ಸು ಫ್ರಮ್ ಸೋ ಸ್ಯಾಂಡಲ್‌ವುಡ್ ಪಾಲಿಗೆ ಬಾಕ್ಸ್ ಆಫೀಸ್ ಸುನಾಮಿ ಆಗಿದೆ. ಐದೂವರೆ ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 25 ದಿನದಲ್ಲಿ ವರ್ಲ್ಡ್‌ವೈಡ್ ಬರೋಬ್ಬರಿ 100 ಕೋಟಿ ಗಳಿಸೋ ಮೂಲಕ ಎಲ್ಲರ ಹುಬ್ಬೇರಿಸಿದೆ. ಕಿಚ್ಚ ಸುದೀಪ್, ಅಜಯ್ ದೇವಗನ್ ಮೆಚ್ಚಿದ ಸೋಮೇಶ್ವರ ಸುಲೋಚನಾ, ಲಾಫ್‌ಬಸ್ಟರ್ ಆಗಿ ಹಿಸ್ಟರಿ ಕ್ರಿಯೇಟ್ ಮಾಡಿದೆ. ಅದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ ನೋಡಿ.
- ಭಲೇ ಶೆಟ್ರೆ.. 100Cr ಕ್ಲಬ್‌ಗೆ ಲಾಫ್‌ಬಸ್ಟರ್ ಸು ಫ್ರಮ್ ಸೋ
- 25 ಡೇಸ್ ಬ್ಲಾಕ್‌ಬಸ್ಟರ್.. ಎಲ್ಲೆಡೆ ಟಾಕ್ ಆಫ್ ದಿ ಟೌನ್..!
- ಬಜೆಟ್, ಸ್ಟಾರ್ಕಾಸ್ಟ್ ಮುಖ್ಯ ಅಲ್ಲ.. ಕಂಟೆಂಟ್ ಈಸ್ ಕಿಂಗ್
- ಕಿಚ್ಚ, ದೇವಗನ್, ರಮ್ಯಾ, ಧ್ರುವ, ರಿಷಬ್ ಮೆಚ್ಚಿದ ಸುಲೋಚನಾ
ಸಿನಿಮಾವೊಂದಕ್ಕೆ ಗ್ಲಾಮರ್‌ಗಿಂತ ಗ್ರಾಮರ್ ಮುಖ್ಯ. ಅದೇ ರೀತಿ ಕೆಮಿಸ್ಟ್ರಿಗಿಂತ ಮ್ಯಾಥ್ಸ್ ಕೂಡ ಇಂಪಾರ್ಟೆಂಟ್ ಆಗುತ್ತೆ. ಎಷ್ಟು ಕೋಟಿ ಹಾಕಿ ಸಿನಿಮಾ ಮಾಡ್ತೀವಿ, ಯಾರನ್ನ ಇಟ್ಕೊಂಡು ಸಿನಿಮಾ ಮಾಡ್ತೀವಿ ಅನ್ನೋದು ಮ್ಯಾಟರ್ ಅಲ್ಲ. ಸಿನಿಮಾದ ಕಥೆಯಲ್ಲಿ ಗಟ್ಟಿತನ ಇದೆಯಾ..? ಅದು ನೋಡುಗರಿಗೆ ಬೇಗ ಕನೆಕ್ಟ್ ಆಗುತ್ತಾ ಅನ್ನೋದೇ ಮುಖ್ಯ ವಿಷಯವಾಗುತ್ತೆ. ಸದ್ಯ ರಾಜ್ ಬಿ ಶೆಟ್ಟಿ ಟೀಂ ಮಾಡಿರೋ ಸು ಫ್ರಮ್ ಸೋ ಸಿನಿಮಾ, ಕೇವರ ಐದೂವರೆ ಕೋಟಿಯಲ್ಲಿ ತಯಾರಾಗಿ, ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಇದೀಗ 100 ಕೋಟಿ ಗಳಿಸೋ ಮೂಲಕ ಹಂಡ್ರೆಡ್ ಕ್ರೋರ್ ಕ್ಲಬ್ ಕೂಡ ಸೇರಿದೆ.
ಹೌದು.. ಯಶಸ್ವಿ 25 ದಿನ ಪೂರೈಸಿರೋ ಸು ಫ್ರಮ್ ಸೋ ಸಿನಿಮಾ ಹಾರರ್ ಕಾಮಿಡಿ ಜಾನರ್‌ದಾಗಿದ್ದು, ಕಂಟೆಂಟ್ ಚೆನ್ನಾಗಿದ್ರೆ ಜನ ಮುಗಿಬಿದ್ದು ಸಿನಿಮಾ ವೀಕ್ಷಿಸ್ತಾರೆ ಅನ್ನೋದನ್ನ ಸಾಬೀತು ಮಾಡಿದೆ. ರಾಜ್ ಬಿ ಶೆಟ್ಟಿ ನಟಿಸಿ, ನಿರ್ಮಿಸಿದ ಸು ಫ್ರಮ್ ಸೋ ಚಿತ್ರದಲ್ಲಿ ನಾಯಕನಟನಾಗಿ ಬಣ್ಣ ಹಚ್ಚೋದ್ರ ಜೊತೆಗೆ ಡೈರೆಕ್ಷನ್ ಕೂಡ ಮಾಡಿದ್ದಾರೆ ಜೆ ಪಿ ತುಮಿನಾಡ್. ಇವರೊಟ್ಟಿಗೆ ರವಿಯಣ್ಣನ ಪಾತ್ರದಲ್ಲಿ ಶನೀಲ್ ನಟಿಸಿದ್ದು, ಪ್ರಕಾಶ್ ತುಮಿನಾಡ್, ಸಂಧ್ಯಾ, ಮೈಮ್ ರಾಮ್‌ದಾಸ್ ಕೂಡ ತಾರಾಗಣದಲ್ಲಿದ್ದಾರೆ.
ಇವರು ಒಂದೊಳ್ಳೆ ಸಿನಿಮಾ ಮಾಡೋ ಉದ್ದೇಶದಿಂದ ಚಿತ್ರವನ್ನು ಕಟ್ಟಿದರು. ಆದ್ರೆ ಅದೇ ಡಿಮ್ಯಾಂಡ್ ಮೇಲೆ ಕನ್ನಡದಿಂದ ಪಕ್ಕದ ಮಲಯಾಳಂ, ಆಂಧ್ರಗೂ ಹೋಯ್ತು. ನಂತ್ರ ಅಮೆರಿಕಾ, ದುಬೈ, ಕೆನಡಾ, ಜಪಾನ್, ಜರ್ಮನಿ, ಸೀಂಗಾಪುರ್ ಸೇರಿದಂತೆ ವಿಶ್ವದ ಮೂಲೆ ಮೂಲೆಯಲ್ಲಿ ಎಲ್ಲರ ದಿಲ್ ದೋಚಿತು. ತಮಿಳಿಗೆ ಕೂಡ ಈ ಚಿತ್ರದ ರಿಮೇಕ್ ರೈಟ್ಸ್ ಮಾರಾಟಗೊಂಡಿದ್ದು, ಸದ್ಯದಲ್ಲೇ ಯಾರಾದ್ರೂ ಅದನ್ನ ರಿಮೇಕ್ ಮಾಡಲಿದ್ದಾರೆ.
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ರಮ್ಯಾ, ಧ್ರುವ ಸರ್ಜಾ ಈ ಸಿನಿಮಾನ ಮೆಚ್ಚಿದ್ದರು. ಇತ್ತೀಚೆಗೆ ಅಜಯ್ ದೇವಗನ್ ಈ ಸಿನಿಮಾನ ಮನೆಯಲ್ಲೇ ನೋಡಿ, ಇಡೀ ಟೀಂನ ಕರೆಸಿ ಪ್ರಶಂಸಿಸಿದ್ದರು. ಅಲ್ಲದೆ, ಮುಂದೆ ಒಳ್ಳೆಯ ಕಥೆಗಳನ್ನ ಮಾಡೋದಾದ್ರೆ ನಿಮ್ಮೊಟ್ಟಿಗೆ ಕೈ ಜೋಡಿಸುತ್ತೇನೆ. ಕೊಲ್ಯಾಬೊರೇಟ್ ಆಗಿ ಸಿನಿಮಾಗಳನ್ನ ಕನ್ನಡದ ಜೊತೆ ಹಿಂದಿಯಲ್ಲೂ ಮಾಡೋಣ ಅಂತ ಓಪನ್ ಆಫರ್ ನೀಡಿದ್ರು. ಅದದ ಬಳಿಕ ನಮ್ಮ ಬಾದ್‌ಷಾ ಕಿಚ್ಚ ಸುದೀಪ್ ಕೂಡ ಡೈರೆಕ್ಟರ್ ಹಾಗೂ ಟೀಂನ ಕರೆಸಿ, ಬೇಷ್ ಅಂತ ಬೆನ್ನು ತಟ್ಟಿದ್ದರು.
ಅಂದಹಾಗೆ ಈ ಸೋಮೇಶ್ವರ ಸುಲೋಚನಾ ವರ್ರ್ಲ್ಡ್‌ವೈಡ್ ನೂರು ಕೋಟಿ ಗಳಿಸಿದ್ದಾಯ್ತು. ಆದ್ರೆ ಎಲ್ಲೆಲ್ಲಿ ಎಷ್ಟು ಕೋಟಿ ಅನ್ನೋದ್ರ ಗ್ಯಾರಂಟಿ ಗ್ರಾಫಿಕಲ್ ಪ್ರೆಸೆಂಟೇಷನ್ ಇಲ್ಲಿದೆ ನೋಡಿ.
100 ಕೋಟಿ ಕ್ಲಬ್‌ಗೆ ಶೆಟ್ರ ಸು ಫ್ರಮ್ ಸೋ
| ಮಾರುಕಟ್ಟೆ | ಗಳಿಸಿದ ಒಟ್ಟು ಮೊತ್ತ |
|---|---|
| ಕರ್ನಾಟಕ | ₹80 ಕೋಟಿಗೂ ಹೆಚ್ಚು |
| ಕೇರಳ | ₹7 ಕೋಟಿ |
| ಆಂಧ್ರಪ್ರದೇಶ | ₹2 ಕೋಟಿ |
| ಉತ್ತರ ಭಾರತ | ₹70 ಲಕ್ಷ |
| ಓವರ್‌ಸೀಸ್ | ₹15 ಕೋಟಿ |
ಯೆಸ್.. ಕರ್ನಾಟಕವೊಂದರಲ್ಲೇ 80ಕ್ಕೂ ಅಧಿಕ ಕೋಟಿ ಪೈಸಾ ವಸೂಲ್ ಮಾಡಿರೋ ಈ ಸಿನಿಮಾ ಬ್ಲಾಕ್ ಬಸ್ಟರ್ ಅಲ್ಲ, ಲಾಫ್‌ಬಸ್ಟರ್. ಮಕ್ಕಳಿಂದ ಮುದುಕರವರೆಗೆ ಎಲ್ಲರನ್ನೂ ನಕ್ಕು ನಲಿಸ್ತಿರೋ ಸು ಫ್ರಮ್ ಸೋ, ಕೇರಳ ಮಾರ್ಕೆಟ್‌ನಲ್ಲೇ 7 ಕೋಟಿ ಗಳಿಸಿರೋದು ಇಂಟರೆಸ್ಟಿಂಗ್. ಆಂಧ್ರದಲ್ಲಿ ಕೂಡ ಎರಡು ಕೋಟಿ ಕಲೆಕ್ಷನ್ ಮಾಡಿದ್ದು, ಉತ್ತರ ಭಾರತದಲ್ಲಿ ಸುಮಾರು 70 ಲಕ್ಷ ರೂಪಾಯಿ ಕಲೆ ಹಾಕಿದೆ. ಇನ್ನು ಓವರ್‌ಸೀಸ್ ಮಾರ್ಕೆಟ್‌ನಲ್ಲಿ ಎಲ್ಲಾ ದೇಶಗಳಿಂದಾಗಿ ಸುಮಾರು 15 ಕೋಟಿಗೂ ಅಧಿಕ ರೂಪಾಯಿಗಳನ್ನ ಗಳಿಸೋ ಮುಖೇನ ಸೆಂಚುರಿ ಬಾರಿಸಿದೆ.
ಈ ಸಿನಿಮಾ ನೋಡಿ ನಗದೆ ಚಿತ್ರಮಂದಿರದಿಂದ ಹೊರಬಂದವರೇ ಇಲ್ಲ. ಅಷ್ಟೇ ಅಲ್ಲ, ಭರಪೂರ ಮನರಂಜನೆಯ ಜೊತೆ ಜೊತೆಗೆ ಕ್ಲೈಮ್ಯಾಕ್ಸ್‌ನಲ್ಲಿ ಒಂದೊಳ್ಳೆ ಮೆಸೇಜ್ ಕೂಡ ಇದೆ. ಅದೇನು ಅನ್ನೋದನ್ನ ನೋಡಿದವರಿಗೆ ಮಾತ್ರ ಗೊತ್ತಾಗಲಿಕ್ಕೆ ಸಾಧ್ಯ. ಒಟ್ಟಾರೆ ಈ ಪ್ರಯೋಗ ನಿಜಕ್ಕೂ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಮೂಡಿಸಿದೆ. ಇತಿಹಾಸ ಕೂಡ ಸೃಷ್ಟಿಸಿದೆ. ಟೀಂ ವರ್ಕ್ ಅಂದ್ರೆ ಏನು ಅನ್ನೋದಕ್ಕೆ ಇದು ಬೆಸ್ಟ್ ಎಕ್ಸಾಂಪಲ್ ಅಗಿದೆ. ಹಾಗಾಗಿ ಎಲ್ರೂ ಭಲೇ ಶೆಟ್ರೇ ಅಂತ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
