ಡಿವೋರ್ಸ್ ಗದ್ದಲ ಮಧ್ಯೆ ತ್ರಿಶಾ ಜೊತೆ ವಿಜಯ್ ಒಂದೇ ಕಾರಿನಲ್ಲಿ ಎಂಟ್ರಿ..!

ವಿಜಯ್ - ತ್ರಿಶಾ ರಿಲೇಶನ್ ಶಿಪ್ ಸ್ಟೇಟಸ್ ಏನು..?

Untitled design (66)

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ತಮಿಳು ಚಿತ್ರರಂಗದಲ್ಲಿ ದಳಪತಿ ವಿಜಯ್ ಹಾಗು ತ್ರಿಷಾ ರಿಲೇಷನ್ಶಿಪ್ ಸ್ಟೇಟಸ್ ಏನು ಅನ್ನೋದು ಸದ್ಯದ ಹಾಟ್‌ ಟಾಪಿಕ್‌ ಆಗಿದೆ. ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಹಾಕಿದ ಸುದ್ದಿ ಇನ್ನೂ ಚರ್ಚೆಯಲ್ಲಿರುವಾಗಲೇ, ನಟಿ ತ್ರಿಷಾ ಜೊತೆ ವಿಜಯ್ ಒಂದೇ ಕಾರಿನಲ್ಲಿ ಮದುವೆ ಸಮಾರಂಭಕ್ಕೆ ಆಗಮಿಸಿರುವುದು ಹೊಸ ಗಾಸಿಪ್‌ಗೆ ಬೆಂಕಿ ಹಚ್ಚಿದೆ. ಅದೂ ಅಲ್ಲದೆ ಇಬ್ಬರೂ ಒಂದೇ ಕಾಂಬಿನೇಶನ್ ಉಡುಗೆಯಲ್ಲಿ ಮದುವೆಯಲ್ಲಿ ಕಾಣಿಸಿಕೊಂಡಿದ್ದು ನೆಟ್ಟಿಗರ ಚರ್ಚೆಗೆ ಕಾರಣವಾಗಿದೆ.

ದಳಪತಿ ವಿಜಯ್​ ಡಿವೋರ್ಸ್​ ವಿಚಾರ ಸದ್ಯ ಸಂಚಲನ ಸೃಷ್ಟಿಸಿದೆ.. ವಿಜಯ್ ಹಾಗೂ ಪತ್ನಿ ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಕೆಲ ಭಿನ್ನಾಭಿಪ್ರಾಯಗಳಿಂದ ಪತಿಯಿಂದ ದೂರಾಗಲು ಸಂಗೀತಾ ನಿರ್ಧರಿಸಿದ್ದಾರೆ. ಈಗಾಗಲೇ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ನಟಿಯೊಬ್ಬಳ ಜೊತೆಗಿನ ವಿಜಯ್ ಅನೈತಿಕ ಸಂಬಂಧವೇ ಇದಕ್ಕೆ ಕಾರಣ ಎಂದು ಸಂಗೀತಾ ಆರೋಪಿಸಿದ್ದಾರೆ. ಈ ವಿಚಾರ ವೈರಲ್​ ಆಗುತ್ತಿದ್ದಂತೆ ಎಲ್ಲರೂ ಇದಕ್ಕೆ ನಟಿ ತ್ರಿಶಾ ಅವರೇ  ಕಾರಣ ಅಂತ ಆರೋಪಿಸಿದ್ರು.. ಈ ಬೆನ್ನಲ್ಲೇ ವಿಜಯ್​ ಹಾಗೂ ತ್ರಿಶಾ ಒಟ್ಟಿಗೆ ಕಾಣಿಸಿಕೊಂಡು ಶಾಕ್​ ಕೊಟ್ಟಿದ್ದಾರೆ.

ಡಿವೋರ್ಸ್ ಗದ್ದಲ ಮಧ್ಯೆ ತ್ರಿಶಾ ಜೊತೆ ವಿಜಯ್ ಒಂದೇ ಕಾರಿನಲ್ಲಿ ಎಂಟ್ರಿ..!

ಕಾಂಬಿನೇಶನ್ ಲುಕ್ ನಲ್ಲಿ ಮದುವೆಗೆ ಬಂದ ವಿಜಯ್ – ತ್ರಿಶಾ

ಡಿವೋರ್ಸ್ ವಿಚಾರ ಸದ್ದು ಮಾಡುತ್ತಿರುವಾಗಲೇ ವಿಜಯ್ ಹಾಗೂ ತ್ರಿಶಾ ಒಂದೇ ಕಾರಿನಲ್ಲಿ ಸುತ್ತಾಡಲು ಆರಂಭಿಸಿದ್ದಾರೆ. ಚೆನ್ನೈನಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದಕ್ಕೆ ಇಬ್ಬರೂ ಒಟ್ಟಿಗೆ ಬಂದು ಭಾಗವಹಿಸಿದ್ದಾರೆ. ಆ ಮೂಲಕ ಆಡಿಕೊಳ್ಳುವವರ ಬಾಯಿಗೆ ಆಹಾರವಾಗಿದ್ದಾರೆ. ತಮಿಳು ನಿರ್ಮಾಪಕ ಕಲ್ಪತಿ ಎಸ್. ಸುರೇಶ್ ಮಗನ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ವಿಜಯ್ ಹಾಗೂ ತ್ರಿಶಾ ಜೋಡಿಯಾಗಿ ಬಂದಿದ್ದಲ್ಲದೆ ಕಾಂಬಿನೇಶನ್ ಉಡುಗೆ ಧರಿಸಿದ್ದು  ಅಚ್ಚರಿ ಎನ್ನಿಸಿದೆ. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋ ವೈರಲ್ ಆಗ್ತಿದೆ. ಆರಂಭದಲ್ಲಿ ಇದು ಎಐ ವಿಡಿಯೋ ಎಂದೇ ಕೆಲವರು ಭಾವಿಸಿದ್ದರು. ಬಳಿಕ ನಿಜ ಎಂದು ಗೊತ್ತಾಗಿ ಕೆಲವರು ಹುಬ್ಬೇರಿಸಿದ್ದಾರೆ.

ವಿಜಯ್ ಮತ್ತು ತ್ರಿಶಾ ನಡುವೆ ಈಗಾಗಲೇ ಹಲವು ಸಿನಿಮಾಗಳಿಂದ ಪರಿಚಯ ಮತ್ತು ಸ್ನೇಹ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಡಿವೋರ್ಸ್ ಸುದ್ದಿ ಚರ್ಚೆಯಲ್ಲಿರುವಾಗಲೇ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು ಇದೀಗ ಗಾಸಿಪ್‌ಗಳಿಗೆ ಇನ್ನಷ್ಟು ಪುಷ್ಠಿ ನೀಡಿದಂತಾಗಿದೆ. ಕಳೆದ ಒಂದು ವಾರದಿಂದ ವಿಜಯ್–ಸಂಗೀತಾ ದಂಪತಿಯ ಡಿವೋರ್ಸ್ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಜಕೀಯ ವಲಯದಲ್ಲಿಯೂ ಈ ವಿಚಾರ ಸದ್ದು ಮಾಡುತ್ತಿದೆ. ಕೆಲ ನಾಯಕರು ಇದನ್ನು ಅಸ್ತ್ರವಾಗಿ ಬಳಸಿಕೊಂಡು ವಿಜಯ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಆದರೆ ವಿಜಯ್ ಮಾತ್ರ ಈ ಎಲ್ಲ ಚರ್ಚೆಗಳಿಗೆ ತಲೆ ಕೆಡಿಸಿಕೊಳ್ಳದೆ ತಮ್ಮ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಜಯ್ – ತ್ರಿಶಾ ರಿಲೇಶನ್ ಶಿಪ್ ಸ್ಟೇಟಸ್ ಏನು..?

ಮುಚ್ಚುಮರೆ ಯಾಕೆ..? ಫ್ಯಾನ್ಸ್ ಪ್ರಶ್ನೆ, ಕಾಲೆಳೆದ ನೆಟ್ಟಿಗರು

ಈಗ ಮದುವೆ ಸಮಾರಂಭದಲ್ಲಿ ತ್ರಿಶಾ ಜೊತೆ ವಿಜಯ್ ಕಾಣಿಸಿಕೊಂಡಿರುವುದು ಮತ್ತಷ್ಟು ಕುತೂಹಲ ಹುಟ್ಟಿಸಿದೆ. ಕೆಲವರು “ಮುಚ್ಚುಮರೆ ಯಾಕೆ ?” ಎಂದು ಪ್ರಶ್ನಿಸುತ್ತಿದ್ದರೆ, ಇನ್ನೂ ಕೆಲವರು ಇದು ಕೇವಲ ಸ್ನೇಹದ ಸಂಬಂಧನ..? ಯಾಕೆ ಮನೆ ಹಾಳು ಮಾಡೋ ಬುದ್ದಿ ತ್ರಿಷಾಗೆ ಬಂದಿದೆ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ವೈರಲ್ ವಿಡಿಯೋಗಳ ನಡುವೆಯೇ ದಳಪತಿ ವಿಜಯ್ ಈ ಬಗ್ಗೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಸಿನಿ ಅಭಿಮಾನಿಗಳು ಕಾದು ನೋಡುತ್ತಿದ್ದಾರೆ.

 

 

Exit mobile version