ಕಾಲಿವುಡ್‌ ನಟಿಯ 14 ನಿಮಿಷದ ಖಾಸಗಿ ವಿಡಿಯೋ ಲೀಕ್

114 (3)

ತಮಿಳು ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ತಮ್ಮ ನಟನೆಯಿಂದ ಜನಪ್ರಿಯರಾದ ಶ್ರುತಿ ನಾರಾಯಣ್ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಿಂದ ಭಾರೀ ಸಂಚಲನ ಉಂಟಾಗಿದೆ. ಈ ವಿಡಿಯೋವು ಕಾಸ್ಟಿಂಗ್ ಕೌಚ್ ವಿಡಿಯೋ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ತಮಿಳು ಚಿತ್ರರಂಗ (Kollywood) ಹಾಗೂ ಕಿರುತೆರೆಯಲ್ಲಿ ಹೆಸರು ಮಾಡಿರುವ ಶ್ರುತಿ ನಾರಾಯಣ್ ಅವರ ಖಾಸಗಿ ವಿಡಿಯೋ ಲೀಕ್ ಆಗಿದ್ದು, ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ವಿಡಿಯೋ ವೈರಲ್ ಆದ ನಂತರ, ನಟಿ ಶ್ರುತಿ ನಾರಾಯಣ್ ತಕ್ಷಣವೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನು ಪ್ರೈವೇಟ್ ಮಾಡಿದರು. ಇದರಿಂದಾಗಿ ಅಭಿಮಾನಿಗಳು ಮತ್ತು ನೆಟ್ಟಿಗರು ಈ ಬಗ್ಗೆ ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ನಟಿ ಶ್ರುತಿ ನಾರಾಯಣ್, ಕಿರುತೆರೆಯಲ್ಲಿ ಹಲವಾರು ಜನಪ್ರಿಯ ಧಾರಾವಾಹಿಗಳಲ್ಲಿ ಮತ್ತು ಚಿತ್ರಗಳಲ್ಲಿ ಅಭಿನಯಿಸಿರುವವರು. ಕಿರುತೆರೆಯಲ್ಲಿ ತಮ್ಮ ಅದ್ಭುತ ನಟನೆಯಿಂದ ಗಮನ ಸೆಳೆದಿದ್ದ ಅವರು, ಈಗ ವಿವಾದದಿಂದ ಸುದ್ದಿಯಲ್ಲಿದ್ದಾರೆ.

ಶ್ರುತಿ ನಾರಾಯಣ್ ನಟನೆಯ ಜರ್ನಿ

ಶ್ರುತಿ ನಾರಾಯಣ್ ಅವರು ತಮಿಳಿನ ಜನಪ್ರಿಯ ಧಾರಾವಾಹಿ ‘ಕಾರ್ತಿಕ ದೀಪಂ’ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಪಡೆದರು. ಇದಲ್ಲದೇ ‘ಮಾರಿ’ ಸಿನಿಮಾದಲ್ಲಿಯೂ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಅಲ್ಲದೇ, ಸಮಂತಾ ಹಾಗೂ ವರುಣ್ ಧವನ್ ನಟಿಸಿರುವ ವೆಬ್ ಸರಣಿ ‘ಸಿಟಾಡೆಲ್: ಹನಿ ಬನಿ’ಯಲ್ಲಿಯೂ ನಟಿಸಿ, ತಮ್ಮ ನಟನೆಗೆ ಒಟಿಟಿ ಅವಾರ್ಡ್ ಸಹ ಪಡೆದಿದ್ದಾರೆ.

ವಿಡಿಯೋ ವೈರಲ್ ಆದ ನಂತರ, ಶ್ರುತಿ ನಾರಾಯಣ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನು ಪ್ರೈವೇಟ್ ಮಾಡಿದ್ದು, ತಮ್ಮ ಚಿತ್ರಗಳಿಗೆ ಯಾರೂ ಕಮೆಂಟ್ ಮಾಡದಂತೆ ನಿರ್ಧರಿಸಿದ್ದಾರೆ. ಇಂದಿನ (ಮಾರ್ಚ್ 27) ಮಧ್ಯಾಹ್ನ, ತಮ್ಮ ಕೆಲವು ಹೊಸ ಚಿತ್ರಗಳನ್ನು ಹಂಚಿಕೊಂಡಿದ್ದರೂ, ಅವುಗಳನ್ನು ಕೂಡಾ ಪ್ರೈವೇಟ್ ಮಾಡಿರುವುದಾಗಿ ತಿಳಿದು ಬಂದಿದೆ.

ನಟಿ ಶ್ರುತಿ ನಾರಾಯಣ್ ಅವರ ಅಭಿಮಾನಿಗಳು ಈ ವಿಷಯಕ್ಕೆ ಬೆಂಬಲ ಸೂಚಿಸುತ್ತಿದ್ದು, ಇದು ಸುಳ್ಳು ಸುದ್ದಿಯಾಗಿರಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. ಇನ್ನೊಂದ ಕಡೆ, ಕೆಲವರು ಅವರ ವಿರುದ್ಧ ಟೀಕೆ ಮಾಡುತ್ತಿದ್ದಾರೆ.

Exit mobile version