ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಅದ್ಯಾಕೋ ಬ್ಯಾಡ್ ಟೈಂ ಶುರುವಾದಂತಿದೆ. ಇತ್ತೀಚೆಗೆ ಕಾಂತಾರ-1 ಚಿತ್ರದ ಇಬ್ಬರು ಕಲಾವಿದರು ಬ್ಯಾಕ್ ಟು ಬ್ಯಾಕ್ ತೀರಿಕೊಂಡಿದ್ರು. ಇದೀಗ ಛತ್ರಪತಿ ಶಿವಾಜಿ ಮಹಾರಾಜ್ ಚಿತ್ರಕ್ಕೂ ಕುತ್ತು ಬರುವಂತಿದೆ. ಬಾಲಿವುಡ್‌ನಲ್ಲಿ ಮತ್ತೊಂದು ಶಿವಾಜಿ ಸಿನಿಮಾ ಅನೌನ್ಸ್ ಆಗಿದ್ದು, ಅಕ್ಷರಶಃ ಶಾಕ್‌ನಲ್ಲಿದ್ದಾರೆ ಹೆಮ್ಮೆಯ ಕನ್ನಡಿಗ ರಿಷಬ್ ಶೆಟ್ಟಿ.
- ಬಾಲಿವುಡ್‌ನಲ್ಲಿ ಮತ್ತೊಂದು ಶಿವಾಜಿ.. ರಿಷಬ್ ಶೆಟ್ಟಿಗೆ ಶಾಕ್
- ರಿಷಬ್ v/s ರಿತೇಶ್.. ಯಾರಾಗ್ತಾರೆ ಶಿವಾಜಿ ಮಹಾರಾಜ್?
- ಡಿವೈನ್ ಸ್ಟಾರ್ಗೆ ಬ್ಯಾಡ್ ಟೈಂ.. ನಿಜವಾಗ್ತಿದ್ಯಾ ದೈವದ ಮಾತು?
- ಕಾಂತಾರ-1 ರಿಲೀಸ್ನಲ್ಲಿ ಬದಲಾವಣೆ ಇಲ್ಲ.. ಸಿಕ್ತು ಸ್ಪಷ್ಟನೆ..!
ರಿಷಬ್ ಶೆಟ್ಟಿ.. ಕರಾವಳಿಯ ಕುವರ, ಹೆಮ್ಮೆಯ ಕನ್ನಡಿಗ, ಕಾಂತಾರ ಚಿತ್ರದ ಮೂಲಕ ನಮ್ಮ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ವಿಶ್ವಸಂಸ್ಥೆವರೆಗೂ ಕೊಂಡೊಯ್ದ ಅತ್ಯದ್ಭುತ ಬಹುಮುಖ ಪ್ರತಿಭೆ. ಹೌದು.. ಕಷ್ಟಪಟ್ಟು ಹಂತ ಹಂತವಾಗಿ ಬೆಳೆದುಕೊಂಡು ಬಂದಂತಹ ರಿಷಬ್, ಸದ್ಯ ಡಿವೈನ್ ಸ್ಟಾರ್ ಆಗಿ ಇಡೀ ವಿಶ್ವ ಸಿನಿದುನಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ. ಕಾಂತಾರ ಬಳಿಕ ಇವ್ರ ಕಾಂತಾರ ಪ್ರೀಕ್ವೆಲ್ ಹಾಗೂ ಮುಂದಿನ ನಡೆ ಬಗ್ಗೆ ಎಲ್ಲಿಲ್ಲದ ಕುತೂಹಲ ಮೂಡಿದೆ.
ಸ್ವರಾಜ್ಯಕ್ಕಾಗಿ ಹೋರಾಡಿದ ಅಪ್ರತಿಮ ಐತಿಹಾಸಿಕ ವೀರ ಛತ್ರಪತಿ ಶಿವಾಜಿ ಮಹಾರಾಜ್ ಕುರಿತ ಸಿನಿಮಾಗಾಗಿ ಇಡೀ ಭಾರತ ಎದುರು ನೋಡ್ತಿದೆ. ಆದ್ರೆ ಇವರಿಬ್ಬರ ನಡುವೆ ಈ ಚಿತ್ರಕ್ಕಾಗಿ ಪೈಪೋಟಿ ನಡೆಯುತ್ತಿದ್ದು, ಇಬ್ಬರೂ ಶಿವಾಜಿ ಸಿನಿಮಾ ಮಾಡ್ತಾರಾ..? ಅಥ್ವಾ ಪರಸ್ಪರ ಮಾತುಕತೆ ಮೂಲಕ ಒಬ್ಬರು ಅದನ್ನ ಕೈ ಬಿಡ್ತಾರಾ ಅನ್ನೋದು ಕಾದು ನೋಡಬೇಕಿದೆ. ಒಂದಷ್ಟು ವಿರೋಧಗಳ ನಡುವೆಯೂ ಶಿವಾಜಿ ಪಾತ್ರಕ್ಕೆ ಬಣ್ಣ ಹಚ್ಚಲು ಸಜ್ಜಾಗಿದ್ದ ನಮ್ಮ ಹೆಮ್ಮೆಯ ಕನ್ನಡಿಗನಿಗೆ ಈಗ ಆತಂಕ ಶುರುವಾಗಿದೆ.
ಈ ಮಧ್ಯೆ ಹೊಂಬಾಳೆ ಫಿಲಂಸ್ ಒಂದು ಪ್ರೆಸ್ ಅನೌನ್ಸ್ ಮಾಡಿದ್ದು, ಕಾಂತಾರ ಚಾಪ್ಟರ್-1 ರಿಲೀಸ್ ಡೇಟ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದೆ. ಅಕ್ಟೋಬರ್ 2ರಂದು ಗಾಂಧಿಜಯಂತಿಗೆ ಕಾಂತಾರ ಪ್ರೀಕ್ವೆಲ್ ಸಿನಿಮಾ ತೆರೆಗೆ ಬರ್ತಿದೆ ಎಂದು ಸ್ಪಷ್ಟಪಡಿಸಿದೆ.
