ಮೂರು ವರ್ಷಗಳ ಬಳಿಕ ಮತ್ತೆ ಡೈರೆಕ್ಷನ್ ಕ್ಯಾಪ್ ತೊಟ್ಟು, ಆ್ಯಕ್ಷನ್ ಕಟ್ ಹೇಳೋಕೆ ಸಜ್ಜಾದ್ರು ಸ್ಯಾಂಡಲ್‌ವುಡ್‌ನ ಸೆನ್ಸೇಷನಲ್ ಡೈರೆಕ್ಟರ್ ಸೂರಿ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಕೈ ಜೋಡಿಸ್ತಿರೋ ಸೂರಿ, ಹಂಡ್ರೆಡ್ ಪರ್ಸೆಂಟ್ ಸುಕ್ಕಾ & ಶೂರ್ ಶಾಟ್ ಪ್ರಾಜೆಕ್ಟ್ ಮಾಡೋ ಧಾವಂತದಲ್ಲಿದ್ದಾರೆ. ಈ ಕುರಿತ ಸೂಪರ್ ಎಕ್ಸ್‌ಕ್ಲೂಸಿವ್ ಖಬರ್ ಇಲ್ಲಿದೆ.
- ಸೂರಿ-ಧ್ರುವ.. ಹೈ-ವೋಲ್ಟೇಜ್ ಕಾಂಬೋ ಸುಕ್ಕಾ ಪ್ರಾಜೆಕ್ಟ್
- ಮಾಸ್ ಹೀರೋ.. ಕಲ್ಟ್ ಡೈರೆಕ್ಟರ್.. 100% ಜಬರ್ದಸ್ತ್..!
- 3 ವರ್ಷಗಳ ನಂತ್ರ ಆ್ಯಕ್ಷನ್ ಕಟ್ ಹೇಳೋಕೆ ಸೂರಿ ಸಜ್ಜು
- ಕ್ರಿಮಿನಲ್ ಪ್ರೊಡ್ಯೂಸರ್ ಜೊತೆ ಧ್ರುವ ಸೆಕೆಂಡ್ ವೆಂಚರ್
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫ್ಯಾನ್ಸ್‌ಗೆ ಒಂದಲ್ಲ, ಎರಡಲ್ಲ ತ್ರಿಬಲ್ ಧಮಾಕ. ಇದೇ ಏಪ್ರಿಲ್ 30ಕ್ಕೆ ರೆಟ್ರೋ ಆ್ಯಕ್ಷನ್ ವೆಂಚರ್ ಕೆಡಿ ಸಿನಿಮಾ ತೆರೆಗೆ ಬರ್ತಿದೆ. ಜೋಗಿ ಪ್ರೇಮ್-ಧ್ರುವ ಜೋಡಿಯ ಈ ಸಿನಿಮಾ ಟೀಸರ್ ಹಾಗೂ ಸಾಂಗ್ಸ್‌ನಿಂದ ಸಂಥಿಂಗ್ ಸ್ಪೆಷಲ್ ಅನಿಸಿದ್ದು, ಇದೀಗ ಭರ್ಜರಿ ಪ್ರಮೋಷನ್ಸ್ ಜೊತೆ ವರ್ಲ್ಡ್‌ವೈಡ್ ತೆರೆಗಪ್ಪಳಿಸೋಕೆ ತುದಿಗಾಲಲ್ಲಿದೆ.
ಮತ್ತೊಂದೆಡೆ ಕೆಡಿ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ವೇಳೆ ಬಹದ್ದೂರ್ ಗಂಡು ಧ್ರುವ ಮತ್ತೊಂದು ಮೆಗಾ ಪ್ರಾಜೆಕ್ಟ್‌ಗೆ ಕೈ ಹಾಕಿದ್ದಾರೆ. ಅದೇ ಕ್ರಿಮಿನಲ್. ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ಹಾಗೂ ಧ್ರುವ ಬಹಳ ವರ್ಷಗಳ ನಂತ್ರ ಮತ್ತೆ ಜೋಡಿಯಾಗಿದ್ದು, ಕೆರೆಬೇಟೆ ಚಿತ್ರದ ಡೈರೆಕ್ಟರ್ ಸಾರಥ್ಯದಲ್ಲಿ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದೆ.
ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಶಿವಮೊಗ್ಗದಲ್ಲಿ ಬಹುತೇಕ ಶೂಟಿಂಗ್ ನಡೆದಿದ್ದು, ಬೆಂಗಳೂರಿನಲ್ಲಿ ಕೂಡ ಒಂದಷ್ಟು ಭಾಗದ ಚಿತ್ರೀಕರಣ ಮಾಡಲಾಗಿದೆ. ಅಂದಹಾಗೆ ಈ ಸಿನಿಮಾಗೆ ಪ್ರತಿಷ್ಟಿತ ಗೋಲ್ಡ್ ಮೈನ್ಸ್ ಕಂಪೆನಿಯ ಮನೀಶ್ ಶಾ ಬಂಡವಾಳ ಹೂಡಿದ್ದಾರೆ. ಇದೀಗ ಕೆಡಿ ರಿಲೀಸ್‌ಗೂ ಮೊದಲೇ, ಕ್ರಿಮಿನಲ್ ಶೂಟಿಂಗ್ ಕಂಪ್ಲೀಟ್ ಆಗುವ ಮುನ್ನವೇ ಧ್ರುವ ಜೊತೆ ಮತ್ತೊಂದು ನ್ಯೂ ಪ್ರಾಜೆಕ್ಟ್‌ಗೆ ಜೈ ಅಂದಿದೆ ಗೋಲ್ಡ್‌ಮೈನ್ಸ್ ಬ್ಯಾನರ್.
ಯೆಸ್.. ಕ್ರಿಮಿನಲ್ ಬಳಿಕ ಮತ್ತದೇ ನಿರ್ಮಾಪಕರ ಜೊತೆ ಧ್ರುವ ಸರ್ಜಾ ಸಿನಿಮಾ ಮಾಡೋಕೆ ಗ್ರೀನ್ ಸಿಗ್ನಲ್ ನೀಡಿದ್ದು, ಸ್ಯಾಂಡಲ್‌ವುಡ್‌ನ ಸಕ್ಸಸ್‌ಫುಲ್ ಚಿತ್ರಗಳ ಸೆನ್ಸೇಷನಲ್ ಡೈರೆಕ್ಟರ್ ದುನಿಯಾ ಸೂರಿ ಅದಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಇದು ಕ್ರೇಜಿಯೆಸ್ಟ್ ಕಾಂಬಿನೇಷನ್ ಆಗಲಿದ್ದು, ಮಾಸ್ ಹೀರೋ ಧ್ರುವ ಹಾಗೂ ಕಲ್ಟ್ ಡೈರೆಕ್ಟರ್ ಸೂರಿ ಒಂದಾಗ್ತಿರೋದು ಇಂಡಸ್ಟ್ರಿಯಲ್ಲಿ ದೊಡ್ಡ ಟಾಕ್ ಕ್ರಿಯೇಟ್ ಮಾಡಿದೆ.
ಅಂದಹಾಗೆ ಸೂರಿ ಸಿನಿಮಾಗಳ ಮೇಕಿಂಗ್ ಶೈಲಿ ಬಹಳ ವಿಭಿನ್ನವಾಗಿರಲಿದೆ. ಕಥೆ, ಪಾತ್ರಗಳು ಹಾಗೂ ನಿರೂಪಣಾ ಶೈಲಿ ಸಂಥಿಂಗ್ ಸ್ಪೆಷಲ್ ಆಗಿರಲಿದೆ. ಅದೇ ಕಾರಣದಿಂದ ಸೂರಿ ಅವ್ರ ಬಹುತೇಕ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್. 2023ರಲ್ಲಿ ಅಭಿಷೇಕ್ ಅಂಬರೀಶ್‌ಗೆ ಬ್ಯಾಡ್ ಮ್ಯಾನರ್ಸ್ ಸಿನಿಮಾನ ಡೈರೆಕ್ಟ್ ಮಾಡಿದ ಸೂರಿ, ಅದಾದ ಬಳಿಕ ನಾಮತ್ತೆ ಆಗಿಬಿಟ್ಟಿದ್ದರು. ಆದ್ರೀಗ ಒಂದೊಳ್ಳೆ ಬ್ಯಾಂಗಿಂಗ್ ಕಥೆ ಮೂಲಕ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.
ಕೆಲವೊಮ್ಮೆ ಕಾಂಬಿನೇಷನ್‌ಗಳು ಸಿಕ್ಕಾಪಟ್ಟೆ ಸೌಂಡ್ ಮಾಡುತ್ತವೆ. ಅದೇ ರೀತಿ ಧ್ರುವ-ಸೂರಿ ಕಾಂಬೋ ಹಂಡ್ರೆಡ್ ಪರ್ಸೆಂಟ್ ವರ್ಕೌಟ್ ಆಗಲಿದೆ ಅನ್ನೋದು ಸಿನಿಪಂಡಿತರ ಲೆಕ್ಕಾಚಾರವಾಗಿದೆ. ಸೂರಿ ಸಿನಿ ದುನಿಯಾಗೆ ಧ್ರುವ ಡ್ಯಾಶಿಂಗ್ ಎಂಟ್ರಿ ಕೊಡ್ತಿರೋದು ಮಾತ್ರ ಆ್ಯಕ್ಷನ್ ಪ್ರಿನ್ಸ್ ಕ್ಯಾಲಿಬರ್ ಮತ್ತಷ್ಟು ಹೆಚ್ಚಾಗಲಿದೆ. ಸೂರಿ ಅವರಲ್ಲಿರೋ ಸಿನಿಮಾ ಹಸಿವು ಎಂಥದ್ದು ಅನ್ನೋದು ಈ ಶೂರ್ ಶಾಟ್ ಸುಕ್ಕಾ ಪ್ರಾಜೆಕ್ಟ್‌ಗೆ ಸಾಕ್ಷಿ ಆಗಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
