ರಜತ್-ವಿನಯ್ ಜೈಲು ಪಾಲಾಗಿದ್ದಕ್ಕೆ ಈ ವಾರದ‘ಬಾಯ್ಸ್ vs ಗರ್ಲ್ಸ್’ ಶೋ ರದ್ದಾಗುತ್ತಾ?

Film 2025 03 29t122746.785

ರಜತ್ ಕಿಶನ್ ಮತ್ತು ವಿನಯ್ ಗೌಡ ಅವರು ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳಾಗಿದ್ದರು. ಆದರೆ, ಶೋ ಮುಗಿದ ನಂತರ ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು. ಇಂದು ಮಾರ್ಚ್ 29, 2025 ಅವರಿಗೆ ಕೋರ್ಟ್‌ನಿಂದ ಜಾಮೀನು ಸಿಕ್ಕಿದ್ದು, ಬಿಡುಗಡೆಯಾಗಿದ್ದಾರೆ. ಆದರೆ, ಅವರ ಅನುಪಸ್ಥಿತಿಯಿಂದ ಈ ವಾರದ ‘ಬಾಯ್ಸ್ vs ಗರ್ಲ್ಸ್’ ಶೋ ರದ್ದಾಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

‘ಬಾಯ್ಸ್ vs ಗರ್ಲ್ಸ್’ ಶೋ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಪ್ರಸಾರವಾಗುತ್ತಿತ್ತು. ಈ ಶೋದಲ್ಲಿ ವಿನಯ್ ಗೌಡ ಬಾಯ್ಸ್ ತಂಡದ ಕ್ಯಾಪ್ಟನ್ ಆಗಿದ್ದರೆ, ರಜತ್ ಕಿಶನ್ ಪ್ರಮುಖ ಸ್ಪರ್ಧಿಯಾಗಿದ್ದರು. ಶೋ ಮುಗಿದ ಬಳಿಕ, ಇಬ್ಬರೂ ಶೋಗೆ ಬಳಸಿದ ಮಚ್ಚನ್ನು ಹಿಡಿದು ರೀಲ್ಸ್ ಮಾಡಿದ್ದರು. ರಸ್ತೆಯಲ್ಲಿ ಅದನ್ನು ತೋರಿಸುತ್ತಾ ಮಿಂಚಿದ್ದು, ಕಾನೂನಿನ ಕೈಗೆ ಸಿಕ್ಕಿಬಿದ್ದರು. ಕೆಲವು ದಿನಗಳ ಕಾಲ ಜೈಲಿನಲ್ಲಿದ ಅವರು ಇಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಆದರೆ, ಈ ಘಟನೆಯಿಂದ ಶೋ ಮೇಲೆ ಗಂಭೀರ ಪರಿಣಾಮ ಬೀರಿದೆ. ಇಬ್ಬರು ಪ್ರಮುಖ ಸ್ಪರ್ಧಿಗಳು ಜೈಲಿನಲ್ಲಿದ್ದ ಕಾರಣ, ಶೋನಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಇದರಿಂದ ಈ ವಾರದ ಸಂಚಿಕೆ ರದ್ದಾಗುವ ಸಂಭವ ಇದೆಯೇ ಎಂಬ ಗೊಂದಲ ಮೂಡಿದೆ. ವಾಹಿನಿಯಿಂದ ಇದುವರೆಗೆ ಯಾವುದೇ ಸ್ಪಷ್ಟನೆ ಬಂದಿಲ್ಲ.

ವಿನಯ್ ಗೌಡ ಬಾಯ್ಸ್ ತಂಡದ ಕ್ಯಾಪ್ಟನ್ ಆಗಿದ್ದು, ರಜತ್ ಕೂಡ ತಂಡದ ಬಲವಾಗಿದ್ದರು. ಇಬ್ಬರೂ ಇಲ್ಲದಿದ್ದರೆ ತಂಡಕ್ಕೆ ದೊಡ್ಡ ಬಲ ಇಲ್ಲದಂತೆ ಆಗುತ್ತದೆ. ಈ ಕಾರಣದಿಂದ ಈ ವಾರದ ಶೋ ರದ್ದಾಗಬಹುದು ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಭಿಮಾನಿಗಳು ಈ ಬಗ್ಗೆ ತೀವ್ರ ಚರ್ಚೆಯಲ್ಲಿ ತೊಡಗಿದ್ದಾರೆ.

‘ಬಾಯ್ಸ್ vs ಗರ್ಲ್ಸ್’ ಶೋ ರದ್ದಾದರೆ ಆ ಸಮಯದಲ್ಲಿ ಏನು ಪ್ರಸಾರವಾಗಲಿದೆ ಎಂಬ ಪ್ರಶ್ನೆಗೆ ಉತ್ತರವಿದೆ. ಇಂದು (ಮಾರ್ಚ್ 29) ‘ಮಜಾ ಟಾಕೀಸ್’ ಮಹಾ ಸಂಚಿಕೆ ಪ್ರಸಾರವಾಗಲಿದೆ. ಅಂದರೆ, ಎರಡು ಎಪಿಸೋಡ್‌ಗಳು ಒಂದೇ ದಿನ ಬಿತ್ತರವಾಗಲಿವೆ. ಭಾನುವಾರ (ಮಾರ್ಚ್ 30) ಯುಗಾದಿ ಸಂಭ್ರಮದ ಪ್ರಯುಕ್ತ ದುನಿಯಾ ವಿಜಯ್ ಅವರು ನಟಿಸಿ, ನಿರ್ದೇಶಿಸಿರುವ ‘ಭೀಮ’ ಸಿನಿಮಾ ಪ್ರಸಾರವಾಗಲಿದೆ.

Exit mobile version