ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ಅದ್ಯಾರಿಗೋ ಲವ್ ಯೂ ಅಂದಿದ್ದಾರೆ. ಅದಕ್ಕೆ ಅವರು ಕೂಡ ಲವ್ ಯೂ ಟು ಅಂತ ರಿಯಾಕ್ಟ್ ಮಾಡಿದ್ದಾರೆ. ಅರೇ.. ಮೊನ್ನೆಯಷ್ಟೇ ನಾನಿ ಜೊತೆ ಹಿಟ್ ಕೊಟ್ಟು, ಎಲ್ಲರ ದಿಲ್ ದೋಚಿದ್ದ ಕರಾವಳಿ ಚೆಲುವೆ, ಈಗ ಈ ವಿಷಯದಿಂದ ಹುಡುಗರ ಹೃದಯ ಭಾರವಾಗಿಸಿದ್ದಾರೆ. ಇಷ್ಟಕ್ಕೂ ಯಾರು ಆ ಹುಡ್ಗ ಅನ್ನೋ ಕ್ಯೂರಿಯಾಸಿಟಿಗೆ ಇಲ್ಲಿದೆ ಉತ್ತರ.
- KGF ಕ್ವೀನ್ ಶ್ರೀನಿಧಿ Love U 2 ಅಂದಿದ್ಯಾರಿಗೆ ಗೊತ್ತಾ..?
- ಹುಡುಗ್ರ ಹೃದಯ ಭಾರವಾಗಿಸಿದ್ಯಾಕೆ ಮಂಗಳೂರ ಬಾಲೆ..?
ಕೆಜಿಎಫ್ ಚಿತ್ರದ ಮೂಲಕ ಕನ್ನಡಿಗರ ಜೊತೆ ವಿಶ್ವ ಸಿನಿದುನಿಯಾದಲ್ಲಿ ಭರವಸೆ ಮೂಡಿಸಿ, ಎಲ್ಲರಿಗೂ ಚಿರಪರಿಚಿತರಾದ ಶ್ರೀನಿಧಿ ಶೆಟ್ಟಿ, ಕೆಜಿಎಫ್ ಕ್ವೀನ್ ಅಂತಲೇ ಫೇಮಸ್ ಆದರು. ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಜೊತೆ ರಾಕಿಂಗ್ ಪರ್ಫಾಮೆನ್ಸ್ ನೀಡಿ, ಪರಭಾಷಾ ಮೇಕರ್ಸ್ ಹಾಗೂ ಸ್ಟಾರ್‌ಗಳಿಗೂ ಹಿತ ಅನಿಸಿದ್ರು, ಈ ಕನ್ನಡದ ಚೆಂದುಳ್ಳಿ ಚೆಲುವೆ.
- ಸಿದ್ದು ಜೊನ್ನಲಗಡ್ಡ ಜೊತೆ ಶ್ರೀನಿಧಿ ಶೆಟ್ಟಿ ಡಬಲ್ ಲವ್
- ಬರ್ತಿದೆ ತೆಲುಸು ಕದಾ ಟ್ರಯಾಂಗಲ್ ಪ್ರೇಮ್ ಕಹಾನಿ
ಹೌದು, ನಮ್ಮ ಕನ್ನಡತಿ ಲವ್ ಯೂ ಅಂದಿರೋದು, ಆ ಕಡೆಯಿಂದ ಆತ ಲವ್ ಯೂ ಟು ಅಂದಿರೋದು ರಿಯಲ್ ಅಲ್ಲ. ರೀಲ್‌ಗಾಗಿ ಅನ್ನೋದು ಇಂಟರೆಸ್ಟಿಂಗ್. ಹೌದು, ಮತ್ತೊಂದು ತೆಲುಗು ಚಿತ್ರದಲ್ಲಿ ಬ್ಯುಸಿ ಆಗಿರೋ ಶ್ರೀನಿಧಿ, ತೆಲುಸು ಕದಾ ಅನ್ನೋ ಚಿತ್ರದಲ್ಲಿ ಸಿದ್ದು ಜೊನ್ನಲಗಡ್ಡ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ವಿಶೇಷ ಅಂದ್ರೆ ಇದರಲ್ಲಿ ಸಿದ್ದುಗೆ ಸಿಂಗಲ್ ಅಲ್ಲ, ಡಬಲ್ ಜೋಡಿ. ಶ್ರೀನಿಧಿ ಜೊತೆ ರಾಶಿ ಖನ್ನಾ ಕೂಡ ನಾಯಕನಟಿ.
