ಸುದೀಪ್ ಬರ್ತ್ ಡೇಗೆ ಜೋಗಿ ಪ್ರೇಮ್ ಸಡನ್ ಸರ್‌ಪ್ರೈಸ್ ಕೊಟ್ಟಿದ್ದಾರೆ. ಯೆಸ್.. ದಿ ವಿಲನ್ ಸಿನಿಮಾದ ಜೋಡಿ ಮತ್ತೆ ಒಂದಾಗಿದೆ. ಪೋಸ್ಟ್ ಕಾರ್ಡ್ ಥೀಮ್‌ನಲ್ಲಿ ಅನೌನ್ಸ್ ಮಾಡೋ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ ಶೋಮ್ಯಾನ್ ಪ್ರೇಮ್. ಇಷ್ಟಕ್ಕೂ ಯಾವ ಜಾನರ್ ಸಿನಿಮಾ..? ಫುಲ್ ಡಿಟೈಲ್ಸ್ ಏನು ಅಂತೀರಾ..? ಇಲ್ಲಿದೆ ಉತ್ತರ.
- ‘ದಿ ವಿಲನ್’ ಕಾಂಬೋ ಈಸ್ ಬ್ಯಾಕ್.. ಪ್ರೇಮ್ ಡೈರೆಕ್ಟ್ಸ್ ಕಿಚ್ಚ
- ಜೋಗಿ ಪ್ರೇಮ್ ಫ್ಯಾಮಿಲಿ ಮ್ಯಾಟರ್.. ಕೊಟ್ರು ಸರ್‌ಪ್ರೈಸ್..!
- ಮಾಸ್, ರೌಡಿಸಂ ಸ್ಕ್ರಿಪ್ಟ್ಗೆ ಬ್ರೇಕ್.. ಫ್ಯಾಮಿಲಿ ಕಥೆಗೆ ಚಾಲನೆ..!
- ಪೋಸ್ಟ್ ಕಾರ್ಡ್ ಥೀಮ್.. ಆರಡಿ ಕಟೌಟ್ ಕಿಚ್ಚಗೆ ಟ್ರಿಬ್ಯೂಟ್
ಮತ್ತೆ ಒಂದಾಗ್ತಿದೆ ದಿ ವಿಲನ್ ಸಿನಿಮಾದ ಜೋಡಿ. ಅರೇ ಶಿವಣ್ಣ-ಸುದೀಪ್ ಒಂದಾಗ್ತಿದ್ದಾರಾ ಅಂತ ಶಾಕ್ ಆಗ್ಬೇಡಿ. ಅವ್ರಿಗೆ ಆ್ಯಕ್ಷನ್ ಕಟ್ ಹೇಳಿದ್ದ ಜೋಗಿ ಪ್ರೇಮ್ ಹಾಗೂ ಬಾದ್‌ಷಾ ಕಿಚ್ಚ ಸುದೀಪ್ ಮತ್ತೆ ಚಿತ್ರಪ್ರೇಮಿಗಳನ್ನ ರಂಜಿಸೋಕೆ ಮಾಸ್ಟರ್‌ಪ್ಲ್ಯಾನ್ ಮಾಡಿದ್ದಾರೆ. ಯೆಸ್.. ಕಿಚ್ಚನ ಬರ್ತ್ ಡೇ ವಿಶೇಷ ಸ್ವತಃ ಜೋಗಿ ಪ್ರೇಮ್ ಈ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ್ದಾರೆ. ಅಂಚೆ ಪೋಸ್ಟ್ ಕಾರ್ಡ್ ಥೀಮ್‌ನಲ್ಲಿ ‘ಸೀರಿಯಸ್ಲಿ ದಿಸ್ ಈಸ್ ಎ ಫ್ಯಾಮಿಲಿ ಮ್ಯಾಟರ್’ ಅನ್ನೋ ಸಾಲುಗಳೊಂದಿಗೆ ಮೂಡಿ ಬಂದಿರುವ ಚಿತ್ರದ ಇನ್ವಿಟೇಷನ್ ಸಾಕಷ್ಟು ಕುತೂಹಲ ಮೂಡಿಸಿದೆ.
ಅಂದಹಾಗೆ ಸದ್ಯ ಅಭಿನಯ ಚಕ್ರವರ್ತಿ ಕೈಯಲ್ಲಿ ಬಿಲ್ಲ ರಂಗ ಬಾಷಾ, ದೇವರಾಯ ಹಾಗೂ ಗೆಸ್ಟ್ ರೋಲ್‌ನಲ್ಲಿ ನಟಿಸುತ್ತಿರೋ ಸ್ಕೂಲ್ ಬಸ್ ಚಿತ್ರಗಳಿವೆ. ಈಗ ಘೋಷಣೆ ಆಗಿರೋ ಪ್ರೇಮ್ ಚಿತ್ರದ ಶೂಟಿಂಗ್ ಯಾವಾಗ ಎನ್ನುವ ಕುತೂಹಲ ಕೂಡ ಇದೆ. ತಮ್ಮ ಹೊಸ ಚಿತ್ರದ ಕುರಿತು ಮಾತನಾಡಿರುವ ನಿರ್ದೇಶಕ ಪ್ರೇಮ್.. ನಾನು ಮತ್ತು ಸುದೀಪ್ ಸಿನಿಮಾ ಮಾಡ್ಬೇಕು ಅನ್ನೋದು ಬಹುದಿನಗಳ ಯೋಚನೆ. ದಿ ವಿಲನ್‌ಗೂ ಮೊದ್ಲೇ ಈ ಬಗ್ಗೆ ಮಾತುಕತೆ ನಡೆದಿತ್ತು. ಆದ್ರೆ ದಿ ವಿಲನ್ ಇಬ್ರು ಹೀರೋಗಳ ಚಿತ್ರವಾಗಿ ಮೂಡಿ ಬಂದಿತ್ತು. ಈಗ ಸುದೀಪ್ ಸೋಲೋ ಹೀರೋ ಆಗಿರೋ ಚಿತ್ರವ ನಿರ್ದೇಶಿಸುತ್ತಿದ್ದೇನೆ.
ಇದು ರೌಡಿಸಂ, ಭೂಗತ ಲೋಕ ಇತ್ಯಾದಿ ರೆಗ್ಯೂಲರ್ ಮಾಸ್ ಫಾರ್ಮುಲಾ ಅಂಶಗಳಿಂದ ದೂರ ಇರುವ ಪಕ್ಕಾ ಫ್ಯಾಮಿಲಿ ಅಂದ್ರೆ ಇಂದಿನ GenZ ಹಾಗೂ ಮನೆ ಮನೆಯ ಕಥೆ ಆಗಿರಲಿದೆ. ಗಂಭೀರವಾದ ಫ್ಯಾಮಿಲಿ ಮ್ಯಾಟ್ರು ಕಥೆ ಅಂತಲೇ ಹೇಳಬಹುದು. ಖಂಡಿತ ನಮ್ಮ ಇಬ್ಬರಿಗೂ ಇದು ಬೇರೆ ರೀತಿಯ ಸಿನಿಮಾ ಆಗಲಿದೆ ಎಂದಿದ್ದಾರೆ. ಅಂದಹಾಗೆ ದಿ ವಿಲನ್ ಸಿನಿಮಾ ಮೊದಲ ವಾರದಲ್ಲೇ 32 ಕೋಟಿ ಕಲೆಕ್ಷನ್ ಮಾಡಿ, ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿತ್ತು. ಈಗ ಅದೇ ಜೋಡಿ ಅಂದಾಗ ಸಹಜವಾಗಿಯೇ ನಿರೀಕ್ಷೆ ದುಪ್ಪಟ್ಟಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
