ಸಿನಿಮಾಗಾಗಿ ಹೊಸ ಪ್ರಪಂಚವನ್ನೇ ಸೃಷ್ಟಿಸೋ ಮಹಾನ್ ಮಾಂತ್ರಿಕರಲ್ಲಿ ರಾಜಮೌಳಿ ಕೂಡ ಒಬ್ರು. ಸದ್ಯ ಪ್ರಿನ್ಸ್ ಮಹೇಶ್ ಬಾಬು ಜೊತೆ ಗ್ಲೋಬಲ್ ಮೂವಿ ವಾರಣಾಸಿ ಮಾಡ್ತಿರೋದು ಗೊತ್ತೇಯಿದೆ. ಆ ಸಿನಿಮಾಗಾಗಿ ವಿಶ್ವನಾಥ ನೆಲೆಸಿರೋ ಕಾಶಿಯನ್ನೇ ಕಂಪ್ಲೀಟ್ ಆಗಿ ರೀ-ಕ್ರಿಯೇಟ್ ಮಾಡಿದ್ದಾರೆ. ಹೈದ್ರಾಬಾದ್‌ನಲ್ಲಿ ತಲೆ ಎತ್ತಿರೋ ವಾರಣಾಸಿ ಸೆಟ್‌ನ ನೋಡಿದ್ರೆ ನಿಮಗೆ ಕಾಶಿಗೆ ಹೋದ ಫೀಲ್ ಕೊಡಲಿದೆ. ಒಂದೊಂದು ಘಾಟ್ ಕೂಡ ಕಣ್ಣಿಗೆ ಕಟ್ಟಿದಂತಿದೆ. ಇದರ ಫುಲ್ ಡಿಟೇಲ್ ಸ್ಟೋರಿ ಇಲ್ಲಿದೆ..
- ವಾರಣಾಸಿ ಸೆಟ್ ಲೀಕ್.. ಮೌಳಿಯಿಂದ ಕಾಶಿ ರೀ-ಕ್ರಿಯೇಟ್!
- ಹೈದ್ರಾಬಾದ್‌ನಲ್ಲೇ ವಿಶ್ವನಾಥನ ಕಾಶಿ ಸೃಷ್ಟಿಸಿದ್ದಾರೆ ರಾಜಮೌಳಿ
- ವಾರಣಾಸಿ ಪ್ರಪಂಚದಲ್ಲಿ ಪ್ರತಿ ಘಾಟ್ ಕೂಡ ಕಣ್ಣಿಗೆ ಕಟ್ಟಿದಂತಿವೆ
- ಟೀಸರ್ನಿಂದ ಸೆನ್ಸೇಷನ್.. 1400 ಕೋಟಿ ಬಜೆಟ್ ವಾರಣಾಸಿ
ಎಸ್ ಎಸ್ ರಾಜಮೌಳಿ.. ಸಕ್ಸಸ್‌ಗೆ ಕೇರ್ ಆಫ್ ಅಡ್ರೆಸ್. ಮಾಡಿದ ಎಲ್ಲಾ ಸಿನಿಮಾಗಳು ಆಲ್ ಟೈಂ ಬ್ಲಾಕ್ ಬಸ್ಟರ್‌ಗಳೇ. ಸಿನಿಮಾಗಾಗಿ ಹೊಸ ಪ್ರಪಂಚವನ್ನೇ ಕಟ್ಟಿ, ಅದರೊಳಗೆ ಪ್ರೇಕ್ಷಕರಿಗೆ ವೆಲ್ಕಮ್ ಹೇಳುವ ಮೌಳಿ, ನಿರೀಕ್ಷೆಗೆ ಮೀರಿದ ಥ್ರಿಲ್ ಕೊಡ್ತಾರೆ. ಅದಕ್ಕೆ ಬಾಹುಬಲಿ, ತ್ರಿಬಲ್ ಆರ್ ಸಿನಿಮಾಗಳೇ ಸಾಕ್ಷಿ. ಇದೀಗ ವಾರಣಾಸಿ ಹೊಸದಾಗಿ ಸೇರ್ಪಡೆ ಆಗ್ತಿದೆ.
ಯೆಸ್.. ಗ್ಲೋಬ್ ಟ್ರಾಟರ್ ಮೂವಿಗೆ ಕೈ ಹಾಕಿರೋ ರಾಜಮೌಳಿ, ಸೂಪರ್ ಸ್ಟಾರ್ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಜೊತೆಗೂಡಿ ವಾರಣಾಸಿ ಮೂವಿ ಮಾಡ್ತಿದ್ದಾರೆ. ಸುಮಾರು 1400ಕೋಟಿ ಬಿಗ್ ಬಜೆಟ್ ಮೂವಿ ಇದಾಗಿದ್ದು, ಸಿಂಗಲ್ ಟೀಸರ್‌ನಿಂದಲೇ ನೋಡುಗರ ಹುಬ್ಬೇರಿಸಿದೆ. ಸದ್ಯ ಈ ಸಿನಿಮಾದ ಪ್ರಮೋಷನ್ಸ್‌ನ ಮೇಕಿಂಗ್ ಹಂತದಲ್ಲೇ ಹಾಲಿವುಡ್ ಲೆವೆಲ್‌ನಲ್ಲಿ ಶುರುವಿಟ್ಟಿದ್ದಾರೆ ರಾಜಮೌಳಿ.
ಆದ್ರೀಗ ವಾರಣಾಸಿ ಟೈಟಲ್‌ಗೆ ತಕ್ಕನಾಗಿ ಕಾಶಿ ಬ್ಯಾಕ್‌ಡ್ರಾಪ್‌ನಲ್ಲೇ ಚಿತ್ರದ ಬಹುತೇಕ ದೃಶ್ಯಗಳು ಇರಲಿವೆ. ಹೀಗಾಗಿ ಕಾಶಿಗೇ ಹೋಗಿ ಸಿನಿಮಾನ ಶೂಟ್ ಮಾಡೋದು ಹೈಲಿ ಇಂಪಾಸಿಬಲ್. ಅದೇ ಕಾರಣದಿಂದ ಸಿನಿಮಾಗಾಗಿ ಕಂಪ್ಲೀಟ್ ಕಾಶಿಯನ್ನೇ ರೀ ಕ್ರಿಯೇಟ್ ಮಾಡಿದ್ದಾರೆ ರಾಜಮೌಳಿ. ಹೌದು.. ಹೈದ್ರಾಬಾದ್‌ನಲ್ಲೇ ಇಡೀ ಕಾಶಿ, ಅದ್ರಲ್ಲಿರೋ ಘಾಟ್‌ಗಳನ್ನ ಸೆಟ್ ಮೂಲಕ ಸೃಷ್ಟಿಸಿರೋ ಮೌಳಿ, ಚಿತ್ರಪ್ರೇಮಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಯಾಕಂದ್ರೆ ಅಲ್ಲಿ ಕಾಣುವ ಒಂದೊಂದು ಮೆಟ್ಟಿಲು, ಮಂಟಪ, ಪ್ರತಿಯೊಂದು ಕೂಡ ಯಥಾವತ್ ಇದೆ. ಜೆರಾಕ್ಸ್ ಒತ್ತಿದಂತಿದೆ ಕಾಶಿ ಸೆಟ್. ಸಿನಿಮಾದ ಸೆಟ್‌ನೇ ಇಷ್ಟು ಡಿಟೈಲಿಂಗ್ ಆಗಿ ಮಾಡಿದ್ದಾರೆ ಅಂದ್ರೆ ಇನ್ನೂ ಸಿನಿಮಾ ಯಾವ ಲೆವೆಲ್‌ಗೆ ಇರಲಿದೆ ಅಂತ ನೀವೇ ಊಹಿಸಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
