ಕೆವಿಎನ್ ಜನನಾಯಗನ್ ರಿಲೀಸ್‌ನಿಂದ ಸಿಕ್ಕಾಪಟ್ಟೆ ಖುಷಿಯಲ್ಲಿರೋ ವ್ಯಕ್ತಿ. ಇವರು ಬರೀ ವ್ಯಕ್ತಿಯಲ್ಲ ಚಿತ್ರರಂಗದ ಶಕ್ತಿಯೂ ಹೌದು. 400 ಕೋಟಿ ಬಿಗಹ್ ಬಜೆಟ್ ಸಿನಿಮಾವೊಂದರ ರಿಲೀಸ್‌ಗೆ ತೊಂದರೆ ಆದಾಗ ಎದೆಗುಂದದೆ ತಾಳ್ಮೆ ತೋರಿದ ಸಹನಾಮೂರ್ತಿ. ಅದ್ರ ಪ್ರತಿಫಲ ಇಂದು ನೂರಾರು ಕೋಟಿ ಬ್ಯುಸಿನೆಸ್ ಆಗ್ತಿದೆ. ಇಂಟರೆಸ್ಟಿಂಗ್ ಅಂದ್ರೆ ಜನನಾಯಕ ದಳಪತಿ ವಿಜಯ್ ಜೊತೆ ಸಿನಿಮಾದಲ್ಲಿ ಸ್ಟೆಪ್ ಕೂಡ ಹಾಕಿದ್ದಾರೆ.
ಜನನಾಯಕ ವಿಜಯ್ ಜೊತೆ KVN ಒನ್ ಲಾಸ್ಟ್ ಡ್ಯಾನ್ಸ್..!
ಅಬ್ಬಬ್ಬಾ.. ಅನ್ನದಾತ KVN ಸಹನೆಗೆ ಸಂದ ಪ್ರತಿಫಲ ಈ ಸಕ್ಸಸ್
ಫಸ್ಟ್ ಡೇ ಕಲೆಕ್ಷನ್ 78 ಕೋಟಿ.. ಪ್ರೀ ಬ್ಯುಸಿನೆಸ್ 350 ಕೋಟಿ
7 ಲಕ್ಷ ಆನ್‌ಲೈನ್ ಟಿಕೆಟ್ಸ್ ಬುಕ್ಕಿಂಗ್.. 20 ಕೋಟಿ ವಸೂಲ್
ದಳಪತಿ ವಿಜಯ್.. ಬಹುಶಃ ಸೂಪರ್ ಸ್ಟಾರ್ ರಜನೀಕಾಂತ್ ಬಳಿಕ ತಮಿಳು ಚಿತ್ರರಂಗದಲ್ಲಿ ಅತಿಹೆಚ್ಚು ಫ್ಯಾನ್ ಫಾಲೋಯಿಂಗ್ ಇರೋ ಮತ್ತೊಬ್ಬ ಸೂಪರ್ ಸ್ಟಾರ್. ರಜನಿ ಬಳಿಕ ನೆಕ್ಸ್ಟ್ ತಲೈವಾ ಅಂತ ಯಾರನ್ನಾದ್ರೂ ಕರೆದ್ರೆ ಅದು ಒನ್ ಅಂಡ್ ಓನ್ಲಿ ವಿಜಯ್ ಆಗ್ತಾರೆ. ಅದಕ್ಕೆ ಜನ & ಫ್ಯಾನ್ಸ್ ಜೊತೆ ಅವ್ರಿಗಿರೋ ಕ್ರೇಜ್, ಸಿನಿಮೋತ್ಸಾಹ, ಸಮಾಜಪರ ಕಾಳಜಿಯೇ ಕಾರಣ.
ವಿಜಯ್ 69ನೇ ಸಿನಿಮಾ ಜನನಾಯಗನ್ ತೆರೆಗಪ್ಪಳಿಸಿದ್ದು, ವಿಶ್ವದ ಮೂಲೆ ಮೂಲೆಯಲ್ಲಿ ಅದು ಮಾಡ್ತಿರೋ ಹಂಗಾಮ ಅಷ್ಟಿಷ್ಟಲ್ಲ. ಯೆಸ್.. ಫಸ್ಟ್ ಡೇ ಸುಮಾರು 78 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಜನನಾಯಗನ್. ವಿನೋದ್ ನಿರ್ದೇಶನದ ಈ ಸಿನಿಮಾ ರಿಮೇಕ್ ಆಗಿದ್ದುಕೊಂಡು, ಮತ್ತೊಂದೆಡೆ ಪೈರಸಿ ಕೂಡ ಆಗಿತ್ತು. ಆದ್ರೆ ಅವೆಲ್ಲವುಗಳನ್ನ ಮೀರಿ ಇಂದು ಬಿಗ್ಗೆಸ್ಟ್ ಸಕ್ಸಸ್ ಕಂಡಿದೆ.
ಪ್ರೀ ರಿಲೀಸ್ ಬ್ಯುಸಿನೆಸ್ ಸುಮಾರು 350 ಕೋಟಿ ಮಾಡಿದ್ದಂತಹ ಜನನಾಯಗನ್ ಸಿನಿಮಾ, ಸಿಎಂ ವಿಜಯ್ ಎಂತಹ ಅದ್ಭುತ ಜನನಾಯಕ ಅನ್ನೋದಕ್ಕೆ ಸಾಕ್ಷಿಯಾಗಿತ್ತು. ಅಲ್ಲದೆ ಮುಂಗಡ ಟಿಕೆಟ್ ಬುಕ್ಕಿಂಗ್ಸ್‌ನಲ್ಲಿ ಬರೋಬ್ಬರಿ 7 ಲಕ್ಷ ಟಿಕೆಟ್ಸ್ ಸೋಲ್ಡ್ ಔಟ್ ಆಗೀ ಮೂಲಕ, ಅದ್ರಿಂದಲೇ ಸುಮಾರು 20 ಕೋಟಿಗೂ ಅಧಿಕ ರೂಪಾಯಿ ಗಳಿಸಿದೆ ಅಂದ್ರೆ ನೀವು ನಂಬಲೇಬೇಕು.
ಪೂಜಾ ಹೆಗಡೆ, ಬಾಬಿ ಡಿಯೋಲ್, ಪ್ರಕಾಶ್ ರೈ, ಮಮಿತಾ, ಗೌತಮ್ ವಾಸುದೇವ್ ಮೆನನ್ ಅಂತಹ ಘಟಾನುಘಟಿ ಕಲಾವಿದರ ದಂಡಿರೋ ಜನನಾಯಗನ್ ಸಿನಿಮಾ ಪ್ರೇಕ್ಷಕರ ದಿಲ್ ದೋಚಿದೆ. ಅದ್ರಲ್ಲೂ ಅನಿರುದ್ದ್ ರವಿಚಂದರ್ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಸಿನಿಮಾದ ಜೋಶ್ ಹೆಚ್ಚಿಸಿದೆ. ಇಂಟರೆಸ್ಟಿಂಗ್ ಅಂದ್ರೆ ನಮ್ಮ ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್‌ನ ಕೆ ವೆಂಕಟ್ ನಾರಾಯಣ್ ಅವ್ರ ತಾಳ್ಮೆಗೆ ಸಂದ ಪ್ರತಿಫಲವಿದು ಅನ್ನೋದು ವಿಶೇಷ.
ಹೌದು.. ಕೆ ವೆಂಕಟ್ ನಾರಾಯಣ್ ಬರೀ ವ್ಯಕ್ತಿಯಲ್ಲ. ಒಂಥರಾ ಚಿತ್ರರಂಗದ ಶಕ್ತಿ. ಭಾರತೀಯ ಚಿತ್ರರಂಗದ ಬಹುತೇಕ ಎಲ್ಲಾ ಪ್ರಮುಖ ಭಾಷೆಗಳಲ್ಲಿ ತಮ್ಮ ಛಾಪನ್ನು ಒತ್ತಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಕಲಾ ಪೋಷಣೆಗಾಗಿಯೇ ಮುಡಿಪಾಗಿಟ್ಟಿದ್ದಾರೆ. ಅಂತಹ ವ್ಯಕ್ತಿಯನ್ನ ತಮ್ಮ ಅಧಿಕಾರದಿಂದ ಕಟ್ಟಿ ಹಾಕುವ ಪ್ರಯತ್ನ ಮಾಡಿತ್ತು ಸರ್ಕಾರ ಹಾಗೂ ಸೆನ್ಸಾರ್ ಮಂಡಳಿ. ಆದ್ರೆ ಎದೆಗುಂದದೆ ತಾಳ್ಮೆಯಿಂದ ಅದನ್ನ ನಿಭಾಯಿಸಿದ ವೆಂಕಟ್ ಅವರು, ಸದ್ಯ ಸಿಎಂ ವಿಜಯ್‌ಗೆ ಆಪ್ತ ಗೆಳೆಯರು ಅನ್ನೋದೇ ಖುಷಿ.
ಸದಾ ಗ್ಲಾಮರ್‌ನಿಂದ ದೂರವಿದ್ದು, ಆಫ್ ಸ್ಕ್ರೀನ್ ಗೇಮ್ ಆಡುವ ಗೇಮ್ ಚೇಂಜರ್ ಕೆವಿಎನ್. ಆದ್ರೆ ಇದೇ ಮೊದಲ ಬಾರಿಗೆ ದಳಪತಿ ವಿಜಯ್ ಜೊತೆ ಬ್ಲಾಸ್ಟು ಬ್ಲಾಸ್ಟು ಸೆನ್ಸೇಷನಲ್ ಸಾಂಗ್‌ನಲ್ಲಿ ಸ್ಪೆಷಲ್ ಅಪಿಯರೆನ್ಸ್ ನೀಡಿದ್ದು, ಸಖತ್ ಸ್ಟೆಪ್ ಕೂಡ ಹಾಕಿದ್ದಾರೆ. ಇದು ಒಬ್ಬ ನಿರ್ಮಾಪಕನಿಗಿರೋ ಸಿನಿಮೋತ್ಸಾಹದ ಕನ್ನಡಿ ಅಂದ್ರೆ ತಪ್ಪಾಗಲ್ಲ.
