ಬಿಟೌನ್‌‌ನಲ್ಲಿ ಶ್ರೀಲೀಲಾ ಪ್ರೇಮಲೀಲೆ.. ಅದೃಷ್ಟವಂತನ್ಯಾರು?

ವೇವ್ಸ್‌‌ನಲ್ಲಿ ಅಮ್ಮಂದಿರ ಜೊತೆ ಲವ್ ಬರ್ಡ್ಸ್ ಕಲರವ..!

Untitled design 2025 05 03t183758.855

ಕ್ಯೂಟ್ ಕ್ವೀನ್ ಶ್ರೀಲೀಲಾಗೆ ಪಕ್ಕದ ಟಾಲಿವುಡ್‌ ರೆಡ್ ಕಾರ್ಪೆಟ್ ಹಾಸಿತ್ತು. ಇದೀಗ ಈ ಬ್ಯೂಟಿ ಕಿಸಿಕ್ ಅಂತ ಬಾಲಿವುಡ್‌ಗೆ ಹಾರಿದ್ದಾರೆ. ಈಕೆಯ ಅಂದ, ಚೆಂದ ನೋಡಿ ಬ್ಯಾಚಲರ್ ಸ್ಟಾರ್‌‌ಗಳು ನಾ ಮುಂದು ತಾ ಮುಂದು ಅಂತ ಕ್ಯೂ ನಿಲ್ತಿದ್ದಾರಂತೆ. ಆದ್ರೆ ಶ್ರೀಲೀಲಾ ಟೇಸ್ಟ್ ಸಖತ್ ಸ್ಪೆಷಲ್. ಅದು ಯಾರು..? ಹೇಗೆ ಅನ್ನೋದನ್ನ ಈ ಸ್ಟೋರಿ ನೋಡಿ.

ಪುಷ್ಪ-2 ಸಿನಿಮಾದಲ್ಲಿ ಕಿಸಿಕ್ ಸಾಂಗ್‌ಗೆ ಸೊಂಟ ಬಳುಕಿಸಿದ್ದ ಚೆಂದುಳ್ಳಿ ಚೆಲುವೆ, ಕನ್ನಡತಿ ಶ್ರೀಲೀಲಾಗೆ ಆ ಸಿನಿಮಾದ ಬಳಿಕ ಡಿಮ್ಯಾಂಡ್ ದುಪ್ಪಟ್ಟು ಹೆಚ್ಚಿದೆ. ಅದ್ರಲ್ಲೂ ಬಾಲಿವುಡ್‌ನ ಬಿಗ್ ಪ್ರೊಡಕ್ಷನ್ ಬ್ಯಾನರ್‌‌ಗಳು ಈಕೆಗೆ ರೆಡ್ ಕಾರ್ಪೆಟ್ ಹಾಸಿ, ವೆಲ್ಕಮ್ ಹೇಳಿದ್ದಾರೆ. ಆಶಿಕಿ-3 ಸಿನಿಮಾದಲ್ಲಿ ಬಣ್ಣ ಹಚ್ಚಿರೋ ಕ್ಯೂಟ್ ಕ್ವೀನ್ ಶ್ರೀಲೀಲಾ, ಇನ್ಮೇಲೆ ಫುಡ್ಡು, ಬೆಡ್ಡನ್ನು ಅಲ್ಲೇ ಕಂಡುಕೊಳ್ಳೋ ಲಕ್ಷಣ ತೋರಿದ್ದಾರೆ.

ಹೌದು.. ಬಾಲಿವುಡ್ ಅಂಗಳದ ಮೋಸ್ಟ್ ಹ್ಯಾಂಡ್ಸಮ್ ಹಂಕ್ ಕಾರ್ತಿಕ್ ಆರ್ಯನ್ ಜೊತೆ ಸ್ಕ್ರೀನ್ ಶೇರ್ ಮಾಡಿರೋ ಶ್ರೀಲೀಲಾ, ಆಶಿಕಿ-3 ಟೀಸರ್‌‌ನಿಂದಲೇ ಮತ್ತಷ್ಟು ಮಂದಿಯನ್ನ ಮೋಡಿ ಮಾಡಿದ್ದಾರೆ. ಈಕೆ ಮುಂಬೈ ಫ್ಲೈಟ್ ಏರುತ್ತಿದ್ದಂತೆ ಸೈಫ್ ಅಲಿ ಖಾನ್ ಮಗನ ಜೊತೆ ಕಾಣಿಸಿಕೊಂಡಿದ್ರು. ಆದ್ರೀಗ ಕಹಾನಿ ಮೇ ಟ್ವಿಸ್ಟ್ ಅಂತ ಮತ್ತೊಬ್ಬ ಸ್ಟಾರ್ ಜೊತೆ ಚಾಟಿಂಗ್ ಹಾಗೂ ಡೇಟಿಂಗ್ ಶುರುವಿಟ್ಟಿದ್ದಾರೆ.

ಕಾರ್ತಿಕ್ ಆರ್ಯನ್ ಜೊತೆ ಬರೀ ನಟನೆ ಅಷ್ಟೇ ಅಲ್ಲ, ಒಂದೊಳ್ಳೆ ಸ್ನೇಹ, ಸಲುಗೆಯ ಬಾಂಧವ್ಯ ಏರ್ಪಟ್ಟಿದೆ ಎನ್ನಲಾಗ್ತಿದೆ. ಅದನ್ನ ಅವರಿಬ್ಬರ ಖಾಸಗಿತನಕ್ಕೆ ಮಾತ್ರ ಸೀಮಿತಗೊಳಿಸದ ಇವರುಗಳು, ನೆಕ್ಸ್ಟ್ ಲೆವೆಲ್‌ಗೆ ಕೊಂಡೊಯ್ಯುತ್ತಿದ್ದಾರೆ. ಯೆಸ್.. ಫ್ಯಾಮಿಲಿ ಗೆಟ್ ಟುಗೆದರ್ ಗಳಿಂದ ಹಿಡಿದು, ಪಾರ್ಟಿ, ಪಬ್‌‌ವರೆಗೂ ಇವ್ರ ಜರ್ನಿ ಸಾಗಿದೆ ಎನ್ನಲಾಗ್ತಿದೆ.

ಇತ್ತೀಚೆಗೆ ಕಾರ್ತಿಕ್ ಆರ್ಯನ್ ಕುಟುಂಬಸ್ಥರ ಕಾರ್ಯಕ್ರಮವೊಂದರಲ್ಲಿ ಶ್ರೀಲೀಲಾ ಕಾಣಿಸಿಕೊಂಡಿದ್ರು. ಮತ್ತೊಂದು ವೇದಿಕೆಯಲ್ಲಿ ಕಾರ್ತಿಕ್‌ಗೆ ಕನ್ನಡ ಪಾಠ ಹೇಳಿಕೊಟ್ಟಿದ್ರು ಕ್ಯೂಟ್ ಕ್ವೀನ್. ಇದೀಗ ವೇವ್ಸ್ ಸಮ್ಮಿಟ್‌‌ನಲ್ಲಿ ತಾಯಂದಿರ ಸಮೇತ ಈ ಲವ್ ಬರ್ಡ್ಸ್ ಕಾಣಿಸಿಕೊಂಡಿರೋ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ. ಹೌದು.. ಸಂಬಂಧಿಕರ ರೀತಿ ಹೀಗೆ ಪದೇ ಪದೆ ಫ್ಯಾಮಿಲಿಗಳು ಒಟ್ಟೊಟ್ಟಿಗೆ ಕಾಣಿಸಿಕೊಳ್ತಿರೋದು ಹೊಸ ಗಾಸಿಪ್‌ಗಳಿಗೆ ನಾಂದಿ ಹಾಡಿದೆ.

ಕನ್ನಡದಿಂದ ಹಂತ ಹಂತವಾಗಿ ತೆಲುಗು, ಹಿಂದಿಯವರೆಗೆ ಬೆಳೆದಿರೋ ಶ್ರೀಲೀಲಾ ಅದ್ಭುತ ನಟಿ. ಆದ್ರೆ ಆಕೆಗೆ ಅದ್ಯಾಕೋ ಅದೃಷ್ಠ ಕೈಗೂಡುತ್ತಿಲ್ಲ. ದೊಡ್ಡ ದೊಡ್ಡ ಸ್ಟಾರ್ಸ್‌ ಜೊತೆ ಕಾಣಿಸಿಕೊಂಡರೂ ಬ್ಲಾಕ್ ಬಸ್ಟರ್ ಹಿಟ್ ಅನ್ನೋದು ಸಿಕ್ಕಿಲ್ಲ. ಆದ್ರೆ ಗೆದ್ದೇ ಗೆಲ್ಲುವೆ ಒಂದು ದಿನ ಅಂತ ತನ್ನ ಪಾಡಿಗೆ ತಾನು ಸಿನಿಮಾಗಳನ್ನ ಮಾಡ್ತಾ ಹೋಗ್ತಿದ್ದಾರೆ ಲೀಲಮ್ಮ. ವಿಶೇಷ ಅಂದ್ರೆ ಕಾರ್ತಿಕ್ ಆರ್ಯನ್‌ನ ಮದ್ವೆ ಆಗ್ತಾರಾ ಅನ್ನೋ ಗುಮಾನಿಗಳು ಕೂಡ ಕೇಳಿಬರ್ತಿವೆ. ಅದಕ್ಕೆಲ್ಲಾ ಸ್ವತಃ ಆಕೆಯೇ ಉತ್ತರಿಸಬೇಕಿದ್ದು, ಸದ್ಯ ಯಶ್ ಹೇಳಿದಂತೆ ಇಂಡಿಯಾ ಒಂದು ರೌಂಡ್ ಹಾಕ್ತಿದ್ದಾರೆ ನಮ್ಮ ಕನ್ನಡದ ಕ್ಯೂಟ್ ಕ್ವೀನ್ ಶ್ರೀಲೀಲಾ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version