OTTಗೆ ಸುಪ್ರೀಂ ನೋಟಿಸ್.. ದಾಟುವಂತಿಲ್ಲ ಬೌಂಡರಿ..!

ಇನ್ಮೇಲೆ ಓಟಿಟಿಗೂ ಸೆನ್ಸಾರ್.. ಹದ್ದು ಮೀರಿದ್ರೆ ಹುಷಾರ್‌

Untitled design 2025 04 30t140334.014

ಇನ್ಮೇಲೆ ಓಟಿಟಿಗಳಲ್ಲಿ ಮನಸೋ ಇಚ್ಚೆ ಕಂಟೆಂಟ್‌‌‌ನ ಪ್ರಸಾರ ಮಾಡುವಂತಿಲ್ಲ. ಅಶ್ಲೀಲ ಹಾಗೂ ಅಡಲ್ಟ್ ಕಂಟೆಂಟ್‌ಗಳಿಗೆ ಕಡಿವಾಣ ಹಾಕಲು ಸುಪ್ರೀಂ ತಾಕೀತು ಮಾಡಿದೆ. ದಿನಕ್ಕೊಂದು ಓಟಿಟಿ ಪ್ಲಾಟ್‌ಫಾರ್ಮ್‌ ಹುಟ್ಟಿಕೊಳ್ತಿದ್ದು, ಮಕ್ಕಳ ಮೇಲೆ ಅದು ಹೆಚ್ಚು ಪ್ರಭಾವ ಬೀರುತ್ತಿದೆ. ‌ಅದಕ್ಕೀಗ ಬ್ರೇಕ್ ಹಾಕೋಕೆ ಮುಂದಾಗಿದೆ ಸುಪ್ರೀಂ.

ಥಿಯೇಟರ್ ಅಂಗಳಕ್ಕೆ ಬರೋ ಪ್ರತೀ ಸಿನಿಮಾ, ಸೆನ್ಸಾರ್ ಬೋರ್ಡ್‌ನಲ್ಲಿ ಫಿಲ್ಟರ್ ಆಗಿ, ಕಂಟೆಂಟ್‌‌ಗೆ ತಕ್ಕನಾಗಿ ಸರ್ಟಿಫಿಕೆಟ್ ಪಡೆದು, ಬಿಗ್ ಸ್ಕ್ರೀನ್‌ಗೆ ಎಂಟ್ರಿ ಕೊಡ್ತಿತ್ತು. ಆದ್ರೆ ಓಟಿಟಿ ಅನ್ನೋದು ಹುಟ್ಟಿಕೊಂಡ ಬಳಿಕ ಅವುಗಳಿಗೆ ಕಂಗು ಲಗಾಮು ಇಲ್ಲದಂತಾಗಿದೆ. ಹೌದು.. ತಂತ್ರಜ್ಞಾನ ಬೆಳೆದಂತೆ ಇಂಡಿಯಾದಲ್ಲೂ ನೂರಾರು ಓಟಿಟಿ ಪ್ಲಾಟ್‌ಫಾರ್ಮ್‌ಗಳು ತಲೆ ಎತ್ತಿದವು. ಅದರಲ್ಲೂ ಕೊರೋನಾ ಸಮಯದಲ್ಲಿ ಅವು ಪ್ರೇಕ್ಷಕರಿಗೆ ಜಾಸ್ತಿ ಪರಿಚಿತ ಆಗಿಬಿಟ್ಟವು.

ADVERTISEMENT
ADVERTISEMENT

ಇತ್ತೀಚೆಗೆ ಅನ್‌ ಲಿಮಿಟೆಡ್ ಇಂಟರ್ನೆಟ್ ಸಿಗ್ತಿರೋ ಹಿನ್ನೆಲೆ, ಪ್ರತಿಯೊಬ್ಬ ಮೊಬೈಲ್ ಫೋನ್ ಹಾಗೂ ಮನೆಯಲ್ಲೂ ಓಟಿಟಿಗಳಿವೆ. ಸಬ್‌‌ಸ್ಕ್ರಿಪ್ಷನ್‌ಗೆ ಅನುಸಾರವಾಗಿ ಅವುಗಳು ಲಭ್ಯವಿದ್ದರೂ ಸಹ, ಟಿವಿ ಪ್ರೇಕ್ಷಕರಿಗಿಂತ ಓಟಿಟಿ ವೀಕ್ಷಕರೇ ಜಾಸ್ತಿ ಆಗಿಬಿಟ್ಟಿದ್ದಾರೆ. ಓಟಿಟಿಗಳಿಗೆ ಸೆನ್ಸಾರ್‌‌ನ ಅವಶ್ಯಕತೆ ಇಲ್ಲದಿರೋದ್ರಿಂದ, ಅದನ್ನೇ ಬಂಡವಾಳ ಆಗಿಸಿಕೊಂಡಿರೋ ಓಟಿಟಿ ಪ್ಲಾಟ್‌‌ಫಾರ್ಮ್ಸ್‌, ಫಿಲ್ಟರ್‌ ಇಲ್ಲದೆ ಕಂಟೆಂಟ್‌‌ನ ಪ್ರಸಾರ ಮಾಡ್ತಿವೆ.

ಮಕ್ಕಳು ಹಾಗೂ ವಯಸ್ಕರ ಮೇಲೆ ಪ್ರಭಾವ ಬೀರುವಂತಹ ಅಶ್ಲೀಲ, ಅಸಹಜ ಲೈಂಗಿಕ ದೃಶ್ಯಗಳು, ಅಶ್ಲೀಲ ಶಬ್ಧಗಳು ಎತೇಚ್ಚವಾಗಿ ಬಳಕೆ ಆಗ್ತಿದ್ದ ಸಿನಿಮಾ, ವೆಬ್ ಸೀರೀಸ್‌‌ಗಳು ಓಟಿಟಿಗಳಲ್ಲಿ ಪ್ರಸಾರ ಆಗ್ತಿವೆ. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಸಿಲ್ಲಿಕೆ ಆಗಿತ್ತು. ನ್ಯಾಯಮೂರ್ತಿ ಬಿ ಅರ್ ಗವಾಯಿ ಹಾಗೂ ಅಗಸ್ಟಿನ್ ಜಾರ್ಜ್ ಮಸಿಹ್ ನೇತೃತ್ವದ ಪೀಠ ಅದನ್ನು ವಿಚಾರಣೆ ನಡೆಸಿ, ಇನ್ಮೇಲೆ ಓಟಿಟಿ ಕಂಟೆಂಟ್ ಕೂಡ ಸೆನ್ಸಾರ್‌ ಆಗಬೇಕು ಅನ್ನೋದನ್ನ ಸ್ಪಷ್ಟಪಡಿಸಿದೆ.

ಇಂಡಿಯಾದಲ್ಲಿ ಅಮೆಜಾನ್, ನೆಟ್‌‌ಫ್ಲಿಕ್ಸ್, ಆಹಾ, ಸೋನಿಲೈವ್, ಉಲ್ಲು, ಆಲ್ಟ್, ಟ್ವಿಟರ್, ಫೇಸ್‌‌ಬುಕ್, ಇನ್ಸ್‌ಟಾ, ಯೂಟ್ಯೂಬ್ ಸೇರಿದಂತೆ ಎಲ್ಲಾ ಓಟಿಟಿ ಹಾಗೂ ಸೋಶಿಯಲ್ ಮೀಡಿಯಾ ವೇದಿಕೆಗಳಿಗೆ ನೋಟಿಸ್ ನೀಡಿದೆ ಸುಪ್ರೀಂ. ಮಿರ್ಜಾಪುರ್, ಸ್ಕ್ವಿಡ್ ಗೇಮ್, ಗ್ಯಾಂಗ್ಸ್ ಆಫ್ ವಸೀಪುರ್ ವೆಬ್ ಸೀರೀಸ್‌ಗಳು ಸೇರಿದಂತೆ ಸಾಕಷ್ಟು ಸಿನಿಮಾಗಳು ಕೂಡ ಓಟಿಟಿಗೆ ಅಂತಲೇ ತಯಾರಾಗ್ತಿದ್ದವು. ಅವೆಲ್ಲವುಗಳ ಮೇಲೆ ಈಗ ಸುಪ್ರೀಂ ಹದ್ದಿನ ಕಣ್ಣು ಇಟ್ಟಿದೆ. ಸೋ.. ಮುಂದಿನ ದಿನಗಳಲ್ಲಿ ಇದು ಎಷ್ಟರ ಮಟ್ಟಿಗೆ ಎಫೆಕ್ಟೀವ್ ಆಗಿ ಜಾರಿ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version