ಮರ್ಡರ್‌ ಮಿಸ್ಟ್ರಿ ಜಾನರ್‌ನ ಚಿತ್ರದಲ್ಲಿ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಆಗಲಿದ್ದಾರೆ ಶಿವರಾಜ್‌ಕುಮಾರ್‌

ಶಿವಣ್ಣ ಬರ್ತ್‌ಡೇ ಪ್ರಯುಕ್ತ "ಶ್ರಿತಿಕ್‌ ಮೋಷನ್‌ ಪಿಕ್ಚರ್ಸ್‌" ಬ್ಯಾನರ್‌ನ ಹೊಸ ಸಿನಿಮಾದ ಅಪ್‌ಡೇಟ್‌

Web 2025 07 12t185706.595

ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾಗಳಿಂದ ಬಿಗ್‌ ಅಪ್‌ಡೇಟ್‌ಗಳು ಸಿಗುತ್ತಿವೆ. ಹೊಸ ಸಿನಿಮಾಗಳ ಅಧಿಕೃತ ಘೋಷಣೆಗಳ ಜತೆಗೆ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳಿಂದಲೂ ಹೊಸ ವಿಷ್ಯಗಳು ಹೊರಬರುತ್ತಿವೆ. ಅದರಂತೆ, “ಶ್ರಿತಿಕ್‌ ಮೋಷನ್‌ ಪಿಕ್ಚರ್ಸ್‌” (Shritik Motion Pictures) ಬ್ಯಾನರ್‌ನಡಿಯೂ ಶಿವಣ್ಣ ಹೊಸ ಸಿನಿಮಾವೊಂದು ಮೂಡಿಬರುತ್ತಿದೆ.

“ಶ್ರಿತಿಕ್‌ ಮೋಷನ್‌ ಪಿಕ್ಚರ್ಸ್‌” ಬ್ಯಾನರ್‌ ಮೂಲಕ ಸಾಗರ್ ಶಾ, ಕೃಷ್ಣಕುಮಾರ್ ಬಿ ಮತ್ತು ಸೂರಜ್ ಶರ್ಮಾ ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನು ಬಾಲಾಜಿ ಮಾಧವನ್‌ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೆಯನ್ನೂ ಅವರೇ ಬರೆದಿದ್ದಾರೆ.

ಮರ್ಡರ್‌ ಮಿಸ್ಟ್ರಿ ಶೈಲಿಯ ಈ ಸಿನಿಮಾದಲ್ಲಿ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಪಾತ್ರದಲ್ಲಿ ನಟ ಶಿವರಾಜ್‌ಕುಮಾರ್‌ ಕಾಣಿಸಿಕೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಲಿರುವ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಈ ಸಿನಿಮಾದ ಅಧಿಕೃತ ಶೀರ್ಷಿಕೆ ಘೋಷಣೆಯಾಗಲಿದೆ. ಚಿತ್ರದ ಚಿತ್ರೀಕರಣವನ್ನು ಈ ವರ್ಷಾಂತ್ಯದಲ್ಲಿ ಪ್ರಾರಂಭಿಸುವ ಪ್ಲಾನ್‌ ಚಿತ್ರತಂಡದ್ದು.

Exit mobile version