ಚಂದನವನದ ಕನಸುಗಾರ ವಿ.ರವಿಚಂದ್ರನ್ ಅವರ ‘ಶಾಂತಿ ಕ್ರಾಂತಿ’ ಮರುಬಿಡುಗಡೆ ಆಗ್ತಿದೆ ಅಂತ ಕಾಯ್ತಿದ್ದ ಅಭಿಮಾನಿಗಳಿಗೆ ಈಗ ಸಿಕ್ಕಿದೆ ಬಿಗ್ ಶಾಕ್ ಜೊತೆಗೆ ಒಂದು ಇಂಟರೆಸ್ಟಿಂಗ್ ಟ್ವಿಸ್ಟ್. ಸೋಶಿಯಲ್ ಮೀಡಿಯಾದಲ್ಲಿ ಸೃಷ್ಟಿಯಾಗಿದ್ದ ಟ್ರೆಂಡ್ ಗೆ ಈಶ್ವರಿ ಪ್ರೊಡಕ್ಷನ್ಸ್‌ನ ಬಾಲಾಜಿ ವೀರಾಸ್ವಾಮಿ ತೆರೆ ಎಳೆದಿದ್ದಾರೆ. ಹಾಗಾದ್ರೆ ನಿಜಕ್ಕೂ ಶಾಂತಿ ಕ್ರಾಂತಿ ರೀ ರಿಲೀಸ್ ಆಗುತ್ತಾ ? ಬಾಲಾಜಿ ಹೇಳಿದ್ದೇನು..? ಹ್ಯಾವ್ ಎ ಲುಕ್.
- ‘ಶಾಂತಿ ಕ್ರಾಂತಿ’.. ಸದ್ಯಕ್ಕೆ ವಿಶ್ರಾಂತಿ.. ಬಾಲಾಜಿ ಖಾಸ್ ಬಾತ್
- ಅಗ್ನಿ ಅವಘಡದಲ್ಲಿ ಶಾಂತಿ ಕ್ರಾಂತಿಯ ಮೂಲ ನೆಗೆಟಿವ್ ನಾಶ
- ಶಾಂತಿ ಕ್ರಾಂತಿ ರೀ-ರಿಲೀಸ್ ಸದ್ಯಕ್ಕೆ ಅಸಾಧ್ಯ..1 ವರ್ಷ ಬೇಕು
- ರೀ-ಸೆನ್ಸಾರ್ನಿಂದ ಅಟ್ಮೋಸ್ ಸೌಂಡ್ವರೆಗೆ ಹೊಸ ಪ್ಲಾನ್..!
35 ವರ್ಷಗಳ ಹಿಂದೆ ಇಂಡಿಯನ್ ಸಿನಿಮಾ ಹಿಸ್ಟರಿಯನ್ನೇ ಶೇಕ್ ಮಾಡಿದ್ದ, ದಕ್ಷಿಣ ಭಾರತದ ಅಸಲಿ ಮೊದಲ ಪ್ಯಾನ್-ಇಂಡಿಯಾ ಸಿನಿಮಾ ‘ಶಾಂತಿ ಕ್ರಾಂತಿ’ ಈಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿದೆ. ನಮ್ಮ ಕ್ರೇಜಿ ಸ್ಟಾರ್ ಸಾಹಸವನ್ನು ಬಿಗ್ ಸ್ಕ್ರೀನ್‌ನಲ್ಲಿ ಮತ್ತೆ ನೋಡ್ಬೇಕು, ರೀ-ರಿಲೀಸ್ ಮಾಡಿ ಅಂತ ಫ್ಯಾನ್ಸ್ ಒಂದೇ ಸಮನೆ ಹಠ ಹಿಡಿದು ವಿಡಿಯೋ ಮೇಲೆ ವಿಡಿಯೋ ಮಾಡ್ತಿದ್ದಾರೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲೇ ಸಿನಿಮಾ ಥಿಯೇಟರ್‌ಗೆ ಬರುತ್ತೆ ಅಂತ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಈ ಸುದ್ದಿ ಹರಡಿಬಿಟ್ಟಿದೆ ಆದ್ರೆ ಅಸಲಿ ಮ್ಯಾಟರ್ ನಾವ್ ಹೇಳ್ತೀವಿ ನೋಡಿ.
ಈಶ್ವರಿ ಸಂಸ್ಥೆಯ ಸಂಸ್ಥಾಪಕರಾದ ವೀರಸ್ವಾಮಿ ಅವರ ನಿಧನದ ನಂತರ, ಅವರು ನಿರ್ಮಿಸಿದ ಚಿತ್ರಗಳ ಎಲ್ಲ ರೀತಿಯ ಹಕ್ಕುಗಳು ಅಧಿಕೃತವಾಗಿ ಅವರ ಪುತ್ರ ವಿ.ಬಾಲಾಜಿ ಅವರ ಹೆಸರಿನಲ್ಲೇ ಇವೆ. ಹೌದು, ಶಾಂತಿ ಕ್ರಾಂತಿ ಸಿನಿಮಾದ ಮದರ್ ಪ್ರಿಂಟ್ ಮದರಾಸಿನ ಪ್ರಸಾದ್ ಲ್ಯಾಬ್‌ನಲ್ಲಿ ನಡೆದ ಬೆಂಕಿ ಅನಾಹುತದಲ್ಲಿ ಅಗ್ನಿಗೆ ಆಹುತಿಯಾಗಿದೆ. ಈ ಸಿನಿಮಾದ ಮೂಲ ಪ್ರಿಂಟ್‌ನ ತುಣುಕು ಕೂಡಾ ಈಗ ಲಭ್ಯವಿಲ್ಲ. ಸದ್ಯ ಟಿವಿ ರೈಟ್ಸ್‌ಗೆ ಕೊಟ್ಟಿರುವ ಹೆಚ್ಡಿ ಗುಣಮಟ್ಟವಷ್ಟೇ ಉಳಿದಿದೆ. ಇದನ್ನು ತೆಗೆದುಕೊಂಡು, 4K, 8K ಕ್ವಾಲಿಟಿಯಲ್ಲಿ ರಿಲೀಸ್ ಮಾಡೋದು ದೊಡ್ಡ ಸವಾಲಾಗಿದೆ. ಈ ಮಧ್ಯೆ ರವಿಚಂದ್ರನ್ ಸಹೋದರ ಬಾಲಾಜಿ ವೀರಸ್ವಾಮಿ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸದ್ಯಕ್ಕೆ ನೆಗೆಟಿವ್ ಕರಗಿ ನೀರಾಗಿರೋದ್ರಿಂದ ಸದ್ಯಕ್ಕಂತೂ ‘ಶಾಂತಿ ಕ್ರಾಂತಿ’ ರೀ-ರಿಲೀಸ್ ಅಸಾಧ್ಯ ಅನ್ನೋ ಕಹಿ ಸತ್ಯ ಹೊರಬಿದ್ದಿದೆ. ಹೌದು, ರವಿಚಂದ್ರನ್ ಸಹೋದರ ಬಾಲಾಜಿ ಅವರ ಪ್ರಕಾರ,ಈ ಸಿನಿಮಾ ಮರುಸೃಷ್ಟಿ ಮಾಡೋದು ಒಂದು ಸಾಹಸವೇ ಸರಿ. ಈಗ ಬೇರೆ ಪರ್ಯಾಯ ಹುಡುಕೋ ಕೆಲಸ ನಡೀತಿದೆ. ಒಂದು ವೇಳೆ ಸೋರ್ಸ್ ಸಿಕ್ಕಿದ್ರೂ, ನೆಗೆಟಿವ್ ಫೇಡ್ ಔಟ್ ಆಗಿರೋದ್ರಿಂದ ಮತ್ತೆ ಕಲರಿಂಗ್ ಮಾಡ್ಬೇಕು, ರೀ-ರೆಕಾರ್ಡಿಂಗ್, ಸೌಂಡ್ ಎಫೆಕ್ಟ್ಸ್, ಡಿಐ, ಜೊತೆಗೆ ಡಾಲ್ಬಿ, DTS ಮತ್ತು ಅಟ್ಮೋಸ್ ತಂತ್ರಜ್ಞಾನ ಅಳವಡಿಸಿ, ರೀ-ಸೆನ್ಸಾರ್ ಮಾಡಿಸೋದು ಬೆಟ್ಟದಷ್ಟ ದೊಡ್ಡ ಕೆಲಸ ಎಂದಿದ್ದಾರೆ
ನಾವು ನಾಳೆಯಿಂದಲೇ ಕೆಲಸ ಶುರು ಮಾಡಿದ್ರೂ ಕನಿಷ್ಠ 8 ರಿಂದ 10 ತಿಂಗಳು ಅಥವಾ ಒಂದು ವರ್ಷಕ್ಕೂ ಹೆಚ್ಚು ಸಮಯ ಬೇಕು ಅಂತಾರೋ ಬಾಲಾಜಿ ಹೇಳಿದ್ದಾರೆ. ಯಾಕಂದ್ರೆ, ಅವತ್ತಿನ ಕಾಲದಲ್ಲೇ ನಮ್ಮ ಅಣ್ಣ ರವಿಚಂದ್ರನ್ ಅವರು ವರ್ಲ್ಡ್ ಕ್ಲಾಸ್ ಕ್ವಾಲಿಟಿಯಲ್ಲಿ ಸಿನಿಮಾ ಕೊಟ್ಟಿದ್ದರು. ಇವತ್ತು ಫ್ಯಾನ್ಸ್ ಆಸೆಗೆ ತಕ್ಕಂತೆ ತರಬೇಕಂದ್ರೆ ಅದೇ ಲೆವೆಲ್ ಸೌಂಡ್, ಅದೇ ವಿಕ್ಟರಿ ಕ್ವಾಲಿಟಿ ಇರಲೇಬೇಕು, ಕೊಟ್ರೆ ಗ್ರ್ಯಾಂಡ್ ಆಗಿಯೇ ಕೊಡ್ತೀವಿ ಅಂತ ಪ್ರಾಮಿಸ್ ಮಾಡಿದ್ದಾರೆ.
ಅಲ್ಲಿಯವರೆಗೆ ಈ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ರೀ-ರಿಲೀಸ್ ಆಗುತ್ತೆ ಅನ್ನೋದೆಲ್ಲಾ ಸದ್ಯಕ್ಕೆ ಕೇವಲ ಗಾಳಿ ಸುದ್ದಿ ಅಷ್ಟೇ. ಸರಿಯಾದ ಮೂಲಗಳು ಸಿಕ್ಕಿ, ವರ್ಕ್ ಸ್ಟಾರ್ಟ್ ಆದ ತಕ್ಷಣ ಮೊದಲು ಅಭಿಮಾನಿಗಳಿಗೆ ಅಧಿಕೃತವಾಗಿ ತಿಳಿಸೋದಾಗಿ ಬಾಲಾಜಿ ಭರವಸೆ ನೀಡಿದ್ದಾರೆ. ಅಲ್ಲಿಯವರೆಗೂ ಕ್ರೇಜಿ ಅಭಿಮಾನಿಗಳು ಸ್ವಲ್ಪ ಪೇಷನ್ಸ್ ಇಟ್ಟುಕೊಳ್ಳಲೇಬೇಕು.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
