ಸ್ಟಾರ್‌ ಕ್ರಿಕೆಟರ್‌ ಜೊತೆ ಕಿಸ್‌ ಬ್ಯೂಟಿ ಶ್ರೀಲೀಲಾ ಡೇಟಿಂಗ್? ಯಾರು ಆ ಆಟಗಾರ?

Untitled design 2026 05 17T172851.020

ಕನ್ನಡತಿ ಶ್ರೀಲೀಲಾ ಇಂದು ಪ್ಯಾನ್ ಇಂಡಿಯಾ ನಟಿಯಾಗಿ ಮಿಂಚುತ್ತಿದ್ದಾರೆ. ಮಲಯಾಳಂ ಹೊರತುಪಡಿಸಿ, ತೆಲುಗು, ತಮಿಳು, ಹಿಂದಿ ಮತ್ತು ಕನ್ನಡದಲ್ಲಿ ತಮ್ಮ ಅದ್ಭುತ ಅಭಿನಯ ಮತ್ತು ನೃತ್ಯದಿಂದ ಅಭಿಮಾನಿಗಳನ್ನು ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇತ್ತೀಚೆಗೆ ಬಾಲಿವುಡ್ ಪ್ರವೇಶಿಸಿದ ಬಳಿಕ ಶ್ರೀಲೀಲಾ ಬೇಡಿಕೆ ಹೆಚ್ಚಾಗಿದೆ. ಆದರೆ, ಈ ಯಶಸ್ಸಿನ ನಡುವೆ ಒಬ್ಬ ಯುವ ಕ್ರಿಕೆಟಿಗನ ಜೊತೆ ಶ್ರೀಲೀಲಾ ಹೆಸರು ಥಳುಕು ಹಾಕಿಕೊಂಡಿದೆ. ಇದೀಗ ಸಿನಿಮಾಗಳಿಗಿಂತ ಹೆಚ್ಚು ಅವರ ಹೆಸರು ಗಾಸಿಪ್ ವಿಚಾರದಲ್ಲಿ ಸದ್ದು ಮಾಡುತ್ತಿದೆ.

ಯಾರು ಆ ಕ್ರಿಕೆಟಿಗ?

ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದ ಪರ ಅದ್ಭುತ ಪ್ರದರ್ಶನ ನೀಡುತ್ತಿರುವ ತಿಲಕ್ ವರ್ಮಾ ಅವರ ಜೊತೆ ಶ್ರೀಲೀಲಾ ಹೆಸರು ಥಳುಕು ಹಾಕಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರಿಗೆ ಸಂಬಂಧವಿದೆಯೇ ಎಂಬ ಸುದ್ದಿ ಹರಿದಾಡುತ್ತಿವೆ. 

ಮುಂಬೈ ಇಂಡಿಯನ್ಸ್ ಮ್ಯಾಚ್ ನಲ್ಲಿ ಶ್ರೀಲೀಲಾ ತಾಯಿ

ಇತ್ತೀಚೆಗೆ ನಡೆದ ಒಂದು ಐಪಿಎಲ್ ಪಂದ್ಯದಲ್ಲಿ, ಶ್ರೀಲೀಲಾ ಅವರ ತಾಯಿ ಮುಂಬೈ ಇಂಡಿಯನ್ಸ್‌‌ನ ಫ್ಯಾಮಿಲಿ ಬಾಕ್ಸ್ ನಲ್ಲಿ ಕಾಣಿಸಿಕೊಂಡರು. ಸಾಮಾನ್ಯವಾಗಿ ಆ ಬಾಕ್ಸ್ ನಲ್ಲಿ ಆಟಗಾರರ ಕುಟುಂಬದವರು ಮಾತ್ರ ಕುಳಿತುಕೊಳ್ಳುತ್ತಾರೆ. ಅಷ್ಟಕ್ಕೂ ತಿಲಕ್ ವರ್ಮಾ ಕೂಡ ಮುಂಬೈ ಇಂಡಿಯನ್ಸ್ ಆಟಗಾರ. ಇದರಿಂದಾಗಿ ಅವರಿಬ್ಬರಿಗೂ ಏನಾದರೂ ಸಂಬಂಧವಿದೆಯೇ ಎಂಬ ಗಾಸಿಪ್ ಹರಡಲು ಶುರುವಾಯಿತು.

ವಾಸ್ತವದಲ್ಲಿ ಏನು ನಿಜ?

ಶ್ರೀಲೀಲಾ ಮತ್ತು ತಿಲಕ್ ವರ್ಮಾ ಇಬ್ಬರೂ ಒಟ್ಟಿಗೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡಿಲ್ಲ. ಅವರಿಗೆ ಪರಿಚಯವಿದೆಯೇ ಅಥವಾ ಗೆಳೆತನವಿದೆಯೇ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಹಾಗಾಗಿ ಈ ಸುದ್ದಿ ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತ. ಶ್ರೀಲೀಲಾ ತಮ್ಮ ತಾಯಿಯೊಂದಿಗೆ ಮ್ಯಾಚ್ ವೀಕ್ಷಿಸಲು ಹೋಗಿದ್ದು, ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ.

ಶ್ರೀಲೀಲಾ ವೃತ್ತಿ ಗಂಭೀರ

ಶ್ರೀಲೀಲಾ ಯಾವಾಗಲೂ ಅನಗತ್ಯ ವಿವಾದಗಳಿಂದ ದೂರವಿರುತ್ತಾರೆ. ಪ್ರಸ್ತುತ ಅವರು ತೆಲುಗು, ಹಿಂದಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ವಿದೇಶ ಪ್ರವಾಸಗಳು ಮತ್ತು ಸಿನಿಮಾಗಳಲ್ಲಿ ನಟಿಸುವುದರ ನಡುವೆ ಖಾಸಗಿ ಜೀವನವನ್ನು ಗುಟ್ಟಾಗಿಟ್ಟುಕೊಳ್ಳಲು ಇಷ್ಟಪಡುತ್ತಾರೆ.

ಹಿಂದೆಯೂ ಕಾರ್ತಿಕ್ ಆರ್ಯನ್ ಜೊತೆ ಸುಳ್ಳು ಸುದ್ದಿ

ಕೆಲ ತಿಂಗಳ ಹಿಂದೆ ಶ್ರೀಲೀಲಾ ಹೆಸರು ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆ ಥಳುಕು ಹಾಕಿಕೊಂಡಿತ್ತು. ಕಾರ್ತಿಕ್ ಮನೆಯಲ್ಲಿ ನಡೆದ ಒಂದು ಸಮಾರಂಭದಲ್ಲಿ ಶ್ರೀಲೀಲಾ ಭಾಗಿಯಾಗಿದ್ದರು. ಅದಾದ ಬಳಿಕ ಕಾರ್ತಿಕ್ ಆರ್ಯನ್ ತಾಯಿ ‘ನಮಗೆ ಡಾಕ್ಟರ್ ಸೊಸೆ ಬೇಕು’ ಎಂದು ಹೇಳಿದ್ದರು. ಇದನ್ನು ತಪ್ಪಾಗಿ ಅರ್ಥೈಸಿ, ಇವರಿಬ್ಬರ ನಡುವೆ ಪ್ರೀತಿ ಇದೆ ಎಂದು ಸುಳ್ಳು ಸುದ್ದಿ ಹಬ್ಬಿತ್ತು. ಆದರೆ ಅದೂ ಸುಳ್ಳು ಎಂದು ಬಹಿರಂಗವಾಗಿತ್ತು.

Exit mobile version