ಒಂದೇ ತಟ್ಟೆಯಲ್ಲಿ ಉಂಡು, ಒಂದೇ ಬೆಡ್‌ನಲ್ಲಿ ಮಲಗೋ ಮೂಲಕ ವಿಷ್ಣು-ಅಂಬಿ ಫ್ರೆಂಡ್‌ಶಿಪ್ ಪರಂಪರೆಯನ್ನ ಮುಂದುವರೆಸೋ ಅಂತಹ ಕುಚಿಕುಗಳು ಅಂತಲೇ ಫೇಮಸ್ ಆಗಿದ್ರು ಕಿಚ್ಚ-ದಚ್ಚು. ಇಷ್ಟಕ್ಕೂ ಇವರಿಬ್ಬರೂ ದೂರ ಆಗೋಕೆ ಕಾರಣ ಏನು..? ಇವ್ರ ನಡುವೆ ಎಷ್ಟು ಗಾಢವಾದ ಸ್ನೇಹ ಬಾಂಧವ್ಯ ಇತ್ತು..? ಅದಕ್ಕೆ ಏನೆಲ್ಲಾ ಸಾಕ್ಷಿ ಆಗಿತ್ತು ಅನ್ನೋದನ್ನ ಎಳೆ ಎಳೆಯಾಗಿ ಬಿಚ್ಚಿಡ್ತೀವಿ ನೋಡಿ..
- ಮೆಜೆಸ್ಟಿಕ್ ಆಫರ್ ಕಿಚ್ಚನಿಗೆ.. ದಚ್ಚುನ ರೆಫರ್ ಮಾಡಿದ್ದ ಕಿಚ್ಚ
- ಕೋಪಗೊಂಡ ದಾಸನಿಂದ ಫ್ರೆಂಡ್‌ಶಿಪ್ ಬ್ರೇಕಪ್ ಪೋಸ್ಟ್
- ‘ಸಾರಥಿ’ ವೇಳೆ ಸುದೀಪ್ ಸಹಾಯ.. ದಿನಕರ್ ಮೆಚ್ಚುಗೆ..!
- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣಗೆ ಕಿಚ್ಚನ ಖಡಕ್ ವಾಯ್ಸ್
ಸುದೀಪ್ ಹಾಗೂ ದರ್ಶನ್ ಇಬ್ಬರ ವಯಸ್ಸು, ಚಿತ್ರರಂಗದ ಎಂಟ್ರಿ ಬಹುತೇಕ ಒಂದೇ ಆಗಿದೆ. ವಯಸ್ಸಲ್ಲಿ ದಚ್ಚುಗಿಂತ ಕಿಚ್ಚ ಕೊಂಚ ಸೀನಿಯರ್. ಆದ್ರೆ ಇಬ್ಬರೂ ಸಿನಿಮಾ ಕರಿಯರ್‌ನ ಒಟ್ಟೊಟ್ಟಿಗೆ ಶುರು ಮಾಡ್ತಾರೆ. 1997ರಲ್ಲೇ ತಾಯವ್ವ ಚಿತ್ರದಿಂದ ಶುರು ಮಾಡಿದ ಸುದೀಪ್, ಪ್ರತ್ಯರ್ಥ ಚಿತ್ರಗಳು ಸೇರಿದಂತೆ ಸಾಕಷ್ಟು ಸೈಕಲ್ ಹೊಡೆದಿದ್ರು. ಕೊನೆಗೆ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಸ್ಪರ್ಶ ಚಿತ್ರದಿಂದ ನಾಯಕನಟನಾಗಿ ಸ್ಯಾಂಡಲ್‌ವುಡ್‌ಗೆ ಇಂಟ್ರಡ್ಯೂಸ್ ಆದ್ರು ಕಿಚ್ಚ.
ಅತ್ತ ದರ್ಶನ್ ಕೂಡ ತಂದೆ ದೊಡ್ಡ ಸ್ಟಾರ್ ನಟ ಆಗಿದ್ರೂ ಸಹ, ಲೈಟ್ ಬಾಯ್, ಕ್ಯಾಮೆರಾ ಅಸಿಸ್ಟೆಂಟ್ ಆಗಿದ್ದುಕೊಂಡು, ಸೀರಿಯಲ್, ಸಿನಿಮಾಗಳಲ್ಲಿ ಸಣ್ಣಪುಟ್ಟ ರೋಲ್‌ಗಳನ್ನ ಮಾಡ್ಕೊಂಡು ಚಿತ್ರರಂಗಕ್ಕೆ ನಿಧಾನಕ್ಕೆ ಎಂಟ್ರಿ ಕೊಟ್ರು. ಕಿಚ್ಚ ಎಂಟ್ರಿ ಕೊಟ್ಟ ಅದೇ 1997ರಲ್ಲೇ ದರ್ಶನ್ ಕೂಡ ಮಹಾಭಾರತದ ಮೂಲಕ ಬಣ್ಣ ಹಚ್ತಾರೆ. ಆದ್ರೆ ಹೀರೋ ಆಗೋಕೆ 2002ರವರೆಗೂ ಅದು ಸಮಯ ತೆಗೆದುಕೊಳ್ಳುತ್ತೆ. ಹೌದು.. ಮೆಜೆಸ್ಟಿಕ್ ಸಿನಿಮಾ ದರ್ಶನ್ ಹೀರೋ ಆಗಿ ನಟಿಸಿದ ಚೊಚ್ಚಲ ಚಿತ್ರ.
ದರ್ಶನ್ ಮೆಜೆಸ್ಟಿಕ್ ಚಿತ್ರದಲ್ಲಿ ಹೀರೋ ಆಗೋ ಅಷ್ಟರಲ್ಲಾಗಲೇ ಸುದೀಪ್ ಹುಚ್ಚ, ವಾಲಿ, ಚಂದು ಅನ್ನೋ ಸಿನಿಮಾಗಳನ್ನ ಮಾಡಿದ್ರು. ಇಂಟರೆಸ್ಟಿಂಗ್ ವಿಷಯ ಏನಪ್ಪಾಂದ್ರೆ ಮೆಜೆಸ್ಟಿಕ್ ಆಫರ್ ದಚ್ಚುಗಿಂತ ಮೊದಲು ಸುದೀಪ್‌ಗೇ ಬಂದಿತ್ತಂತೆ. ಆದ್ರೆ ಡೇಟ್ಸ್ ಇಲ್ಲ ಅಂತ, ಸ್ವತಃ ಅವರೇ ಅದನ್ನ ದರ್ಶನ್‌ಗೆ ರೆಫರ್ ಮಾಡಿದ್ರು ಅನ್ನೋದನ್ನ ಖುದ್ದು ಸುದೀಪ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ರು.
ಯಾವಾಗ ಸುದೀಪ್ ಮೆಜೆಸ್ಟಿಕ್ ಆಫರ್ ಹಾಗೂ ರೆಫರ್ ಬಗ್ಗೆ ಮಾತನಾಡಿದ್ರೋ ಆಗ ಅದು ನಟ ದರ್ಶನ್‌ಗೆ ಟ್ರಿಗರ್ ಆಯ್ತು. ಅದಾದಮೇಲೂ ಸಾಕಷ್ಟು ದಿನ ಒಟ್ಟೊಟ್ಟಿಗೆ ಕುಚಿಕು ದೋಸ್ತಿಗಳಂತಿದ್ದ ಇವರುಗಳ ನಡುವೆ ಸಡನ್ ಆಗಿ ಏನಾಯ್ತೋ ಗೊತ್ತಿಲ್ಲ, ಒಮ್ಮೆ ಸ್ವತಃ ದರ್ಶನ್ ಅವರೇ ನಾವಿಬ್ಬರೂ ಇನ್ಮುಂದೆ ಸ್ಮೇಹಿತರಲ್ಲ. ಒಂದೇ ಚಿತ್ರರಂಗದ ಒಬ್ಬರು ಕಲಾವಿದರಷ್ಟೇ ಅಂತ ಟ್ವೀಟ್ ಮಾಡಿ ಗೆಳೆತನ ಮುರಿದುಕೊಂಡರು.
ಸಾರಥಿ ಸಿನಿಮಾ ರಿಲೀಸ್ ವೇಳೆ ನಟ ದರ್ಶನ್ ಹೊರಗೆ ಇರಲಿಲ್ಲ. ಕೌಟುಂಬಿಕ ಕಲಹಗಳ ಹಿನ್ನೆಲೆ ಹೆಂಡ್ತಿಯ ಮೇಲೆ ಮ್ಯಾನ್ ಹ್ಯಾಂಡಲಿಂಗ್ ಮಾಡಿದ ಆರೋಪ ಹೊತ್ತು ಜೈಲು ಸೇರಿದ್ದರು. ಆ ಸಮಯದಲ್ಲಿ ದರ್ಶನ್‌ಗೆ ಸ್ವಂತ ಸಹೋದರ ದಿನಕರ್ ಅವರೇ ಸಾರಥಿ ಸಿನಿಮಾನ ಡೈರೆಕ್ಟ್ ಮಾಡಿ ತೆರೆಗೆ ತಂದಿದ್ರು. ಆ ಕಷ್ಟ ಕಾಲದಲ್ಲಿ ಅವ್ರ ಕೈ ಹಿಡಿದು, ಜೊತೆಗೆ ನಿಂತಿದ್ದು ಮಾತ್ರ ಇದೇ ಸುದೀಪ್. ಅದನ್ನ ಸ್ವತಃ ದಿನಕರ್ ತೂಗುದೀಪ ಅವರೇ ಒಮ್ಮೆ ಬಹಿರಂಗವಾಗಿ ಹೇಳಿಕೊಂಡಿದ್ದರು.
ಇನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾಗೆ ಸುದೀಪ್ ಅವರು ಹಿನ್ನೆಲೆ ಧ್ವನಿ ನೀಡಿದ್ದರು. ಅಷ್ಟೇ ಅಲ್ಲ, ದರ್ಶನ್‌ಗಾಗಿ ನಾನು ವಾಯ್ಸ್ ಕೊಟ್ಟೆ. ಆ ಸಿನಿಮಾಗೆ ನನ್ನ ವಾಯ್ಸ್ ಬೇಕಿತ್ತು ಅಂದಾಗ ಇಲ್ಲ ಅನ್ನೋಕೆ ಆಗಲಿಲ್ಲ ಅಂತ ಹೇಳಿಕೆ ನೀಡಿ, ಗೆಳೆತನ ಮೆರೆದಿದ್ದರು ಬಾದ್‌ಷಾ ಸುದೀಪ್. ಹೀಗೆ ಕಿಚ್ಚ ಸಾಥ್ ನೀಡಿದ ಸಾರಥಿ ಹಾಗೂ ಸಂಗೊಳ್ಳಿ ರಾಯಣ್ಣ ಎರಡೂ ಚಿತ್ರಗಳು ದಚ್ಚು ಕರಿಯರ್‌ಗೆ ಬಿಗ್ಗೆಸ್ಟ್ ಹಿಟ್ ಮೂವೀಸ್ ಆದವು.
- ‘ಚಿಂಗಾರಿ’ ಆಡಿಯೋ ಲಾಂಚ್ಗೆ ಸುದೀಪ್ ಚೀಫ್ ಗೆಸ್ಟ್..!
- CCLನಲ್ಲಿ ಕಿಚ್ಚ-ದಚ್ಚು ದೋಸ್ತಿ.. ಮಂಡ್ಯ ವೇದಿಕೆಯಲ್ಲಿ ಕುಚಿಕು
- ದಚ್ಚು ಜೈಲಿಗೆ.. ಹೆಂಡ್ತಿಗೆ ಸಹಾಯ ಮಾಡಿದ್ದೇ ತಪ್ಪಾಯ್ತಾ..?
- ಶಿವಣ್ಣ-ಸುದೀಪ್ ಮೇಲೆ ಹಗೆತನ ಬೆಳೆಸಿಕೊಂಡ್ರಾ ದಾಸ..?
ಯೆಸ್.. ಕಿಚ್ಚ-ದಚ್ಚು ದೋಸ್ತಿಗೆ ಒಂದಲ್ಲ ಎರಡಲ್ಲ.. ಹತ್ತು ಹಲವು ಘಟನೆಗಳು ಸಾಕ್ಷಿ ಆಗಿವೆ. ಸಿಸಿಎಲ್‌ನಲ್ಲಿ ಬ್ಯಾಟ್ ಹಾಗೂ ಬಾಲ್ ಹಿಡಿದು ಕ್ರಿಕೆಟ್ ಗ್ರೌಂಡ್‌ಗೆ ಇಳಿದ ದರ್ಶನ್ ಹಾಗೂ ಸುದೀಪ್, ಎಲ್ಲರ ಕಣ್ಣು ಕುಕ್ಕುವಂತೆ ಗೆಳೆತನ ಸಾರಿದ್ದರು.
ಮಂಡ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕುಚಿಕು ಕುಚಿಕು ಸಾಂಗ್‌ಗೆ ಕಿಚ್ಚ-ದಚ್ಚು ಕುಣಿಯೋ ಮೂಲಕ ನೋಡುಗರ ಕಣ್ಣು ತಂಪುಗೊಳಿಸಿದ್ರು.
ಅಲ್ಲದೆ ಚಿಂಗಾರಿ ಸಿನಿಮಾದ ಆಡಿಯೋ ಲಾಂಚ್ ಇವೆಂಟ್‌ಗೆ ಸುದೀಪ್ ಅವರೇ ಚೀಫ್ ಗೆಸ್ಟ್ ಆಗಿ ಬಂದು ಧ್ವನಿ ಸುರುಳಿ ಬಿಡುಗಡೆ ಮಾಡಿಕೊಟ್ಟಿದ್ರು.
ಸಿಗರೆಟ್‌ನಂದ ಮೈಯನ್ನ ಸುಟ್ಟಿ, ಪಿಸ್ತೂಲ್ ತೋರಿಸಿ, ಪತ್ನಿ ವಿಜಯಲಕ್ಷ್ಮೀಯನ್ನ ಇನ್ನಿಲ್ಲದೆ ಥಳಿಸಿದ್ದ ದರ್ಶನ್ ವಿರುದ್ಧ ವಿಜಯಲಕ್ಷ್ಮೀ ಪೊಲೀಸ್ ಠಾಣೆಗೆ ದೂರು ನೀಡಿದ್ರು. ಅಲ್ಲದೆ ಸಹಾಯಕ್ಕಾಗಿ ಶಿವಣ್ಣ ಹಾಗೂ ಸುದೀಪ್ ಮನೆಯ ಬಾಗಿಲು ಬಡಿದಿದ್ದ ವಿಜಯಲಕ್ಷ್ಮೀ ಕೊನೆಗೆ ಗಂಡನನ್ನ ಕರೆದುಕೊಂಡು ಬಂದ ಬಳಿಕ ಅವರಿಬ್ಬರೂ ಒಂದಾಗಿ, ಸಹಾಯ ಮಾಡಿದವರದ್ದೇ ತಪ್ಪು ಅನ್ನುವಂತೆ ಬಿಂಬಿಸಿದ್ದರು. ಇದು ನಿಜಕ್ಕೂ ಕಿಚ್ಚ-ದಚ್ಚು ದೂರವಾಗಲು ಕಾರಣವಾಗಿತ್ತು. ಇದನ್ನ ರಾಮರಸ ಚಿತ್ರದ ಫಸ್ಟ್ ಲುಕ್ ಲಾಂಚ್ ವೇಳೆ ಕಲಾವಿದರ ಸಂಘದಲ್ಲಿ ಸುದೀಪ್ ಸೂಕ್ಷ್ಮವಾಗಿ ಹೇಳಿದ್ದರು.
ಒಟ್ಟಾರೆ ಕಿಚ್ಚ-ದಚ್ಚು ನಡುವೆ ಬಹುದೊಡ್ಡ ಕಂದಕ ಉಂಟಾಗಿದೆ. ಆ ವೈಮನಸ್ಸು ಸರಿ ಮಾಡೋಕೆ ಯಾರೂ ಮುಂದಾಗಲೇ ಇಲ್ಲ. ಆದ್ರೆ ಸುದೀಪ್ ಮಾತ್ರ ದರ್ಶನ್ ಬಗ್ಗೆ ಯಾವಾಗ ಕೇಳಿದ್ರೂ ಸಹ ಮುಕ್ತವಾಗಿ ಹೇಳ್ತಿದ್ರು. ದರ್ಶನ್ ಅಂತೂ ಸುದೀಪ್ ಹೆಸರನ್ನ ಅಂದಿನಿಂದ ಇಂದಿನ ವರೆಗೆ ಎಲ್ಲೂ ಆಡೇ ಇಲ್ಲ. ಸದ್ಯ ಸ್ಟಾರ್‌ವಾರ್ ಹಾಗೂ ಈ ಸ್ಟಾರ್‌ಗಳಿಬ್ಬರ ಫ್ಯಾನ್ಸ್ ವಾರ್ ಭುಗಿಲೆದ್ದಿದ್ದು, ಸುದೀಪ್ ಅತ್ಯಾಪ್ತ ಚಕ್ರವರ್ತಿ ಚಂದ್ರಚೂಡ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಯೆಸ್.. ಯುದ್ಧ ಆಗಬೇಕಿರೋದು ಕಾನೂನು ಯುದ್ಧ ಅಥ್ವಾ ಸಾಂಸ್ಕೃತಿಕ ಯುದ್ಧ. ಸೋಶಿಯಲ್ ಮೀಡಿಯಾ ಅನ್ನೋ ಸುಪ್ರೀಂ ಕೋರ್ಟ್‌ನಲ್ಲಿ ಅದರ ಬಗ್ಗೆ ಚರ್ಚೆ ನಡೆಯುತ್ತಿದೆ. ತುಂಬಾ ಜವಾಬ್ದಾರಿ ಇರೋರು ಬೆಂಕಿ ಆರಿಸಬೇಕಿದೆ. ಅದು ಬೇರೆ ಯಾವುದೋ ನಟನ ಪಡೆ ಅಲ್ಲ. ಪೈರಸಿ ಮಾಡುವ ಪಡೆ ಅನ್ನೋದು ಸುದೀಪ್ ಆಪ್ತ ಚಂದ್ರಚೂಡ್ ಸ್ಪಷ್ಟನೆ. ಆದ್ರೆ ಮುಂದೆ ಇದು ಯಾವೆಲ್ಲಾ ರೂಪ ಪಡೆಯುತ್ತೆ..? ಇದಕ್ಕೆ ಸುದೀಪ್ ಏನ್ ರಿಯಾಕ್ಟ್ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
