ಏಜ್ ಈಸ್ ಜಸ್ಟ್ ಎ ನಂಬರ್..ಶಾರೂಖ್ ಸಿಕ್ಸ್‌‌ಪ್ಯಾಕ್ @61

ಲಕ್ಕಿ ಚಾರ್ಮ್ ದೀಪಿಕಾ ಜೊತೆ ‘ಕಿಂಗ್’ ಆಫ್ ರೊಮ್ಯಾನ್ಸ್..!!

Your paragraph text 2026 11 03T154929.034

61ರ ಹರೆಯದಲ್ಲಿ ಕಿಂಗ್ ಖಾನ್ ಶಾರೂಖ್ ಸಿಕ್ಸ್ ಪ್ಯಾಕ್ ಮೈಕಟ್ಟು ಕಂಡು ಇಡೀ ದೇಶವೇ ದಂಗಾಗಿದೆ. ಯೆಸ್.. ಏಜ್ ಈಸ್ ಜಸ್ಟ್ ಎ ನಂಬರ್ ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ ಬಾಲಿವುಡ್ ಬಾದ್‌ಷಾ. ಯಂಗ್‌ಸ್ಟರ್ಸ್ ಕೂಡ ನಾಚುವಂತಹ ದೇಹ ಹೊಂದಿರೋ ಶಾರೂಖ್.. ಸಖತ್ ಫಿಟ್ & ಫೈನ್ ಆಗಿದ್ದಾರೆ. ಬರ್ತ್ ಡೇ ವಿಶೇಷ ರಿವೀಲ್ ಆಗಿರೋ ಸಾಂಗ್‌‌ನಲ್ಲಿನ ವಿಶೇಷತೆಗಳ ಜೊತೆ ಕಿಂಗ್ ಆಫ್ ರೊಮ್ಯಾನ್ಸ್ ಕಹಾನಿ ಇಲ್ಲಿದೆ.

ಬಾಲಿವುಡ್ ಬಾದ್‌ಷಾ.. ಕಿಂಗ್ ಖಾನ್ ಶಾರೂಖ್ ಇತ್ತೀಚೆಗೆ 61ನೇ ವಸಂತಕ್ಕೆ ಕಾಲಿಡೋ ಮೂಲಕ ಬರ್ತ್ ಡೇನ ಬಹಳ ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಬರ್ತ್ ಡೇ ವಿಶೇಷ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಕಿಂಗ್ ಫಸ್ಟ್ ಸಾಂಗ್ ಕೂಡ ರಿವೀಲ್ ಆಗಿದೆ. ಆದ್ರೆ ಸೆಲೆಬ್ರೇಷನ್ ಅಥ್ವಾ ಸಾಂಗ್‌ಗಿಂತ ಜಾಸ್ತಿ ಸಂಚಲನ ಮೂಡಿಸ್ತಿರೋದು ಆ ಸಾಂಗ್‌‌ನಲ್ಲಿರೋ ಶಾರೂಖ್ ಲುಕ್ಸ್. ಅದ್ರಲ್ಲೂ 61ರ ಇಳಿವಯಸ್ಸಿನಲ್ಲಿ ಕಿಂಗ್ ಖಾನ್ ಮಾಡಿರೋ ಸಿಕ್ಸ್‌‌ಪ್ಯಾಕ್ ಮೈಕಟ್ಟು.

ಯೆಸ್.. ಯಂಗ್‌ಸ್ಟರ್ಸ್ ಕೂಡ ನಾಚಿಸುವಂತಿರೋ ಶಾರೂಖ್ ಖಾನ್ ಮೈಕಟ್ಟಿಗೆ ಇಡೀ ದೇಶವೇ ಕ್ಲೀನ್ ಬೋಲ್ಡ್ ಆಗಿದೆ. ಅಬ್ಬಬ್ಬಾ.. ಈತನ ವಯಸ್ಸು ನಿಜಕ್ಕೂ 61 ವರ್ಷ ಅಂದ್ರೆ ಯಾರೂ ನಂಬಲ್ಲ ಗುರು ಅಂತಿದೆ. ಸಿಕ್ಕಾಪಟ್ಟೆ ಫಿಟ್ನೆಸ್ ಫ್ರೀಕ್ ಆಗಿರೋ ಶಾರೂಖ್, ಸಖತ್ ಫಿಟ್ & ಫೈನ್ ಆಗಿದ್ದಾರೆ. ದೇಹವನ್ನ ಜಿಮ್‌‌ನಲ್ಲಿ ಯಾವ ರೀತಿ ದಂಡಿಸಿ, ಈ ರೀತಿಯ ಶೇಪ್‌ಗೆ ತಿರುಗಿದ್ದಾರೆ ಅನ್ನೋದೇ ಅಚ್ಚರಿ. ಈಗ್ಲೂ 20 ಪ್ಲಸ್ ಯಂಗ್‌ಸ್ಟರ್ ರೀತಿ ಕಾಣೋ ಅವ್ರ ಫಿಟ್ನೆಸ್ ಸೀಕ್ರೆಟ್ ಅದ್ಭುತ, ಅಮೋಘ, ಅದ್ವಿತೀಯ. ಈ ಮೂಲಕ ಏಜ್ ಈಸ್ ಜಸ್ಟ್ ಎ ನಂಬರ್ ಅಂತಿದ್ದಾರೆ ಕಿಂಗ್.

ಶಾರೂಖ್ ನಟನೆಯ ಕಿಂಗ್ ಸಿನಿಮಾ ಇದೇ ವರ್ಷಾಂತ್ಯಕ್ಕೆ ಅಂದ್ರೆ ಡಿಸೆಂಬರ್ 24ರಂದು ಕ್ರಿಸ್‌‌ಮಸ್ ಧಮಾಕ ಮಾಡೋಕೆ ಬರ್ತಿದೆ. ಈಗಾಗ್ಲೇ ಟೀಸರ್‌‌ಗಳು ಸಿಕ್ಕಾಪಟ್ಟೆ ಸಂಚಲನ ಮೂಡಿಸಿದ್ದವು. ಈಗ ಚಿತ್ರದ ತು ಮಿಲ್ ಜಾಯೆ ಅನ್ನೋ ಫಸ್ಟ್ ಸಾಂಗ್ ರಿಲೀಸ್ ಆಗಿದೆ. ಲಕ್ಕಿ ಚಾರ್ಮ್ ದೀಪಿಕಾ ಪಡುಕೋಣೆ ಜೊತೆ ಒನ್ಸ್ ಅಗೈನ್ ಮಿಂಚು ಹರಿಸಿದ್ದಾರೆ. ಆಕೆ ಜೊತೆಗಿದ್ರೆ ಶಾರೂಖ್‌ಗೆ ಸೋಲೇ ಇಲ್ಲ ಅನ್ನುವಂತಾಗಿದೆ. ಅದೇ ಕಾರಣದಿಂದ ಪಠಾಣ್ ಬಳಿಕ ಈ ಜೋಡಿ ಮತ್ತೆ ಮತ್ತೆ ಮೋಡಿ ಮಾಡ್ತಿದೆ.

ಸಿದ್ದಾರ್ಥ್ ಆನಂದ್ ನಿರ್ದೇಶನದ ಕಿಂಗ್ ಚಿತ್ರದ ಅಸಲಿ ಜಗತ್ತನ್ನು ಪರಿಚಯಿಸೋ ಈ ವಿಡಿಯೋ ಸಾಂಗ್.. ಶಾರೂಖ್ ಅವ್ರ ‘ಮೈ ಖಾತಿಲ್ ನಹಿ, ಆಶಿಕ್ ಹೂಂ, ಔರ್ ನಿಶಾನಾ ಮೇರಿ ಮಶೂಕಾ, ಔರ್ ವೋಹ್ ಆಶಿಕ್ ಹಿ ಕ್ಯಾ ಜೋ ದಿಲ್ ಚೀರ್ ನಾ ದೇ’ ಅನ್ನೋ ಡೈಲಾಗ್‌‌ನಿಂದ ಜಾಸ್ತಿ ಕಿಕ್ ಕೊಟ್ಟಿದೆ. ಅದರ ಅರ್ಥ.. ನಾನು ಕೊಲೆಗಾರನಲ್ಲ, ಪ್ರೇಮಿ. ನನ್ನ ಗುರಿ ನನ್ನ ಪ್ರೇಯಸಿ. ಎದೆ ಸೀಳದಿದ್ದರೆ ಅವನು ಪ್ರೇಮಿಯೇ ಅಲ್ಲ ಅನ್ನೋದಾಗಿದೆ. ಇದು ಆ ಪಾತ್ರದ ಗತ್ತು ಹಾಗೂ ತೀವ್ರತೆಯನ್ನ ಹೇಳ್ತಿದೆ. ರೊಮ್ಯಾಂಟಿಕ್ ಟ್ರ್ಯಾಕ್‌ಗೆ ಅರಿಜಿತ್ ಸಿಂಗ್ ಕಂಠದ ಜೊತೆ ಜಾಗತಿಕ ಪಾಪ್ ಸೆನ್ಸೇಷನ್ ಎಡ್ ಶೀರನ್ ಱಪ್ ಟಚ್ ಅದ್ಭುತವಾಗಿ ಬೆಸೆದುಕೊಂಡಿದೆ. ಮಧುಬಂತಿ ಬಾಗ್ಚಿ ತಮ್ಮ ಧ್ವನಿಯ ಮೂಲಕ ವಿಶೇಷ ಮೆರುಗು ನೀಡಿದ್ದಾರೆ.

ರೊಮ್ಯಾನ್ಸ್ ಜೊತೆ ಭರ್ಜರಿ ಆ್ಯಕ್ಷನ್ ಬ್ಲೆಂಡ್ ಆಗಿರೋ ಈ ಹಾಡು ಚಿತ್ರದ ಒಳನೋಟವ ತೆರೆದಿಡುತ್ತದೆ. ಸಚಿನ್-ಜಿಗರ್ ಸಂಗೀತ ಸಂಯೋಜನೆ, ಕುಮಾರ್ ಸಾಹಿತ್ಯ ಹಾಗೂ ಪಿಯೂಷ್-ಶಾಜಿಯಾ ಕೊರಿಯೋಗ್ರಫಿ ಈ ಹಾಡಿಗಿದೆ. ಎಡ್ ಶೀರನ್ ಬರೆದಿರೋ ಇಂಗ್ಲಿಷ್ ಱಪ್ ಈ ದೇಸಿ-ವಿದೇಶಿ ಸಮ್ಮಿಲನವನ್ನ ಮತ್ತಷ್ಟು ಅಟ್ರ್ಯಾಕ್ಟ್ ಮಾಡ್ತಿದೆ. ಈಸ್ ಬಾರ್ ದಿಲ್ ಮೇಂ ಆಗ್ ಲಗೀ ಹೈ.. ಅಬ್ ದುನಿಯಾ ಜಲಾಯೆ ಬಿನಾ ಮಾನೇಗಾ ನಹಿ.. ಅಂದ್ರೆ ಈ ಬಾರಿ ಹೃದಯದಲ್ಲಿ ಬೆಂಕಿ ಬಿದ್ದಿದೆ. ಇನ್ನೂ ಅದು ಈ ಜಗತ್ತನ್ನು ಸುಡದೆ ಸುಮ್ಮನಿರಲ್ಲ ಅನ್ನೋ ಡೈಲಾಗ್‌ ಸಿನ್ಮಾ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿದೆ.

ನ್ಯೂ ಡೆಲ್ಲಿಯಲ್ಲಿ ಹುಟ್ಟಿದ್ರೂ.. ಶಾರೂಖ್ ಬಾಲ್ಯದಲ್ಲಿ ಬೆಳೆದದ್ದು ಮಾತ್ರ ನಮ್ಮ ಕರಾವಳಿಯ ಮಂಗಳೂರಿನಲ್ಲಿ. ಹೌದು.. ತನ್ನ ತಾಯಿಯ ತಂದೆ ಅಂದ್ರೆ ಅಜ್ಜ ಇಫ್ತಿಕಾರ್ ಅಹ್ಮದ್ ಮಂಗಳೂರು ಬಂದರಿನಲ್ಲಿ ಚೀಫ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಹಿನ್ನೆಲೆ ಅವ್ರ ಫ್ಯಾಮಿಲಿ ಮಂಗಳೂರಲ್ಲಿ ನೆಲೆಸಿತ್ತು. ನಮ್ಮ ಕನ್ನಡದ ನೀರು ಕುಡಿದು ಬೆಳೆದಿರೋ ಶಾರೂಖ್ ಇಂದು ವರ್ಲ್ಡ್ ಸಿನಿದುನಿಯಾದಲ್ಲಿ ಈ ಪಾಟಿ ಸದ್ದು ಮಾಡ್ತಿರೋದು ಒಂಥರಾ ಹೆಮ್ಮೆ ತರಿಸೋ ವಿಷಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version