ಆಲ್ ಇಂಡಿಯಾ ಕಟೌಟ್ ಕಿಚ್ಚನ ಮ್ಯಾಕ್ಸ್ ರೀತಿ ಆಗಲ್ಲ ಮಾರ್ಕ್. ಯಾಕಂದ್ರೆ ಪಂಚಭಾಷೆಯಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ತಯಾರಾಗ್ತಿದೆ ಮಾರ್ಕ್. ಈ ವರ್ಷಾಂತ್ಯಕ್ಕೆ ಬರ್ತಿರೋ ಮಾರ್ಕ್ ಚಿತ್ರ ಬರೋಬ್ಬರಿ 137 ಲೊಕೇಷನ್ಸ್‌ನಲ್ಲಿ 150ಕ್ಕೂ ಅಧಿಕ ಆರ್ಟಿಸ್ಟ್‌ಗಳಿಂದ ಜಸ್ಟ್ 150 ದಿನದಲ್ಲಿ ಸಿದ್ಧವಾಗಿದೆ. ಆನ್ ಸ್ಪಾಟ್ ಡಬ್ಬಿಂಗ್ ಮಾಡಿರೋ ಕಿಚ್ಚ ಕನ್ನಡದ ಜೊತೆ ಬೇರೆ ಯಾವೆಲ್ಲಾ ಭಾಷೆಗಳಲ್ಲಿ ತಮಗೆ ತಾವೇ ವಾಯ್ಸ್ ಡಬ್ ಮಾಡಿದ್ದಾರೆ ಅನ್ನೋದ್ರ ಸೂಪರ್ ಎಕ್ಸ್‌ಕ್ಲೂಸಿವ್ ಸ್ಟೋರಿ ಇಲ್ಲಿದೆ. ಜಸ್ಟ್ ವಾಚ್.
- 137 ಲೊಕೇಷನ್ಸ್.. 150 ಆರ್ಟಿಸ್ಟ್.. 150 ಡೇಸ್ ಮಾರ್ಕ್
- ಆನ್ ಸ್ಪಾರ್ಟ್ ಡಬ್ಬಿಂಗ್.. ತೆಲುಗು, ತಮಿಳಿಗೂ ಕಿಚ್ಚನ ಕಂಠ
- ಡಿಸೆಂಬರ್ 25ಕ್ಕೆ 5 ಭಾಷೆಯಲ್ಲಿ ಮಾರ್ಕಂಡೇಯ ಮಿಂಚು
- ಬಿಗ್‌ಬಾಸ್, ಮದ್ವೆ, ಮಾರ್ಕ್ ನಡುವೆ ಕಿಚ್ಚ CCL ಪ್ರಾಕ್ಟೀಸ್
ಬಬ್ಬರ್ ಶೇರ್ ಸುದೀಪ್ ನಟನೆಯ ಮಾರ್ಕ್ ಸಿನಿಮಾದ ದಾದಾ ಯಾರ್ ಗೊತ್ತಾ ಸಾಂಗ್ ಹಾಗೂ ಎರಡು ಟೀಸರ್‌ಗಳು ಬಿಟ್ರೆ ಬೇರೇನೂ ಕಂಟೆಂಟ್ ರಿವೀಲ್ ಆಗಿಲ್ಲ. ಆದ್ರೂ ಕೂಡ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಅದಕ್ಕೆ ಕಾರಣ ಮ್ಯಾಕ್ಸ್ ಬ್ಲಾಕ್ ಬಸ್ಟರ್ ಹಿಟ್ ಆಗಿರೋದು. ಅದೇ ಡೈರೆಕ್ಟರ್ ವಿಜಯ್ ಕಾರ್ತಿಕೇಯ ಜೊತೆ ಮಾರ್ಕ್ ಸಿನಿಮಾ ಮಾಡಿರೋದು. ಸದ್ಯ ನಮ್ಮ ಗ್ಯಾರಂಟಿ ನ್ಯೂಸ್ ಮಾರ್ಕ್ ಚಿತ್ರದ ಒಂದಷ್ಟು ಟಾಪ್ ಸೀಕ್ರೆಟ್ಸ್‌ನ ಎಕ್ಸ್‌ಕ್ಲೂಸಿವ್ ಆಗಿ ಕನ್ನಡಿಗರಿಗೆ ಪರಿಚಯಿಸ್ತಿದೆ.
ಹೌದು.. ಮಾರ್ಕ್ ಸಿನಿಮಾ ಒಬ್ಬ ದೊಡ್ಡ ಸೂಪರ್ ಸ್ಟಾರ್ ಮೂಲಕ ಕೇವಲ 150 ದಿನದಲ್ಲಿ ಕನ್ನಡ ಸೇರಿದಂತೆ ಬರೋಬ್ಬರಿ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ರೂಪುಗೊಂಡಿದೆ. ಸುಮಾರು 150ಕ್ಕೂ ಅಧಿಕ ಆರ್ಟಿಸ್ಟ್‌ಗಳಿರೋ ಈ ಮಾರ್ಕ್ ಚಿತ್ರ 137ಕ್ಕೂ ಅಧಿಕ ಲೊಕೇಷನ್ಸ್‌ನಲ್ಲಿ ಚಿತ್ರೀಕರಣಗೊಂಡಿದೆ ಅಂದ್ರೆ ನೀವು ನಂಬಲೇಬೇಕು. ಅಲ್ಲದೆ, ಸುದೀಪ್ ಅವರು ಶೂಟಿಂಗ್ ಸೆಟ್‌ನಲ್ಲಿ ಆನ್‌ಸ್ಪಾಟ್ ಡಬ್ಬಿಂಗ್ ಕೂಡ ಮಾಡಿ ಮುಗಿಸಿದ್ದಾರೆ.
ಮೊಬೈಲ್ ಡಬ್ಬಿಂಗ್ ಸ್ಟುಡಿಯೋ ಮೂಲಕ ಕ್ಯಾರವ್ಯಾನ್‌ನಂತೆ ಡಬ್ಬಿಂಗ್ ವೆಹಿಕಲ್ ಕೂಡ ಶೂಟಿಂಗ್ ಸೆಟ್‌ನಲ್ಲಿ ಇರ್ತಿತ್ತು. ಹಾಗಾಗಿಯೇ ಮಾರ್ಕ್ ಚಿತ್ರ ಇಷ್ಟು ಬೇಗ ಕಂಪ್ಲೀಟ್ ಆಗೋಕೆ ಕಾರಣವಾಗಿದೆ. ಕನ್ನಡದ ಜೊತೆಗೆ ಇದೇ ಫಸ್ಟ್ ಟೈಂ ಕಿಚ್ಚ ಸುದೀಪ್ ಅವರು ತಮಿಳು ಹಾಗೂ ತೆಲುಗು ಭಾಷೆಗಳಿಗೂ ವಾಯ್ಸ್ ಡಬ್ ಮಾಡಿರೋದು ಮತ್ತೊಂದು ಹೈಲೈಟ್. ಸದ್ಯ ಬಿಗ್‌ಬಾಸ್, ಮಾರ್ಕ್ ಚಿತ್ರದ ಕೆಲಸಗಳು ಹಾಗೂ ಅಕ್ಕನ ಮಗ ಶಾರಣ್ ಮದ್ವೆ ಕಾರ್ಯಗಳ ನಡುವೆ ಸಿಸಿಎಲ್ ಮುಂದಿನ ಸೀಸನ್‌ಗಾಗಿ ಕ್ರಿಕೆಟ್ ಪ್ರಾಕ್ಟೀಸ್ ಕೂಡ ಶುರು ಮಾಡಿದ್ದಾರೆ.
ಇವೆಲ್ಲಾ ವಿಚಾರಗಳಿಗೆ ಸಂಬಂಧ ಪಟ್ಟಂತೆ ಕಿಚ್ಚನ ವಾಣಿಯಾಗಿ ಅವ್ರ ಅತ್ಯಾಪ್ತರಾಗಿರೋ ನಟ, ನಿರ್ದೇಶಕ, ಬರಹಗಾರ ಚಕ್ರವರ್ತಿ ಚಂದ್ರಚೂಡ್ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಅದನ್ನ ಅವ್ರ ಬಾಯಿಂದಲೇ ಒಮ್ಮೆ ಕೇಳಿ.
ಅಂದಹಾಗೆ ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾಗಿ ಒಂದಲ್ಲ ಎರಡಲ್ಲ ಮೂರು ಸ್ಟಂಟ್‌ಗಳನ್ನ ಹಾಕಿಸಿಕೊಂಡು, ಸಾವಿನ ಕದ ತಟ್ಟಿ ಬಂದಿರೋ ಚಕ್ರವರ್ತಿ ಚಂದ್ರಚೂಡ್, ಆ ಸಾವು ಅನ್ನೋದೇನಾದ್ರೂ ಬಂದ್ರೆ ಆ ಸರತಿ ಸಾಲಿನಲ್ಲಿ ನಾನೇ ಮೊದಲು ಹೋಗಬೇಕು ಎಂದಿದ್ದಾರೆ.
ಒಟ್ಟಾರೆ ಮಾರ್ಕ್ ಚಿತ್ರದ ಭರ್ಜರಿ ಪ್ರಮೋಷನ್ಸ್ ಶುರುವಾಗಿದ್ದು, ಚಂದ್ರಚೂಡ್ ಹಾಗೂ ಕಿಚ್ಚನ ನಡುವಿನ ಬಾಂಧವ್ಯ ಎಂಥದ್ದು ಅನ್ನೋದಕ್ಕೆ ಇದು ಸಾಕ್ಷಿ ಆಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
