ಸೂರ್ಯ ಕರುಪ್ಪು ಖದರ್.. ಮತ್ತೆ ಮೈಮೇಲೆ ಕರಿಕೋಟು

ಅಂದು ಜೈ ಭೀಮ್.. ಇಂದು ಕರುಪ್ಪು.. ಅದೇ ಅನ್ಯಾಯ

Untitled design 2025 07 23t175227.765

50ನೇ ವಸಂತಕ್ಕೆ ಕಾಲಿಟ್ಟಿರೋ ತಮಿಳಿನ ಸೂಪರ್ ಸ್ಟಾರ್ ಸೂರ್ಯ, ನ್ಯಾಯಕ್ಕಾಗಿ ಮತ್ತೊಮ್ಮೆ ಕರಿಕೋಟು ಧರಿಸಿದ್ದಾರೆ. ಮಾತಿನಲ್ಲಿ ಹೇಳೋಕೆ ಕರಿಕೋಟು, ದಂಡಂ ದಶಗುಣಂ ಮೂಲಕ ಅರ್ಥೈಸೋಕೆ ಕರುಪ್ಪು ಅವತಾರ ತಾಳಿರೋ ಸೂರ್ಯ ಕುರಿತ ಸ್ಪೆಷಲ್ ಬರ್ತ್ ಡೇ ಖಬರ್ ನಿಮ್ಮ ಮುಂದೆ.

ಇದು ತಮಿಳಿನ ಕರುಪ್ಪು ಚಿತ್ರದ ಟೀಸರ್ ಝಲಕ್. ಅಬ್ಬಬ್ಬಾ.. ಸೂರ್ಯ ಮಾಸ್ ಖದರ್ ಈ ಸಿನಿಮಾದಲ್ಲಿ ಯಾವ ರೇಂಜ್‌ಗೆ ಇರಲಿದೆ ಅನ್ನೋದನ್ನ ಇದೊಂದು ಟೀಸರ್ ಪರಿಚಯಿಸ್ತಿದೆ ನೋಡಿ. ನಟ, ನಿರ್ದೇಶಕ ಆರ್.ಜೆ. ಬಾಲಾಜಿ ಆ್ಯಕ್ಷನ್ ಕಟ್ ಹೇಳಿರೋ ಕರುಪ್ಪು, ಟೈಟಲ್‌ಗೆ ತಕ್ಕನಾಗಿ ಮಾಸ್‌ಗೆ ಕೇರ್ ಆಫ್ ಅಡ್ರೆಸ್‌ನಂತಿದೆ.

ಔಟ್ ಅಂಡ್ ಔಟ್ ಆ್ಯಕ್ಷನ್ ಡ್ರಾಮಾ ಆಗಿರೋ ಕರುಪ್ಪುದಲ್ಲಿ ನಟ ಸೂರ್ಯ ಡಿಫರೆಂಟ್ ಶೇಡ್‌‌ಗಳಲ್ಲಿ ಕಾಣಸಿಗಲಿದ್ದಾರೆ. ಸರವಣನ್ ಅನ್ನೋ ವಕೀಲನ ಪಾತ್ರದಲ್ಲಿ ಅಭಿನಯಿಸಿರೋ ಸೂರ್ಯ, ಅನ್ಯಾಯದ ಪರ ಹೋರಾಡುವ ದಿಟ್ಟ ಲಾಯರ್‌‌ ಆಗಿ ಮಿಂಚಲಿದ್ದಾರೆ. ಅಂದಹಾಗೆ ಜೈ ಭೀಮ್ ಸಿನಿಮಾದಲ್ಲೂ ಇವರು ಲಾಯರ್ ರೋಲ್ ಮಾಡಿದ್ರು. ಅದಾದ ಬಳಿಕ ಇದೀಗ ಮತ್ತೊಮ್ಮೆ ನ್ಯಾಯಕ್ಕಾಗಿ ಧ್ವನಿ ಎತ್ತುವ ವಕೀಲನಾಗಿ ಕರಿಕೋಟು ಧರಿಸಿದ್ದಾರೆ.