ಮಲಯಾಳಂನತ್ತ ಶೆಟ್ರ ಸಿನಿಮಾ.. 450 ಶೋ ಹೌಸ್‌‌ಫುಲ್..!

ಕಾಂತಾರ ಶೈಲಿಯಲ್ಲಿ ಕನ್ನಡದಿಂದ ಪರಭಾಷೆಗೆ ಸು ಫ್ರಮ್ ಸೋ

Untitled design 2025 07 27t142256.402

ಮನರಂಜನೆಗೆ ಕೇರ್ ಆಫ್ ಅಡ್ರೆಸ್ ಆಗಿರೋ ಸು ಫ್ರೆಮ್ ಸೋ ಸಿನಿಮಾ ಆನ್ ಡಿಮ್ಯಾಂಡ್ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ ಸ್ಕ್ರೀನ್‌‌ಗಳನ್ನ ಹೆಚ್ಚಿಸಿಕೊಳ್ತಿದೆ. ಅಷ್ಟೇ ಅಲ್ಲ, ರಾಜ್ ಬಿ ಶೆಟ್ಟಿ- ತುಮಿನಾಡ್ ಜುಗಲ್ಬಂದಿಯ ಈ ಸಿನಿಮಾ ಮಲಯಾಳಂಗೂ ಕಾಲಿಡ್ತಿದೆ. ಇಡೀ ಕರುನಾಡೇ ಬಹುಪರಾಕ್ ಅಂತಿರೋ ಸೋಮೇಶ್ವರ ಸುಲೋಚನ ಮಹಿಮೆಯ ಕಥೆ ನಿಮಗಾಗಿ ಕಾಯ್ತಿದೆ. ಜಸ್ಟ್ ಎಂಜಾಯ್.

ಆರು ತಿಂಗಳಿಂದ ಸಿಂಗಲ್ ಹಿಟ್ ಕೂಡ ಇಲ್ಲದೆ ಸೊರಗಿ ಹೋಗಿದ್ದ ಸ್ಯಾಂಡಲ್‌ವುಡ್‌‌ನಲ್ಲಿ ಭರವಸೆಯ ಬೀಜ ಬಿತ್ತಿದ ಸಿನಿಮಾ ಸು ಫ್ರಮ್ ಸೋ. ಜುಲೈ 25ಕ್ಕೆ ತೆರೆಕಂಡ ಈ ಸಿನಿಮಾ ಮೂರೇ ದಿನದಲ್ಲಿ ಕನ್ನಡಿಗರ ಮನೆ ಮಾತಾಗಿದೆ. ಅಷ್ಟರ ಮಟ್ಟಿಗೆ ನೋಡುಗರಿಂದ ಪ್ರಶಂಸೆಗಳ ಸುರಿಮಳೆ ಆಗ್ತಿದೆ. ಯೆಸ್.. ಜೆ ಪಿ ತುಮಿನಾಡ್ ನಿರ್ದೇಶಿಸಿ, ಲೀಡ್‌‌ನಲ್ಲಿ ನಟಿಸಿರೋ ಈ ಸಿನಿಮಾದಲ್ಲಿ ತುಳು ಹಾಗೂ ರಂಗಭೂಮಿ ಕಲಾವಿದರ ದಂಡಿದೆ.

ರಾಜ್ ಬಿ ಶೆಟ್ಟಿ ನಿರ್ಮಾಣ ಮಾಡೋದ್ರ ಜೊತೆಗೆ ಒಂದೊಳ್ಳೆ ಪಾತ್ರದಲ್ಲಿ ಕಾಣಿಸಿಕೊಂಡಿರೋ ಈ ಸಿನಿಮಾದ ಪೋಸ್ಟರ್‌‌ನಲ್ಲಿ ಎಲ್ಲೂ ಅವರ ಫೋಟೋ ಇಲ್ಲ. ಸ್ಟಾರ್‌‌ಗಳ ಇಮೇಜ್ ಅಥ್ವಾ ಮೇಕಿಂಗ್ ವೈಭವೀಕರಣವಿಲ್ಲದೆ, ಸಹಜ ಹಾಗೂ ಸ್ವಾಭಾವಿಕ ಕಥೆ, ಕಲಾವಿದರ ನಟನೆಯಿಂದ ಭೇಷ್ ಅನಿಸಿಕೊಂಡಿದೆ ಸು ಫ್ರಮ್ ಸೋ. ಇದು ನೋಡುಗರಿಗೆ ತಮ್ಮ ಹಳ್ಳಿ ಲೈಫ್‌‌ ನೆನಪಿಸುತ್ತಿದೆ. ಹಾರರ್ ಕಮ್ ಕಾಮಿಡಿ ಜಾನರ್ ಚಿತ್ರವಾದ್ರೂ ನಗುವೊಂದೇ ಇದರ ಸಕ್ಸಸ್ ಸೂತ್ರವಾಗಿದೆ.

ಸಿನಿಮಾವೊಂದರ ಕಥೆ, ಪಾತ್ರಗಳು, ಅವರ ಅಭಿನಯ, ಪಿಕ್ಚರೈಸೇಷನ್, ರಿಯಾಲಿಟಿಗೆ ಹತ್ತಿರವಾಗಿರೋ ಅಂಶಗಳು, ಮೇಕಿಂಗ್ ಹಾಗೂ ನೋಡುಗರಿಗೆ ಕನೆಕ್ಟ್ ಆಗುವ ಅಂಶಗಳು ಗಟ್ಟಿಯಾಗಿದ್ರೆ ಸಾಕು. ಸಿನಿಮಾ ಹಂಡ್ರೆಡ್ ಪರ್ಸೆಂಟ್ ಹಿಟ್ ಆಗುತ್ತೆ. ಸದ್ಯ ಕರುನಾಡಿನ ಮನೆ ಮಂದಿಯ ಮಾತಾಗಿರೋ ಸು ಫ್ರಮ್ ಸೋ, ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಪ್ರತೀ ದಿನ 450ಕ್ಕೂ ಅಧಿಕ ಶೋಗಳು ನಡೆಯುತ್ತಿದ್ದು, ಮಲ್ಟಿಪ್ಲೆಕ್ಸ್ ಒಂದರಲ್ಲ್ಲೇ ಸುಮಾರು 374 ಶೋಗಳು ಪ್ರದರ್ಶನಗೊಳ್ತಿವೆ. ಪ್ರೇಕ್ಷಕರ ಒತ್ತಾಯದ ಮೇರೆದ ಆನ್ ಡಿಮ್ಯಾಂಡ್ ಸ್ಕ್ರೀನ್ಸ್ ಸಂಖ್ಯೆ ಹೆಚ್ಚಿಸಲಾಗುತ್ತಿದೆ.

ಅಂದಹಾಗೆ ಇದೇ ಆಗಸ್ಟ್ 1ರಿಂದ ಪಕ್ಕದ ಮಲಯಾಳಂಗೂ ಕಾಲಿಡ್ತಿದೆ ಸು ಫ್ರಮ್ ಸೋ. ಹೌದು.. ಮಲಯಾಳಂಗೆ ಡಬ್ ಮಾಡಿ ಸಿನಿಮಾನ ಬಿಡುಗಡೆ ಮಾಡ್ತಿದ್ದಾರೆ ರಾಜ್ ಬಿ ಶೆಟ್ಟಿ. ಈಗಾಗ್ಲೇ ಟರ್ಬೋ ಸಿನಿಮಾದಿಂದ ಮಲಯಾಳಿಗರ ಮನಸ್ಸು ಗೆದ್ದಿರೋ ರಾಜ್ ಶೆಟ್ರು, ಇದೀಗ ಅಲ್ಲಿನ ಪ್ರೇಕ್ಷಕರ ಡಿಮ್ಯಾಂಡ್‌‌ನಂತೆ ಮಲಯಾಳಂ ಮಂದಿಗೂ ಸು ಫ್ರಮ್ ಸೋನ ಉಣಬಡಿಸೋಕೆ ಸಜ್ಜಾಗಿದ್ದಾರೆ.

ಅಂದಹಾಗೆ ರಿಷಬ್ ಶೆಟ್ರ ಕಾಂತಾರ ಸಿನಿಮಾ ಕೂಡ ಮೊದಲು ಕನ್ನಡಿಗರಿಗಾಗಿಯೇ ತಯಾರಾದ ಅಪ್ಪಟ ಕನ್ನಡ ಸಿನಿಮಾ ಆಗಿ ಹೊರಹೊಮ್ಮಿತ್ತು. ಆ ನಂತ್ರ ಮೌತ್ ಟಾಕ್‌ನಿಂದ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಪಡೆದು, ಪರಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಯ್ತು. ನಂತ್ರ ಅದು ವಿಶ್ವಸಂಸ್ಥೆವರೆಗೂ ಸದ್ದು ಮಾಡಿದ್ದು ಇತಿಹಾಸ. ಇದೀಗ ಅದೇ ಹಾದಿಯಲ್ಲಿ ಸೋಮೇಶ್ವರ ಸುಲೋಚನ ಮಹಿಮೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಹೋಗ್ತಿದೆ. 9.8 ಗೂಗಲ್ ರೇಟಿಂಗ್ ಇರೋ ಈ ಸಿನಿಮಾಗೆ ಎಲ್ಲೆಡೆಯಿಂದ ಅಭೂತಪೂರ್ವ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ದೊರೆಯುತ್ತಿದ್ದು, ರಾಜ್ ಬಿ ಶೆಟ್ಟಿ ಅಂಡ್ ಟೀಂನ ಸಿನಿಮೋತ್ಸಾಹ ಮತ್ತಷ್ಟು ಹೆಚ್ಚಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version