ಇಂಡಿಯಾದ ನೈಂಟೀಸ್ ಜನರೇಷನ್‌ಗೆ ಸೂಪರ್ ಹೀರೋ ಅಂದ್ರೆ ಥಟ್ ಅಂತ ನೆನಪಾಗೋದೇ ಮುಖೇಶ್ ಖನ್ನಾರ ಟಿವಿ ಸೀರೀಸ್. ಆದ್ರೀಗ ಅದೇ ಶಕ್ತಿಮಾನ್ ಫ್ರಾಂಚೈಸ್ ಮತ್ತೆ ಈಗಿನ ಜನರೇಷನ್ ಮಕ್ಕಳನ್ನ ರಂಜಿಸೋಕೆ ಬರಲಿದೆ. ಮಾಡ್ರನ್ ಶಕ್ತಿಮಾನ್ ಅವತಾರ ತಾಳಲಿದ್ದಾರಂತೆ ದೀಪಿಕಾ ಪಡುಕೋಣೆ ಪತಿ ರಣ್‌ವೀರ್ ಸಿಂಗ್.
- ‘ಶಕ್ತಿಮಾನ್’ ರಣ್‌ವೀರ್ ಸಿಂಗ್‌ಗೆ ಬಾಸಿಲ್ ಆ್ಯಕ್ಷನ್ ಕಟ್
- ಮುಖೇಶ್ ಖನ್ನಾ ಔಟ್.. ದೀಪಿಕಾ ಪಡುಕೋಣೆ ಪತಿ ಇನ್
- ನ್ಯೂ ಜನರೇಷನ್ ಮಕ್ಕಳ ಮಾಡ್ರನ್ ಶಕ್ತಿಮಾನ್ ರಣ್‌ವೀರ್
- ಮಿನ್ನಲ್ ಮುರಳಿ ಡೈರೆಕ್ಟರ್ ಮತ್ತೊಂದು ಹೊಸ ಸಾಹಸ..!
ಶಕ್ತಿಮಾನ್.. 90ರ ದಶಕದ ಮಕ್ಕಳ ಫೇವರಿಟ್ ಸೂಪರ್ ಹೀರೋ ಟಿವಿ ಸೀರೀಸ್. ಡಿಡಿ ದೂರದರ್ಶನದಲ್ಲಿ 1997ರಿಂದ 2005ರ ತನಕ ನಿರಂತರವಾಗಿ ಪ್ರಸಾರಗೊಂಡ ಸೀರೀಸ್. ಸ್ವತಃ ಮುಖೇಶ್ ಖನ್ನಾನೇ ಬರೆದು, ನಿರ್ಮಾಣ ಮಾಡೋದ್ರ ಜೊತೆಗೆ ತಾವೇ ಶಕ್ತಿಮಾನ್ ಪಾತ್ರದಲ್ಲಿ ಮಸ್ತ್ ಮನರಂಜನೆ ನೀಡಿದ್ರು.
ಸದ್ಯ ಮಾತುಕತೆ ಹಂತದಲ್ಲಿರೋ ಶಕ್ತಿಮಾನ್ ಸೀರೀಸ್ ಓಟಿಟಿ ಪ್ಲಾಟ್‌ಫಾರ್ಮ್‌ಗಳ ಮೂಲಕ ರಿಲೀಸ್ ಆಗುತ್ತಾ ಅಥ್ವಾ ಮತ್ತೊಮ್ಮೆ ಟಿವಿಯಲ್ಲೇ ದೂರದರ್ಶನದ ಮೂಲಕ ರಂಜಿಸೋಕೆ ಬರುತ್ತಾ ಅನ್ನೋದನ್ನ ನಿರೀಕ್ಷಿಸಬೇಕಿದೆ. ದೀಪಿಕಾ ಪಡುಕೋಣೆ ಪತಿ ರಣ್‌ವೀರ್ ಸಿಂಗ್ ಹಾಗೂ ಬಾಸಿಲ್ ಕಾಂಬೋ ಅಂದಾಕ್ಷಣ ಪ್ರೇಕ್ಷಕ ವರ್ಗ ಸಖತ್ ಥ್ರಿಲ್ ಆಗಿದೆ. ಹೀಗಾಗಿ ಈ ಬಾರಿ ಕೂಡ ಶಕ್ತಿಮಾನ್ ಸಕ್ಸಸ್‌ಫುಲ್ ಸೀರೀಸ್ ಆಗಿ ಹೊರಹೊಮ್ಮುವುದರಲ್ಲಿ ಯಾವುದೇ ಡೌಟ್ ಇಲ್ಲ.