ಜೀ ಕನ್ನಡದ ಜನಪ್ರಿಯ ಧಾರಾವಾಹಿ ‘ಶ್ರಾವಣಿ ಸುಬ್ರಹ್ಮಣ್ಯ’ದಲ್ಲಿ ಶ್ರೀವಲ್ಲಿ ಪಾತ್ರದ ಮೂಲಕ ಅಭಿಮಾನಿಗಳ ಮನಗೆದ್ದಿರುವ ನಟಿ ಕೀರ್ತಿ ವೆಂಕಟೇಶ್ ಇದೀಗ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸೀರಿಯಲ್‌ನಲ್ಲಿ ಲಂಗ-ದಾವಣಿ, ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣುವ ಶ್ರೀವಲ್ಲಿ ನಿಜಜೀವನದಲ್ಲಿ ಸಖತ್ ಮಾಡರ್ನ್ ಮತ್ತು ಸ್ಟೈಲಿಶ್ ಆಗಿದ್ದಾರೆ. ಸದ್ಯ ದುಬೈ ವೆಕೇಶನ್‌ನಲ್ಲಿ ಎಂಜಾಯ್ ಮಾಡುತ್ತಿರುವ ಕೀರ್ತಿ ಅವರ ಬೀಚ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
‘ಶ್ರಾವಣಿ ಸುಬ್ರಹ್ಮಣ್ಯ’ ಧಾರಾವಾಹಿಯಲ್ಲಿ ಆರಂಭದಲ್ಲಿ ಪ್ರೇಮಿ, ನಂತರ ವಿಲನ್ ಮತ್ತು ಈಗ ಲವ್ ಗುರುವಾಗಿ ಕಾಣಿಸಿಕೊಳ್ಳುತ್ತಿರುವ ಶ್ರೀವಲ್ಲಿ ಪಾತ್ರ ಫೇವರಿಟ್ ಆಗಿದೆ. ಈ ಪಾತ್ರಕ್ಕೆ ಜೀವ ತುಂಬಿರುವ ಕೀರ್ತಿ ವೆಂಕಟೇಶ್ ಅವರ ಸ್ಮೈಲ್ ಮತ್ತು ನಟನೆ ಎಲ್ಲರನ್ನೂ ಆಕರ್ಷಿಸುತ್ತಿದೆ. ಸೀರಿಯಲ್ ಶೂಟಿಂಗ್‌ಗೆ ಸಣ್ಣ ಬ್ರೇಕ್ ಕೊಟ್ಟು ದುಬೈಗೆ ತೆರಳಿರುವ ಕೀರ್ತಿ ಅಲ್ಲಿ ಸಂಪೂರ್ಣ ವೆಕೇಶನ್ ಮೂಡ್‌ನಲ್ಲಿದ್ದಾರೆ.
ದುಬೈನ ಲಾ ಮೆರ್ ಬೀಚ್‌ನಲ್ಲಿ ಮೈ ಚಳಿ ಬಿಟ್ಟು ಕಾಣಿಸಿಕೊಂಡಿರುವ ಕೀರ್ತಿ ಅವರು ಬಮ್ ಶಾರ್ಟ್ಸ್ ಮತ್ತು ವೂಲನ್ ಕ್ರಾಪ್ ಟಾಪ್ ಧರಿಸಿ ಅಲೆಗಳ ಮಧ್ಯೆ ನೀರಾಟವಾಡುತ್ತಾ ಪೋಸ್ ಕೊಟ್ಟಿದ್ದಾರೆ. ಈ ಬೋಲ್ಡ್ ಲುಕ್ ಫೋಟೋಗಳು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಆದ ಬಳಿಕ ಸಾವಿರಾರು ಲೈಕ್‌ಗಳನ್ನು ಪಡೆದು ವೈರಲ್ ಆಗಿವೆ. ಅಭಿಮಾನಿಗಳು “ಸೀರಿಯಲ್‌ನಲ್ಲಿ ಸಿಂಪಲ್, ರಿಯಲ್ ಲೈಫ್‌ನಲ್ಲಿ ಸೂಪರ್ ಬೋಲ್ಡ್” ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಬೀಚ್ ಮಾತ್ರವಲ್ಲ, ದುಬೈ ಡೆಸರ್ಟ್ ಸಫಾರಿಯಲ್ಲೂ ಕೀರ್ತಿ ಎಂಜಾಯ್ ಮಾಡಿದ್ದಾರೆ. ರಣಹದ್ದುವನ್ನು ತಲೆ ಮೇಲೆ ಕೂರಿಸಿಕೊಂಡು ಪೋಸ್ ಕೊಟ್ಟ ಫೋಟೋಗಳು ಕೂಡ ಗಮನ ಸೆಳೆದಿವೆ. ಅಲ್ಲದೆ ದುಬೈನ ಸುಂದರ ಫ್ಲವರ್ ಗಾರ್ಡನ್ ಸೇರಿದಂತೆ ಹಲವು ತಾಣಗಳಿಗೆ ಭೇಟಿ ನೀಡಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಎಲ್ಲ ಫೋಟೋಗಳು ನಟಿಯ ಸ್ಟೈಲಿಶ್ ಲೈಫ್‌ಸ್ಟೈಲ್ ಅನ್ನು ತೋರಿಸುತ್ತವೆ.
ಅಭಿಮಾನಿಗಳು ಕೀರ್ತಿ ಅವರ ದುಬೈ ವೆಕೇಶನ್ ಫೋಟೋಗಳನ್ನು ಸಖತ್ ಲೈಕ್ ಮಾಡುತ್ತಿದ್ದಾರೆ. “ಶ್ರೀವಲ್ಲಿ ಸೂಪರ್ ಹಾಟ್” ಎಂದು ಕಾಮೆಂಟ್‌ಗಳು ಹರಿದಾಡುತ್ತಿವೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿವೆ.
