ಮೈಸೂರು: ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ತಮ್ಮ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರೊಂದಿಗೆ ಮೈಸೂರಿನ ಎಚ್.ಡಿ.ಕೋಟೆಯ ಬೀಚನಹಳ್ಳಿಯಲ್ಲಿರುವ ಕಬಿನಿ ಡ್ಯಾಂಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಶಿವಣ್ಣ ಜೊತೆ ಫೋಟೊ ತೆಗೆಸಿಕೊಳ್ಳಲು ಮುಗಿಬಿದ್ದರು.
ರಸ್ತೆಯಲ್ಲಿ ಸಾಗುವಾಗ ಹಾಡಿ ಮಕ್ಕಳನ್ನು ಕಂಡ ಶಿವರಾಜ್‌ಕುಮಾರ್ ದಂಪತಿ, ಅವರ ಜೊತೆ ಸಂತಸದಿಂದ ಫೋಟೊಗೆ ಪೋಸ್ ನೀಡಿದರು. 1986ರಲ್ಲಿ ‘ಆನಂದ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಶಿವರಾಜ್‌ಕುಮಾರ್, ತಮ್ಮ 40 ವರ್ಷಗಳ ಸಿನಿಮಾ ಪಯಣದಲ್ಲಿ 125ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಜನರ ಮನಸ್ಸಿನಲ್ಲಿ ‘ಹ್ಯಾಟ್ರಿಕ್ ಹೀರೋ’ ಮತ್ತು ‘ಸೆಂಚುರಿ ಸ್ಟಾರ್’ ಎಂದೇ ಖ್ಯಾತರಾಗಿದ್ದಾರೆ.