ಕಿಂಗ್ ಖಾನ್‌ ಶಾರೂಖ್‌ಗೆ ಪೆಟ್ಟಾಗಿದ್ದು ಸುಳ್ಳಾ? ಒಂದು ತಿಂಗಳು ರೆಸ್ಟ್ ಯಾಕೆ..?

ಶಾರುಖ್​ಗೆ ಗಂಭೀರ ಗಾಯ.. ಫೇಕ್​ ನ್ಯೂಸ್​ ವೈರಲ್​..!

Untitled design (38)

ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಖಾನ್ ಗೆ ಕಿಂಗ್​ ಸಿನಿಮಾದ ಶೂಟಿಂಗ್​ ವೇಳೆ  ಪೆಟ್ಟಾಗಿದೆ ಎಂಬ ಸುದ್ದಿ ಸೋಷಿಯಲ್​ ಮೀಡಿಯಾದಲ್ಲಿ ಹಾಲ್ ಚಲ್ ಎಬ್ಬಿಸಿದೆ.. ಈ ವಿಚಾರ ಕೇಳಿ ಶಾರೂಖ್​ ಫ್ಯಾನ್ಸ್​ ಗಾಬರಿ ಆಗಿದ್ದಾರೆ. ರಿಲೇಕ್ಸ್.. ಶಾರುಖ್ ಹೆಲ್ತ್ ಬುಲೆಟಿನ್ ನಲ್ಲಿ ಏನ್ ಇದೆ..?ಕಿಂಗ್​ ಖಾನ್​ ಯುಎಸ್​ನಲ್ಲಿ ಸೇಫ್​ ಆಗಿದ್ದಾರಾ..? ಅಷ್ಟಕ್ಕೂ ಶಾರೂಖ್​ಗೆ ಆಗಿದ್ದೇನು..? ಫೇಕ್​ ಸುದ್ದಿ ಹಬ್ಬಿಸಿದ್ದು ಯಾರು ಅಂತ ಹೇಳ್ತೀವಿ ನೋಡಿ​.

ಬೆಳ್ಳಂ ಬೆಳಗ್ಗೆ ಇದೆಂತ ಕೆಟ್ಟ ಸುದ್ದಿ  ಕಿವಿಗೆ ಬಿತ್ತು ಅಂದುಕೊಂಡಿರೋರೆ ಹೆಚ್ಚು ಅದ್ರಲ್ಲೂ ಶಾರುಖ್ ಫ್ಯಾನ್ಸ್ ಗೆ ಇದು ಅಘಾತಕರಿಯಾಗಿತ್ತು. ಎಸ್.. ಈಗ ನಾವು ಹೇಳ್ತಿರೋದು ಕಿಂಗ್ ಸಿನಿಮಾ ಶೂಟಿಂಗ್ ವೇಳೆ ಶಾರುಖ್ ಗೆ ಪೆಟ್ಟಾಗಿದೆ.. ಕೂಡಲೇ ಅಮೇರಿಕಾಗೆ ಶಿಫ್ಟ್ ಮಾಡಲಾಗಿದೆ ಒಂದು ತಿಂಗಳು ಬೆಡ್ ರೆಸ್ಟ್ ಬೇಕು ಹೀಗಂತ ಸುದ್ದಿ ಬೆಳಗಿಂದ ವೈರಲ್ ಆಗ್ತಿದೆ. ಅಸಲಿಗೆ ಶಾರುಖ್ ಗೆ ಪೆಟ್ಟಾಗಿದ್ದು ನಿಜನಾ..? ಫ್ಯಾಕ್ಟ್ ಏನು ಅಂತ ಹೇಳ್ತಿವಿ ನೋಡಿ

ADVERTISEMENT
ADVERTISEMENT

ಬಾಲಿವುಡ್​ ನಟ ಶಾರೂಖ್​ ಖಾನ್​ ಅವರ ಬಗ್ಗೆ ಒಂದಲ್ಲ ಒಂದು ಫೇಕ್​ ನ್ಯೂಸ್​ ಆಗಾಗ ಕೇಳಿಬರ್ತಾನೆ ಇರುತ್ತೆ. ಅದೇ ರೀತಿ ಈ ಬಾರಿ ಶಾರೂಖ್​ ಅವರಿಗೆ ಕಿಂಗ್​ ಸಿನಿಮಾದ ಶೂಟಿಂಗ್​ ವೇಳೆ ಗಂಭೀರ ಗಾಯವಾಗಿದೆ. ಚಿಕಿತ್ಸೆಗಾಗಿ ಅವರು ಅಮೇರಿಕಾದಿಂದ ಯುಕೆಗೆ ಶಿಫ್ಟ್​ ಆಗಿದ್ದಾರೆ ಎಂಬ ಸುದ್ದಿ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದೇ ತಡ ಶಾರೂಖ್​​ ಫ್ಯಾನ್ಸ್​ ಶಾಕ್​ ಆಗಿ ಹೋಗಿದ್ರು. ನಮ್ಮ ಹೀರೋಗೆ ಏನಾಯ್ತು ಅಂತ ತಲೆಕೆಡಿಸಿಕೊಂಡಿದ್ರು.. ಆದ್ರೆ ಈ ಸುದ್ದಿ ಸಂಪೂರ್ಣ ಫೇಕ್​ ಅನ್ನೋದು ಈಗ ಗೊತ್ತಾಗಿದೆ.

ಯೆಸ್​, ಶಾರೂಖ್​ಗೆ ಯಾವುದೇ ರೀತಿ ಗಾಯ ಆಗಿಲ್ಲ ಅನ್ನೋದು ಕನ್ಫರ್ಮ್​ ಆಗಿದೆ.. ಸದ್ಯ ಶಾರೂಖ್​ ಕಿಂಗ್​ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ.  ‘ಪಠಾಣ್’ ಖ್ಯಾತಿಯ ಸಿದ್ದಾರ್ಥ್ ಆನಂದ್ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಸಿನಿಮಾದ ಮೇಲೆ ಕಿಂಗ್​ ಖಾನ್​ ಫ್ಯಾನ್ಸ್​ ಭಾರೀ ನಿರೀಕ್ಷೆಯನ್ನ ಇಟ್ಟುಕೊಂಡಿದ್ದಾರೆ. ಆದ್ರೆ ಅಸಲಿ ವಿಚಾರ ಏನಂದ್ರೆ ಕಿಂಗ್​ ಸಿನಿಮಾದ ಶೂಟಿಂಗ್​ ವೇಳೆ ಶಾರೂಖ್​ಗೆ ಯಾವುದೇ ಗಾಯವಾಗಿಲ್ಲ. ಗಾಯ ಆಗಿದ್ದರಿಂದ ಶಾರುಖ್ ಖಾನ್ ಅವರು ಶೂಟಿಂಗ್ ಬಿಟ್ಟು ಅಮೆರಿಕಕ್ಕೆ ತೆರಳಿದ್ದಾರೆ ಎಂಬುದು ಕೂಡ ನಿಜವಲ್ಲ.

ಶಾರೂಖ್​  ಅಮೆರಿಕಕ್ಕೆ ಹೋಗಿರುವುದು ವೈಯಕ್ತಿಕ ಕೆಲಸ ಮೇಲೆ ಹಾಗೇ ಅಲ್ಲೇ ರೂಟಿನ್​ ಹೆಲ್ತ್​ ಚೆಕ್​ಅಪ್​ ಮಾಡಿಕೊಂಡಿಸಿಕೊಂಡಿದ್ದಾರೆ ಅಷ್ಟೇ . ಜುಲೈ ಎರಡನೇ ವಾರದಲ್ಲಿ ಶಾರೂಖ್​ ಅಮೇರಿಕಾಗೆ ತೆರಳಿದ್ದು, ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ವಾಪಾಸ್​ ಆಗಲಿದ್ದಾರೆ . ಹೀಗಾಗಿ ಸುಳ್ಳು ಸುದ್ದಿ ಹಬ್ಬಸಿದವರ ವಿರುದ್ಧ ಕಿಂಗ್ ಖಾನ್​ ಅಭಿಮಾನಿಗಳು ಗರಂ ಆಗಿದ್ದಾರೆ.. ಅಂದಹಾಗೆ ಈ ಮೊದಲು ಕೂಡ  ಹಲವು ಬಾರಿ ಶಾರುಖ್ ಖಾನ್ ಬಗ್ಗೆ ವದಂತಿ ಹಬ್ಬಿಸಲಾಗಿತ್ತು.

ಈ ಹಿಂದೆಯೂ ಶಾರುಖ್ ಖಾನ್  ಮೂಗಿಗೆ ಪೆಟ್ಟು ಮಾಡಿಕೊಂಡಿದ್ದಾರೆ ಎಂಬ ಗಾಸಿಪ್ ಹಬ್ಬಿತ್ತು. ಆದರೆ ಅದು ಕೂಡ ಕಂಪ್ಲೀಟ್​ ಫೇಕ್​ ನ್ಯೂಸ್​ ಆಗಿತ್ತು. ಬೇರೆ ಕಾರಣಕ್ಕೆ ಶಾರೂಖ್​  ಮೂಗಿನ ಸರ್ಜರಿಗೆ ಮಾಡಿದ್ರು. ಶೂಟಿಂಗ್ ವೇಳೆ ಮೂಗಿಗೆ ಗಾಯ ಆಗಿರಲಿಲ್ಲ. ಈಗ ಮತ್ತೆ  ಅವರ ಬಗ್ಗೆ ಗಾಳಿ ಸುದ್ದಿ ಹಬ್ಬಿದೆ. ಆ ಬಗ್ಗೆ ಶಾರೂಖ್​ ಯಾವ ರೀತಿ ಪ್ರತಿಕ್ರಿಯೆ ಕೊಡುತ್ತಾರೆ ಅಂತ ಕಾದು ನೋಡಬೇಕು.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
Exit mobile version