ಪ್ರಿನ್ಸ್‌ ಫಾದರ್ ಮಾಧವನ್..ಮೌಳಿ SSMB29 ಅಪ್ಡೇಟ್

1000 ಕೋಟಿ ಬಜೆಟ್‌‌ನಲ್ಲಿ ಗ್ಲೋಬಲ್ ಜಂಗಲ್ ಅಡ್ವೆಂಚರ್

Web 2025 07 09t171229.647

ಸಿನಿಮಾಗಾಗಿ ಒಂದು ಪ್ರತ್ಯೇಕ ಪ್ರಪಂಚವನ್ನೇ ಸೃಷ್ಟಿಸಿಬಿಡ್ತಾರೆ ನಿರ್ದೇಶಕ ರಾಜಮೌಳಿ. ಆ ಪ್ರಪಂಚಕ್ಕೆ ಪ್ರೇಕ್ಷಕರನ್ನ ಕರೆದೊಯ್ದು, ಹುಬ್ಬೇರಿಸಿ ನೋಡುವಂತಹ ರೋಮಾಂಚಕ ದೃಶ್ಯಗಳನ್ನ ಕಟ್ಟುತ್ತಾರೆ. ಕಥೆ, ಮೇಕಿಂಗ್‌ ಜೊತೆಗೆ ಪಾತ್ರಗಳ ಆಯ್ಕೆಯಲ್ಲೂ ಸಖತ್ ಚ್ಯೂಸಿ ಮೌಳಿ. ಸದ್ಯ SSMB29 ತಾರಾಗಣಕ್ಕೆ ಪ್ರಿನ್ಸ್ ಅಡ್ಡಾಗೆ ಮತ್ತೊಬ್ಬ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಎಂಟ್ರಿ ಕೊಟ್ಟಿದ್ದಾರೆ.

ಬಾಹುಬಲಿ, ತ್ರಿಬಲ್ ಆರ್ ಸಿನಿಮಾಗಳ ನಂತ್ರ ಇಂಡಿಯನ್ ಸ್ಪೀಲ್‌ಬರ್ಗ್ ಅಂತಲೇ ಕರೆಯಲ್ಪಡುವ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿಯ ನೆಕ್ಸ್ಟ್ ವೆಂಚರ್ SSMB29. ಇದು ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ 29ನೇ ಸಿನಿಮಾ ಆಗಿದ್ದು, ರಾಜಮೌಳಿಯ ಪ್ರೀವಿಯಸ್ ಸಕ್ಸಸ್ ಗ್ರಾಫ್‌‌ನಿಂದ ಅತೀವ ನಿರೀಕ್ಷೆ ಮೂಡಿಸಿದೆ.

ಪ್ರೇಕ್ಷಕರ ನಿರೀಕ್ಷೆಯನ್ನ ಹುಸಿ ಮಾಡದ ರಾಜಮೌಳಿ, ಪ್ರತೀ ಬಾರಿ ಪ್ರೇಕ್ಷಕರಿಗೆ ಸರ್‌ಪ್ರೈಸ್ ಕೊಡ್ತಾನೇ ಬರ್ತಿದ್ದಾರೆ. ಸಿನಿಮಾಗಾಗಿ ಹೊಚ್ಚ ಹೊಸ ಪ್ರಪಂಚವನ್ನೇ ಸೃಷ್ಟಿಸೋ ಮಹಾನ್ ಮಾಂತ್ರಿಕ ರಾಜಮೌಳಿ, ಕಥೆ, ಪಾತ್ರಗಳು, ಮೇಕಿಂಗ್‌ನಿಂದ ಸಕ್ಸಸ್‌ನ ಉತ್ತುಂಗದಲ್ಲಿದ್ದಾರೆ. ಸದ್ಯ ಮಹೇಶ್ ಬಾಬು ಜೊತೆಗಿನ ಈ ಸಿನಿಮಾ ಕೂಡ ಅಂಥದ್ದೇ ಹಾದಿಯಲ್ಲಿ ಸಾಗ್ತಿದೆ.

ಇಂಡಿಯಾನಾ ಜೋನ್ಸ್ ಶೈಲಿಯ ಗ್ಲೋಬಲ್ ಜಂಗಲ್ ಅಡ್ವೆಂಚರ್ ಸಿನಿಮಾ ಇದಾಗಿದ್ದು, ಮಹೇಶ್ ಬಾಬು ಪಾತ್ರಕ್ಕೆ ಲಾರ್ಡ್‌ ಹನುಮಾನ್ ಸ್ಫೂರ್ತಿಯಂತೆ. ಇದೊಂದು ಸರ್ವಾಂತರ್ಯಾಮಿಯ ಕುರಿತ ಕಥಾನಕ ಆಗಿರಲಿದ್ದು, ಸುಮಾರು 1000 ಕೋಟಿ ಬಿಗ್ ಬಜೆಟ್‌‌ನಲ್ಲಿ ತಯಾರಾಗ್ತಿದೆ. ಈಗಾಗ್ಲೇ ಒಡಿಶಾದಲ್ಲಿ ಒಂದು ದೊಡ್ಡ ಶೆಡ್ಯೂಲ್ ಮುಗಿಸಿ ಬಂದಿರೋ ಚಿತ್ರತಂಡ, ಸದ್ಯದಲ್ಲೇ ಹೈದ್ರಾಬಾದ್‌‌ನಲ್ಲಿ ಶೂಟಿಂಗ್ ಶುಭಾರಂಭ ಮಾಡಲಿದೆಯಂತೆ.

ಈಗಾಗ್ಲೇ ಸೂಪರ್ ಸ್ಟಾರ್ ಮಹೇಶ್ ಬಾಬುಗೆ ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾನ ಹಾಲಿವುಡ್‌ನಿಂದ ಗಾಳ ಹಾಕಿ, ಹಿಡಿದು ತಂದಿದ್ದಾರೆ ಮೌಳಿ. ಅಲ್ಲದೆ, ಪೃಥ್ವಿರಾಜ್ ಸುಕುಮಾರನ್ ಕೂಡ SSMB29 ಕ್ಯಾಂಪ್ ಸೇರಿಕೊಂಡಿದ್ದರು. ಇದೀಗ ಮತ್ತೊಬ್ಬ ಸ್ಟಾರ್ ಮೌಳಿಯ ಅಡ್ಡಾಗೆ ಎಂಟ್ರಿ ಕೊಡ್ತಿದ್ದಾರೆ. ಅವರೇ ತಮಿಳಿನ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಮಾಧವನ್.

ಮಾಧವನ್ SSMB29 ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದು, ಅದು ನಾಯಕನಟ ಮಹೇಶ್ ಬಾಬು ತಂದೆಯ ರೋಲ್ ಎನ್ನಲಾಗ್ತಿದೆ. ಕ್ಲಾಸ್, ಮಾಸ್, ಲವ್ ಹೀಗೆ ಯಾವುದೇ ಜಾನರ್ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಒದಗಿಸುವ ಮಾಧವನ್, ಪಾತ್ರದೊಳಗೆ ಪರಕಾಯ ಪ್ರವೇಶವೇ ಮಾಡಿಬಿಡ್ತಾರೆ. ಹಾಗಾಗಿ ಮಾಧವನ್‌ನ ತನ್ನ ನ್ಯೂ ಪ್ರಾಜೆಕ್ಟ್‌ನ ಭಾಗವಾಗಿಸಿಕೊಂಡಿದ್ದಾರೆ ಮೌಳಿ.

ಹಿಂದಿ, ಮಲಯಾಳಂ ಹಾಗೂ ತಮಿಳು ಚಿತ್ರರಂಗಗಳಿಂದ ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಹಾಗೂ ಮಾಧವನ್‌ರನ್ನ ಆರಿಸಿಕೊಂಡಿರೋ ಮೌಳಿ, ಸ್ಯಾಂಡಲ್‌ವುಡ್‌‌ನಿಂದ ಯಾರನ್ನ ಚಿತ್ರಕ್ಕೆ ಸೆಲೆಕ್ಟ್ ಮಾಡಿಕೊಳ್ತಾರೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. 2027ಕ್ಕೆ ತೆರೆಗಪ್ಪಳಿಸಲಿರೋ ಈ ಸಿನಿಮಾ ಯಾವುದೇ ಹಾಲಿವುಡ್ ಚಿತ್ರಕ್ಕಿಂತ ಕಮ್ಮಿ ಇರಲ್ಲ ಅನ್ನೋದನ್ನ ಪ್ರೂವ್ ಮಾಡಲಿದ್ದಾರಂತೆ ಜಕ್ಕನ್ನ.

Exit mobile version