ಸ್ಯಾಂಡಲ್‌ವುಡ್‌ ಕಿಸ್​ ಬೆಡಗಿಗೆ ಗುಟ್ಟಾಗಿ ಫಿಕ್ಸ್​ ಆಯ್ತಾ ಮದುವೆ? ಅರಿಶಿಣ ಶಾಸ್ತ್ರದ ಫೋಟೋಗಳಾ?

Untitled design (85)

ಕನ್ನಡ, ತೆಲುಗು, ಮತ್ತು ಇತ್ತೀಚೆಗೆ ಬಾಲಿವುಡ್‌ನಲ್ಲಿ ತಮ್ಮ ಅಭಿನಯದಿಂದ ಮಿಂಚುತ್ತಿರುವ ಸ್ಯಾಂಡಲ್‌ವುಡ್‌ ನಟಿ ಶ್ರೀಲೀಲಾ, ಇದೀಗ ತಮ್ಮ ಖಾಸಗಿ ಜೀವನದ ಸುದ್ದಿಯಿಂದ ಸದ್ದು ಮಾಡುತ್ತಿದ್ದಾರೆ. ಶ್ರೀಲೀಲಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅರಿಶಿಣ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದು, “ಕಮಿಂಗ್ ಸೂನ್” ಎಂದು ಬರೆದು ಅಭಿಮಾನಿಗಳಿಗೆ ಆಶ್ಚರ್ಯವನ್ನುಂಟು ಮಾಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶ್ರೀಲೀಲಾ ಮದುವೆಯ ಗುಟ್ಟನ್ನು ತೆರೆದಿಡುತ್ತಿರುವಂತೆ ಭಾಸವಾಗಿದೆ.

ಇತ್ತೀಚೆಗೆ ಬಾಲಿವುಡ್‌ಗೆ ಕಾಲಿಟ್ಟಿರುವ ಶ್ರೀಲೀಲಾ, ನಟ ಕಾರ್ತಿಕ್ ಆರ್ಯನ್ ಜೊತೆ ‘ಆಶಿಖಿ 3’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಈ ನಡುವೆ, ಶ್ರೀಲೀಲಾ ಮತ್ತು ಕಾರ್ತಿಕ್ ಆರ್ಯನ್ ಡೇಟಿಂಗ್‌ನಲ್ಲಿದ್ದಾರೆ ಎಂಬ ವದಂತಿಗಳು ಹಬ್ಬಿವೆ. ಕಾರ್ತಿಕ್ ಆರ್ಯನ್ ಕುಟುಂಬದೊಂದಿಗೆ ಶ್ರೀಲೀಲಾ ಆಪ್ತವಾಗಿರುವುದು, ಹಾಗೂ ಕಾರ್ತಿಕ್‌ನ ತಾಯಿ ಒಂದು ಕಾರ್ಯಕ್ರಮದಲ್ಲಿ “ನಮಗೆ ಡಾಕ್ಟರ್ ಸೊಸೆ ಬೇಕು” ಎಂದು ಹೇಳಿದ್ದು ಈ ವದಂತಿಗಳಿಗೆ ಪುಷ್ಠಿ ನೀಡಿದೆ.

ADVERTISEMENT
ADVERTISEMENT

ಶ್ರೀಲೀಲಾ ಹಂಚಿಕೊಂಡಿರುವ ಫೋಟೋಗಳಲ್ಲಿ ಕುಟುಂಬಸ್ಥರು ಆಕೆಯ ಮುಖಕ್ಕೆ ಅರಿಶಿಣ ಹಚ್ಚುತ್ತಿರುವ ದೃಶ್ಯಗಳಿವೆ. ಇದನ್ನು ನೋಡಿದ ಅಭಿಮಾನಿಗಳು, ಶ್ರೀಲೀಲಾ ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆ ಎಂಬ ಊಹಾಪೋಹಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಇದು ಗುಟ್ಟಾಗಿ ನಡೆದ ಅರಿಶಿಣ ಶಾಸ್ತ್ರದ ಫೋಟೋಗಳೇ ಎಂದು ಪ್ರಶ್ನಿಸಿದ್ದಾರೆ. ಆದರೆ, ಶ್ರೀಲೀಲಾ ಇದುವರೆಗೆ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಯಶಸ್ಸು ಕಂಡಿರುವ ಶ್ರೀಲೀಲಾ, ಈಗ ಬಾಲಿವುಡ್‌ನಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ‘ಆಶಿಖಿ 3’ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿರುವ ಶ್ರೀಲೀಲಾ, ಕಾರ್ತಿಕ್ ಆರ್ಯನ್ ಜೊತೆಗಿನ ತಮ್ಮ ರೊಮ್ಯಾಂಟಿಕ್ ಕೆಮಿಸ್ಟ್ರಿಯಿಂದ ಗಮನ ಸೆಳೆಯುತ್ತಿದ್ದಾರೆ. ಈ ಚಿತ್ರದ ಜೊತೆಗೆ, ಶ್ರೀಲೀಲಾ ತಮ್ಮ ವೈಯಕ್ತಿಕ ಜೀವನದ ಸುದ್ದಿಗಳಿಂದಲೂ ಸದ್ದು ಮಾಡುತ್ತಿದ್ದಾರೆ.

Exit mobile version