನ್ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗೆ ಮುಹೂರ್ತ ನಿಗದಿ ಮಾಡಿದೆ. ಆ ಪೈಕಿ ತಮಿಳುನಾಡಿನಲ್ಲಿ ಇದೇ ಏಪ್ರಿಲ್ 23ರಂದು ಒಂದೇ ಹಂತದ ಚುನಾವಣೆ ನಡೆಯಲಿದ್ದು, ಮೇ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಕಲಾ ಸೇವೆ ಮಾಡ್ತಿದ್ದ ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್, ಜನ ಸೇವೆ ಮಾಡೋಕೆ ಪಾಲಿಟಿಕ್ಸ್‌ಗೆ ಪಾದಾರ್ಪಣೆ ಮಾಡಿದ್ದು, ಅವ್ರ ಬಹು ದಿನದ ಕನಸು ನನಸಾಗೋ ಸಮಯ ಸನಿಹವಾಗಿದೆ.

ಟಿವಿಕೆ ಪಕ್ಷ ಕಟ್ಟಿ, ಇಡೀ ರಾಜ್ಯ ಸುತ್ತಿ ಪಕ್ಷ ಸಂಘಟನೆ ಮಾಡಿರೋ ವಿಜಯ್, ದೊಡ್ಡ ದೊಡ್ಡ ಱಲಿಗಳನ್ನೇ ಮಾಡಿದ್ರು. ಹೋದಲ್ಲೆಲ್ಲಾ ತಮಿಳು ಜನ ವಿಜಯ್‌ಗೆ ತೋರಿದ ಅಭಿಮಾನ, ಪ್ರೀತಿ, ಗೌರವ ನೋಡ್ತಿದ್ರೆ ಈ ಬಾರಿಯ ಚುನಾವಣೆಯಲ್ಲಿ ಬಹುದೊಡ್ಡ ಸಂಚಲನ ಮೂಡಿಸುವಂತಿದ್ದಾರೆ. ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಟಿವಿಕೆ ಪಕ್ಷದ ಅಭ್ಯರ್ಥಿಗಳನ್ನ ನಿಲ್ಲಿಸೋ ಮೂಲಕ ಈಗಾಗ್ಲೇ ಬೇರೂರಿರುವ ಡಿಎಂಕೆ, ಎಐಡಿಎಂಕೆಗೆ ಪ್ರಬಲ ಪೈಪೋಟಿ ನೀಡುವ ಸೂಚನೆಯಿದೆ.

ದಳಪತಿ ವಿಜಯ್‌ಗೆ ಬಿಜೆಪಿ ಹೈ ಕಮಾಂಡ್ ಬಿಗ್ ಆಫರ್ ನೀಡಿದ್ದು, ಚುನಾವಣೆಯಲ್ಲಿ ಬಿಜೆಪಿ ಜೊತೆ ಕೈ ಜೋಡಿಸಿ ಜಂಟಿಯಾಗಿ ಚುನಾವಣೆಯನ್ನ ಎದುರಿಸುವ ತಂತ್ರ ರೂಪಿಸಿದೆ. ಈಗಾಗ್ಲೇ ಅಣ್ಣಾಮಲೈ ತಮಿಳುನಾಡಿನಲ್ಲಿ ಬಿಜೆಪಿಯನ್ನ ಸಂಘಟಿಸಿ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಅದಕ್ಕೆ ವಿಜಯ್ ಹಾಗೂ ಅವ್ರ ಟಿವಿಕೆ ಪಕ್ಷ ಕೂಡ ಸಾಥ್ ನೀಡಿದ್ರೆ, ವಿಜಯ್‌ಗೆ ಡಿಸಿಎಂ ಪಟ್ಟ ನೀಡುವ ಆಶ್ವಾಸನೆ ನೀಡಿದೆ.

ಹೌದು.. ದಳಪತಿ ತಮ್ಮ ಟಿವಿಕೆ ಪಕ್ಷವನ್ನ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ, ಡಿಸಿಎಂ ಪಟ್ಟ ನೀಡುವುದರ ಜೊತೆ 80 ವಿಧಾನಸಭಾ ಸೀಟ್‌‌ಗಳನ್ನ ಟಿವಿಕೆ ಪಕ್ಷಕ್ಕೆ ಬಿಟ್ಟುಕೊಡುವ ಭರವಸೆ ಕೂಡ ನೀಡಲಾಗಿದೆ. ಇದರ ಸಾರಥ್ಯವನ್ನ  ಬಿಜೆಪಿ ಹೈ ಕಮಾಂಡ್ ಪರ ಆಂಧ್ರ ಡಿಸಿಎಂ ಪವರ್ ಸ್ಟಾರ್ ಪವನ್ ಕಲ್ಯಾಣ್ ಹೊತ್ತಿರೋದು ಮತ್ತೊಂದು ವಿಶೇಷ.

ಈ ಕುರಿತು ಪವನ್ ಕಲ್ಯಾಣ್ ಈಗಾಗ್ಲೇ ವಿಜಯ್ ಜೊತೆ ನಾಲ್ಕು ಹಂತದ ಮಾತುಕಥೆ ಕೂಡ ನಡೆಸಿದ್ದು, ದಳಪತಿ ಗ್ರೀನ್ ಸಿಗ್ನಲ್ ಕೊಡೋದೊಂದೇ ಬಾಕಿ ಉಳಿದಿದೆ ಎನ್ನಲಾಗ್ತಿದೆ. ಅಲ್ಲಿಗೆ ಅಣ್ಣಾಮಲೈ ಜೊತೆ ದಳಪತಿ ವಿಜಯ್ ಕೈ ಜೋಡಿಸಿದ್ರೆ ಡಿಎಂಕೆ ಸ್ಟಾಲಿನ್ ಹಾಗೂ ದಿನೇ ದಿನೇ ಕುಗ್ಗುತ್ತಿರೋ AIDMKಗೆ ಬಹುದೊಡ್ಡ ಹೊಡೆತ ಬೀಳಲಿದೆ. ವಿಜಯ್ ರಾಜಕೀಯ ನಡೆ ಸಿಎಂ ಸ್ಟಾಲಿನ್ ಬುಡ ಅಲ್ಲಾಡುವಂತೆ ಮಾಡಿದ್ದು, ಮೋದಿ ಬೆನ್ನೆಲುಬು ಇದ್ದು ಬಿಟ್ರೆ ಡಿಸಿಎಂ ಏನು ಸಿಎಂ ಆದ್ರೂ ಅಚ್ಚರಿಯಿಲ್ಲ ವಿಜಯ್ ಅಂತಾರೆ ಒಂದಷ್ಟು ಮಂದಿ.

ಜನಸೇನಾ ಪಕ್ಷ ಕಟ್ಟಿ ಸತತ ಪ್ರಯತ್ನ ಮಾಡ್ತಿದ್ದ ಪವನ್ ಕಲ್ಯಾಣ್.. ತಮ್ಮ ಸ್ಟ್ರ್ಯಾಟಜಿಗಳಿಂದ ಎಲ್ಲೋ ಜೈಲಲ್ಲಿದ್ದ ಚಂದ್ರಬಾಬು ನಾಯ್ಡುರನ್ನ ಹೊರಗೆ ತಂದರು. ಟಿಡಿಪಿ ಪಕ್ಷದ ಕಥೆ ಮುಗೀತು ಅಂತ ಮಾತಾಡಿಕೊಳ್ತಿದ್ದಾಗ ಅದೇ ಟಿಡಿಪಿ ಜೊತೆ ಕೈ ಜೋಡಿಸಿ, ಜನಸೇನಾ ಸ್ಪರ್ಧಿಸಿದ ಎಲ್ಲಾ ಕ್ಷೇತ್ರಗಳಲ್ಲಿ 100% ಸಕ್ಸಸ್ ರಿಸಲ್ಟ್ ತಂದುಕೊಟ್ರು ಪವನ್. ತಾವು ಡಿಸಿಎಂ ಆಗೋದ್ರ ಜೊತೆ ನಾಯ್ಡುರನ್ನ ಸಿಎಂ ಮಾಡಿದ್ರು. ಬಿಜೆಪಿಗೆ ಬೆಂಬಲ ನೀಡಿ, ಮೋದಿಯ ವಿಶ್ವಾಸ ಕೂಡ ಗಳಿಸಿದ್ರು. ಹೀಗಾಗಿ ಪವನ್ ಅಕ್ಷರಶಃ ಆಂಧ್ರ ಪಾಲಿಟಿಕ್ಸ್‌ನ ಗೇಮ್ ಚೇಂಜರ್ ಅನಿಸಿಕೊಂಡರು.

ಇದೀಗ ದಳಪತಿ ವಿಜಯ್‌ ಕೂಡ ಅಂಥದ್ದೇ ಹಾದಿಯಲ್ಲಿದ್ದಾರೆ. ತಮಿಳುನಾಡು ಪಾಲಿಟಿಕ್ಸ್‌‌ನ ದಿಕ್ಕು ದೆಸೆ ಬದಲಿಸೋ ಶಕ್ತಿ ಆತನಲ್ಲಿದೆ. ಸೋ ಪವನ್ ರೀತಿ ಬಿಜೆಪಿ ಜೊತೆ ಕೈ ಜೋಡಿಸಿ, ಬಹುದೊಡ್ಡ ರಾಷ್ಟ್ರೀಯ ಪಕ್ಷದ ವಿಶ್ವಾಸ ಗಳಿಸಿಕೊಂಡು ಗೇಮ್ ಚೇಂಜರ್ ಆಗ್ತಾರಾ ಅನ್ನೋದೇ ಯಕ್ಷ ಪ್ರಶ್ನೆ. ಅಲ್ಲದೆ, ವಿಜಯ್‌ಗೆ ಖಷ್ಬೂ ಅಂತಹ ಹಿರಿಯ ನಟಿ ಕಮ್ ರಾಜಕಾರಣಿ ಪವನ್ ಕಲ್ಯಾಣ್ ಹಾದಿಯಲ್ಲೇ ಸಾಗುವಂತೆ ಸೂಚನೆ ಕೂಡ ನೀಡಿದ್ದಾರೆ.

ಇಂಟರೆಸ್ಟಿಂಗ್ ಅಂದ್ರೆ ಇಷ್ಟು ದಿನ ಕಲಾ ಸೇವೆ ಮಾಡ್ತಿದ್ದ ಪವನ್ ಕಲ್ಯಾಣ್ ಹಾಗೂ ವಿಜಯ್ ಇಬ್ಬರೂ ಸಹ ಜನ ಸೇವೆಗಾಗಿ ತಮ್ಮ ಸಿನಿಮಾ ಕರಿಯರ್‌‌ನೇ ತ್ಯಜಿಸಿದ್ದಾರೆ. ಪವನ್‌ಗೆ ಉಸ್ತಾದ್ ಮೂವಿ ಕೊನೆಯ ಚಿತ್ರವಾದ್ರೆ, ವಿಜಯ್‌ಗೆ ಜನನಾಯಗನ್ ಕಟ್ಟ ಕಡೆಯ ಚಿತ್ರವಾಗಲಿದೆ. ಇವರಿಬ್ಬರೂ ಸಕ್ರಿಯ ರಾಜಕಾರಣದಲ್ಲಿ ಭಾಗಿಯಾಗಲಿದ್ದಾರೆ. ಸೋ.. ಇಬ್ಬರ ನಡೆ, ಐಡಿಯಾಲಜಿ, ಸ್ಟಾರ್‌‌ಡಮ್ ಎಲ್ಲವೂ ಒಂದೇ ರೀತಿಯಲ್ಲಿದ್ದು, ಪವನ್‌‌ ಸಾರಥ್ಯಕ್ಕೆ ಸೊಪ್ಪು ಹಾಕ್ತಾರಾ ವಿಜಯ್ ಅನ್ನೋದು ಕಾದು ನೋಡಬೇಕಿದೆ.

ಇದು ನಿಜಕ್ಕೂ ಕಾಕತಾಳೀಯ. ಏಪ್ರಿಲ್ 23ಕ್ಕೆ ಚುನಾವಣೆ ನಡೆದ್ರೆ, ರಿಸಲ್ಟ್‌ನ ಮೇ 4ರಂದು ಅನೌನ್ಸ್ ಮಾಡಲಾಗ್ತಿದೆ. ಅದೇ ದಿನ ಟಿವಿಕೆ ಅಧಿನೇತ ದಳಪತಿ ವಿಜಯ್ ವೈವಾಹಿಕ ಜೀವನ ಮುರಿದು ಬೀಳಲು ಕಾರಣವಾಗಿದ್ದಾರೆ ಎನ್ನಲಾಗಿರೋ ನಟಿ ತ್ರಿಶಾ ಬರ್ತ್ ಡೇ ಕೂಡ. ಸೋ.. ವಿಜಯ್‌ಗೆ ಒಂದಲ್ಲ ಡಬಲ್ ಸೆಲೆಬ್ರೇಷನ್. ಪಕ್ಷದ ಚಿಹ್ನೆ ವಿಜಲ್ ಆಗಿರೋದ್ರಿಂದ ವಿಜಯ್ ಅಂದು ವಿಜಲ್ ಹಾಕೋದ್ರಲ್ಲಿ ಯಾವುದೇ ಡೌಟ್ ಇಲ್ಲ ಅನ್ನೋದು ಹಲವರ ಲೆಕ್ಕಾಚಾರವಾಗಿದೆ. ಸೋ.. ಇದು ಮುಂದೆ ಯಾವೆಲ್ಲಾ ಟ್ವಿಸ್ಟ್ ಅಂಡ್ ಟರ್ನ್ ಪಡೆಯುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version