ರಜನಿ-ಕಮಲ್‌ಗೆ ಅರುಣಾಚಲಂ ಡೈರೆಕ್ಟರ್ ಆ್ಯಕ್ಷನ್ ಕಟ್

50 ವರ್ಷಗಳ ಸ್ನೇಹದ ಪ್ರತೀಕ ಈ ‘ತಲೈವಾರ್-173’..!

Untitled design 2025 11 06t192714.786

ರಜನೀಕಾಂತ್-ಕಮಲ್ ಹಾಸನ್ ಗ್ಯಾಂಗ್‌ಸ್ಟರ್ ಮೂವಿಗೆ ಲೋಕೇಶ್ ಕನಕರಾಜ್ ಆ್ಯಕ್ಷನ್ ಕಟ್ ಹೇಳ್ತಾರೆ ಅನ್ನೋ ಮಾತಿತ್ತು. ಆದ್ರೀಗ ಆ ಇಬ್ಬರನ್ನ ಒಂದೇ ಪರದೆ ಮೇಲೆ ತೋರಿಸೋ ಅದ್ಭುತ ಅವಕಾಶ ಡೈರೆಕ್ಟರ್ ಸುಂದರ್ ಪಾಲಾಗಿದೆ. ಇಷ್ಟಕ್ಕೂ ಸಿನಿಮಾ ಯಾವಾಗ ಸೆಟ್ಟೇರುತ್ತೆ..? ರಿಲೀಸ್ ಯಾವಾಗ..? ಈ ಬಗ್ಗೆ ಕಮಲ್ ಹೇಳಿದ್ದೇನು ಅಂತೀರಾ..? ಇಲ್ಲಿದೆ ಲೇಟೆಸ್ಟ್ ಅಪ್ಡೇಟ್.

ರಜನಿ-ಕಮಲ್‌ಗೆ ಅರುಣಾಚಲಂ ಡೈರೆಕ್ಟರ್ ಆ್ಯಕ್ಷನ್ ಕಟ್

ಲೋಕೇಶ್ ಕನಕರಾಜ್ ಔಟ್.. ಸುಂದರ್‌ಗೆ ಲಾಟರಿ..!

ಒಬ್ಬರು ಸೂಪರ್ ಸ್ಟಾರ್ ರಜನೀಕಾಂತ್.. ಮತ್ತೊಬ್ಬರು ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್.. ಇಳಿವಯಸ್ಸಲ್ಲೂ ಯಂಗ್‌ಸ್ಟರ್‌ಗಳನ್ನ ನಾಚಿಸೋ ಸಿನಿಮೋತ್ಸಾಹ ಇವರದ್ದು. ಗ್ಯಾಂಗ್‌ಸ್ಟರ್ ಮೂವಿಗಳಿಗೆ ಇವ್ರು ಕೇರ್ ಆಫ್ ಅಡ್ರೆಸ್. ಇಂದಿಗೂ ಇವರಿಬ್ಬರ ಚಿತ್ರಗಳು ಅಂದ್ರೆ ನಿರ್ಮಾಪಕರುಗಳು ಕ್ಯೂ ನಿಲ್ತಾರೆ. ಫ್ಯಾನ್ಸ್ ಹಬ್ಬದಂತೆ ಅವುಗಳನ್ನ ಸೆಲೆಬ್ರೇಟ್ ಮಾಡ್ತಾರೆ. ಸದ್ಯ ರಜನೀಕಾಂತ್-ಕಮಲ್ ಹಾಸನ್ ಒಂದೇ ಚಿತ್ರದಲ್ಲಿ ನಟಿಸ್ತಿದ್ದಾರೆ.

ಯೆಸ್.. ತಲೈವಾರ್-173 ಸಿನಿಮಾ ಅಫಿಶಿಯಲಿ ಅನೌನ್ಸ್ ಆಗೇಬಿಡ್ತು. ಇಂಟರೆಸ್ಟಿಂಗ್ ಅಂದ್ರೆ ಈ ಸಿನಿಮಾಗೆ ಸ್ವತಃ ಕಮಲ್ ಹಾಸನ್ ಅವ್ರೇ ಬಂಡವಾಳ ಹಾಕ್ತಿದ್ದು, 50 ವರ್ಷಗಳ ನಮ್ಮ ಸ್ನೇಹ ಹಾಗೂ ಸೋದರತ್ವಕ್ಕೆ ಈ ಚಿತ್ರ ಸಂಕೇತವಾಗಲಿದೆ ಎಂದಿದ್ದಾರೆ ಕಮಲ್. ಈ ಹಿಂದೆ ಕಮಲ್ ಹಾಗೂ ರಜನಿಗೆ ವಿಕ್ರಮ್ & ಕೂಲಿ ಚಿತ್ರಗಳನ್ನ ಡೈರೆಕ್ಟ್ ಮಾಡಿದ್ದ ಲೋಕೇಶ್ ಕನಕರಾಜ್ ಈ ಸಿನಿಮಾ ಮಾಡ್ತಾರೆ ಎನ್ನಲಾಗಿತ್ತು. ಆದ್ರೀಗ ಅರುಣಾಚಲಂ ಡೈರೆಕ್ಟರ್ ಸುಂದರ್ ಸಿ ಪಾಲಾಗಿದೆ ಈ ಮೆಗಾ ಕಾಂಬೋಗೆ ಆ್ಯಕ್ಷನ್ ಕಟ್ ಹೇಳುವ ಸುವರ್ಣಾವಕಾಶ.

2027ರ ಸಂಕ್ರಾಂತಿಗೆ ರಿಲೀಸ್.. ಕಮಲ್ ಹೇಳಿದ್ದೇನು..?

50 ವರ್ಷಗಳ ಸ್ನೇಹದ ಪ್ರತೀಕ ಈ ‘ತಲೈವಾರ್-173’..!

ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಗಾಯಕರಾಗಿಯೂ ಗುರ್ತಿಸಿಕೊಂಡಿರೋ ಹಿರಿಯ ಚಿತ್ರಕರ್ಮಿ ಸುಂದರ್ ಈ ಇಬ್ಬರು ಲಿವಿಂಗ್ ಲೆಜೆಂಡ್ಸ್‌‌ಗೆ ಆ್ಯಕ್ಷನ್ ಕಟ್ ಹೇಳ್ತಿರೋದು ಇಂಟರೆಸ್ಟಿಂಗ್. ಸದ್ಯ ನಯನತಾರಾ ಹಾಗೂ ನಮ್ಮ ದುನಿಯಾ ವಿಜಯ್ ಜೊತೆ ಮೂಕುತಿ ಅಮ್ಮನ್-2 ಡೈರೆಕ್ಟ್ ಮಾಡ್ತಿದ್ದು, ಅದಾದ ಬಳಿಕ ಸುಂದರ್ ಈ ತಲೈವಾರ್-173 ಕೈಗೆತ್ತಿಕೊಳ್ಳಲಿದ್ದಾರಂತೆ. ಅಲ್ಲದೆ ರಜನೀಕಾಂತ್ ಕೂಡ ಜೈಲರ್-2ನಲ್ಲಿ ಬ್ಯುಸಿ ಅಗಿದ್ದು, ಅದರ ಜೊತೆ ಜೊತೆಗೆ ತಮ್ಮ 173ನೇ ಚಿತ್ರಕ್ಕೂ ಡೇಟ್ಸ್ ನೀಡಿದ್ದಾರೆ. ಅಂದಹಾಗೆ ರಜನಿ-ಕಮಲ್ ಕಮಾಲ್ ಮಾಡೋಕೆ ಸಜ್ಜಾಗಿರೋ ಈ ಸಿನಿಮಾ 2027ರ ಪೊಂಗಲ್‌ಗೆ ಅಂದ್ರೆ ಸಂಕ್ರಾಂತಿಗೆ ಪ್ರೇಕ್ಷಕರ ಮುಂದೆ ಬರಲಿದೆ.

 

Exit mobile version