ಜೈಲರ್-2 ಶೂಟಿಂಗ್‌ಗೆ ಫುಲ್‌‌ಸ್ಟಾಪ್..ನೆಮ್ಮದಿಯತ್ತ ರಜನಿ

ರಸ್ತೆ ಬದಿ ಊಟ..ಸ್ನೇಹ ಕೂಟ..ಶ್ರೀ ಸಾಮಾನ್ಯನಂತೆ ಸುತ್ತಾಟ

Web (3)

ಸೂಪರ್ ಸ್ಟಾರ್ ರಜನೀಕಾಂತ್‌ ವಯಸ್ಸು 74. ಆದ್ರೆ ಅವ್ರ ಸಿನಿಮೋತ್ಸಾಹ ಹಾಗೂ ಜೀವನೋತ್ಸಾಹ ಮಾತ್ರ 24ರ ಹರೆಯದವರಂತಿದೆ. ಅದಕ್ಕೆ ಕಾರಣ ಹಿಮಾಲಯದಲ್ಲಿರೋ ಬಾಬಾಗಳು, ಗುಹೆಗಳು, ಅಲ್ಲಿನ ಬೇರಿನ ನೀರು. ಸದ್ಯ ಜೈಲರ್-2 ಶೂಟಿಂಗ್‌ಗೆ ಫುಲ್‌‌ಸ್ಟಾಪ್ ಇಟ್ಟು, ಹಿಮಾಲಯ ರೌಂಡ್ಸ್ ಹಾಕ್ತಿರೋ ಸ್ಟೈಲ್ ಐಕಾನ್‌‌‌ ಅಸಲಿ ಶಕ್ತಿಯ ಮೂಲವನ್ನು ಪರಿಚಯಿಸ್ತೀವಿ ಬನ್ನಿ.

ಸ್ಟೈಲ್ ಐಕಾನ್ ರಜನೀಕಾಂತ್‌‌ಗೆ ಈಗ ವಯಸ್ಸು 74 ಅಂದ್ರೆ ನೀವು ಶಾಕ್ ಆಗ್ತೀರಾ. ಈಗಲೂ 24ರ ಹರೆಯದ ಯೂತ್ ರೀತಿ ಸದಾ ಲವಲವಿಕೆಯಿಂದ ಇರೋ ತಲೈವಾಗೆ ವಿಶ್ವದ ಮೂಲೆ ಮೂಲೆಯಲ್ಲಿ ಅಭಿಮಾನಿ ಬಳಗವಿದೆ. ಅವರ ವಯಸ್ಸಿನಂತೆ ಸಿನಿಮಾಗಳ ಸಂಖ್ಯೆ ಕೂಡ ಹೆಚ್ಚಾಗ್ತಾ ಹೋಗ್ತಿದೆ. ಆದ್ರೆ ಅವ್ರ ಜೀವನೋತ್ಸಾಹ ಆಗಲಿ ಅಥ್ವಾ ಸಿನಿಮೋತ್ಸಾಹ ಆಗಲಿ ಕಿಂಚಿತ್ತೂ ಕುಂದಿಲ್ಲ. ಅದಕ್ಕೆ ಬ್ಯಾಕ್ ಟು ಬ್ಯಾಕ್ ಅವರು ಮಾಡ್ತಿರೋ ಸಿನಿಮಾಗಳು ಹಾಗೂ ಅವುಗಳ ಸಕ್ಸಸ್ ಕಣ್ಮುಂದೆಯೇ ಇದೆ.

ಹಿಮಾಲಯ ಗುಹೆ, ಬಾಬಾಗಳ ಜೊತೆ ತಲೈವಾ ರಜನಿ ತಲ್ಲೀನ

ಋಷಿ ಮುನಿಗಳ ಭೇಟಿ.. ಅಲ್ಲಿನ ಬೇರುಗಳ ಸಾರದ ನೀರಿನ ಶಕ್ತಿ

ರಜನೀಕಾಂತ್‌‌ಗೆ ಹಣದ ಅವಶ್ಯಕತೆಯಿಲ್ಲ. ಸ್ಟಾರ್‌‌ಡಮ್‌ನ ಹೆಚ್ಚಿಸಿಕೊಳ್ಳೋ ಯಾವುದೇ ಇರಾದೆ ಕೂಡ ಇಲ್ಲ. ಮಕ್ಕಳು, ಮೊಮ್ಮಕ್ಕಳು ಕಾಲ್ ಮೇಲೆ ಕಾಲು ಹಾಕಿಕೊಂಡು ಕೂತು ತಿನ್ನುವಷ್ಟು ಈಗಾಗ್ಲೇ ದುಡಿದುಬಿಟ್ಟಿದ್ದಾರೆ. ಇತ್ತೀಚೆಗೆ ಕೂಲಿ ಸಿನಿಮಾ ಬಂತು. ಅದು ಕೂಡ ಬಾಕ್ಸ್ ಆಫೀಸ್‌‌ನಲ್ಲಿ ನೂರಾರು ಕೋಟಿ ಲೂಟಿ ಮಾಡಿತು. ಇದೀಗ ಜೈಲರ್-2 ಸಿನಿಮಾದ ಶೂಟಿಂಗ್ ಶುರು ಮಾಡಿದ್ದಾರೆ. ನೆಲ್ಸನ್ ಜೈಲರ್-2ಗಾಗಿ ಬಿಗ್ ಪ್ಲ್ಯಾನ್ ಮಾಡಿದ್ದು, ಚಿತ್ರೀಕರಣ ಭರದಿಂದ ಸಾಗ್ತಿದೆ.

ಆದ್ರೆ ತಲೈವಾ ರಜನೀಕಾಂತ್ ಮಾತ್ರ ನನಗೊಂದು ಬ್ರೇಕ್ ಬೇಕು ಅಂತ ಶೂಟಿಂಗ್‌ಗೆ ಫುಲ್‌‌ಸ್ಟಾಪ್ ಇಟ್ಟು, ನೆಮ್ಮದಿಯನ್ನ ಹುಡುಕಿಕೊಂಡು ಹಿಮಾಲಯದತ್ತ ಹೊರಟಿದ್ದಾರೆ. ತನ್ನ ಅತ್ಯಾಪ್ತ ಗೆಳೆಯರ ಬಳಗವನ್ನು ಕಟ್ಟಿಕೊಂಡು, ಶ್ರೀಸಾಮಾನ್ಯನಂತೆ ತಾನು ನಂಬುವ ಹಿಮಾಲಯದಲ್ಲಿರೋ ಬಾಬಾಗಳು, ಗುಹೆಗಳು, ಅದರಲ್ಲಿರೋ ಸನಾತನಿಗಳನ್ನ ಹುಡುಕಿ, ಅವರೊಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ದೊಡ್ಡ ಸೂಪರ್ ಸ್ಟಾರ್ ಅನ್ನೋ ಅಹಂ ಇಲ್ಲ. ದೊಡ್ಡ ಪಟಾಲಂ ಇಲ್ಲ. ರಸ್ತೆ ಬದಿಯೇ ಊಟ, ಅಲ್ಲಲ್ಲಿ ಸ್ನೇಹಿತರ ಜೊತೆ ಮಾತುಕತೆಗೊಂದು ಸಣ್ಣ ಕೂಟ, ಹಿಮಾಲಯ ಸುತ್ತಾಟ.

ಜೈಲರ್-2 ಶೂಟಿಂಗ್‌ಗೆ ಫುಲ್‌‌ಸ್ಟಾಪ್.. ನೆಮ್ಮದಿಯತ್ತ ರಜನಿ

ರಸ್ತೆ ಬದಿ ಊಟ.. ಸ್ನೇಹ ಕೂಟ.. ಶ್ರೀಸಾಮಾನ್ಯನಂತೆ ಸುತ್ತಾಟ

ಅಂದಹಾಗೆ ರಜನೀಕಾಂತ್‌ರ ಆಲ್‌ ಟೈಂ ಹಿಟ್ಸ್ ಮುತ್ತು, ಬಾಬಾ, ಭಾಷಾ ಚಿತ್ರಗಳಲ್ಲಿ ಅವರಿಗೆ ಆ ದೈವದ ಮೇಲೆ ಇರುವ ಭಕ್ತಿ ಎಂಥದ್ದು ಅನ್ನೋದನ್ನ ನೋಡಬಹುದು. ಅದ್ರಲ್ಲೂ ಹಿಮಾಲಯಕ್ಕೆ ಆಗಾಗ ಹೋಗಿ, ಅಲ್ಲಿ ಋಷಿ ಮುನಿಗಳು ನೀಡುವ ಬೇರುಗಳ ನೀರನ್ನ ಕುಡಿದು ಬರ್ತಾರೆ. ಗುಹೆಗಳಲ್ಲಿ ಸಿಕ್ಕಾಪಟ್ಟೆ ಧ್ಯಾನ ಮಾಡ್ತಾರೆ. ನಂಬಿದ ಆ ಆಚಾರಗಳನ್ನ ದಶಕಗಳಿಂದ ಪಾಲಿಸ್ತಾ ಬರ್ತಿದ್ದಾರೆ ತಲೈವಾ. ಅದೇ ಅವರ ಸಕ್ಸಸ್‌‌ನ ಗುಟ್ಟು. ಅದೇ ಅವರ ಆಯುರ್, ಆಯುಷ್ಯದ ಗುಟ್ಟು. ಅದೇ ಅವ್ರ ಜೀವನೋತ್ಸಾಹದ ಅಸಲಿ ರಹಸ್ಯ ಅಂತ ಸಾಕಷ್ಟು ಬಾರಿ ಅವರು ಹಾಗೂ ಅವ್ರನ್ನ ಹತ್ತಿರದಿಂದ ಬಲ್ಲಂತಹ ಅತ್ಯಾಪ್ತರು ಹೇಳ್ತಿರ್ತಾರೆ.

ಮನುಷ್ಯ ದೊಡ್ಡವನಾಗುತ್ತಾ ಆಗುತ್ತಾ ಮಾಗಬೇಕಂತೆ. ಹಾಗೆ ಮಾಗಿ, ಇತರರಿಗೂ ಮಾದರಿ ಆಗ್ತಿರೋ ಮಹಾನ್ ಚೇತನ ರಜನೀಕಾಂತ್. ಸರಳತೆಯ ಸಾರ್ವಭೌಮನಾಗಿ ರಜನೀಕಾಂತ್, ಇಂದಿನ ಯಂಗ್‌ಸ್ಟರ್ಸ್‌ಗೆ ಸ್ಫೂರ್ತಿ ಆಗಿದ್ದಾರೆ. ಡೈರೆಕ್ಟರ್‌‌ಗಳು ಅವರೊಟ್ಟಿಗೆ ಕೆಲಸ ಮಾಡೋಕೆ ಕ್ಯೂ ನಿಲ್ತಾರೆ. ಅಂತಹ ಸರಳ, ಸಾಕಾರ ಮೂರ್ತಿ ರಜನೀಕಾಂತ್. ನಮ್ಮ ಕನ್ನಡದಿಂದ ತಮಿಳುನಾಡಿಗೆ ಹೋಗಿ, ಅಲ್ಲೊಂದು ಮಹಾ ಸಿನಿ ಸಾಮ್ರಾಜ್ಯ ಕಟ್ಟಿ, ಇಡೀ ವಿಶ್ವ ಸಿನಿದುನಿಯಾ ಹೆಮ್ಮೆ ಪಡುವಂತಹ ಚಿತ್ರಗಳನ್ನ ನೀಡಿದ ಗರಿಮೆ ಅವರಿಗಿದೆ. ಹಿಮಾಲಯದಲ್ಲಿ ಅವ್ರು ಕಂಡುಕೊಂಡ ಆ ದೈವ ಶಕ್ತಿಯ ಅನುಗ್ರಹ ಸದಾ ಅವರ ಮೇಲಿರಲಿ ಅನ್ನೋದು ಅವ್ರ ಅಭಿಮಾನಿಗಳ ಆಶಯ.

Exit mobile version